ಹಲ್ಲುಗಳ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆoದು ತಿಳಿದುಕೊಳ್ಳಿ.

196

ಹಲ್ಲುಗಳು ಮುಖದ ಅಂದಕ್ಕೆ ಪುಟವಿಡುತ್ತವೆ.ಅದಕ್ಕಿಂತ ಹೆಚ್ಚಾಗಿ ಆಹಾರವನ್ನು ಕಡಿಯಲು,ಅರೆಯಲು ಬೇಕು.ದೈನಂದಿನ ಕೆಲಸದ ನಡುವೆ ನಾವು ಇವುಗಳ ಪೋಷಕತೆಯನ್ನು ಮರೆಯುತ್ತೇವೆ ಆಮೇಲೆ ಹಲ್ಲು ನೋವಾದಾಗ ಅತ್ತು ಕರೆದು ರಂಪಾಟ ಮಾಡಿ ,ಹಲ್ಲಿನ ವೈದ್ಯರ ಬಳಿ ತಪಾಸಣೆಗೆ ಹೋಗುತ್ತೇವೆ.ಈಗ ಮನೆಯಲ್ಲೇ ಇವುಗಳ ರಕ್ಷಣೆಯ ಬಗ್ಗೆ ಕಲಿಯೋಣ.

ಹಿಂದಿನ ಕಾಲದಲ್ಲಿ ನಮ್ಮ ಅಜ್ಜ ಅಜ್ಜಿಯರು ಗೇರುಮರದ ಎಲೆ,ಮಾವಿನ ಎಲೆಯಲ್ಲಿ ಹಲ್ಲುಜ್ಜುತ್ತಿದ್ದರು.ಈ.ಆಧುನಿಕತೆಯನ್ನು ಮೈಗೂಡಿಸಿಕೊಂಡ ನಮಗೆ ಅದು ಸರಿಬರಲಿಲ್ಲ.ಆದರೆ ಇದರಲ್ಲೇ ಆರೋಗ್ಯದ ಗುಟ್ಟು ಅಡಗಿದೆ.ಈ ಎಲೆಗಳು ನಾಲಿಗೆಯಲ್ಲಿ ಸೇರುವ ಅಗ್ರವನ್ನು(ಬಿಳಿ ಪೊರೆ )ಯನ್ನು ತೆಗೆದು ಹಾಕುತ್ತವೆ.ಹಲ್ಲುಗಳು ಕಲೆಗಳಿಂದ ಮುಕ್ತವಾಗುತ್ತವೆ.

ತೆಂಗಿನ ಕಾಯಿಯ ನಾರಿನಿಂದ ಹಲ್ಲನ್ನು ಉಜ್ಜುವುದು ಸಹ ಒಳ್ಳೆಯದು.ಇದರಿಂದ ಹಲ್ಲುಗಳ ಮೇಲೆ ಬರುವ ಪದರ ಮತ್ತು ಕಪ್ಪು ಕಲೆಗಳು ನಿವಾರಣೆಯಾಗುತ್ತವೆ.ಸ್ವಲ್ಪ ತೆಂಗಿನ ನಾರನ್ನು ತೆಗೆದುಕೊಂಡು ಉಂಡೆ ಮಾಡಿ ಹಲ್ಲುಗಳ ಮೇಲೆ ಉಜ್ಜಬೇಕು .ಆಮೇಲೆ ಹಲ್ಲು ತೊಳೆಯುವುದರಿಂದ ಸುಂದರ ಹಲ್ಲುಗಳು ನಿಮ್ಮದಾಗುತ್ತವೆ.

“ನಿಮ್ಮ ಟೂತ್ ಪೇಸ್ಟ್ ನಲ್ಲಿ ಉಪ್ಪು ಇದೆಯೇ? “ಈ ಜಾಹೀರಾತು ಟಿವಿಯಲ್ಲಿ ಬರುವಾಗ ನಮ್ಮ ಹಿರಿಯರು ಉಪ್ಪಿನಿಂದ ಹಲ್ಲು ತೊಳೆಯಿರಿ ಎಂದು ಹೇಳುತ್ತಿದ್ದುದು ನೆನಪಾಗುತ್ತದೆ. ಉಪ್ಪು ಮತ್ತು ಮಸಿಯಿಂದ ಹಲ್ಲುಜ್ಜುವುದು ಹಲ್ಲಿಗೆ ಹೊಳಪನ್ನು ನೀಡುತ್ತದೆ.ಕಲ್ಲುಪ್ಪು ಮತ್ತು ಚೆನ್ನಾಗಿ ಗುದ್ದಿ ಪುಡಿ ಮಾಡಿದ ಮಸಿಯನ್ನು ಸೇರಿಸಿ ಹಲ್ಲು ಉಜ್ಜಬೇಕು .ಸಣ್ಣ ಮಕ್ಕಳ ಪಾಚಿ ಕಟ್ಟಿದ ಹಲ್ಲುಗಳು ಸಹ ಬಿಳಿಯಾಗುತ್ತದೆ .

ಕೆಲವರಿಗೆ ಹಲ್ಲಿಗೆ ಸಣ್ಣ ಕೋಲು ,ಪಿನ್ನು ಹಾಕುವ ದುರಭ್ಯಾಸವಿರುತ್ತದೆ.ಇಲ್ಲವೇ,ಪೆನ್ನು ,ಸೂಜಿ  ಹೀಗೆ ಏನಾದರೊಂದು ಹಾಕಿ ಹಲ್ಲನ್ನು ಕೊರೆದು  ಸಂಶೋಧನೆ ಮಾಡುವ ಚಟವಿರುತ್ತದೆ .ಇದು ಅಸಭ್ಯ ಮತ್ತು ಹಾನಿಕಾರಕ .ಸೋಂಕು ಆಗುವ ಸಾಧ್ಯತೆ ಇರುತ್ತದೆ.ಆದ್ದರಿಂದ ಇದನ್ನು ಬಿಟ್ಟು ಬಿಡಿ.ಅನಿವಾರ್ಯ ಇದ್ದಾಗ ಶುಚಿಯಾದ ಟೂತ್ ಪಿಕ್ ಉಪಯೋಗಿಸಿ .

ದಾಳಿಂಬೆಯಂತ ಸುಂದರ ದಂತ ನಿಮ್ಮದಾಗಲಿ .

LEAVE A REPLY