ಬೆನ್ನು ನೋವು, ಸೊಂಟ ನೋವೇ, 15 ನಿಮಿಷಗಳಲ್ಲಿ ಸೈಡ್ ಇಫೆಕ್ಟ್ ಇಲ್ಲದೆ ಗುಡ್ ಬಾಯ್ ಹೇಳಿ!

2923

ನಮ್ಮ ಪ್ರಕೃತಿಯಲ್ಲಿ ನಮಗೆ ಗೊತ್ತಿಲ್ಲದ ಸಾವಿರಾರು ಬಗೆಯ ಔಷಧಿಗಳು ಇವೆ. ಆದರೆ ಪ್ರಕೃತಿ ತನ್ನನ್ನು ತಾನು ಪ್ರಚಾರ ಮಾಡದೆ ಇರುವ ಕಾರಣ ನಮಗೆ ಅವುಗಳ ಮಹತ್ವ ಗೊತ್ತಿರುವುದಿಲ್ಲ. ಒಂದು ವೇಳೆ ಕಾಡಿನಲ್ಲಿರುವ ಅಮೂಲ್ಯ ಗಿಡಮೂಲಿಕೆಗಳಿಗೆ ಒಬ್ಬೊಬ್ಬ ಮಾರ್ಕೆಟಿಂಗ್ ಮ್ಯಾನೇಜರ್ ಇದ್ದಿದ್ರೆ ಈಗ ನಾವು ಹೆಚ್ಚು ಅವಲಂಬಿಸಿರುವ ಅಲೋಪತಿ ಔಷಧಗಳು ಮನೆಯ ಅಟ್ಟ ಸೇರಬೇಕಾಗುತ್ತಿತ್ತು. ಆದರೆ ಏನು ಮಾಡುವುದು, ಗೊತ್ತಿರುವವರಿಗೆ ಗಿಡಬಳ್ಳಿಗಳ ಮಹತ್ವ ಗೊತ್ತಿದೆ. ಗೊತ್ತಿಲ್ಲದವರು ವೈದ್ಯರಿಗೆ ನೂರಾರು ರೂಪಾಯಿ ಖರ್ಚು ಮಾಡಿ ತಮ್ಮ ಆರೋಗ್ಯವನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ.

ಈಗಂತೂ ಸಾಫ್ಟ್ ವೇರ್ ಜಮಾನಾ. ಬೆಳಿಗ್ಗೆ ಆರು ಇಡ್ಲಿ ತಿಂದರೆ ಸಂಜೆ ತನಕ ಹಸಿವೆ ಆಗುವುದಿಲ್ಲ. ಊಟ, ತಿಂಡಿ ಸಮಯಕ್ಕೆ ಸರಿಯಾಗಿ ಆಗದಿದ್ದರೆ ತೊಂದರೆ ಇದ್ದದ್ದೇ. ಇನ್ನು ದೈಹಿಕವಾಗಿ ಶ್ರಮ ವಹಿಸಿ ದುಡಿಯುವವರಿಗೆ ಹೆಚ್ಚಾಗಿ ಕಾಡುವ ಸಮಸ್ಯೆ ಬಾಡಿ ಪೇನ್. ಇದು ಕೇವಲ ದೈಹಿಕ ಶ್ರಮ ಹಾಕುವ ವ್ಯಕ್ತಿಗಳಿಗೆ ಮಾತ್ರವಲ್ಲ. ಮನೆಯಲ್ಲಿಯೇ ಇರುವ ಗೃಹಿಣಿಯರಿಗೆ, ಸಾಫ್ಟ್ ವೇರ್ ಮತ್ತು ಐಟಿ ಬಿಟಿ ಗಳಲ್ಲಿ ಕೆಲಸ ಮಾಡುವವರಿಗೆ ಈ ಸೊಂಟ ನೋವು, ಕೀಲುಗಳ ನೋವು, ಕತ್ತು ನೋವು, ಬೆನ್ನು ಮೂಳೆ ನೋವು ಸಾಮಾನ್ಯವಾಗಿ ಬರುತ್ತದೆ ಎಂದು ಎಲ್ಲರೂ ಹೇಳುವ ಮಾತು. ಒಂದೇ ಶೈಲಿಯಲ್ಲಿ ಕುಳಿತುಕೊಂಡು ಕೆಲಸ ಮಾಡುವವರಿಗೆ ಈ ನೋವುಗಳು ಸಾಮಾನ್ಯ.

ಹಾಗಾದರೆ ಇದಕ್ಕೆ ಏನು ಮಾಡಬೇಕು. ಯೋಗ ಗುರುಗಳ ಬಳಿ ಕೇಳಿದರೆ ಯೋಗಾಸನಗಳನ್ನು ಮಾಡಿ ಎನ್ನುತ್ತಾರೆ. ಆದರೆ ಎಲ್ಲರಿಗೂ ಯೋಗ ಮಾಡುವಷ್ಟು ಪುರುಸೊತ್ತು ಇರುವುದಿಲ್ಲ. ಇನ್ನು ಅನೇಕ ಬಾರಿ ಆಲಸ್ಯ ಕೂಡ ಕಾಡುತ್ತದೆ. ಆದ್ದರಿಂದ ಎಲ್ಲಕ್ಕಿಂತ ಸುಲಭ ಮತ್ತು ಶೀಘ್ರ ಪರಿಹಾರ ಏನಾದರೂ ಇದೆಯಾ ಎಂದು ನೀವು ಕೇಳಬಹುದು. ಖಂಡಿತ ಇದೆ. ಹೆಚ್ಚಿನವರು ಇಂತಹ ನೋವು ಕಾಡಿದಾಗ ಮೆಡಿಕಲ್ ಶಾಪಿಗೆ ಹೋಗಿ ನೋವು ನಿವಾರಕ ಔಷಧಗಳನ್ನು ತೆಗೆದುಕೊಳ್ಳುತ್ತಾರೆ. ಪೇನ್ ಕಿಲ್ಲರ್ ಮಾತ್ರೆಗಳು ತಕ್ಷಣ ಪರಿಹಾರ ನೀಡಬಲ್ಲದಾದರೂ ಇದರಿಂದ ದೂರಗಾಮಿ ಅನಾನುಕೂಲತೆಗಳೇ ಹೆಚ್ಚು. ಈ ಮಾತ್ರೆಗಳಿಂದ ಒಮ್ಮೆ ಸೈಡ್ ಇಫೆಕ್ಟ್ ಬಂತು ಎಂದರೆ ನಂತರ ಮತ್ತೆ ವೈದ್ಯರ ಹತ್ತಿರ ಓಡಿ ಹೋಗುವ ಅನಿವಾರ್ಯತೆ ನಮ್ಮನ್ನು ಕಾಡುತ್ತದೆ.

ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ಎಂತಹ ನೋವನ್ನಾದರೂ ಕ್ಷಣಾರ್ಧದಲ್ಲಿ ಪರಿಹರಿಸಿ ಮತ್ತೆ ಕೆಲಸಕ್ಕೆ ಹಿಂತಿರುಗುತ್ತಿದ್ದರು. ಅಂತಹ ಉಪಾಯ ಈಗ ಮಾಡಲು ಸಾಧ್ಯವಿಲ್ಲವೇ. ಇದೆ. ಪ್ರಕೃತಿಯಲ್ಲಿ ಸಹಜವಾಗಿ ದೊರೆಯುವ ಆಲಿವ್ ಆಯಿಲ್ ಅನ್ನು ಸ್ವಲ್ಪ ತೆಗೆದುಕೊಳ್ಳಿ. ಅದರಲ್ಲಿ ಸ್ವಲ್ಪ ಪ್ರಮಾಣದಲ್ಲಿ ಉಪ್ಪು ಹಾಕಿ ಪೇಸ್ಟ್ ರೀತಿಯಲ್ಲಿ ಬರುವರೆಗೂ ಕಲಸಿ, ಚೆನ್ನಾಗಿ ಮಿಕ್ಸ್ ಮಾಡಿದ ನಂತರ ಸಿದ್ಧವಾದ ಮಿಶ್ರಣವನ್ನು ನೋವು ಇರುವ ಜಾಗದಲ್ಲಿ ಹಚ್ಚಬೇಕು. ಆಲಿವ್ ಎಣ್ಣೆ ಹಾಗೂ ಉಪ್ಪಿನಲ್ಲಿರುವ ಔಷಧೀಯ ಗುಣಗಳು ನೋವನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದರಿಂದ ಹದಿನೈದು ನಿಮಿಷಗಳಲ್ಲಿ ನೋವು ಮಾಯವಾಗುತ್ತದೆ.

LEAVE A REPLY