ಉತ್ತಮ ವೈವಾಹಿಕ ಭಾಂದವ್ಯಕ್ಕೆ ಈ ವಿಚಾರ ಖಂಡಿತವಾಗಿಯೂ ಅರಿತಿರಬೇಕು!

1359

ವೈವಾಹಿಕ ಜೀವನ ಆಗಿರಬಹುದು, ಪ್ರಣಯ ಭಾಂದವ್ಯ ಆಗಿರಬಹುದು. ಈ ಎಲ್ಲಾ ವಿಚಾರಗಳಲ್ಲೂ ಅದರದೇ ಆದ ಕೆಲವು ನಿಯಮಗಳಿದೆ.. ಆ ವಿಚಾರಗಳನ್ನ ಬೆನ್ನು ಹತ್ತಿದರೆ ಯಶಸ್ಸನ್ನ ಕಾಣಬಹುದು..ಎಲ್ಲಾ ಭಾಂದವ್ಯಗಳಲ್ಲೂ ವ್ಯತ್ಯಾಸಗಳಿರುತ್ತವೆ.. ಅದಕ್ಕೆ ಕಾರಣ ಕೂಡ ಇದೆ ನಮ್ಮ ಕೈಯಲ್ಲಿ ಕಾಣುವ ಬೆರಳು ಅದಕ್ಕೆ ತಾಜಾ ಉದಾಹರಣೆ..ಯಾವ ಬೆರಳು ಕೂಡ ಸಮನಾಗಿಲ್ಲ..ಒಂದೊಂದು ಬೇರೆ ಬೇರೆ ರೀತಿಯಲ್ಲಿದೆ ಅದರ ಹಾಗೇಯೇ ಜೀವನ ಕೂಡ ಏಳು ಬೀಳುಗಳನ್ನ ಎದುರಿಸಬೇಕಾಗುತ್ತದೆ. ಆದರೆ ಬಾಂದವ್ಯದ ಕೆಲವೊಂದು ಏಳುಬೀಳು, ವಿರಸಗಳನ್ನ ಈ ನಿಯಮಗಳಿಂದ ಖಂಡಿತ ದೂರಮಾಡಬಹುದು.

ಒಬ್ಬರು ಸುಮ್ಮನಿದ್ದರೆ ಸಾಕು:
ಭಾಂದವ್ಯದಲ್ಲಿ ಜಗಳ ಸಾಮನ್ಯ ಬಿಡಿ.. ಆದರೆ ಜಗಳ ಜಾಸ್ತಿ ಆಗೋದನ್ನ ತಪ್ಪಿಸಬಹದು.. ಅದು ಹೇಗೇ ಅಂದರೆ ಇಬ್ಬರ ನಡುವಿನ ಸಂಭಾಷಣೆ ಜಗಳಕ್ಕೆ ತಿರುಗಿದಾಗ ಒಬ್ಬರು ಹೆಚ್ಚಾಗಿ ಜಗಳ ಮಾಡುತ್ತಿದ್ದರೆ ಮತ್ತೊಬ್ಬರು ಸುಮ್ಮನೆ ಕುಳಿತರೆ ಸಮಸ್ಯೆಗೆ ಪರಿಹಾರ ದೊರಕಿದಮತೆ. ಜಗಳ ಮಾಡುವವರು ಜಗಳವಾಡಿ ಬೆಸತ್ತು ಕೊನೆಗೆ ನಿಮ್ಮಲ್ಲಿ ಕ್ಷಮೇ ಕೇಳುವುದರಲ್ಲಿ ಸಂಶಯ ಬೇಡ.. ಬೇಕಾದ್ರೆ ಟ್ರೈ ಮಾಡಿ ನೋಡಿ

ಸುಳ್ಳು ಹೇಳ ಬೇಡಿ
ಈಗೀನ ಹೆಚ್ಚಿನ ಭಾಂದವ್ಯದಲ್ಲಿ ದೊಡ್ಡ ಸಮಸ್ಯೆ ಸುಳ್ಳು. ಆ ಸಮಸ್ಯೆ ಇಂದ ಮತ್ತೊಂದು ಸಮಸ್ಯೆ ಉಂಟಾಗುತ್ತದೆ, ಅದುವೇ ಸುಳ್ಳು ಹೇಳುವ ಚಾಳಿ. ಅನೇಕ ಭಾಂದವ್ಯಗಳ ಬಿರುಕಿಗೆ ಕಾರಣ ಕೂಡ ಅದುವೇ..ಎಷ್ಟು ಸಾಧ್ಯವಾಗುತ್ತೋ ಅಷ್ಟು ಸತ್ಯವನ್ನ ಹೇಳಲು ಪ್ರಯತ್ನಿಸಿ.. ಆದರೆ ಸತ್ಯ ಹೇಳುವ ಭರದಲ್ಲಿ ಮೂರ್ಖತನ ಪ್ರದರ್ಶಿಸ ಬೇಡಿ. ಒಂದು ಸುಳ್ಳು ಹೇಳಿದರೆ ಮೊತ್ತೊಂದು ಸುಳ್ಳು ಹೇಳಬೇಕಾಗುತ್ತದೆ..ಆದ್ದರಿಂದ ಸುಳ್ಳಿನಿಂದ ಸಮಸ್ಯೆ ಹೊರತು ಯಾವುದೇ ಭಾಂದವ್ಯವು ಅನ್ಯೋನ್ಯವಾಗಿರುವುದಿಲ್ಲ.. ಸುಳ್ಳಿಗೆ ಬೈ ಹೇಳಿಬಿಟಿ ನಿಮ್ಮ ಜೀವನವನ್ನ ಸುಂದರವಾಗಿರಿಸಿ.

ಸಮಯ ಕಳೆಯಿರಿ
ಇದೊಂದು ಮುಖ್ಯವಾದ ವಿಚಾರ ಜೀವನದಲ್ಲಿ ಎಲ್ಲಾರೂ ಅವರವರ ಕೆಲಸದಲ್ಲಿ ಬಿಜಿ ಇರುತ್ತಾರೆ.. ಅದರೆ ನಮ್ಮ ಪ್ರೀತಿ ಪಾತ್ರಾರಿಗಾಗಿ ಸಮಯವನ್ನ ಕಳೆಯುವುದು ತುಂಬಾ ಮುಖ್ಯವಾಗಿರುತ್ತದೆ. ಇಲ್ಲದಿದ್ದಲ್ಲಿ ಅದೇ ದೊಡ್ಡ ಸಮಸ್ಯೆಯಾಗಿ ಬದಲಾವಣೆಯಾಗುತ್ತದೆ. ಅಷ್ಟೆ ಅಲದ್ಲೇ ಅದರಿಂದ ಗಲಾಟೆ, ಭಾಂದವ್ಯದಲ್ಲಿ ಬಿರುಕು ಕೂಡ ಆಗುವ ಸಾಧ್ಯತೆ ಹೆಚ್ಚು. ಸಮಯವಿದ್ದಾಗಲೆಲ್ಲ ನಿಮ್ಮ ಪ್ರೀತಿ ಪಾತ್ರರನ್ನ ಎಲ್ಲಾದರೂ ಕರೆದುಕೊಂಡು ಹೋಗಿ.. ಆ ಸಮಯದಲ್ಲಿ ಮಾತು ಮತ್ತು ಪ್ರೀತಿ ಹೆಚ್ಚಾಗುತ್ತದೆ

ಅವರ ಮಾತಿಗೂ ಮನ್ನಣೆ ನೀಡಿ
ನಿಮ್ಮ ಪ್ರೀತಿ ಪಾತ್ರರು ಏನಾದರೂ ಹೇಳುವುದುದಾದರೆ ಅದಕ್ಕೆ ಮನ್ನಣೆ ಕೊಡಿ ಸರಿ ಇಲ್ಲದಿದ್ದರೆ ತಿಳಿ ಹೇಳಿ.. ಅದನ್ನ ಬಿಟ್ಟು ನೆಗ್ಲೆಟ್ ಮಾಡಬೇಡಿ ಅಥವಾ ಅವರು ಹೇಳುವದುನ್ನ ಕೇಳಿ ನಗಬೇಡಿ, ಅದು ಅತ್ಯಂತ ನೋವನ್ನ ಉಂಟು ಮಾಡುತ್ತದೆ. ನೀವು ಅವರ ಮಾತಿಗೆ ಬೆಲೆ ಕೊಟ್ಟರೆ ಅವರು ಅತೀವ ಸಂತೋಷವಾಗುತ್ತರೆ.
ಇಷ್ಟೆ ಅಲಲ್ದೇ ಇನ್ನಷ್ಟು ಇಚಾರಗಳನ್ನ ಅಳವಡಿಸದಾಗ ಉತ್ತಮ ಭಾಂದವ್ಯವನ್ನ ನಡೆಸಲು ಸಾಧ್ಯ ಇದೆ.. ಸಮಸ್ಯೆಗಳು ಸಹಜ ಸಮಸ್ಯೆ ಬಂದಾಗ ಕುಗ್ಗದೆ ಮುನ್ನಡೆಯಬೇಕು.

ಕಿರಣ್ ದೊಂಡೋಲೆ

LEAVE A REPLY