ಆರೆಸ್ಸೆಸ್ ಮುಖಂಡರ ಹತ್ಯೆ ಆರೋಪಿಗಳು ಯಾವ ದೇಶದಲ್ಲಿ ತರಬೇತಿ ಪಡೆದು ಬಂದಿದ್ದಾರೆ ಗೊತ್ತಾ?
ನವದೆಹಲಿ: ಇತ್ತೀಚೆಗೆ ದೇಶದಲ್ಲಿ ಆರೆಸ್ಸೆಸ್ ಹಾಗೂ ಹಿಂದೂ ಕಾರ್ಯಕರ್ತರ ಹತ್ಯೆಗಳು ಜಾಸ್ತಿಯಾಗುತ್ತಿವೆ. ಕೇರಳ ಸೇರಿ ಹಲವು ರಾಜ್ಯಗಳಲ್ಲಿ ಆರೆಸ್ಸೆಸ್ ಕಾರ್ಯಕರ್ತರನ್ನು ಹತ್ಯೆ ಮಾಡಲಾಗುತ್ತದೆ. ಕರ್ನಾಟಕದಲ್ಲೇ 22ಕ್ಕೂ ಅಧಿಕ ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡಿರುವುದು ಆತಂಕ ಸೃಷ್ಟಿಸಿದೆ.
ಆದರೆ ಹೀಗೆ ಹಿಂದೂಗಳನ್ನು ಹತ್ಯೆ ಮಾಡಿದವರು ಎಲ್ಲಿ ತರಬೇತಿ ಪಡೆದಿದ್ದಾರೆ ಎಂಬುದು ಈಗ ಮತ್ತಷ್ಟು ಆತಂಕಕ್ಕೀಡುಮಾಡಿದೆ. ಹೌದು, ಇತ್ತೀಚೆಗೆ ಆರೆಸ್ಸೆಸ್ ಕಾರ್ಯಕರ್ತ ನರೇಶ್ ಕುಮಾರ್ ಎಂಬುವವರನ್ನು ಹತ್ಯೆ ಮಾಡಲಾಗಿತ್ತು. ಈ ಹತ್ಯೆಯ ಆರೋಪಿಗಳನ್ನು ಬಂಧಿಸಿದ್ದ ಎನ್ಐಎ ಅಧಿಕಾರಿಗಳು ವಿಚಾರಣೆ ನಡೆಸಿದ್ದು, ಇವರು ಇಟಲಿಯಲ್ಲಿ ತರಬೇತಿ ಪಡೆದು ಬಂದಿದ್ದಾರೆ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.
ಪಂಜಾಬಿನಲ್ಲಿ 2016ರಿಂದ 17ರ ಅವಧಿಯಲ್ಲಿ ಸುಮಾರು 8 ಎಂಟು ಎರೆಸ್ಸೆಸ್ ಮುಖಂಡರನ್ನು ಹತ್ಯೆ ಮಾಡಲಾಗಿದ್ದು, ಈ ಎಲ್ಲ ಕೃತ್ಯಗಳ ಹಿಂದೆಯೂ ಹೀಗೆ ಇಟಲಿಯಿಂದ ತರಬೇತಿ ಪಡೆದವರ ಕೈವಾಡ ಇದೆ. ಇವರು ಇಟಲಿಯಲ್ಲಿ ಕೊಲೆ ಮಾಡುವ ಕುರಿತು ತರಬೇತಿ ಪಡೆದು ಭಾರತದಲ್ಲಿ ಆರೆಸ್ಸೆಸ್ ಮುಖಂಡರನ್ನು ಕೊಲೆ ಮಾಡಲಾಗಿದೆ ಎಂದು ನರೇಶ್ ಕುಮಾರ್ ಹತ್ಯೆಯ ಪ್ರಮುಖ ಆರೋಪಿ ಎನ್ಐಎ ಅಧಿಕಾರಿಗಳಿಗೆ ವಿಚಾರಣೆಯಲ್ಲಿ ಬಾಯಿಬಿಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಈ ಕೊಲೆ ಪಿತೂರಿಯಲ್ಲಿ ಖಲಿಸ್ತಾನ್ ಲಿಬರೇಷನ್ ಫೋರ್ಸ್ ಸೇರಿ ಹಲವು ಸಂಘಟನೆಗಳು ಬೆಂಬಲ ನೀಡಿವೆ. ಪಾಕಿಸ್ತಾನ, ಆಸ್ಟ್ರೇಲಿಯಾ, ಲಂಡನ್, ಫ್ರಾನ್ಸ್ ಹಾಗೂ ಇಟಲಿಯಲ್ಲಿ ಕುಳಿತು ಹಿಂದೂ ಸಂಘಟನೆಗಳ ಮುಖಂಡರ ಹತ್ಯೆಗೂ ಪಿತೂರಿ ಮಾಡಲಾಗಿತ್ತು ಎಂದು ವಿಚಾರಣೆಯಿಂದ ತಿಳಿದುಬಂದಿದೆ. ಈ ಕುರಿತು ಎನ್ಐಎ ಚಾರ್ಜ್ ಶೀಟ್ ಸಲ್ಲಿಸಿದೆ.
Leave A Reply