• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಹಾರ್ನ್ ಹೊಡೆಯುವ ಮುನ್ನ ಯೋಚಿಸಿ, ಹಾರ್ನ್ ನಿಮ್ಮದಿರಬಹುದು, ಆದರೆ ಕಿವಿ ನಮ್ಮದು!!

Hanumantha Kamath Posted On January 30, 2019
0


0
Shares
  • Share On Facebook
  • Tweet It

ಇನ್ನು ಪ್ರತಿ ಬುಧವಾರ ಮಂಗಳೂರು ನಗರದಲ್ಲಿ ನಿಮಗೆ ಕರ್ಕಶವಾದ ಹಾರ್ನ್ ಗಳ ಭರಾಟೆಗಳು ಕೇಳುವ ಸಾಧ್ಯತೆ ಇಲ್ಲ ಎಂದು ಇವತ್ತೆ ನಾನು ಹೇಳಲು ತಯಾರಿಲ್ಲ. ಆದರೆ ಅಂತಹ ಒಂದು ಪ್ರಯತ್ನವನ್ನು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಮಾಡಿದ್ದಾರೆ. ಶಾಸಕರಾದವರು ಕೇವಲ ಸನ್ಮಾನ್ಯ, ಸಭೆ, ಗುದ್ದಲಿ ಪೂಜೆ, ಉದ್ಘಾಟನೆ ಎಂದು ಬಿಝಿ ಆಗಿರುತ್ತಾರೆ ಎನ್ನುವ ಜನರ ಮನೋಭಾವದ ನಡುವೆ ಒಬ್ಬ ಕ್ರಿಯಾಶೀಲ, ದೂರದೃಷ್ಟಿವುಳ್ಳ ಶಾಸಕ ಹೀಗೆ ಕೂಡ ಯೋಚಿಸಬಹುದು ಮತ್ತು ಅನುಷ್ಟಾನಕ್ಕೆ ತರಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಶಾಸಕ ಕಾಮತ್ ಅವರು ಇತ್ತೀಚೆಗೆ ಆಸ್ಪತ್ರೆಯೊಂದಕ್ಕೆ ಯಾವುದೋ ಕಾರ್ಯ ನಿಮಿತ್ತ ಹೋಗಿ ಅಲ್ಲಿ ವೈದ್ಯಾಧಿಕಾರಿಗಳ ಬಳಿ ಮಾತನಾಡುತ್ತಾ ಇದ್ದಾಗ ರಸ್ತೆಯಿಂದ ಬರುತ್ತಿದ್ದ ವಾಹನಗಳ ಕರ್ಕಶವಾದ ಹಾರ್ನ್ ಗಳನ್ನು ಕೇಳಿ ಅವರಿಗೆ ಈ ಐಡಿಯಾ ಹೊಳೆದಿದೆ. ಆಸ್ಪತ್ರೆ ಇರುವ ರಸ್ತೆಯಲ್ಲಿ ಚಲಿಸುವ ವಾಹನಗಳು ಹಾರ್ನ್ ಹಾಕಲೇಬಾರದು ಎಂದು ನಿಯಮವೇ ಇರುವಾಗ ಇಷ್ಟು ಪ್ರಮಾಣದಲ್ಲಿ ಚಾಲಕರು ಹಾರ್ನ್ ಹಾಕುತ್ತಾ ಹೋಗುತ್ತಿರುವುದು ನೋಡಿ ಅವರಿಗೆ ಬೇಸರವಾಗಿದೆ. ಅದನ್ನು ತಪ್ಪಿಸಲು ಜನರಲ್ಲಿ ಜಾಗೃತಿಯನ್ನು ಉಂಟು ಮಾಡಲು ಅವರು ಹೊರಟು ಈಗ ಮೂರು ವಾರಗಳು ಆಗಿವೆ.

ದಂಡ ಪ್ರಯೋಗ ಮೊದಲ ಹೆಜ್ಜೆ…

ಮಂಗಳೂರಿನ ವೆನ್ ಲಾಕ್ ಆಸ್ಪತ್ರೆ, ಲೇಡಿಗೋಶನ್ ಆಸ್ಪತ್ರೆಗಳು ಜನನಿಬಿಡ ರಸ್ತೆಯಲ್ಲಿ ಇವೆ. ಇಲ್ಲಿ ಹತ್ತಿರದಲ್ಲಿ ಸ್ಟೇಟ್ ಬ್ಯಾಂಕ್ ಇರುವ ಸ್ಥಳದಲ್ಲಿ ಮಂಗಳೂರಿನ ಸಿಟಿ ಬಸ್ ಸ್ಟ್ಯಾಂಡ್ ಮತ್ತು ಸರ್ವಿಸ್ ಬಸ್ ನಿಲ್ದಾಣಗಳು ಇವೆ. ಅಲ್ಲಿಂದ ದಿನಕ್ಕೆ ನೂರಾರು ಬಸ್ ಗಳು ನಗರದಿಂದ ಹೊರಗೆ ಹೋಗುತ್ತವೆ ಮತ್ತು ಒಳಗೆ ಬರುತ್ತವೆ. ಅವು ಲೇಡಿಗೋಶನ್ ನಿಂದ ಜ್ಯೋತಿಯ ತನಕ ದೂಡಿದರೂ ಮುಂದಕ್ಕೆ ಹೋಗದಷ್ಟು ನಿಧಾನವಾಗಿ ಚಲಿಸುತ್ತವೆ. ಅವು ಇಲ್ಲಿ ಇರುವೆಗಳನ್ನು ಕೂಡ ನಾಚಿಸುವಂತೆ ಒಂದರ ಹಿಂದೆ ನಿಧಾನವಾಗಿ ಹೋಗುತ್ತಾ ನಂತರ ಒಮ್ಮೆ ಹತ್ತಾರು ಹುಚ್ಚು ನಾಯಿಗಳು ಅಟ್ಟಿಸಿಕೊಂಡು ಬಂದಾಗ ಮನುಷ್ಯ ಹೇಗೆ ಓಡುತ್ತಾನೆ ಹಾಗೆ ಓಡುತ್ತವೆ. ಆಗ ನಡುವಿನಲ್ಲಿ ಯಾವುದಾದರೂ ವಾಹನ ಅಡ್ಡ ಬಂದರೆ ಅಥವಾ ಯಾವುದಾದರೂ ಬಸ್ಸು ಅಡ್ಡ ನಿಂತು ರಸ್ತೆ ಬ್ಲಾಕ್ ಆದರೆ ಆಗ ಇವರೂ ಎಷ್ಟು ಕರ್ಕಶವಾಗಿ ಹಾರ್ನ್ ಮೇಲೆ ತಮ್ಮ ಇಡೀ ಜೀವವನ್ನು ಹಾಕುತ್ತಾರೆ ಎಂದರೆ ಅದು ಮುರಿದುಬೀಳಬೇಕು. ಹಾಗೆ ಮಾಡುತ್ತಾರೆ. ಅದರಿದ ಸಹಜವಾಗಿ ಮಂಗಳೂರಿನಲ್ಲಿ ಕರ್ಕಶ ಹಾರ್ನಗಳ ಹಾವಳಿ ಮಿತಿಮೀರುತ್ತದೆ. ಅದನ್ನು ತಪ್ಪಿಸಲು ಮಂಗಳೂರಿನ ಸಿಗ್ನಲ್ ಲೈಟ್ ಬಳಿ ಪೊಲೀಸರು ನಿಂತು ವಾಹನ ಸಂಚಾರವನ್ನು ಸರಿ ಮಾಡಬೇಕು ಮತ್ತು ಅಲ್ಲಿ ಆಸ್ಪತ್ರೆಗಳ ಬಳಿ ಹಾರ್ನ್ ಬಾರಿಸುವವರಿಗೆ ದಂಡವನ್ನು ಹಾಕಬೇಕು. ನಾಲ್ಕೈದು ಸಲ ದಂಡ ಹಾಕಿ ಅದು ಪತ್ರಿಕೆ, ಟೀವಿ ಮಾಧ್ಯಮಗಳಲ್ಲಿ ಪ್ರಚಾರ ಆದರೆ ಆಗ ಆಟೋಮೇಟಿಕ್ ಆಗಿ ಹಾರ್ನ್ ಮೇಲೆ ಕೈ ಹೋಗುವುದಿಲ್ಲ. ಬಸ್ಸುಗಳು ತಮ್ಮ ಸಮಯಕ್ಕೆ ಸರಿಯಾಗಿ ಚಲಿಸುತ್ತಿದ್ದರೆ ಹಾರ್ನ್ ಅವಶ್ಯಕತೆ ಇರುವುದಿಲ್ಲ.

ಮಕ್ಕಳಲ್ಲಿ ಅರಿವು ಮೂಡಿಸಿ…

ಈ ಕಾನ್ಸೆಪ್ಟ್ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಮಾಡುತ್ತಿವೆ. ಇದನ್ನು ಇನ್ನು ಹೆಚ್ಚೆಚ್ಚು ಜನರು ತಮ್ಮ ಗ್ರೂಪ್ ಗಳಲ್ಲಿ ಚರ್ಚೆ ಮಾಡುವ ಮೂಲಕ ಜಾರಿಗೆ ತರಲು ತಮ್ಮ ಪ್ರಯತ್ನ ಮಾಡಬಹುದು. ಶಾಸಕ ಕಾಮತ್ ಬಿಜೆಪಿ ಎಂದು ಕಾಂಗ್ರೆಸ್, ಕಮ್ಯೂನಿಸ್ಟರು, ಜೆಡಿಎಸ್ ನವರು ನಾವು ಹಾರ್ನ್ ಹಾಕಿಯೇ ಹಾಕುತ್ತೇವೆ, ಶಾಸಕರ ಅಭಿಯಾನವನ್ನು ವಿಫಲ ಮಾಡುತ್ತೇವೆ ಎಂದು ಹೊರಟರೆ ಏನೂ ಮಾಡಲಾಗುವುದಿಲ್ಲ. ಆದ್ದರಿಂದ ಇದರಲ್ಲಿ ರಾಜಕೀಯ ಮಾಡಬಾರದು ಎನ್ನುವುದು ನನ್ನ ಅಬಿಪ್ರಾಯ.

ಶಾಸಕ ಕಾಮತ್ ಅವರು ಮೊನ್ನೆ ಸರ್ಕೂರ್ಟ್ ಹೌಸಿನಲ್ಲಿ ಬಸ್ಸು, ಆಟೋ, ಟ್ಯಾಕ್ಸಿ, ಲಾರಿ ಮಾಲೀಕರ, ಚಾಲಕರ ಸಭೆ ಕರೆದಿದ್ದಾರೆ. ಅವರಿಂದ ಅಭಿಪ್ರಾಯ ಕೇಳಿದ್ದಾರೆ. ಇಲ್ಲಿ ಇರುವ ಪ್ರಶ್ನೆ ಎಂದರೆ ಇದು ಸಾರ್ವಜನಿಕ ವಲಯದಲ್ಲಿಯೂ ಚರ್ಚೆಯಾಗಬೇಕು. ಅದು ಹೇಗೆಂದರೆ ಮಕ್ಕಳ ಮೂಲಕ. ಈ ಸ್ವಚ್ಚ ಭಾರತ ಕಾನ್ಸೆಪ್ಟ್ ಬಂದ ಬಳಿಕ ಈ ಬಗ್ಗೆ ಶಾಲೆಗಳಲ್ಲಿ ಮಕ್ಕಳಿಗೆ ಇದರ ಅರಿವು ಮೂಡಿಸಲಾಗಿದೆ. ಆದ್ದರಿಂದ ಈಗ ಮಕ್ಕಳು ಕ್ಲಾಸಿನಲ್ಲಿ ಯಾವುದೇ ಕಸ ಕಂಡರೂ ಅದನ್ನು ಡಸ್ಟ್ ಬಿನ್ ನಲ್ಲಿ ಹಾಕುತ್ತಾರೆ. ಕಾರಿನಲ್ಲಿ ಬಿಸ್ಕಿಟ್ ತಿಂದರೆ, ಚಾಕೋಲೇಟ್ ತಿಂದರೆ ಅದರ ರ್ಯಾಪರ್ ಅನ್ನು ಕಾರಿನಿಂದ ಹೊರಗೆ ಬಿಸಾಡುತ್ತಿಲ್ಲ. ಅದರ ಬದಲಿಗೆ ಅದನ್ನು ತಂದು ಮನೆಯ ಕಸದ ಡಬ್ಬಿಯಲ್ಲಿ ಹಾಕುತ್ತಾರೆ. ಇದು ಜಾಗೃತಿ. ಒಂದು ವೇಳೆ ಯಾರಾದರೂ ಕಸ ರಸ್ತೆಗೆ ಬಿಸಾಡುವುದನ್ನು ನೋಡಿದರೆ ಮಕ್ಕಳು ಶೆಮ್ ಶೆಮ್ ಎನ್ನುತ್ತಿವೆ. ಆದ್ದರಿಂದ ಈ ನೋ ಹಾರ್ನ್ ಕಾನ್ಸೆಪ್ಟ್ ಅನ್ನು ಶಾಲೆಗಳಲ್ಲಿ ಪ್ರಚಾರ ಮಾಡಬೇಕು. ಹಾಗೆ ಮಾಡಿದರೆ ಮಕ್ಕಳೇ ಈ ಅಭಿಯಾನದ ರಾಯಭಾರಿಗಳಾಗುತ್ತಾರೆ. ಮಕ್ಕಳ ಮನಸ್ಸಿಗೆ ಇದು ಮುಟ್ಟಿದರೆ ಅವರು ಶಾಲೆಗೆ ಬರುವಾಗ ಅಥವಾ ಶಾಲೆಯಿಂದ ಹೋಗುವಾಗ ಆಟೋ, ಬಸ್ಸು, ಸ್ಕೂಲ್ ವ್ಯಾನ್, ತಂದೆಯ ಸ್ಕೂಟರ್, ತಾಯಿಯ ಕೆನೆಟಿಕ್ ನಲ್ಲಿ ಹಾರ್ನ್ ಹಾಕುವುದು ಕೇಳಿದಾಗ ಮಕ್ಕಳೇ ಹೇಳುತ್ತವೆ “ಹಾಗೆ ಹಾರ್ನ್ ಹಾಕಬೇಡಿ, ನಿಮಗೆ ಮ್ಯಾನರ್ಸ್ ಇಲ್ವಾ

0
Shares
  • Share On Facebook
  • Tweet It




Trending Now
ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
Hanumantha Kamath October 6, 2025
ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
Hanumantha Kamath October 6, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
    • ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
    • "ಒಂದು ಶೋಗಾಗಿ ಕೈಕಾಲು ಹಿಡಿಯುತ್ತಿದ್ದ ಕಾಲದಿಂದ..." ರಿಷಬ್ ಶೆಟ್ಟಿ 2016 ರ ಘಟನೆಯನ್ನು ನೆನಪಿಸಿಕೊಂಡದ್ದು ಯಾಕೆ?
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಕಸಾಯಿಖಾನೆ ಮುಟ್ಟುಗೋಲು ಹಾಕಿದ ಪ್ರಥಮ ಪ್ರಕರಣ ದಾಖಲು - ಎಸ್ಪಿ
    • ಗೆದ್ದರೂ ಟ್ರೋಫಿ ಪಡೆಯದೇ ದಿಟ್ಟ ಉತ್ತರ ನೀಡಿದ ಭಾರತೀಯ ತಂಡಕ್ಕೆ ಭೇಷ್!
    • ಕೇವಲ ₹100 ಲಂಚದ ಪ್ರಕರಣದಲ್ಲಿ 39 ವರ್ಷಗಳ ಬಳಿಕ ನಿರ್ದೋಷಿ ಘೋಷಣೆ!
    • ನಮ್ಮ ಜಿಲ್ಲೆಗೆ ಕಳುಹಿಸಬೇಡಿ, ಬೇಕಾದರೆ ಕಾಡಿಗೆ ಕಳುಹಿಸಿ ಎಂದು ರಾಯಚೂರಿನಲ್ಲಿ ತಿಮರೋಡಿ ವಿರುದ್ಧ ಪ್ರತಿಭಟನೆ!
    • ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ: 6 ತಿಂಗಳಲ್ಲಿ ಕತ್ರೀನಾ ಕೈಪ್ ಸಂತಾನ ಭಾಗ್ಯ!
    • ಪ್ರಧಾನ ಮಂತ್ರಿಯವರ ನಿವಾಸದ ಮುಂಭಾಗದಲ್ಲಿಯೂ ಸಹ ಗುಂಡಿಗಳು ಇವೆ- ಡಿಸಿಎಂ ಡಿಕೆಶಿ.
    • ಹಿಂದೂ ದೇವರ ಹಾಡನ್ನು ಹಾಡಿದ್ದ ಸುಹಾನಾ ತಮ್ಮ ಭಾವಿ ಪತಿಯ ಬಗ್ಗೆ ಹೇಳಿದ್ದಾರೆ! ಆ ಹಿಂದೂ ಯುವಕ ಯಾರು ಗೊತ್ತಾ!

  • Privacy Policy
  • Contact
© Tulunadu Infomedia.

Press enter/return to begin your search