• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಕುಂಭಮೇಳದ ಬಸ್ಸುಗಳ ಫೋಟೋ ಬಳಸಿ ಮರ್ಯಾದೆ ಕಳೆದುಕೊಂಡ ಕಾಂಗ್ರೆಸ್!!

Hanumantha Kamath Posted On May 20, 2020
0


0
Shares
  • Share On Facebook
  • Tweet It

ಕೋರೊನಾದಿಂದ ಲಾಕ್ ಡೌನ್ ಆದ ಸಂದರ್ಭದಲ್ಲಿ ಸಾಮಾನ್ಯವಾಗಿ ಎಲ್ಲರೂ ಹೇಳುವುದು ಒಂದೇ ಮಾತು. ಏನೂ ಕೆಲಸ ಇಲ್ಲ ಮಾರಾಯ್ರೆ. ಇದು ಕೇವಲ ಉದ್ಯೋಗ ಅಥವಾ ದುಡಿಮೆಗೆ ಸಂಬಂಧಪಟ್ಟ ಮಾತು ಅಲ್ಲವೇ ಅಲ್ಲ. ಇದು ರಾಜಕೀಯಕ್ಕೂ ಅನ್ವಯವಾಗುತ್ತದೆ. ಬೇಕಾದರೆ ನೀವೆ ನೋಡಿ. ಆಡಳಿತ ಪಕ್ಷದವರು ಜನರಿಗೆ ಕಿಟ್ ಕೊಡುವುದು, ಜಿನಸು ಪದಾರ್ಥಗಳ ವ್ಯವಸ್ಥೆ, ಆಹಾರದ ವ್ಯವಸ್ಥೆ ಮಾಡುವುದು, ಅಂಬ್ಯುಲೆನ್ಸ್ ವ್ಯವಸ್ಥೆ, ಕ್ವಾರಂಟೈನ್ ವ್ಯವಸ್ಥೆ ಹೀಗೆ ನೂರಾರು ಕೆಲಸಗಳಲ್ಲಿ ನಿರತರಾಗಿದ್ದಾರೆ. ಪ್ರತಿಯೊಬ್ಬ ಆಡಳಿತ ಪಕ್ಷದ ಜನಪ್ರತಿನಿಧಿಗೂ ಬೇಕಾದಷ್ಟು ಕೆಲಸಗಳಿವೆ.

ಆದರೆ ಪಾಪ ಕೆಲಸವಿಲ್ಲದೇ ಎರಡು ತಿಂಗಳುಗಳಿಂದ ಬೇರೆ ಎಲ್ಲಾ ಉದ್ಯೋಗದವರಂತೆ ಫ್ರೀಯಾಗಿ ಕುಳಿತಿರುವವರು ವಿಪಕ್ಷಗಳ ನೇತಾರರು. ಅವರಿಗೆ ಏನೂ ಮಾಡಲು ಆಗುತ್ತಿಲ್ಲ. ವಿರೋಧ ಮಾಡಲು ವಿಷಯವಿಲ್ಲ. ಹಾಗಂತ ಆಡಳಿತ ಪಕ್ಷದವರು ಮಾಡಿದ್ದು ಎಲ್ಲವೂ ಸರಿಯೆಂದು ಹೇಳುತ್ತಿಲ್ಲ. ಆದರೆ ಏಕದಂ ತಪ್ಪು ಕೂಡ ಆಗಿಲ್ಲ. ಇನ್ನು ಸುಮ್ಮನೆ ಕುಳಿತರೆ ಜನ ನಮ್ಮನ್ನು ಮರೆಯುತ್ತಾರೆ ಎಂದುಕೊಂಡ ಕಾಂಗ್ರೆಸ್ ರಾಷ್ಟ್ರವ್ಯಾಪಿ ಏನು ವಿಷಯ ತೆಗೆದುಕೊಂಡು ವಿವಾದ ಎಬ್ಬಿಸುವುದು ಎಂದು ಯೋಚಿಸುತ್ತಿರುವಾಗಲೇ ಅವರಿಗೆ ಮತಬ್ಯಾಂಕ್ ನಂತೆ ಕಾಣಿಸಿದ್ದು ವಲಸೆ ಕಾರ್ಮಿಕರು. ಹೇಗೂ ಇವರು ಯಾವ ರಾಜ್ಯದವರಾಗಿದ್ದರೂ ತಮಗೆ ಲಾಭ. ಅದರೊಂದಿಗೆ ಅದೇ ರಾಜ್ಯದ ವಿವಿಧ ಭಾಗದವರಾಗಿದ್ದರೂ ಲಾಭ. ಇನ್ನು ಇವರು ಮುಗ್ಧರು. ಕಾಂಗ್ರೆಸ್ಸಿನವರು ಕಣ್ಣೀರು ಸುರಿಸುವ ನಾಟಕ ಮಾಡಿದರೆ ನಿಜ ಎಂದು ನಂಬಿಬಿಡುತ್ತಾರೆ. ಯಾಕೆಂದರೆ ಅದೊಂದು ಸೈಕಾಲಜಿ.

ನೀವು ಒಂದು ವೇಳೆ ಕಷ್ಟದಲ್ಲಿದ್ದರೆ ನಿಮಗೆ ಒಂದು ಹುಲ್ಲುಕಡ್ಡಿಯಂತೆ ಸಣ್ಣ ಸಹಾಯ ಸಿಕ್ಕಿದರೂ ನೀವು ಆ ಸಹಾಯ ಮಾಡಿದರನ್ನು ಪೂರ್ಣವಾಗಿ ನಂಬುತ್ತೀರಿ. ಅವರೇ ನಿಮ್ಮ ಪಾಲಿನ ದೇವರಾಗುತ್ತಾರೆ. “ನಮಗೆ ಅವರು ದೇವರು ಎಂದು ಅಂದುಕೊಳ್ಳದಿದ್ದರೂ ಪರವಾಗಿಲ್ಲ. ಮುಂದಿನ ಚುನಾವಣೆ ಬಂದಾಗ ಮತ ಕೊಟ್ಟರೆ ಸಾಕು. ಯಾಕೆಂದರೆ ನಿಜವಾಗಿಯೂ ಸರದಿಯಲ್ಲಿ ನಿಂತು ಮತಕೊಡುವವರು ಇಂತಹ ಕೆಳಮಧ್ಯಮ ವರ್ಗದವರೇ ವಿನ: ಶ್ರೀಮಂತರು ಅಲ್ಲ. ಇವರು ಯುಪಿ, ಬಿಹಾರ, ಮಧ್ಯಪ್ರದೇಶದಲ್ಲಿ ನಮ್ಮನ್ನು ಕೈಬಿಟ್ಟಾಗಿದೆ. ಈಗ ರೈಟ್ ಟೈಮ್. ಕೈತಪ್ಪಿರುವ ಮತಬ್ಯಾಂಕ್ ಎಳೆದುಕೊಂಡು ಬಿಡೋಣ” ಎಂದು ಜನಪಥ್ 10 ರಿಂದ ಸೋನಿಯಾ (ಗಾಂಧಿ ಎಂದು ಬರೆಯಲು ಮನಸ್ಸಿಲ್ಲ) ಹೇಳಿದ್ದೇ ತಡ ದೆಹಲಿಯಿಂದ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ತನಕ ಕಾಂಗ್ರೆಸ್ಸಿಗರು ಆಕ್ಟಿವ್ ಆಗಿಬಿಟ್ಟರು. ಮಂಗಳೂರಿನಲ್ಲಿ ಮೊದಲು ಈ ಅವಕಾಶ ಬಳಸಿಕೊಂಡಿದ್ದು ಐವನ್ ಮತ್ತು ಮಿಥುನ್. ಐವನ್ ಅವರ ವಿಧಾನಪರಿಷತ್ ಅವಧಿ ಜೂನ್ ಅಂತ್ಯಕ್ಕೆ ಮುಗಿಯಲಿದ್ದು, ಎರಡನೇ ಅವಕಾಶ ಸಿಗುವುದು ಬಹುತೇಕ ಕ್ಷೀಣ. ಸಿಕ್ಕಿದರೆ ಆಸ್ಕರ್ ಫೆರ್ನಾಂಡಿಸ್ ಅವರ ರಾಜ್ಯಸಭಾ ಸದಸ್ಯತ್ವ ಮುಗಿದ ಬಳಿಕ ಅದಕ್ಕೆ ಕ್ರೈಸ್ತ ಕೋಟಾದಲ್ಲಿ ಪ್ರಯತ್ನಿಸಬಹುದು. ಅಲ್ಲಿಯ ತನಕ ಮಿಂಚುವುದು ಈಗ ಅನಿವಾರ್ಯ. ಇನ್ನು ಮಿಥುನ್ ಸ್ವತ: ರೈಲು ನಿಲ್ದಾಣದ ಹೊರಗೆ ನಿಂತು “ನಾನು ಕಳೆದ ಬಾರಿ ಇಲ್ಲಿನ ಲೋಕಸಭಾ ಅಭ್ಯರ್ಥಿ” ಎಂದೇ ಪರಿಚಯಿಸಿ ಭಾಷಣ ಶುರುಮಾಡಿದ್ದರು. ವಲಸೆ ಕಾರ್ಮಿಕರು ಬೇರೆ ದಾರಿಯಿಲ್ಲದೆ ಭಾಷಣ ಕೇಳಿ ವಾಪಾಸಾಗಿದ್ದರು.

ಅಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಈ ವಿಷಯವನ್ನು ಎತ್ತಿ ಸಹೋದರನಿಗೆ ಮೈಲೇಜ್ ನೀಡಲು ಒದ್ದಾಡುತ್ತಿರುವುದು ಪ್ರಿಯಾಂಕಾ ವಾದ್ರಾ. ಭಾಷಣದ ರಭಸದಲ್ಲಿ 1000 ಬಸ್ಸುಗಳನ್ನು ಕೊಡುತ್ತೇವೆ, ವಲಸೆ ಕಾರ್ಮಿಕರ ಪ್ರಯಾಣಕ್ಕೆ ಎಂದು ಆಯಮ್ಮ ಹೇಳಿದ್ದಳಾದರೂ ಎಲ್ಲಿಂದ ಕೊಡುವುದು ಎಂದು ಯೋಚನೆ ಮಾಡಿದ್ದು ಆಕೆಯ ಆಪ್ತ ಸಹಾಯಕರು. ಆದರೆ ಯುಪಿ ಸಿಎಂ ಆದಿತ್ಯನಾಥ್ ಆ ವಿಷಯದಲ್ಲಿ ರಾಜಕೀಯ ಮಾಡಲಿಲ್ಲ. ನಾವು ಯಾರು ಸಹಾಯ ಮಾಡಿದರೂ ತೆಗೆದುಕೊಳ್ಳುತ್ತೇವೆ ಎಂದು ನಿಶ್ಚಯಿಸಿದ ಯೋಗಿ ಆದಿತ್ಯನಾಥ್ “ಸರಿ, ಹಾಗಾದರೆ ನಿಮ್ಮ ವೆಹಿಕಲ್ ನಂಬ್ರ ಹಾಗೂ ಚಾಲಕರ ಹೆಸರು, ದೂರವಾಣಿ ಸಂಖ್ಯೆ ಕಳುಹಿಸಿಕೊಡಿ. ವಲಸೆ ಕಾರ್ಮಿಕರನ್ನು ಕಳುಹಿಸಿಕೊಡುತ್ತೇವೆ” ಎಂದುಬಿಟ್ಟರು. ಆಗ ನಿಜವಾಗಿಯೂ ಪೇಚಿಗೆ ಸಿಲುಕಿದ್ದು ಪ್ರಿಯಾಂಕಾ. ಏನಾದರೂ ಮಾಡಿ ಕಳುಹಿಸಿಕೊಡಿ, ಹೇಳಿಯಾಗಿದೆ ಎಂದು ತನ್ನ ಆಪ್ತ ಕಾರ್ಯದರ್ಶಿಗೆ ಹೇಳಿದ ಪ್ರಿಯಾಂಕಾ ಅತ್ತ ರಾಜಕೀಯದಲ್ಲಿ ಬಿಝಿಯಾದರು. ಕೊನೆಗೂ ಯುಪಿ ಸಿಎಂ ಕಚೇರಿಗೆ ಒಂದು ಸಾವಿರ ವಾಹನದ ನಂಬ್ರ, ಚಾಲಕರ ಹೆಸರು, ದೂರವಾಣಿ ತಲುಪಿತು. ಅದನ್ನು ಕ್ರಾಸ್ ಚೆಕ್ ಮಾಡಿ ನೋಡಿದರೆ ಅದರಲ್ಲಿ ಅನೇಕ ವಾಹನಗಳು ದ್ವಿಚಕ್ರ ವಾಹನಗಳಾಗಿದ್ದವು. ಮಹಿಳೆಯರು ಮಾತ್ರ ಬಿಡುವ ಸ್ಕೂಟಿಯ ನಂಬ್ರಗಳು ಆಗಿದ್ದವು. ಆದರೆ ಮೇಡಂ ಹೇಳಿಕೆ ಕೊಟ್ಟ ಕೂಡಲೇ ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಸೆಲ್ ನವರು ತಕ್ಷಣ ಗೂಗಲ್ ಗೆ ಹೋಗಿ ಉದ್ದಕ್ಕೆ ನಿಂತಿದ್ದ ಬಸ್ಸುಗಳ ಫೋಟೋ ಡೌನ್ ಲೋಡ್ ಮಾಡಿ ಇದೇ ಬಸ್ಸುಗಳ ವ್ಯವಸ್ಥೆಯನ್ನು ಕಾಂಗ್ರೆಸ್ ಮಾಡಿದ್ದು ಎಂದು ಜಂಭಕೊಚ್ಚಿಕೊಳ್ಳಲು ಶುರು ಮಾಡಿದರು. ನಂತರ ನೋಡಿದರೆ ಆ ಫೋಟೋ ಬೇರೆ ಯಾವುದೇ ಅಲ್ಲ, ಯುಪಿಯ ಕುಂಭಮೇಳಕ್ಕೆ ಯೋಗಿ ಸರಕಾರ ತರಿಸಿದ ಬಸ್ಸುಗಳು. ಬೇಕಾ ಕಾಂಗ್ರೆಸ್ಸಿಗರೇ!!

0
Shares
  • Share On Facebook
  • Tweet It




Trending Now
ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!
Hanumantha Kamath July 12, 2025
7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
Hanumantha Kamath July 12, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!
    • 7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
    • ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
    • ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
    • ನಾಯಕರು 75 ಆಗುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ದಾರಿ ಮಾಡಿಕೊಡಲಿ - ಮೋಹನ್ ಭಾಗವತ್!
    • ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕದ್ರಿ ಸಂಚಾರ ಪೊಲೀಸ್ ಕಾನ್‌ಸ್ಟೆಬಲ್ ತಸ್ಲೀಮ್ …!
    • ಬೀದಿನಾಯಿಗಳಿಗೆ ನಿತ್ಯ ಚಿಕನ್, ಮೊಟ್ಟೆ ನೀಡಲು ಬಿಬಿಎಂಪಿ ನಿರ್ಧಾರ!
    • ಜನಸಾಮಾನ್ಯರ ಕೈಗೆಟಕುತ್ತಿಲ್ಲ ತೆಂಗಿನಕಾಯಿ ದರ... ಪುತ್ತೂರಿನಲ್ಲಿ ಹೆಚ್ಚಿದ ಕಳವು!
    • ವಿಎಚ್ ಪಿ ಶರಣ್, ನವೀನ್ ಗೆ ರಿಲೀಫ್: ಅರುಣ್ ಶ್ಯಾಮ್ ವಾದ
  • Popular Posts

    • 1
      ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!
    • 2
      7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
    • 3
      ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
    • 4
      ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • 5
      ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!

  • Privacy Policy
  • Contact
© Tulunadu Infomedia.

Press enter/return to begin your search