ಮಂಗಳೂರಿನಲ್ಲಿ ವೈದ್ಯ ದಂಪತಿಗಳಿಂದ ಯಶಸ್ವಿ ಹೈನುಗಾರಿಕೆ!

6763

ದನಗಳನ್ನು ಸಾಕುವುದರಿಂದ ಏನು ಸಿಗುತ್ತದೆ ಮಹಾ? ಅದರಿಂದ ಖರ್ಚು ವಿನ: ಬೇರೆ ಏನೂ ಲಾಭ ಇಲ್ಲ ಎಂದು ಅಂದುಕೊಳ್ಳುವವರೇ ಹೆಚ್ಚು. ದನಗಳನ್ನು ಸಾಕುವುದಕ್ಕಿಂತ ಎಲ್ಲಿಯಾದರೂ ಕೆಲಸಕ್ಕೆ ನಿಂತರೆ ಸಂಬಳವಾದರೂ ಸಿಗುತ್ತದೆ ಎಂದು ಹಲವಾರು ಜನ ಯುವಕರು ತಮ್ಮ ಹಳ್ಳಿಗಳಲ್ಲಿರುವ ಮನೆಗಳನ್ನು ಬಿಟ್ಟು ಪೇಟೆಗೆ ವಲಸೆ ಬರುತ್ತಾರೆ. ಕೃಷಿಯನ್ನು ಬಿಟ್ಟು ಬೇರೆ ವೃತ್ತಿಗೆ ವಲಸೆ ಹೋಗುವುದು ಇಂದಿನ ದಿನಗಳಲ್ಲಿ ಸಾಮಾನ್ಯ. ಆದರೆ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ ಮತ್ತೊಂದೆಡೆ ಪೂರ್ಣ ಪ್ರಮಾಣದಲ್ಲಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಎರಡೂ ಕ್ಷೇತ್ರಗಳಲ್ಲಿಯೂ ಯಶಸ್ವಿಯಾದ ದಂಪತಿಗಳು ಮಂಗಳೂರಿನಲ್ಲಿದ್ದಾರೆ.
ಸುರತ್ಕಲ್ ನ ಎಲಿಫಾಡರ್್ ಜಾರ್ಜ ಅವರು ಮೂಲತ: ಕೃಷಿ ಕುಟುಂಬದಿಂದ ಬಂದವರು. ಆದರೆ ನಂತರ ವಿದ್ಯಾಭ್ಯಾಸದ ದೃಷ್ಟಿಯಿಂದ ವೈದ್ಯ ಡಿಗ್ರಿಯನ್ನು ಪಡೆದರು. ಅದರ ಬಳಿಕ ಅವರಿಗೆ ತಮ್ಮ ಮೂಲ ಕಸುಬು ನೆನಪಾಯಿತು. ಅದಕ್ಕೆ ಸರಿಯಾಗಿ ಹೈನುಗಾರಿಕೆಯಲ್ಲಿಯೂ ಏನಾದರೂ ಸಾಧಿಸಬೇಕೆಂಬ ಅವರ ಅದಮ್ಯ ಉತ್ಸಾಹಕ್ಕೆ ಅವರ ಪತ್ನಿ ಸಾಥ್ ನೀಡಿದರು. ಅವರ ಮಡದಿ ಡಾ|ರಚನಾ ಎನಾಟಿಮಿಕ್ ನಲ್ಲಿ ಪಿಎಚ್ ಡಿ ಮಾಡಿದ್ದಾರೆ. ದಂಪತಿಗಳು ಪ್ರಾರಂಭದಲ್ಲಿ ಎರಡು ದನಗಳಿಂದ ಹೈನುಗಾರಿಕೆಯನ್ನು ಪ್ರಾರಂಭಿಸಿದರು. ಅದರ ನಂತರ ಒಂದೊಂದೆ ದನ ಹೆಚ್ಚಾಗುತ್ತಾ ಈಗ ಇವರ ಈಗ ಒಟ್ಟು ಮೂವತ್ತು ದನಗಳಿವೆ. ಅದರಲ್ಲಿ ಜಸರ್ಿ ಮತ್ತು ಹೆಚ್ ಎಫ್ ತಳಿಗಳು ಕೂಡ ಇದ್ದು, ಇನ್ನೊಂದು ಆಶ್ಚರ್ಯ ಎಂದರೆ ಅದರ ಜೊತೆಗೆ ಸಿರೋಬಿ ಮತ್ತು ಜಮ್ಲಪುರ ಎಂಬ ಎರಡು ತಳಿಗಳ ಮೇಕೆ ಸಾಕಾಣಿಕೆಯನ್ನು ಕೂಡ ಇವರು ಮಾಡುತ್ತಿದ್ದಾರೆ.


ವೈದ್ಯ ದಂಪತಿಗಳು ತಮ್ಮ ಹವ್ಯಾಸದಿಂದ ಸಾಕಷ್ಟು ಲಾಭವನ್ನು ಗಳಿಸುತ್ತಿದ್ದಾರೆ. ಹೈನುಗಾರಿಕೆಯಿಂದ ಸಿಗುವ ಗೊಬ್ಬರಕ್ಕೆ ಅತೀವ ಬೇಡಿಕೆ ಇದ್ದು ಇದರಿಂದಲೇ ಗೊಬರ್ ಗ್ಯಾಸ್ ಕೂಡ ಉತ್ಪತ್ತಿ ಮಾಡಿ ಮನೆಯ ದಿನಕೆಲಸಕ್ಕೆ ಉಪಯೋಗಿಸುತ್ತಿದ್ದಾರೆ.
ಈ ಬಗ್ಗೆ ತಮ್ಮ ಸಂತಸವನ್ನು ಹಂಚಿಕೊಳ್ಳುವ ಎಲಿಫಡರ್್ ಜಾರ್ಜ ಅವರು ಯುವ ಜನತೆ ಹೆಚ್ಚಾಗಿ ಹೈನುಗಾರಿಕೆಗೆ ಒಲವನ್ನು ತೋರಿಸಿದರೆ ಅದರಿಂದ ಸ್ವ ಉದ್ಯೋಗಕ್ಕೂ ಪ್ರಾಶಸ್ತ್ಯ ನೀಡಿದಂತೆ ಆಗುತ್ತದೆ. ಅದರರೊಂದಿಗೆ ಪುರಾತನ ಶೈಲಿಯನ್ನು ಅಳವಡಿಸುವುದನ್ನು ಬಿಟ್ಟು ಆಧುನಿಕ ಶೈಲಿಗೆ ಒಗ್ಗಿಕೊಳ್ಳುವುದರಿಂದ ಹೆಚ್ಚಿನ ಲಾಭ ಗಳಿಸಬಹುದು ಎಂದರು. ಸಂತಾನೋತ್ಪತ್ತಿಗೆ ಕೃತಕ ಶೈಲಿಯನ್ನು ಬಳಸುವುದರಿಂದ ಒಳ್ಳೆಯ ಕರುಗಳನ್ನು ನಾವು ಹೊಂದಿದ್ದೇವೆ ಎಂದು ಅವರು ತಿಳಿಸಿದರು. ಹೈನುಗಾರಿಕೆಯಿಂದ ಸಿಕ್ಕಿದ ಹಾಲನ್ನು ಸ್ಥಳೀಯರಿಗೆ ಮಾರಾಟ ಮಾಡಿ ಉಳಿದ ಹಾಲನ್ನು ಕೆಎಂಎಫ್ ಗೆ ಮಾರುತ್ತೇವೆ ಎಂದು ಅವರು ತಿಳಿಸಿದರು.
ತಮ್ಮ ಮನೆಯ ಆವರಣದಲ್ಲಿರುವ ಕೊಟ್ಟಿಗೆಯನ್ನು ಆಧುನಿಕ ಶೈಲಿಗೆ ಬದಲಾಯಿಸಿಕೊಂಡಿರುವ ಜಾರ್ಜ ಪ್ರತಿದಿನ ಕೊಟ್ಟಿಗೆಯನ್ನು ಸ್ವಚ್ಛಗೊಳಿಸಲು ಮತ್ತು ದನಗಳ ಸಾಕಾಣಿಕೆಗೆ ಮೂರು ಜನರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದಾರೆ. ಸುಮಾರು ಹತ್ತು ಎಕರೆ ಜಾಗ ಹೊಂದಿರುವ ಜಾರ್ಜ ದಂಪತಿಗಳು ಅದರಲ್ಲಿ ಒಂದು ಎಕರೆಯಲ್ಲಿ ಕೇವಲ ಹುಲ್ಲನ್ನೇ ಬೆಳೆಯುತ್ತಿದ್ದಾರೆ. ಡಾ|ರಚನಾ ಅವರು ತಮ್ಮ ಪತಿಗೆ ಹೈನುಗಾರಿಕೆಯಲ್ಲಿ ಸಂಪೂರ್ಣವಾಗಿ ಸಹಾಯ ಮಾಡುತ್ತಾ ಆದರ್ಶ ಸತಿಯಾಗಿದ್ದಾರೆ.

LEAVE A REPLY