2019ರಲ್ಲೂ ನರೇಂದ್ರ ಮೋದಿ ಅವರೇ ಪ್ರಧಾನಿಯಾಗಲಿ ಎಂದ ಖ್ಯಾತ ಹಿನ್ನೆಲೆ ಗಾಯಕ ಯಾರು ಗೊತ್ತಾ?
ಪ್ರಧಾನಿ ನರೇಂದ್ರ ಅವರೆಂದರೇನೇ ಹಾಗೆ, ಅವರು ಪ್ರಸ್ತುತ ವಿಶ್ವವನ್ನೇ ಆವರಿಸಿರುವ ನಾಯಕ. ಯಾವ ದೇಶಕ್ಕೆ ತೆರಳಿದರೂ ಅವರಿಗೆ ರೆಡ್ ಕಾರ್ಪೆಟ್ ಕಾದಿರುತ್ತದೆ. ಭಾರತದ ಯಾವ ರಾಜ್ಯಕ್ಕೆ ಹೋದರೂ ಲಕ್ಷ ಲಕ್ಷ ಜನ ಅವರಿಗಾಗಿ ಕಾಯುತ್ತಿರುತ್ತಾರೆ. ವಿಶ್ವದ ನಾಯಕರೇ ಮೋದಿ ಅವರನ್ನು ಹೊಗಳುತ್ತಿದ್ದಾರೆ. ಅದು ಮೋದಿ ಅವರ ತಾಕತ್ತು.
ಈಗಾಗಲೇ ಮೋದಿ ಅವರು ನಾಲ್ಕು ವರ್ಷ ಉತ್ತಮವಾಗಿ ಆಡಳಿತ ನೀಡಿದ್ದಾರೆ. ಇನ್ನೇನು ಮುಂದಿನ ವರ್ಷವೇ ಚುನಾವಣೆ ನಡೆಯಲಿದ್ದು, ನರೇಂದ್ರ ಮೋದಿ ಅವರೇ ಪ್ರಧಾನಿಯಾಗಲಿ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ನೋಟು ನಿಷೇಧ, ಜಿಎಸ್ಟಿ, ಸರ್ಜಿಕಲ್ ಸ್ಟ್ರೈಕ್, ಮೇಕ್ ಇನ್ ಇಂಡಿಯಾ, ಜನಧನ್, ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಕಾಯಿದೆ ಸೇರಿ ಮೋದಿ ಅವರು ಕೈಗೊಂಡ ಹಲವು ನಿರ್ಧಾರಗಳು ದೇಶದ ಮನಸೆಳೆದಿವೆ. ಹೀಗಾಗಿಯೇ ಮೋದಿಯವರೇ ಪ್ರಧಾನಿಯಾಗಲಿ ಎಂಬ ಅಭಿಲಾಷೆ ಜನರದ್ದು.
ಇದೇ ದಿಸೆಯಲ್ಲಿ ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್ ಅವರೂ ಸಹ ಮುಂದಿನ ಅವಧಿಗೂ ನರೇಂದ್ರ ಮೋದಿ ಅವರೇ ಪ್ರಧಾನಿಯಾಗಲಿ ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ಟಿವಿ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ ಅವರು, 2019ರಲ್ಲೂ ರಾಹುಲ್ ಗಾಂಧಿಗಿಂತ ನರೇಂದ್ರ ಮೋದಿ ಅವರೇ ಪ್ರಧಾನಿಯಾದರೆ ಒಳ್ಳೆಯದು ಎಂದು ಬಹಿರಂಗವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ನಾನು ಅಮೆರಿಕದ ಅರ್ಥಶಾಸ್ತ್ರಜ್ಞರೊಬ್ಬರು ಟಿವಿಯಲ್ಲಿ ಮಾತನಾಡುತ್ತಿದ್ದುದನ್ನು ನೋಡುತ್ತಿದೆ. ಅದರಲ್ಲಿ ಚೀನಾ, ಜಪಾನ್ ಗಿಂತ ಭಾರತವೇ ಬಲಿಷ್ಠ ಹಾಗೂ ಅಪಾಯಕಾರಿಯಾಗಿದೆ. ಏಕೆಂದರೆ, ಭಾರತದ ಬೆಳವಣಿಗೆ ಆ ರೀತಿಯಲ್ಲಿ ಇದೆ. ಹಾಗಾಗಿ ನರೇಂದ್ರ ಮೋದಿ ಅವರೇ ಮುಂದಿನ ಬಾರಿಯೂ ಪ್ರಧಾನಿಯಾದರೆ ಒಳ್ಳೆಯದು ಎಂಬುದು ನನ್ನ ಅಭಿಪ್ರಾಯ ಎಂದು ಸೋನು ನಿಗಮ್ ಹೇಳಿದ್ದಾರೆ.
—
Leave A Reply