• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಮನೋರಂಜನೆ ಸುದ್ದಿ 

ಫುಜ್ಲಾನಾ ಜಿಎಸ್ ಬಿ ಪ್ರೋ ಕಬಡ್ಡಿ -ಪರ್ಲ್ ಸಿಟಿ ಸ್ಮ್ಯಾಶರ್ಸ್ ಚಾಂಪಿಯನ್

Tulunadu News Posted On July 23, 2018
0


0
Shares
  • Share On Facebook
  • Tweet It

ಫುಜ್ಲಾನಾ ಜಿಎಸ್ ಬಿ ಪ್ರೋ ಕಬಡ್ಡಿ ಪಂದ್ಯಾಟದ ಅಂತಿಮ ಸುತ್ತಿನಲ್ಲಿ ಡಿವಿಕೆ ವಾರಿಯರ್ಸ್ ಅನ್ನು ಸೋಲಿಸಿ ಪರ್ಲ್ ಸಿಟಿ ಸ್ಮ್ಯಾಶರ್ಸ್ ಪುತ್ತೂರು ಪ್ರಶಸ್ತಿ ಗೆದ್ದುಕೊಂಡಿತು. ಅಂತಿಮ ಪಂದ್ಯಾಟದಲ್ಲಿ 37-24 ಅಂಕಗಳಿಂದ ಪರ್ಲ್ ಸಿಟಿ ಸ್ಮ್ಯಾಶರ್ಸ್ ಪುತ್ತೂರು ಜಿಎಸ್ ಬಿ ಟ್ರೋಫಿ ಮತ್ತು ಒಂದು ಲಕ್ಷ್ಷ ರೂಪಾಯಿಯನ್ನು ತನ್ನದಾಗಿಸಿತು.

ಪ್ರಶಸ್ತಿ ವಿತರಿಸಿ ಮಾತನಾಡಿದ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅವರು ಕ್ರೀಡೆಯಲ್ಲಿ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಕೊಡಿಯಾಲ್ ಸ್ಫೊರ್ಟ್ ಎಸೋಸಿಯೇಶನ್ ಎರಡು ವರ್ಷಗಳಿಂದ ಕ್ರಿಕೆಟ್ ಮತ್ತು ಕಬಡ್ಡಿ ಪಂದ್ಯಾಟಗಳನ್ನು ಆಯೋಜಿಸುತ್ತಿದೆ. ಅಷ್ಟೇ ಅಲ್ಲದೆ ಕ್ರೀಡೆಯಲ್ಲಿ ಉನ್ನತ ಸ್ಥಾನಕ್ಕೆರಲು ಶ್ರಮಿಸುವ ಜಿಎಸ್ ಬಿ ಕ್ರೀಡಾಳುಗಳಿಗೆ ಸಹಾಯಹಸ್ತ ಕೂಡ ಚಾಚುವ ಕೆಲಸ ಮಾಡುತ್ತಿದೆ ಎಂದರು. ಬೆಸ್ಟ್ ರೈಡರ್ ಪ್ರಶಸ್ತಿಯನ್ನು ಡಿವಿಕೆ ತಂಡದ ಶ್ರೀಕಾಂತ್ ಪ್ರಭು, ಬೆಸ್ಟ್ ಕ್ಯಾಚರ್ ಆಗಿ ನಿತಿನ್ ಪುತ್ತೂರು, ಫುಜ್ಲಾನ್ ಪ್ಲೇಯರ್ ಆಫ್ ದಿ ಮ್ಯಾಚ್ ಪರ್ಲ್ ಸಿಟಿ ಪುತ್ತೂರು ತಂಡದ ಸುಬ್ರಾಯ್ ಕಾಮತ್, ಮಾಡರ್ನ್ ಎಮರ್ಜಿಂಗ್ ಪ್ಲೇಯರ್ ಆಗಿ ನಮೋ ವಾರಿಯರ್ ಮುಂಬೈ ತಂಡದ ರಕ್ಷಿತ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಸಮಾರೋಪ ಸಮಾರಂಭದಲ್ಲಿ ಕಾಮತ್ ಕೇಟರರ್ಸ್ ಮಾಲೀಕರಾದ ಸುಧಾಕರ ಕಾಮತ್, ಶ್ರೀ ವೆಂಕಟರಮಣ ದೇವಸ್ಥಾನದ ಟ್ರಸ್ಟಿ ರಾಮಚಂದ್ರ ಕಾಮತ್, ಲೆಕ್ಕ ಪರಿಶೋಧಕ ಜಗನ್ನಾಥ ಕಾಮತ್, ಉದ್ಯಮಿಗಳಾದ ಸುರೇಶ್ ಕಾಮತ್, ಅನಂತ ಕಾಮತ್, ನರೇಂದ್ರ ನಾಯಕ್, ರಾಜೇಶ್ ಕಿಣಿ ಭಾರತೀಯ ಸೇನೆಯ ಲೆಫ್ಟಿನೆಂಟ್ ಕರ್ನಲ್ ಮಂಜುನಾಥ ಪೈ, ರಮೇಶ್ ಮಲ್ಯ, ಪೂಜಾ ಪೈ, ಕಬಡ್ಡಿ ಎಸೋಸಿಯೇಶನ್ ಅಮರನಾಥ ರೈ, ವಕೀಲ ಸತೀಶ್ ಭಟ್, ಅರವಿಂದ ಪ್ರಭು, ಹನುಮಂತ ಕಾಮತ್, ನರೇಶ್ ಶೆಣೈ, ಶಿವಾನಂದ ಶೆಣೈ, ಚೇತನ್ ಕಾಮತ್, ನರೇಶ್ ಪ್ರಭು , ವಿಘ್ನೇಶ್ ನಾಯಕ್ ಉಪಸ್ಥಿತರಿದ್ದರು.

0
Shares
  • Share On Facebook
  • Tweet It




Trending Now
ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
Tulunadu News March 17, 2026
ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
Tulunadu News March 11, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
    • ಅಕ್ರಮ 4 ಸಾವಿರ ಲೀಟರ್ ಡೀಸಿಲ್ ಬೆಳ್ತಂಗಡಿಯಲ್ಲಿ ಪತ್ತೆ!
    • ಕಳ್ಳತನ ನಡೆದ ಅರಣ್ಯಾಧಿಕಾರಿ ಮನೆ ಹಾಗೂ ನೆರೆಮನೆಗಳಲ್ಲಿ ಸಿಸಿಟಿವಿಗಳೂ ಇಲ್ಲ!
    • ಸಾಲ ಕೊಡಿಸುವ ಭರವಸೆ: ಕೋಟ್ಯಾಂತರ ರೂ ವಂಚನೆಯ ರೋಶನ್ ಸಲ್ದಾನ Case Update:
    • ಅಲಿ ಖಮೇನಿ ಹತ್ಯೆ: ಕರ್ನಾಟಕದ 'ಮಿನಿ ಇರಾನ್' ನಲ್ಲಿ 3 ದಿನ ಶೋಕಾಚಾರಣೆ!
    • ಇರಾನ್ ನಾಯಕ‌ ಅಲಿ ಖಮೇನಿ ಆತ್ಮಕ್ಕೆ ಶಾಂತಿ ಕೋರಿದ ಸಿಎಂ ಸಿದ್ದರಾಮಯ್ಯ
    • ಅಪ್ರಾಪ್ತ ವಯಸ್ಸಿನವರ ಮೇಲೆ ಅನೈತಿಕ ಪೊಲೀಸ್ ಗಿರಿ: ತಂದೆ, ಮಗನ ಬಂಧನ
    • ಪಾಲಿಕೆಯಲ್ಲಿ ಅಧಿಕಾರಿಗಳ ಆಡಳಿತಕ್ಕೆ ಒಂದು ವರ್ಷ , ಪಾಲಿಕೆಗೆ ಚುನಾವಣೆ ಸದ್ಯಕ್ಕೆ ಅನುಮಾನ!
  • Popular Posts

    • 1
      ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.

  • Privacy Policy
  • Contact
© Tulunadu Infomedia.

Press enter/return to begin your search