• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಮಾಹಿತಿ ಹಕ್ಕಿನ ಎರಡನೇ ಮೇಲ್ಮನವಿ ಪ್ರಾಧಿಕಾರಕ್ಕೆ ಸಮಯದ ಬೇಲಿ ಹಾಕಬೇಕಿದೆ!

Hanumantha Kamath Posted On June 26, 2019
0


0
Shares
  • Share On Facebook
  • Tweet It

ಇವತ್ತು ಬೆಂಗಳೂರಿನಲ್ಲಿದ್ದೆ. ಹಾಗೆ ಮಾಹಿತಿ ಆಯೋಗದ ಕಚೇರಿಗೆ ಹೋಗಿದ್ದೆ. ಕೇಂದ್ರ ಸರಕಾರ ನಮ್ಮಂತಹ ಜನಸಾಮಾನ್ಯರಿಗೆ ಅಧಿಕಾರಷಾಹಿಗಳ ವಿರುದ್ಧ ಕೊಟ್ಟ ಅತೀ ಶ್ರೇಷ್ಟವಾದ ಅಸ್ತ್ರ ಮಾಹಿತಿ ಹಕ್ಕು ಎಂದು ಹೇಳುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಎಂತಹ ಅಸ್ತ್ರವಾದರೂ ನಮ್ಮನ್ನು ಆಳುವವರು ಮತ್ತು ಅಧಿಕಾರಿ ವರ್ಗ ಅದರಲ್ಲಿ ಒಂದು ಲೋಪ ಇಟ್ಟೇ ಇಡುತ್ತಾರೆ. ಅದರ ಬಗ್ಗೆ ಇವತ್ತು ಬರೆಯುತ್ತಿದ್ದೇನೆ.

ನಾನು 16.8.2017 ರಂದು ಮಾಹಿತಿ ಹಕ್ಕಿನ ಅಡಿಯಲ್ಲಿ ಒಂದು ಅರ್ಜಿ ಹಾಕಿದ್ದೆ. ಅದಕ್ಕೀಗ ಭರ್ತಿ ಎರಡು ವರ್ಷ. ಈ ಮಾಹಿತಿ ಹಕ್ಕು ಒಟ್ಟು ಪ್ರಕ್ರಿಯೆ ಹೇಗೆ ಕೆಲಸ ಮಾಡುತ್ತೆ ಎನ್ನುವುದನ್ನು ಮೊದಲು ವಿವರಿಸುತ್ತೇನೆ. ನೀವು ಒಂದು ಇಲಾಖೆಯ ಬಗ್ಗೆ, ಅದು ಕಳಪೆ ಕಾಮಗಾರಿಯ ಬಗ್ಗೆ ಇರಬಹುದು, ಭ್ರಷ್ಟಾಚಾರದ ಬಗ್ಗೆ ಇರಬಹುದು, ಸಿಬ್ಬಂದಿಗಳ ಅಸಮರ್ಪಕ ಕಾರ್ಯವಿಧಾನದ ಬಗ್ಗೆ ಇರಬಹುದು, ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬೇಕಾದರೂ ಮಾಹಿತಿ ಹಕ್ಕು ಅವಕಾಶ ನೀಡುತ್ತದೆ. ನೀವು ಒಂದು ಪೇಜಿಗೆ ಎರಡು ರೂಪಾಯಿಯಂತೆ ಅದಕ್ಕೆ ಶುಲ್ಕ ಕಟ್ಟಿ ಹತ್ತು ರೂಪಾಯಿ ಡಿಡಿ ಮಾಡಿ ಸಂಬಂಧಪಟ್ಟ ಇಲಾಖೆಗೆ ಪೋಸ್ಟ್ ಮಾಡಬೇಕು. ಮಾಹಿತಿ ಹಕ್ಕಿನ ಅಡಿಯಲ್ಲಿ ಸಾರ್ವಜನಿಕರು ಕೇಳುವ ಯಾವುದೇ ಪ್ರಶ್ನೆಗೆ ಮೂವತ್ತು ದಿನಗಳ ಒಳಗೆ ಉತ್ತರ ನೀಡಬೇಕು ಎನ್ನುವ ನಿಯಮವಿದೆ. ಒಂದು ವೇಳೆ ಸಂಬಂಧಪಟ್ಟ ವಿಭಾಗದಿಂದ ಯಾವುದೇ ಉತ್ತರ ಬರಲಿಲ್ಲ ಅಥವಾ ನಿಮಗೆ ಆ ಉತ್ತರ ಸಮಾಧಾನವಾಗಿಲ್ಲ ಅಥವಾ ನೀವು ಕೇಳಿದ್ದ ಪ್ರಶ್ನೆಗೆ ಆ ಉತ್ತರ ಅಲ್ಲ ಎನ್ನುವುದು ನಿಮಗೆ ಅನಿಸಿದರೆ ನೀವು ಅಪೀಲ್ ಮಾಡಬಹುದು. ಹೇಗೆ ಕೆಳಗಿನ ನ್ಯಾಯಾಲಯದಲ್ಲಿ ನಿಮಗೆ ಪೂರಕವಾದ ತೀರ್ಪು ಬರದೇ ಇದ್ದಲ್ಲಿ ಮೇಲ್ಮನವಿ ಸಲ್ಲಿಸುತ್ತೇವಲ್ಲ, ಹಾಗೆ ಮೇಲ್ಮನವಿ ಸಲ್ಲಿಸಬಹುದು. ಉದಾಹರಣೆಗೆ ನೀವು ಮಹನಗರ ಪಾಲಿಕೆಯ ನಗರ ಯೋಜನಾ ವಿಭಾಗಕ್ಕೆ ಏನಾದರೂ ಪ್ರಶ್ನೆ ಕೇಳಿ ಬಂದ ಉತ್ತರದ ಬಗ್ಗೆ ಮೇಲ್ಮನವಿ ಸಲ್ಲಿಸೋಣ ಅಥವಾ ಉತ್ತರ ಬಂದಿಲ್ಲ ಯಾಕೆ ಎಂದು ಕೇಳಬೇಕು ಎಂದು ಅನಿಸಿದರೆ ಪಾಲಿಕೆಯ ನಗರ ಯೋಜನಾ ವಿಭಾಗದ ಜಂಟಿ ನಿರ್ದೇಶಕರಿಗೆ ಮೇಲ್ಮನವಿ ಸಲ್ಲಿಸಬಹುದು. ಹಾಗೆ ಇಂಜಿನಿಯರಿಂಗ್ ವಿಭಾಗದ ಯಾವುದೇ ಪ್ರಶ್ನೆಗಳಿದ್ದರೆ ಸೂಪರಿಂಟೆಂಡೆಂಟ್ ಇಂಜಿನಿಯರ್ ಅವರಿಗೆ ಮೇಲ್ಮನವಿ ಸಲ್ಲಿಸಬಹುದು. ಹಾಗೇ ಆರೋಗ್ಯ ವಿಭಾಗದ ಪ್ರಶ್ನೆಗಳಿದ್ದರೆ ಜಂಟಿ ಆಯುಕ್ತರಿಗೆ ಮೇಲ್ಮನವಿ ಸಲ್ಲಿಸಬಹುದು. ಹಾಗೇ ತಾಲೂಕು ಆಫೀಸಿನ ಬಗ್ಗೆ ಯಾವುದೇ ಮಾಹಿತಿ ಹಕ್ಕು ಮೇಲ್ಮನವಿ ಇದ್ದರೆ ಸಹಾಯಕ ಕಮೀಷನರ್ ಅವರಿಗೆ ಸಲ್ಲಿಸಬಹುದು. ಹೀಗೆ ನೀವು ಸಲ್ಲಿಸಿದ ಮೆಲ್ಮನವಿಗೆ ಅವರುಗಳು ಗರಿಷ್ಟ 30 ದಿನಗಳ ಒಳಗೆ ಉತ್ತರ ಕೊಡಬೇಕು ಮತ್ತು ಅದನ್ನು ಇತ್ಯರ್ಥ ಪಡಿಸಬೇಕು. ಒಂದು ವೇಳೆ ಅಲ್ಲಿಯೂ ನಿಮಗೆ ಸಿಕ್ಕಿದ ಉತ್ತರದ ಬಗ್ಗೆ ಸಮಾಧಾನವಾಗದೇ ಅದಕ್ಕಿಂತಲೂ ಮೇಲಿನವರಿಗೆ ಮನವಿ ಸಲ್ಲಿಸಬೇಕು ಎಂದು ಅನಿಸಿದರೆ ಅದಕ್ಕೂ ಅವಕಾಶ ಇದೆ. ಹೇಗೆ ಜಿಲ್ಲಾ ನ್ಯಾಯಾಲಯದಿಂದ ಹೈಕೋರ್ಟಿಗೆ, ಹೈಕೋರ್ಟಿನಿಂದ ಸುಪ್ರೀಂಕೋರ್ಟಿಗೆ ನಾವು ಮೇಲ್ಮನವಿ ಸಲ್ಲಿಸುತ್ತೇವಲ್ಲ, ಹಾಗೆ ಇಲ್ಲಿ ನೀವು ಇಲ್ಲಿ ಕೊನೆಯದಾಗಿ ರಾಜ್ಯ ಮಾಹಿತಿ ಆಯೋಗಕ್ಕೆ ದೂರು ನೀಡಬಹುದು. ಅಲ್ಲಿ ಆರು ಜನ ಕಮೀಷನರ್ ಗಳಿರುತ್ತಾರೆ. ಆದರೆ ವಿಷಯ ಏನೆಂದರೆ ಇವರಿಗೆ ಇಷ್ಟೇ ಅವಧಿಯ ಒಳಗೆ ಉತ್ತರ ನೀಡಬೇಕೆಂಬ ಯಾವುದೇ ನಿರ್ಬಂಧಗಳಿಲ್ಲ. ಕೆಳಗಿನವರಿಗೆ ಮೂವತ್ತು ದಿನಗಳ ಒಳಗೆ ಉತ್ತರ ಕೊಡಬೇಕು ಎಂದು ನಿಯಮ ಇದ್ದರೆ ರಾಜ್ಯ ಮಾಹಿತಿ ಆಯೋಗ ಅದೇ ಪ್ರಶ್ನೆಗೆ ವರ್ಷಗಳ ತನಕ ಉತ್ತರ ಕೊಡದೇ ಮಲಗಬಹುದು.

ನನ್ನ ಪ್ರಶ್ನೆಗೆ ಈಗ ಅದೇ ಗತಿ ಬಂದಿರುವುದು. ನಾನು 16.08.2017 ಮತ್ತು 23.10.18 ರಂದು ಕೇಳಿದ ಎರಡು ಪ್ರಶ್ನೆಗಳು ರಾಜ್ಯ ಮಾಹಿತಿ ಆಯೋಗದ ಕಮೀಷನರ್ ಗಳ ಎದುರು ಇವೆ. ಅದಕ್ಕೆ ಉತ್ತರ ಸಿಕ್ಕಿಲ್ಲ. ಆದ್ದರಿಂದ ನನ್ನ ವಿನಂತಿ ಏನೆಂದರೆ ದ್ವೀತಿಯ ಅಪೀಲು ಪ್ರಾಧಿಕಾರಕ್ಕೂ ಸಮಯದ ಬೇಲಿ ಹಾಕಬೇಕು. ಇಲ್ಲದಿದ್ದರೆ ನಾವು ಪ್ರಶ್ನೆ ಕೇಳಿ ಏನು ಪ್ರಯೋಜನ!

0
Shares
  • Share On Facebook
  • Tweet It




Trending Now
ಯುವಕನನ್ನು ಲವ್ ಜಿಹಾದ್ ಮಾಡಿದ್ಲಾ ಮುಸ್ಲಿಂ ಯುವತಿ! ಹಿಂದೂ ಯುವಕ ಕಂಗಾಲು...
Hanumantha Kamath July 17, 2025
ಮೋದಿ ಮಾತ್ರ ವಾರಕ್ಕೆ 100 ಗಂಟೆ ಕೆಲಸ ಮಾಡ್ತಾರೆ- ಸಂಸದ ತೇಜಸ್ವಿಗೆ ಹೇಳಿದ ನಾರಾಯಣ್ ಮೂರ್ತಿ
Hanumantha Kamath July 17, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಯುವಕನನ್ನು ಲವ್ ಜಿಹಾದ್ ಮಾಡಿದ್ಲಾ ಮುಸ್ಲಿಂ ಯುವತಿ! ಹಿಂದೂ ಯುವಕ ಕಂಗಾಲು...
    • ಮೋದಿ ಮಾತ್ರ ವಾರಕ್ಕೆ 100 ಗಂಟೆ ಕೆಲಸ ಮಾಡ್ತಾರೆ- ಸಂಸದ ತೇಜಸ್ವಿಗೆ ಹೇಳಿದ ನಾರಾಯಣ್ ಮೂರ್ತಿ
    • ಗಂಡ ತಲೆಹಿಡುಕ ಎಂದ ಸಂತ್ರಸ್ತೆಗೆ ಪೊಲೀಸ್ ಪೇದೆಯೇ ಮುಕ್ಕಿದ ಮಂಗಳೂರಿನ ನೋವಿನ ಕಥೆ!
    • ನಿಟ್ಟೆ ಕಾಲೇಜು ಹಾಸ್ಟೆಲ್ ಶೌಚಾಲಯದಲ್ಲಿ ಹಿಂದೂ-ಮುಸ್ಲಿಂ ದ್ವೇಷ ಬರಹ! ವಿದ್ಯಾರ್ಥಿನಿ ಬಂಧನ
    • ಕಾರ್ಕಳ ಪರಶುರಾಮನ ವಿಗ್ರಹ ಕಂಚಿನದ್ದು ಅಲ್ಲ, ನಕಲಿ: ಚಾರ್ಜ್ ಶೀಟ್ ಸಲ್ಲಿಕೆ
    • ಲಗಾನ್ ನಿರ್ದೇಶಕ ಅಶುತೋಷ್ ನಿರ್ದೇಶನದಲ್ಲಿ ರಿಷಬ್ ಆಗಲಿದ್ದಾರೆ ಕೃಷ್ಣದೇವರಾಯ!
    • ಅಂದು ಕ್ಲರ್ಕ್.. ಇಂದು ಕರ್ಣಾಟಕ ಬ್ಯಾಂಕಿನ ಎಂಡಿ, ಸಿಇಒ!
    • ಪ್ರಾಜೆಕ್ಟ್ ಎಂದರೆ ಮಹಿಳೆ... ಪ್ರಾಜೆಕ್ಟ್ ಸಿಕ್ಕಿತಾ ಎಂದು ಬಾಬಾ ಯುವಕರಿಗೆ ಕೇಳುತ್ತಿದ್ದ! ಹೀಗೆ ಬೇರೆ ಬೇರೆ ಕೋಡ್ ವರ್ಡ್ ಗಳಿವೆ!
    • ಜಪಾನ್ ಮ್ಯಾರಥಾನ್.. 46 ಗಂಟೆ ನಿದ್ದೆ ಮಾಡದೇ ಓಡಿದ ಕನ್ನಡತಿ ಅಶ್ವಿನಿ!
    • ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!
  • Popular Posts

    • 1
      ಯುವಕನನ್ನು ಲವ್ ಜಿಹಾದ್ ಮಾಡಿದ್ಲಾ ಮುಸ್ಲಿಂ ಯುವತಿ! ಹಿಂದೂ ಯುವಕ ಕಂಗಾಲು...
    • 2
      ಮೋದಿ ಮಾತ್ರ ವಾರಕ್ಕೆ 100 ಗಂಟೆ ಕೆಲಸ ಮಾಡ್ತಾರೆ- ಸಂಸದ ತೇಜಸ್ವಿಗೆ ಹೇಳಿದ ನಾರಾಯಣ್ ಮೂರ್ತಿ
    • 3
      ಗಂಡ ತಲೆಹಿಡುಕ ಎಂದ ಸಂತ್ರಸ್ತೆಗೆ ಪೊಲೀಸ್ ಪೇದೆಯೇ ಮುಕ್ಕಿದ ಮಂಗಳೂರಿನ ನೋವಿನ ಕಥೆ!
    • 4
      ನಿಟ್ಟೆ ಕಾಲೇಜು ಹಾಸ್ಟೆಲ್ ಶೌಚಾಲಯದಲ್ಲಿ ಹಿಂದೂ-ಮುಸ್ಲಿಂ ದ್ವೇಷ ಬರಹ! ವಿದ್ಯಾರ್ಥಿನಿ ಬಂಧನ
    • 5
      ಕಾರ್ಕಳ ಪರಶುರಾಮನ ವಿಗ್ರಹ ಕಂಚಿನದ್ದು ಅಲ್ಲ, ನಕಲಿ: ಚಾರ್ಜ್ ಶೀಟ್ ಸಲ್ಲಿಕೆ

  • Privacy Policy
  • Contact
© Tulunadu Infomedia.

Press enter/return to begin your search