ಸೊಂಟ ಮುರಿದ, ಸ್ಕ್ರೂ ಉಳಿದ ಕೋನ್ ಗಳ ಬಗ್ಗೆ ಯಾರಿಗೂ ಕೇರ್ ಇಲ್ಲ!

1184

ಬಹುಶ: ಟ್ರಾಫಿಕ್ ಕೋನ್ ನೋಡದವರು ನಗರಗಳಲ್ಲಿ ಯಾರೂ ಇರಲಿಕ್ಕಿಲ್ಲ. ಓ, ಟ್ರಾಫಿಕ್ ಕೋನ್ ಎಂದರೆ ಏನೂ ಎಂದು ಗೊತ್ತಾಗಿಲ್ವ, ಈ ಫೋಟೋ ನೋಡಿ.

ಇದೇನೂ ಒಂದು ನೆಟ್ಟಗೆ ನಿಂತುಕೊಂಡಿದೆ. ಒಂದು ಅರ್ಧ ಮಲಗಿಕೊಂಡಿದೆ. ಒಂದಕ್ಕೆ ಸೊಂಟಕ್ಕೆ ಬಲ ಇಲ್ಲದ ಹಾಗೆ ಬಿದ್ದುಕೊಂಡಿದೆ ಎಂದು ಅರ್ಧಕೊಂಡಿರಾ. ಇವುಗಳು ಇಲ್ಲಿ ನೆಡುವಾಗ ಸರಿಯಾಗಿಯೇ ಇರುತ್ತವೆ. ನಂತರ ಬಸ್ ಸ್ಟಾಪಿಗೆ ಬರುವ ಬಸ್ಸುಗಳು ಇದಕ್ಕೆ ಹೊಡೆದು ಹೊಡೆದು ಇವು ಕ್ರಮೇಣ ನಿಜೀರ್ವ ಅವಸ್ಥೆಗೆ ಬಂದು ಮುಟ್ಟುತ್ತವೆ.
ಮಂಗಳೂರು ಮಹಾನಗರ ಪಾಲಿಕೆ, ರಾಜ್ಯ ಸರಕಾರ ಮತ್ತು ಗೃಹ ಇಲಾಖೆ ಪ್ರತಿ ವರ್ಷ ವಿವಿಧ ಯೋಜನೆಗಳಲ್ಲಿ ರಸ್ತೆ ಸುರಕ್ಷತೆಗೆಂದು ಇಂತಿಷ್ಟು ಹಣವನ್ನು ಮೀಸಲಿಡುವ ಸಂಪ್ರದಾಯವಿದೆ. ಅದರಂತೆ ಪ್ರತಿ ರಸ್ತೆಯ ಅವಶ್ಯಕತೆಗೆ ಅನುಗುಣವಾಗಿ ಆ ಅನುದಾನವನ್ನು ಖರ್ಚು ಮಾಡಲಾಗುತ್ತದೆ. ಉದಾಹರಣೆಗೆ ಬಸ್ ಬೇ ನಿಮರ್ಾಣಕ್ಕೆ. ಮಂಗಳೂರಿನಲ್ಲಿ ಪಾಲಿಕೆ ಒಂದಿಷ್ಟು ಬಸ್ ಬೇಗಳ ನಿಮರ್ಾಣ ಮಾಡಿದೆ. ಆದರೆ ಅದರ ಒಳಗೆ ಹೋಗುವ ಬಸ್ ಗಳು ಕಡಿಮೆ. ಇನ್ನು ಹಲವೆಡೆ ಬಸ್ ಗಳು ತಮಗೆ ಇಷ್ಟ ಬಂದ ಕಡೆ ನಿಲ್ಲವುದು ಬೇಡಾ ಎಂದು ಪೊಲೀಸ್ ಇಲಾಖೆಯವರು ಅನೇಕ ಬಸ್ ಸ್ಟಾಪ್ ಗಳ ಎದುರು ಈ ಟ್ರಾಫಿಕ್ ಕೋನ್ ಗಳನ್ನು ಬಸ್ ಸ್ಟಾಪಿನ ಉದ್ದಗಲಕ್ಕೆ ಅನುಗುಣವಾಗಿ ಅಳವಡಿಸುತ್ತಾರೆ. ಪ್ರಾರಂಭದ ದಿನಗಳಲ್ಲಿ ಇವು ನೋಡಲು ಸುಂದರವಾಗಿ ಕಾಣುತ್ತವೆ. ಆದರೆ ಬರುಬುರುತ್ತಾ ಇವು ಅರ್ಧ ಅಲ್ಲೇ ಪಕ್ಕದ ಚರಂಡಿಯಲ್ಲಿ ಬಿದ್ದು ಅದಕ್ಕೆ ಹೊಡೆದ ಸ್ಕ್ರೂಗಳು ಮತ್ತು ಕೆಳಗಿನ ತುಂಡು ಮಾತ್ರ ರಸ್ತೆಯಲ್ಲಿ ಉಳಿದಿರುತ್ತದೆ.
ಇದರಿಂದ ಏನಾಗುತ್ತದೆ? ಮೊದಲನೇಯದಾಗಿ ನಗರದ ಸೌಂದರ್ಯಕ್ಕೆ ಇವು ಮುಳುವಾಗುತ್ತದೆ. ನೀವು ದೂರದಿಂದ ನೋಡಿದರೆ ಅವು ಬಸ್ಸುಗಳ ಕರಿ ತಾಗಿ ಕಪ್ಪು ಬಣ್ಣಕ್ಕೆ ತಿರುಗಿರುತ್ತವೆ. ಅರ್ಧ ಬಿದ್ದ ರೀತಿಯಲ್ಲಿರುವ ಕೋನ್ ಗಳನ್ನು ನಿಲ್ಲಿಸಲು ಸಾಧ್ಯವಿಲ್ಲದೆ ಅವು ಜೀವ ಕಳೆದುಕೊಳ್ಳುವ ಸ್ಥಿತಿಗೆ ಬಂದು ಮುಟ್ಟಿರುತ್ತವೆ. ಅದನ್ನು ಹಾಗೆ ಬಿಡುವುದರಿಂದ ಅವು ಇಡೀ ಬಸ್ ನಿಲ್ದಾಣಕ್ಕೆ ದೃಷ್ಟಿಬೊಟ್ಟು ಇಟ್ಟಂತೆ ಕಾಣುತ್ತವೆ. ಆದರೆ ಅದನ್ನು ಸರಿಪಡಿಸಲು ಯಾರೂ ಕೂಡ ಮುಂದಾಗುವುದಿಲ್ಲ. ಯಾರೂ ಎಂದರೆ ಜನಸಾಮಾನ್ಯರಲ್ಲ, ಅಧಿಕಾರಿ ವಲಯ.
ಇನ್ನು ಎರಡನೇಯದಾಗಿ ಅನೇಕ ಕಡೆ ನಾವು ನೀವು ನೋಡಿದ ಹಾಗೆ, ಈ ಟ್ರಾಫಿಕ್ ಕೋನ್ ಗಳ ಜಾಗದಲ್ಲಿ ಅದು ಗಟ್ಟಿಯಾಗಿ ನಿಲ್ಲಲು ಸ್ಕ್ರೂ ಅಳವಡಿಸಿರುತ್ತಾರೆ. ಕೋನ್ ಗಳು ಮಾಯವಾದರೂ ಅದಕ್ಕೆ ಅಳವಡಿಸುವ ಸ್ಕ್ರೂಗಳು ಅಲ್ಲೇ ಗೂಟ ಹೊಡೆದು ಇರುತ್ತವೆ. ಇವು ಜನಸಾಮಾನ್ಯರಿಗೆ ನಡೆದುಕೊಂಡು ಹೋಗುವ ತಾಗಿ ಅನೇಕರು ಬಿದ್ದ ಉದಾಹರಣೆಗಳು ಕೂಡ ಇವೆ. ಅಷ್ಟೇ ಅಲ್ಲದೆ ಇದು ಕಾಲಿಗೆ ತಾಗಿ ರಕ್ತ ಬರುವಷ್ಟು ಅಪಾಯಕಾರಿಯಾಗಿ ಕೂಡ ಪರಿಣಮಿಸುತ್ತವೆ. ಆದ್ದರಿಂದ ಸಂಬಂಧಪಟ್ಟವರು ಜನರ ಸುರಕ್ಷತೆ ಮತ್ತು ನಗರದ ಸೌಂದರ್ಯಕ್ಕಾದರೂ ಕೋನ್ ಗಳ ಬಗ್ಗೆ ಎಚ್ಚರಿಕೆ ವಹಿಸಿಕೊಂಡರೆ ಸೂಕ್ತ.

LEAVE A REPLY