ಐದು ನಿಮಿಷದ ಹಾಡಿಗೆ ಐದು ಗಂಟೆ ಚಿತ್ರೀಕರಣ ಮಾಡಿಸಿದ ಬಿ.ಆರ್ ಶೆಟ್ಟಿ !
ಮಂಗಳೂರು ಮೂಲದ ದುಬೈಯ ಖ್ಯಾತ ಉದ್ಯಮಿ ಹರೀಶ್ ಶೇರಿಗಾರ್ ಹಾಗೂ ಅವರ ಪತ್ನಿ ಶರ್ಮಿಳಾ ಶೇರಿಗಾರ್ ನಿರ್ಮಿಸಿರುವ ಹಿರಿಯ ನಿರ್ದೇಶಕ ಕೂಡ್ಲು ರಾಮಕೃಷ್ಣ ನಿರ್ದೇಶನದ ಬಹುನಿರೀಕ್ಷಿತ “ಮಾರ್ಚ್ 22′ ಕನ್ನಡ ಸಿನೆಮಾದಲ್ಲಿ ಉದ್ಯಮಿ ಬಿ.ಆರ್ ಶೆಟ್ಟಿ, ಐದು ನಿಮಿಷದ ಹಾಡಿನಲ್ಲಿ ಕಾಣಿಸಿಕೊಳ್ಳಲು ಐದು ಗಂಟೆ ಚಿತ್ರೀಕರಣ ದಲ್ಲಿ ತೊಡಗಿಕೊಂಡಿದ್ದರು. ಈ ಸುದ್ದಿಯನ್ನು ಬೆಂಗಳೂರಿನಲ್ಲಿ ಮಾರ್ಚ್-22 ಶೀರ್ಷಿಕೆಯ ಪ್ರೆಸ್ ಬಿಡುಗಡೆಗೊಳಿಸಿ ಅನುಭವ ಹಂಚಿಕೊಂಡಿದ್ದಾರೆ.
ನಟನೆ ನಿಜಕ್ಕೂ ಸವಾಲಿನ ಕೆಲಸ. ಕಲಾವಿದರ ಶ್ರಮಕ್ಕೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು ಎಂದಿದ್ದಾರೆ. ಮಾಧ್ಯಮದವರೊಂದಿಗೆ ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಳ್ಳುತ್ತಾ ಬಿ.ಆರ್. ಶೆಟ್ಟಿ, ಅದು 1973ರ ಸಮಯ. ಸಾಲ ಮಾಡಿ ಮನೆ ಕಟ್ಟಿದ್ದೆ. ಸಾಲ ತೀರಿಸುವಉದ್ದೇಶದಿಂದ ಮರುಭೂಮಿ ದೇಶವಾದ ಯುನೈಟೆಡ್ ಅರಬ್ ಎಮಿರೇಟ್ಸ್‍ಗೆ ಹೋಗಬೇಕಾಯಿತು ಎಂದು ತಮ್ಮ ಯಶೋಗಾಥೆಯನ್ನು ವಿವರಿಸಿದರು.
ಜೀವಜಲದ ಮಹತ್ವ ಮತ್ತು ಜಾಗೃತಿಗಾಗಿ ಸಂದೇಶಸಾರುವ “ಮಾರ್ಚ್-22” ಚಿತ್ರ ಪೂರ್ಣಗೊಂಡಿದ್ದು ಸದ್ಯದಲ್ಲಿಯೇ ಬಿಡುಗಡೆಗೆ ಸಿದ್ಧತೆ ಮಾಡಿಕೊಂಡಿದೆ ಚಿತ್ರತಂಡ. ಮಾರ್ಚ್ 22′ ಸಿನೆಮಾದ ತಾರೆಯರ ಹಾಗೂ ಗಣ್ಯರ ವಿಶೇಷ ಉಪಸ್ಥಿತಿಯಲ್ಲಿ ಸಿನೆಮಾದಲ್ಲಿ ಪ್ರಮುಖ ಪಾತ್ರ ವಹಿಸಿರುವ ಅನಂತ್‌ನಾಗ್ ಆಡಿಯೋಬಿಡುಗಡೆ ಮಾಡಲಿದ್ದಾರೆ. ಇದೇಸಂದರ್ಭದಲ್ಲಿ ಸಿನೆಮಾದ ಹಾಡುಗಳ ಟೀಸರ್‌ನ್ನು ನಟ ಆಶಿಷ್ ವಿದ್ಯಾರ್ಥಿ ಬಿಡುಗಡೆಗೊಳಿಸಲಿದ್ದಾರೆ ಎಂದುಹರೀಶ್ ಶೇರಿಗಾರ್ ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
Leave A Reply