ತಲೆನೋವಿಗೆ ಸುಲಭ ಪರಿಹಾರ

275

ಜನರನ್ನು ಹೆಚ್ಚು ಕಾಡುವ ನೋವು ಅಂದ್ರೆ ತಲೆನೋವು.ಜಾಸ್ತಿ ವಾಹನಗಳ ಹಾರ್ನ್ ಕೇಳಿದಾಗ ,ಟ್ರಾಫಿಕ್ ನಲ್ಲಿ ಸಿಕ್ಕಿ ಬಿದ್ದಾಗ,ಕಟು ಪರಿಮಳ ಇರುವ ಸುಗಂಧ ದ್ರವ್ಯವನ್ನು ಯಾರಾದರೂ ಹಚ್ಚಿ ಹತ್ತಿರ ಬಂದಾಗ ,ಒತ್ತಡ ಜಾಸ್ತಿಯಾದಾಗ ,ಹೀಗೆ ತಲೆನೋವಿಗೆ ಕಾರಣಗಳು ಹತ್ತು ಹಲವು .ಈಗ ಇದಕ್ಕೆ ಪರಿಹಾರ ಏನಿದೆ ಎಂದು ತಿಳಿಯೋಣ .

ಶುಂಠಿ ಚಹಾ ತಲೆನೋವಿಗೆ ಉತ್ತಮ ಪರಿಹಾರ ನೀಡುತ್ತದೆ .ಅರ್ಧ ಟಿ ಚಮಚ ಚಹಾ ಹುಡಿ ,ಸ್ವಲ್ಪ ಬೆಲ್ಲ /ಸಕ್ಕರೆ ,ತುರಿದ ಶುಂಠಿ ಸೇರಿಸಿ ಚಹಾ ತಯಾರಿಸಿ ಕುಡಿಯಿರಿ.ಹಾಲು ಸೇರಿಸಿದರೆ ರುಚಿ ಹೆಚ್ಚುತ್ತದೆ.ಇದರಿಂದ ತಲೆನೋವು ಬೇಗ ಕಡಿಮೆಯಾಗುತ್ತದೆ .

 

ನೀಲಗಿರಿ ತೈಲದಿಂದ ಹಣೆಯನ್ನು ಮಸಾಜು ಮಾಡುವುದು .ಸ್ವಲ್ಪ ನೀಲಗಿರಿ ತೈಲವನ್ನು ತೆಗೆದುಕೊಂಡು ಹಣೆಗೆ ನಿಧಾನವಾಗಿ ಮಸಾಜು ಮಾಡುವುದು ಒತ್ತಡ ಕಡಿಮೆ ಮಾಡುವುದರೊಂದಿಗೆ ತಲೆ ನೋವನ್ನು ನೀಗಿಸುತ್ತದೆ.ಹಣೆಯ ಮಧ್ಯ ಭಾಗದಿಂದ ಮಸಾಜು ಶುರು ಮಾಡಿ ಕಣ ತಲೆ ತನಕ ಮುಂದುವರಿಸಿ.ನಂತರ ಎರಡು ಹುಬ್ಬುಗಳನ್ನು ತೀಡಿ.ಬೊಟ್ಟು ಇದು ಹಣೆಯ ಮಧ್ಯವನ್ನು ಸ್ವಲ್ಪ ಜಾಸ್ತಿ ಒತ್ತಿ.ತಲೆನೋವು ನಿಧಾನವಾಗಿ ಕಡಿಮೆಯಾಗುತ್ತದೆ.

ಪ್ರಮಾಣಬದ್ಧವಾದ ಉಸಿರಾಟ  ತಲೆನೋವಿಗೆ ಪರಿಹಾರ ನೀಡುತ್ತದೆ.ಮೊದಲಿಗೆ ಮೂಗಿನ ಬಲಹೊಳ್ಳೆಯಿಂದ ಗಾಳಿ ಒಳತೆಗೆದುಕೊಂಡು ಕೆಲ ಕ್ಷಣಗಳ ನಂತರ ಅದೇ ಹೊಳ್ಳೆಯಿಂದ ಹೊರಬಿಡಿ .ಈಗ ಎಡ ಹೊಳ್ಳೆಯಿಂದ ಉಸಿರು ತೆಗೆದುಕೊಂಡು ಕೆಲಕ್ಷಣಗಳ ನಂತರ ಅದೇ ಹೊಳ್ಳೆಯಿಂದ ಹೊರಬಿಡಿ .ಈ ಪ್ರಕ್ರಿಯೆಯನ್ನು ೩ ಸಲ ಮಾಡಿ .ತಲೆನೋವು ಅದಾಗೇ ಕಡಿಮೆಯಾಗುತ್ತದೆ .

ಶ್ರೀಗಂಧವನ್ನು ಹಚ್ಚುವುದು ಕೂಡ ತಲೆನೋವಿಗೆ ಪರಿಹಾರ ನೀಡುತ್ತದೆ.ಶ್ರೀಗಂಧ ಕೊರಡನ್ನು ತೆಗೆದುಕೊಂಡು ತೇಯ್ದು ಆ ಗಂಧವನ್ನು ಕಣತಲೆಗೆ ಹಚ್ಚಿ .ಇದನ್ನು ದಿನ ನಿತ್ಯ ಮಾಡುವುದರಿಂದ ದೀರ್ಘ ಕಾಲದ ತಲೆನೋವು ಕೂಡ ಕಡಿಮೆಯಾಗುತ್ತದೆ.ಶ್ರೀಗಂಧದ ಪುಡಿಗಿಂತ ಕೊರಡನ್ನು ತೇಯುವುದು ಉತ್ತಮ.

LEAVE A REPLY