ಉತ್ತರ ಪ್ರದೇಶದಲ್ಲಿ ನಕಲಿ ಮದರಸಾಗಳ ಮೇಲೆ ಯೋಗಿ ಆದಿತ್ಯನಾಥರೇಕೆ ಉರಿದುಬೀಳುತ್ತಾರೆ ಎಂದರೆ?
ಲಖನೌ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥರು ಮುಖ್ಯಮಂತ್ರಿಯಾದ ಬಳಿಕ ತೆಗೆದುಕೊಂಡ ಪ್ರಮುಖ ಹಾಗೂ ದಿಟ್ಟ ನಿರ್ಧಾರಗಳಲ್ಲಿ ನಕಲಿ ಮದರಸಾಗಳಿಗೆ ಬೀಗ ಹಾಕಿಸುವುದು. ಆದರೆ ಇದಕ್ಕೆ ಯೋಗಿ ಆದಿತ್ಯನಾಥರಿಗೇ ಮುಸ್ಲಿಂ ವಿರೋಧಿ ಎಂಬ ಪಟ್ಟ ಕಟ್ಟಲಾಯಿತು.
ಆದರೆ ಉತ್ತರ ಪ್ರದೇಶದಲ್ಲಿ ಕೆಲವು ಮದರಸಾಗಳು ಎಷ್ಟು ಅಪಾಯಕಾರಿ ಎಂಬುದಕ್ಕೆ ಸ್ಪಷ್ಟ ನಿದರ್ಶನವೊಂದು ಸಿಕ್ಕಿದ್ದು, ಉಗ್ರರ ಜತೆ ನಂಟು ಹೊಂದಿರುವ ಶಂಕೆ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಜಾಮಿಯಾ ಅರೇಬಿಯಾ ಮದರಸಾದಲ್ಲಿ ಓದುತ್ತಿದ್ದ 7 ವಿದ್ಯಾರ್ಥಿಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅಧಿಕಾರಿಗಳು ಬಂಧಿಸಿದ್ದಾರೆ.
ಈ ಏಳೂ ವಿದ್ಯಾರ್ಥಿಗಳು ಕಾಶ್ಮೀರದವರಾಗಿದ್ದು, ಇವರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉಗ್ರ ಸಂಘಟನೆಗಳ ಜತೆ ಸಂಪರ್ಕ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ. ಏಳೂ ವಿದ್ಯಾರ್ಥಿಗಳನ್ನು ದೆಹಲಿಗೆ ಕರೆದೊಯ್ದು ವಿಚಾರಣೆ ನಡೆಸಲಾಗುತ್ತಿದೆ.
ಕಳೆದ ಮೂರು ತಿಂಗಳ ಹಿಂದಷ್ಟೇ ತೌಸೀಫ್ ಮಲಿಕ್ ಎಂಬಾತನನ್ನು ಬಂಧಿಸಲಾಗಿದ್ದು, ಈತ ಉಗ್ರನ ಜತೆ ನಂಟು ಹೊಂದಿದ್ದಾನೆ ಎಂಬ ಪ್ರಕರಣದಲ್ಲಿ ಎನ್ಐಎ ತನಿಖೆ ನಡೆಸುತ್ತಿದೆ. ಆದಾಗ್ಯೂ ಈತನೂ ಇದೇ ಮದರಸಾದಲ್ಲಿ ಕಲಿತಿದ್ದ ಎಂಬ ಕಾರಣಕ್ಕಾಗಿ ಕಳೆದ ಮಾರ್ಚ್ ನಲ್ಲಿ ಎನ್ಐಎ ಅಧಿಕಾರಿಗಳು ಈ ಮದರಸಾದಲ್ಲಿ ಪರಿಶೀಲನೆ ನಡೆಸಿದ್ದರು ಎಂದು ತಿಳಿದುಬಂದಿದೆ.
ಏಳು ಜನ ಕಾಶ್ಮೀರಿಗಳ ಬಂಧನದ ಕುರಿತು ಯಾವುದೇ ಮಾಹಿತಿ ನೀಡಿಲ್ಲವಾದರೂ, ಮದರಸಾ ಮೂಲಗಳ ಪ್ರಕಾರ ಕಳೆದ ಬುಧವಾರ ಅಧಿಕಾರಿಗಳು ಮದರಸಾಕ್ಕೆ ತೆರಳಿ ಏಳು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಈಗಲಾದರೂ ಗೊತ್ತಾಯಿತಲ್ಲ, ಏಕೆ ಯೋಗಿ ಆದಿತ್ಯನಾಥರು ನಕಲಿ ಮದರಸಾಗಳೆಂದರೆ ಉರಿದುಬೀಳುತ್ತಾರೆ ಎಂದು?
Leave A Reply