ಚಕ್ಕುಲಿ ತಿಂದಂತೆ ಸುಲಭವಾಗಿ ಟ್ಯೂಬ್ ಲೈಟ್ ತಿನ್ನುವ ರೋನಾಲ್ಡ್!

849

ಚಿಪ್ಸ್ ಸಹಿತ ಕುರುಕುರು ತಿಂಡಿಗಳನ್ನು ನೋಡಿದರೆ ಈ ಮಳೆಗಾಲದಲ್ಲಿ ಬಾಯಿಯಲ್ಲಿ ನೀರು ಬರುತ್ತದೆ. ಹೊರಗೆ ತಣ್ಣನೆಯ ಗಾಳಿ ಬೀಸುತ್ತಿರಲು ಒಳಗೆ ಚಕ್ಕುಲಿ, ಕೊಡಬಾಳೆಯೊಂದಿಗೆ ಒಂದು ಕಪ್ ಬಿಸಿ ಬಿಸಿ ಕಾಫಿ ಸಿಕ್ಕರೆ ಅದಕ್ಕಿಂತ ಖುಷಿ ಬೇರೆ ಇಲ್ಲ. ಆದರೆ ಇಲ್ಲೊಬ್ಬ ವ್ಯಕ್ತಿ ನೀವು ಖಾರಕಡ್ಡಿಯನ್ನು ಬಾಯಿಗೆ ಹಾಕಿ ಮುರಿದಷ್ಟೇ ಸುಲಭವಾಗಿ ಟ್ಯೂಬ್ ಲೈಟ್ ಗಳನ್ನು ಬಾಯಿಗೆ ಹಾಕಿ ತಿಂದು ಬಿಡುತ್ತಾನೆ. ನೀವು ತುಕಡಿ, ಗೇರಿನ ಚಿಪ್ಸ್ ಬಾಯಿಗೆ ಹಾಕಿ ಚಪ್ಪರಿಸಿದ ಹಾಗೆ ಗಾಜಿನ ತುಂಡುಗಳನ್ನು ಬಾಯಿಗೆ ಹಾಕಿ ಮುರಿದು ತಿಂದು ನೀರು ಕುಡಿದು ಹೊಟ್ಟೆ ತುಂಬಿತು ಎನ್ನುತ್ತಾನೆ. ಎಲ್ಲಾ ಮನುಷ್ಯರಂತೆ ಇವರು ಕೂಡ ನಮ್ಮ ನಿಮ್ಮ ಹಾಗೆ ಊಟ ತಿಂಡಿ ಮಾಡುತ್ತಾರೆ. ಕಾಫಿ ಕುಡಿಯುತ್ತಾರೆ, ಆದರೆ ಹಸಿವೆಯಾಗದಿದ್ರು ನಮ್ಮ ಮನೋರಂಜನೆಗಾಗಿ ಒಂದು ಟ್ಯೂಬ್ ತಿನ್ನಿ ಎಂದರೆ ಕ್ಷಣಾರ್ಧದಲ್ಲಿ ತಿಂದು ನೀವು ಮೂಗಿನ ಮೇಲೆ ಬೆರಳಿಡುವಂತೆ ಮಾಡಿಬಿಡುತ್ತಾರೆ.
ತಿನ್ನುವುದು
ಶಿವರ್ಾ-ಮಂಚಕಲ್ ಮೂಲದ ರೋನಾಲ್ಡ್ ಕುಟಿನೋ ಅವರಿಗೆ ಗಾಜಿನ ಗ್ಲಾಸ್, ಟ್ಯೂಬಲೈಟ್ ಗಳನ್ನು ತಿನ್ನುವುದೇ ಕಾಯಕ. ಹತ್ತು ನಿಮಿಷದಲ್ಲಿ ಒಂದು ದೊಡ್ಡ ಗ್ಲಾಸನ್ನು ಹಾಗೆ ಬೇಕರಿಯ ಕುರುಕುರು ತಿಂಡಿ ತಿಂದಂತೆ ತಿಂದು ಮುಗಿಸಿ ನೀರು ಕುಡಿದುಬಿಡುತ್ತಾರೆ. ಕಳೆದ 37 ವರ್ಷಗಳಿಂದ ಅವರು ಹೀಗೆ ಸಾಹಸಗಳನ್ನು ಮಾಡಿ ಜನಮೆಚ್ಚುಗೆಯನ್ನು ಪಡೆಯುತ್ತಿದ್ದಾರೆ. ತಾನು ಈ ಗಾಜುಗಳನ್ನು ತಿನ್ನುವುದರಿಂದ ಇಲ್ಲಿಯ ತನಕ ತನ್ನ ದೇಹದ ಮೇಲೆ ಯಾವುದೇ ವ್ಯತ್ತಿರಿಕ್ತ ಪರಿಣಾಮ ಬೀರಿಲ್ಲ ಎನ್ನುವ ರೋನಾಡ್ಡ್, ಒಂದು ದಿನ ತಿನ್ನದಿದ್ದರೆ ಏನೋ ಕಳೆದುಕೊಂಡ ಭಾವನೆ ದೇಹದ ಮೇಲೆ ಉಂಟಾಗುತ್ತದೆ ಎಂದು ಹೇಳುತ್ತಾರೆ. ಚಿಕ್ಕವಯಸ್ಸಿನಲ್ಲಿ ಒಮ್ಮೆ ಸಣ್ಣ ಬಲ್ಬ್ ತಿಂದಾಗ ಏನೋ ಖುಷಿಯಾಗಿತ್ತು. ನಂತರ ಹೀಗೆ ಗಾಜುಗಳನ್ನು, ಹಸಿಮಾಂಸವನ್ನು ತಿನ್ನುವುದನ್ನು ರೂಢಿಸಿಕೊಂಡೆ ಎಂದು ಅವರು ಹೇಳುತ್ತಾರೆ. ಮಲವಿಸರ್ಜನೆ ಸಮಯದಲ್ಲಿ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ಎನ್ನುವ ರೋನಾಲ್ಡೊ ಗಾಜುಗಳು ತನ್ನ ದೇಹವನ್ನು ಸೇರಿದ ಬಳಿಕ ಕರಗಿ ಹೋಗುತ್ತವೆ ಎಂದು ವೈದ್ಯರೇ ತಿಳಿಸಿದ್ದಾರೆ ಎನ್ನುತ್ತಾರೆ. ಬಹಿರಂಗವಾಗಿ ಕ್ಯಾಮೆರಾದ ಮುಂದೆ ತಿಂದು ತನ್ನ ಸಾಮಥ್ರ್ಯ ಪ್ರದೇಶಿಸುವ ರೋನಾಲ್ಡೋ ಅವರಿಗೆ ಅನೇಕ ಸಂಘ ಸಂಸ್ಥೆಗಳು ಕರೆದು ಗೌರವಿಸಿವೆ.
ರೋನಾಲ್ಡ್ ತಿನ್ನುತ್ತಾರೆ ಎಂದು ನೀವು ಪರೀಕ್ಷಿಸಲು ಹೋಗಬೇಡ್ರಿ ಮಾರಾಯ್ರೆ, ಏಕೆಂದರೆ ನಾವು ಒಂದು ಸಣ್ಣ ಗುಂಡು ಪಿನ್ ತಿಂದರೂ ನಾಳೆ ಬೆಳಿಗ್ಗೆ ಕಷ್ಟವಾಗುತ್ತದೆ. ಆದರೆ ಸತತ ಪರಿಶ್ರಮದಿಂದ ರೋನಾಲ್ಡ್ ಇದನ್ನು ಮಾಡಿ ತೋರಿಸಿದ್ದಾರೆ. ಇವರು ಹೀಗೆ ಮಾಡುವ ಕಾರಣ ಇವರ ಮನೆಯವರಿಗೆ ಆತಂಕವಾಗುವುದಿಲ್ಲವೇ ಎಂದು ಕೇಳಿದರೆ ಅವರಿಗೆ ಈಗ ನೋಡಿ ನೋಡಿ ಅಭ್ಯಾಸವಾಗಿದೆ ಎನ್ನುತ್ತಾರೆ ಈ ರೋನಾಲ್ಡ್. ನಿಮಗೂ ನಿಮ್ಮ ಯಾವುದಾದರೂ ಕಾರ್ಯಕ್ರಮದಲ್ಲಿ ರೋನಾಲ್ಡ್ ಅವರ ಚಾಕಚಕ್ಯತೆಯನ್ನು ನೋಡುವ ಅವಕಾಶ ಸಿಗಬಹುದು. ಸಿಕ್ಕಿದರೆ ಅವರಿಗೊಂದು ಆಲ್ ದಿ ಬೆಸ್ಟ್ ಎನ್ನಿ.

LEAVE A REPLY