ಬಾಂಗ್ಲಾ-ಬ್ರಿಟನ್ ಮೂಲದ ಮಹಿಳೆ ಮೇಲೆ ಅತ್ಯಾಚಾರ, ಕೇರಳ ಪಾದ್ರಿ ವಿರುದ್ಧ ದೂರು
ತಿರುವನಂತಪುರ: ದೇಶದಲ್ಲಿ ಕ್ರಿಶ್ಚಿಯನ್ ಪಾದ್ರಿಗಳ ಮತಾಂತರ ಉಪಟಳದ ಕುರಿತು ಆಗಾಗ ಸುದ್ದಿಯಾಗುತ್ತಿರುವ ಬೆನ್ನಲ್ಲೇ ಕೇರಳದಲ್ಲಿ ಪಾದ್ರಿಯೊಬ್ಬ ಬಾಂಗ್ಲಾ-ಬ್ರಿಟನ್ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ದೂರು ದಾಖಲಾಗಿದೆ.
ಕೇರಳದ ಕೊಟ್ಟಾಯಂ ಜಿಲ್ಲೆಯ ಪೆರುಮ್ದುತುರತ್ ಪ್ರದೇಶದಲ್ಲಿರುವ ಸೇಂಟ್ ಮ್ಯಾಥ್ಯೂಸ್ ಚರ್ಚಿನಲ್ಲಿರುವ ಪಾದ್ರಿ ಥಾಮಸ್ ವಿರುದ್ಧ ಅತ್ಯಾಚಾರ, ಚಿನ್ನ ಸೇರಿ ಹಲವು ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡಿದ ಪ್ರಕರಣ ದಾಖಲಾಗಿದೆ.
ಬಾಂಗ್ಲಾ-ಬ್ರಿಟನ್ ಮೂಲದ 41 ವರ್ಷದ ಮಹಿಳೆ ಕಡುತ್ತುರುತಿ ಪೊಲೀಸರಿಗೆ ದೂರು ನೀಡಿದ್ದು, “ಥಾಮಸ್ ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದು, ಪಾದ್ರಿ ಎಂಬ ಕಾರಣಕ್ಕಾಗಿ ಕೊಟ್ಟಾಯಂನಲ್ಲಿರುವ ಚರ್ಚಿಗೆ ಭೇಟಿ ನೀಡಿದ್ದೆ. ಅಲ್ಲಿ ಒಂದು ವಾರ ನನ್ನನ್ನು ಕೂಡಿಹಾಕಿ ಅತ್ಯಾಚಾರ ಎಸಗಿದ್ದಾನೆ” ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಅಷ್ಟೇ ಅಲ್ಲ, ನನ್ನ ಚಿನ್ನಾಭರಣ, ನನ್ನ ಮೊಬೈಲ್, 1,300 ಪೌಂಡ್ಸ್ ಗಳನ್ನು ಪಾದ್ರಿ ಕಳ್ಳತನ ಮಾಡಿದ್ದಾನೆ ಎಂದು ಮಹಿಳೆ ದೂರಿದ್ದಾರೆ. “ಮಹಿಳೆ ನೀಡಿದ ದೂರಿನ ಅನ್ವಯ ಪಾದ್ರಿ ಥಾಮಸ್ ವಿರುದ್ಧ ಅತ್ಯಾಚಾರ ಹಾಗೂ ಕಳ್ಳತನದ ಪ್ರಕರಣ ದಾಖಲಿಸಲಾಗಿದೆ. ಈ ಕುರಿತು ಸಮಗ್ರ ತನಿಖೆ ನಡೆಸಲಾಗುವುದು” ಎಂದು ಕೊಟ್ಟಾಯಂ ಡಿವೈಎಸ್ಪಿ ಮಾಹಿತಿ ನೀಡಿದ್ದಾರೆ.
ಆದಾಗ್ಯೂ ಚರ್ಚ್ ಆಡಳಿತ ಮಂಡಳಿ ಥಾಮಸ್ ನನ್ನು ಪಾದ್ರಿ ಸ್ಥಾನದಿಂದ ವಜಾಗೊಳಿಸಿದ್ದು, ಪೊಲೀಸರ ತನಿಖೆಗೆ ಥಾಮಸ್ ಸಹಕರಿಸಲಿದ್ದಾರೆ ಎಂದು ಸ್ಪಷ್ಟನೆ ನೀಡಿದೆ. ಆದರೆ ಧಾರ್ಮಿಕ ಸಂಸ್ಥೆಯೊಳಗೆ ಇಂತಹ ಹೇಯ ಕೃತ್ಯ ನಡೆಸುವ ಚರ್ಚ್ ಗಳ ಬಗ್ಗೆ ಜನ ಎಚ್ಚರದಿಂದ ಇರುವುದೊಳಿತು.
Leave A Reply