ದೋಸೆಗಳಲ್ಲೆ ಸ್ಪೆಶಲ್ ಪಂಚರಂಗಿ ದೋಸೆ ಮಾಡೋಕೆ ಗೊತ್ತಾ!

215
ಪಂಚರಂಗಿ ದೋಸೆ
ಬೇಕಾಗುವ ಪದಾರ್ಥಗಳು:
2 ಗ್ಲಾಸ್ ದೋಸೆಯ ಬೆಳ್ತಿಗೆ ಅಕ್ಕಿ
2 ಮುಷ್ಟಿ ಉದ್ದಿನಬೇಳೆ
1 ಮುಷ್ಟಿ ಹೆಸರು
1/2 ಮುಷ್ಟಿ ಕಡ್ಲೆಬೇಳೆ
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ: ಹಿಂದಿನ ದಿನ ಈ ಎಲ್ಲ ವಸ್ತುಗಳನ್ನು( ಉಪ್ಪನ್ನು ಬಿಟ್ಟು) ನೀರಿನಲ್ಲಿ ನೆನೆಸಿ ಇಡಿ. ನೆನೆಸಿಟ್ಟ ಒಂದು ಗಂಟೆಯ ನಂತರ ಹದವಾಗಿ ರುಬ್ಬಿ ಉಪ್ಪು ಸೇರಿಸಿ ಮುಚ್ಚಿಡಿ. ಮರುದಿನ ಬೆಳಿಗ್ಗೆ ಕಾವಲಿಯಲ್ಲಿ ಹದವಾದ ಬೆಂಕಿಯಲ್ಲಿ ಹಿಟ್ಟನ್ನು ಹಾಕಿ ಎರಡು ಕಡೆ ಮಗುಚಿ ಬೇಕಾದ ಗಾತ್ರದಲ್ಲಿ ಮಾಡಿ ಸೇವಿಸಬಹುದು. ಅದಕ್ಕೆ ಹಿಂಗು ಚಟ್ನಿ ಉತ್ತಮ ಕಾಂಬಿನೇಶನ್.

 

LEAVE A REPLY