ನಾನು ಹಿಂದೂ ಎಂದು ಹೇಳಿಕೊಳ್ಳಲು ಹೆಮ್ಮೆಯಿದೆ ಎಂದ ಮುಸ್ಲಿಂ ಸಚಿವನಾರು ಗೊತ್ತೇ?
ಲಖನೌ:’ಹಿಂದೂಸ್ತಾನದಲ್ಲಿ ವಾಸ ಮಾಡುವ ಪ್ರತಿಯೊಬ್ಬ ವ್ಯಕ್ತಿಯೂ ಹಿಂದೂ. ನಾನು ವಿದೇಶಗಳಿಗೆ ಹೋದಾಗ ಹಿಂದೂಸ್ತಾನಿ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಎನಿಸುತ್ತದೆ’ ಹೀಗೆ ಹೇಳಿದವರೋ ಯಾರೋ ಹಿಂದೂ ಸಂಘಟನೆಯ ಮುಖಂಡರಲ್ಲ.. ಬದಲಾಗಿ ಯೋಗಿ ಆದಿತ್ಯನಾಥ ಸರ್ಕಾರದಲ್ಲಿ ಮುಸ್ಲಿಂ ಸಮುದಾಯದಿಂದ ಏಕೈಕ ಸಚಿವರಾಗಿರುವ ಮೋಹಸೀನ್ ರಾಜಾ ಕಠೋರ ಮಾತುಗಳಿವು.
ಅಂಬೇಡ್ಕರ್ ಜಯಂತ್ಯುತ್ಸವ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಏಕೈಕ ಮುಸ್ಲಿಂ ಸಮುದಾಯದ ಸಚಿವ ರಾಜಾ, ಹಿಂದೂಸ್ತಾನದಲ್ಲಿ ಜೀವನ ನಡೆಸುವ ಪ್ರತಿಯೊಬ್ಬ ವ್ಯಕ್ತಿಯೂ ಹಿಂದೂಗಳಾಗಿತ್ತಾರೆ. ನಾನು ವಿದೇಶಗಳಿಗೆ ಹೋದಾಗ ಕೆಲವು ಎಲ್ಲಿಂದ ಬಂದಿದ್ದೀರಿ ಎಂದು ಪ್ರಶ್ನಿಸಿದರೇ ನಾವು ಹೆಮ್ಮೆಯಿಂದ ಹೇಳುತ್ತೇವೆ ‘125 ಕೋಟಿ ಹಿಂದೂಸ್ತಾನಿಗಳು ವಾಸಿಸುವ ನಾಡಿನಿಂದ ಬಂದಿದ್ದೇನೆ’ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ವಹಿಸಿಕೊಂಡ ನಂತರ ಅಭಿವೃದ್ಧಿ ಕಾರ್ಯಗಳ ಜೊತೆಗೆ ಸಾಮಾಜಿಕ ಸಾಮರಸ್ಯ ಕಾಪಾಡುವ ಮಹತ್ತರ ಕಾರ್ಯವನ್ನು ಮಾಡುತ್ತಿದ್ದಾರೆ. ಅದರ ಫಲವಾಗಿ ಇದೀಗ ಉತ್ತರ ಪ್ರದೇಶದಲ್ಲಿ ಜನರ ಮನಸ್ಥಿತಿ ಬದಲಾಗುತ್ತಿದೆ. ಹಿಂದೂ ಮುಸ್ಲಿಂರ ಮಧ್ಯೆ ಭಾವೈಕತ್ಯೆ ಹೆಚ್ಚುತ್ತಿದೆ ಎಂಬುದು ಮೊಹಿಸೀನ್ ರಾಜಾ ಮಾತುಗಳಲ್ಲಿ ವ್ಯಕ್ತವಾಗುತ್ತಿದೆ.
Leave A Reply