ಸಾರ್ವಜನಿಕ ಸ್ಥಳದಲ್ಲೇ ಕಡಬ ಸಿಎ ಬ್ಯಾಂಕ್ ಉಪಾಧ್ಯಕ್ಷರಿಗೆ ಹಲ್ಲೆ:-ಇಂದು ಕಡಬ ಬಂದ್ ಗೆ ಕರೆ!

2061

ಕಡಬ ಸಿ ಎ ಬ್ಯಾಂಕ್ ಉಪಾಧ್ಯಕ್ಷ ರಮೇಶ್ ಕಲ್ಪುರೆ ಅವರಿಗೆ ಭಾನುವಾರ ಸಂಜೆ ಕಡಬ ದ ಮುಖ್ಯ ಪೇಟೆಯಲ್ಲಿ  ಐದು ಜನರ ತಂಡವೊಂದು ಹಲ್ಲೆ ನಡೆಸಿದ್ದು, ಕಡಬದಲ್ಲಿ ಕೆಲವು ಕಾಲ ಉದ್ವಿಘ್ನ ವಾತಾವರಣ ಉಂಟಾಗಿದೆ. ಕೃಷಿಕರಾಗಿದ್ದುಕೊಂಡು ಸಾಮಾಜಿಕ ಸಂಘಟನೆಗಳಲ್ಲಿ ಮುಂಚೂಣಿಯಲ್ಲಿದ್ದ ರಮೇಶ್ ಭಟ್, ನಗರದ ಯಶೋಧಾ ಸೂಪರ್ ಮಾರ್ಕೆಟ್‌ಗೆ ತೆರಳಿ ಸಾಮಾಗ್ರಿಗಳನ್ನು ಖರೀದಿಸಿ ಜೀಪಿನ ಹತ್ತಿರ ಆಗಮಿಸುತ್ತಿದ್ದಾಗ  ಏಕಾಏಕಿ ಮುಗಿಬಿದ್ದ  ಆಕ್ರಮಣಕಾರರು ಕಬ್ಬಿಣದ ರಾಡ್ ನಿಂದ  ಯದ್ವಾತದ್ವಾ ಹಲ್ಲೆನಡೆಸಿದ್ದಾರೆ.

ಪುತ್ತೂರಿನ ಆದರ್ಶ ಆಸ್ಪತ್ರೆಯಲ್ಲಿ ರಮೇಶ್ ಕಲ್ಪುರೆ ದಾಖಲಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಕಡಬ ಪೊಲೀಸರು ಬಂಧಿಸಿದ್ದು, ಕುಟ್ರುಪಾಡಿಯ ನಿವಾಸಿಗಳಾದ ಪ್ರಕಾಶ್ ಕೊಲ್ಯದ ಕಟ್ಟ ತಿನ್ಸನ್, ಸನೋಷ್, ಲಿಜೋ, ಸಂತೋಷ್ ಎಂದು ತಿಳಿದು ಬಂದಿದೆ. ಘಟನೆ ನಡೆದ ಸುದ್ದಿ ತಿಳಿಯುತ್ತಿದ್ದಂತೆ ಬೇರೆ ಬೇರೆ ಕಡೆಗಳಿಂದ ಹಿಂದೂ ಸಂಘಟನೆಯ ಕಾರ್ಯಕರ್ತರು ಕಡಬಕ್ಕೆ ಜಮಾಹಿಸಿದರು. ಘಟನೆಯ ಹಿನ್ನೆಲೆ ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳ ಮುಖಂಡರು ಸೋಮವಾರದಂದು ಕಡಬ ಬಂದ್‌ಗೆ ಕರೆ ನೀಡಿದ್ದಾರೆ.

ಪೂರ್ವ ಯೋಜಿತ ಕೃತ್ಯ:- ಕಳೆದ ಒಂದು ವಾರದಿಂದ ಈ ಐದು ಜನರ ತಂಡ ಕಡಬ ಪೇಟೆಯಲ್ಲಿ ಸುತ್ತಾಡುತಿದ್ದರು. ಸದಾ ಜನ ಜಂಗುಳಿಯಿಂದ ಕೂಡಿರುವ ಕಡಬ ಪೇಟೆಗೆ ಗಸ್ತು ಪೊಲೀಸರನ್ನು ನೇಮಿಸಬೇಕು  ಎಂದು ಸಾರ್ವಜನಿಕರು  ಆಗ್ರಹಿಸಿದ್ದಾರೆ.

LEAVE A REPLY