ಮಂಜೇಶ್ವರದಲ್ಲಿ ಸಂಭ್ರಮದ ನಾಗರ ಪಂಚಮಿ ಆಚರಣೆ


Nagara Panchami a festival of the worship of snakes celebrated on August 20, Thursday. Nagara Panchami celebrated at Anantheshwar Temple, Manjeshwar coastal town in Kasaragod district.
IMG_9275
Photo: Manju Neereshwallya
IMG_9300
ಕಾಸರಗೋಡು, ಆ.20 : ತುಳುನಾಡಿನಲ್ಲಿ ಹಿಂದಿನಿಂದಲೂ ನಾಗ ದೇವರ ಆರಾಧನೆಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ. ಗುರುವಾರ ನಾಗರಪಂಚಮಿ ಪ್ರಯುಕ್ತ ಕಾಸರಗೋಡಿನ ಹದಿನೆಂಟು ಪೇಟೆ ದೇವಳವಾದ ಮಂಜೇಶ್ವರದ ಅನಂತೇಶ್ವರ ದೇವಾಲಯದಲ್ಲಿ ಸಾವಿರಾರು ಭಕ್ತರು ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಗೆ ಗರುಡಪಂಚಮಿ ಮತ್ತು ನಾಗರ ಪಂಚಮಿ ಎಂದು ಹೆಸರಿದೆ. ನಾಗರ ಪಂಚಮಿಯಂದು ಅಕ್ಕಿ, ತೆಂಗಿನಕಾಯಿ ಇಟ್ಟು ನಾಗರ ಕಲ್ಲಿಗೆ ಪಂಚಾಮೃತ ಅಭಿಷೇಕ ಮಾಡಿ ಆರಾಧಿಸುವ ಸಂಪ್ರದಾಯವಿದೆ. ಮಂಜೇಶ್ವರದಲ್ಲಿ ನಾಗಪಂಚಮಿಯಂದು ಸಾವಿರಾರು ಭಕ್ತರು ಆಗಮಿಸಿ ಶ್ರದ್ಧಾ ಭಕ್ತಿಯಿಂದ ದೇವರಿಗೆ ಪೂಜೆ ಸಲ್ಲಿಸಿದರು. . ಗುರುವಾರ ಬೆಳಗ್ಗೆಯಿಂದ ಸಾವಿರಾರು ಭಕ್ತಾದಿಗಳು ಮಂಜೇಶ್ವರದ ಅನಂತೇಶ್ವರ ದೇವಾಲಯಕ್ಕೆ ಆಗಮಿಸಿ ದೇವಸ್ಥಾನದ ಆವರಣದಲ್ಲಿರುವ ನಾಗರಕಟ್ಟೆಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ ಮಾಡಿದರು.
ನಾಗರ ಪಂಚಮಿ ಚಿತ್ರಗಳು ಇಲ್ಲಿವೆ.
IMG_9279

IMG_9286

IMG_9289

IMG_9291

IMG_9292
ಗುರುವಾರ ನಾಗರ ಪಂಚಮಿ ಆಚರಣೆ ಕಾಸರಗೋಡಿನ ಮಂಜೇಶ್ವರದ ಅನಂತೇಶ್ವರ ದೇವಾಲಯದಲ್ಲಿ ಸಾವಿರಾರು ಭಕ್ತಾದಿಗಳು ಶ್ರದ್ಧಾ ಭಕ್ತಿಯಿಂದ ನಾಗರ ಪಂಚಮಿ ಹಬ್ಬವನ್ನು ಆಚರಿಸಿದರು.
ಶ್ರಾವಣ ಮಾಸದ ಮೊದಲ ಹಬ್ಬವೇ ನಾಗರ ಪಂಚಮಿ. ನಾಗರ ಹಾವು, ಹುತ್ತಗಳಿಗೆ ಹಾಲು ಎರೆದು ಪೂಜೆ ಮಾಡುವುದರ ಮೂಲಕ ಬಹಳ ವಿಶೇಷವಾಗಿ ಈ ಹಬ್ಬ ಆಚರಿಸಲಾಗುತ್ತದೆ. ಶ್ರಾವಣ ಶುಕ್ಲ ಪಂಚಮಿ ತಿಥಿಯಂದು ಆರಂಭವಾಗುವ ನಾಗರ ಪಂಚಮಿಯ ವಿಶೇಷ,

ಶ್ರೀ ದೇವಳದಲ್ಲಿ ಬೆಳಗಿನಿಂದ ವೈದಿಕ ವಿಧಿ ವಿಧಾನಗಳೊಂದಿಗೆ ಕಾರ್ಯಕ್ರಮಗಳು ಜರಗಿದವು ಬಳಿಕ ಮಧ್ಯಾನ ಮಹಾಪೂಜೆ ಬಳಿಕ ಶ್ರೀ ದೇವರಿಗೆ ವಿಶೇಷ ವಾಸುಕಿ ಪೂಜೆ ನೆರವೇರಿತು .
IMG_9294

ಮಂಜೇಶ್ವರಕ್ಕೆ ಹರಿದು ಬಂದ ಭಕ್ತಸಾಗರ ಹದಿನೆಂಟು ಪೇಟೆಯ ದೇವಳವೆಂಬ ಖ್ಯಾತಿ ಪಡೆದಿರುವ ಅನಂತೇಶ್ವರ ದೇವಾಲಯಕ್ಕೆ ನಾಗರ ಪಂಚಮಿಯಂದು ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.
ದೂರ-ದೂರದಿಂದ ಬಂದರು ಪುರಾಣ ಪ್ರಸಿದ್ಧ ಅನಂತೇಶ್ವರ ದೇವಾಲಯಕ್ಕೆ ಮಂಗಳೂರು, ಬಂಟ್ವಾಳ , ಪುತ್ತೂರು , ಕಾರ್ಕಳ , ಉಡುಪಿ , ಕುಂದಾಪುರ , ಹಾಸನ, ಮಡಿಕೇರಿ, ಮುಂಬೈ , ದೆಹಲಿ , ಮುಂತಾದ ಪ್ರದೇಶಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು.
ಚಿತ್ರಗಳು : ಮಂಜು ನೀರೆಶ್ವಾಲ್ಲ್ಯLatest Tweets

    Message: Invalid or expired token., Please check your Twitter Authentication Data or internet connection.