ಕಣ್ಣಿನ ಆರೋಗ್ಯ ಕಾಪಾಡಿ

162

ಕಣ್ಣು ಮನುಷ್ಯನ ಅತ್ಯುನ್ನತ ಜ್ಞಾನೇಂದ್ರಿಯ .ನಾವು ಸಮಸ್ಥ ಲೋಕವನ್ನು ಕಾಣಲಾಗುವುದು ಕಣ್ಣುಗಳಿಂದಲೇ.ಇವುಗಳ ಅರೋಗ್ಯ ಅತಿ ಮುಖ್ಯ .ಇತೀಚೆಗೆ ಹೆಚ್ಚುತ್ತಿರುವ ಮಾಲಿನ್ಯತೆ ,ಎಲೆಕ್ಟ್ರಾನಿಕ್ ಉಪಕರಣಗಳು ಇವುಗಳಿಂದ ಕಣ್ಣಿನ ಅನಾರೋಗ್ಯ ಜಾಸ್ತಿಯಾಗುತ್ತಿದೆ.ಇದರ ಬಗ್ಗೆ ಇಲ್ಲಿ ಕೆಲ ಉಪಯುಕ್ತ ಮಾಹಿತಿಗಳನ್ನು ನೀಡಲಾಗಿದೆ.

ರಾತ್ರಿಯಾಗುತ್ತಿರುವಂತೆ ಮಲಗುವ ಸಮಯದಲ್ಲಿ ದೇವರನ್ನು ಧ್ಯಾನಿಸಿ ನಿದ್ರೆ ಮಾಡುವ ಕಾಲ ಹೊರಟು ಹೋಗಿದೆ.ಏನಿದ್ರು ಸ್ಮಾರ್ಟ್ ಫೋನ್ ಹಿಡಿದು ಸಂದೇಶಗಳನ್ನು ಓದಿಕೊಂಡು ,ಚಾಟ್ ಮಾಡುತ್ತ ಮಲಗುವುದು ಸಾಮಾನ್ಯ.ಅದೂ ರೂಮಿನ ಲೈಟನ್ನು ನಂದಿಸಿ.ಇದರಿಂದ ಕೇವಲ ಮೊಬೈಲಿನ ಬೆಳಕು ಮಾತ್ರ ಕಣ್ಣಿಗೆ ಬೀಳುತ್ತದೆ.ಕಣ್ಣನ್ನು ಕಿರಿದು ಮಾಡಿಕೊಂಡು ಇಲ್ಲವೇ ಕಣ್ಣನ್ನು ದೊಡ್ಡದಾಗಿ ಅರಳಿಸಿಕೊಂಡು ಮೊಬೈಲಿನಲ್ಲಿ ತಮ್ಮ ಕೆಲಸ ಮಾಡುತ್ತಾರೆ.ಇದರಿಂದ ಕಣ್ಣು ಹಾಳಾಗಬಹುದು.ದೂರ ದ್ರಿಷ್ಟಿ ,ಸಮೀಪ ದ್ರಿಷ್ಟಿ ,ಮಂದವಾಗುವುದು ,ತಲೆನೋವು ,ಮೈಗ್ರೇನ್ ಹೀಗೆ ಹಲವು ತೊಂದರೆ ಕಾಣಿಸಿಕೊಳ್ಳಬಹುದು .ಕಣ್ಣುಗಳು ಸುಸ್ತಾಗಿ ಆಲಸಿಯಾಗಬಹುದು .ಕಣ್ಣಿನ ಸುತ್ತ ಕಪ್ಪು ವರ್ತುಲಗಳು ಕಾಣಿಸಿಕೊಳ್ಳಬಹುದು .ಆದ್ದರಿಂದ ರಾತ್ರಿ  ಮಲಗುವ ಮುನ್ನ ಮೊಬೈಲನ್ನು ದೂರವಿಡಿ.ಕಣ್ಣು ಮುಚ್ಚಿ ಮಲಗಿ ನಿದ್ರೆಯನ್ನು ಆನಂದಿಸಿ .

ಎಡೆಬಿಡದೆ ಟಿವಿ ಮತ್ತು ಕಂಪ್ಯೂಟರ್ ನೋಡುವುದು ಕಣ್ಣಿಗೆ ಒಳ್ಳೆಯದಲ್ಲ.ಅರ್ಧ ಗಂಟೆಗೊಮ್ಮೆ ಕಣ್ಣುಗಳನ್ನು ಧೀರ್ಘವಾಗಿ ಮುಚ್ಚಿ ತೆಗೆಯಬೇಕು.ಕಂಪ್ಯೂಟರ್ ನಲ್ಲಿ ಕೆಲಸ ಮಾಡುವ ಉದ್ಯೋಗಿಗಳು ,ವಿದ್ಯಾರ್ಥಿಗಳು ರಕ್ಷಕವಾಗಿ ‘ಪವರ್’ ಇಲ್ಲದ ಕನ್ನಡಕವನ್ನು ಬಳಸಬಹುದು .ಇದನ್ನು ನೇತ್ರ ವೈದ್ಯ ರಿಂದ ಪಡೆಯಬಹುದು .ಆದಷ್ಟು ಟಿವಿಯನ್ನು ಬೆಳಕಿನಲ್ಲಿ ನೋಡುವುದೊಳಿತು .

ಪ್ರತಿದಿನ ಬೆಳಗ್ಗೆ ೧೦ ನಿಮಿಶಗಳಷ್ಟಾದರೊ ಹಸಿರು ಗಿಡಗಳನ್ನು ನೋಡಬೇಕು .ಇದು ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು.ಇಲ್ಲವೇ ನೀಲಿ ಆಕಾಶ ,ರಾತ್ರಿ ನಕ್ಶತ್ರಗಳ ವೀಕ್ಷಣೆ ಸಹ ಒಳ್ಳೆಯದು .ಇದರಿಂದ ಕಣ್ಣಿಗೆ ತಂಪಾದ ಅನುಭೂತಿ ಉಂಟಾಗುತ್ತದೆ .

ಬೆಳಗಿನ ಉದಯಿಸುವ ಸೂರ್ಯನ ವೀಕ್ಷಣೆ ಒಳ್ಳೆಯದು.ಕೆಲವು ಸೆಕೆಂಡುಗಳಷ್ಟು ಸಮಯ ಸೂರ್ಯನನ್ನು ಬರಿಗಣ್ಣಿನಿಂದ ನೋಡುವುದರಿಂದ ದ್ರಿಷ್ಟಿ ದೋಷ ಬರುವುದಿಲ್ಲ.ಕಣ್ಣು ಪೊರೆ ಬರುವ ಸಂಭವ ಕಡಿಮೆ.ಕಣ್ಣು ಹೊಳಪು ಪಡೆಯುತ್ತದೆ.ದ್ರಿಷ್ಟಿ ಚುರುಕಾಗುತ್ತದೆ.ಹಾಗೂ ನಿರತವಾದ ವೀಕ್ಷಣೆಯಿಂದ ದ್ರಿಷ್ಟಿದೋಷ ಇದ್ದಲ್ಲಿ ನಿವಾರಣೆಯಾಗುತ್ತದೆ.

LEAVE A REPLY