• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ದೂರಗಾಮಿ ಪರಿಣಾಮ ಬೀರುವ ನಳಿನ್ 3 ಘೋಷಣೆಗಳು ಜಾರಿಗೆ ಬರಲೇಬೇಕು!!

Tulunadu News Posted On September 19, 2020
0


0
Shares
  • Share On Facebook
  • Tweet It

ನರೇಂದ್ರ ಮೋದಿಜಿಯವರ ಜನ್ನದಿನದಂದು ಸಂಸದ ನಳಿನ್ ಕುಮಾರ್ ಕಟೀಲ್ ಬಹಳ ಉತ್ತಮವಾದ ಯೋಜನೆಗಳನ್ನು ಘೋಷಿಸಿದ್ದಾರೆ. ಬಹುಶ: ಇದು ಜಾರಿಗೆ ಬಂದರೆ ಮುಂದಿನ ದಿನಗಳಲ್ಲಿ ಭಾರತೀಯ ಜನತಾ ಪಾರ್ಟಿಗೆ ಜಿಲ್ಲೆಯಲ್ಲಿ ಬಹಳ ಉತ್ತಮ ಭವಿಷ್ಯ ನಿರೀಕ್ಷಿಸಬಹುದು. ಮೊದಲನೇಯದಾಗಿ ಭ್ರಷ್ಟಾಚಾರವನ್ನು ಸಂಪೂರ್ಣ ಕಿತ್ತೊಗೆಯಲು ಅವರು ಸರಳ ಸೂತ್ರ ರೂಪಿಸಿದ್ದಾರೆ. ಜಿಲ್ಲೆಯ ಏಳು ಜನ ತಮ್ಮ ಪಕ್ಷದ ಶಾಸಕರು ತಮ್ಮ ಕಚೇರಿಯಲ್ಲಿ ಪ್ರತ್ಯೇಕ ಡೆಸ್ಕ್ ಆರಂಭಿಸಿ ಯಾವುದೇ ನಾಗರಿಕ ಸರಕಾರಿ ಅಧಿಕಾರಿ ಅಥವಾ ಸಿಬ್ಬಂದಿಯಿಂದ ಕೆಲಸವಾಗದೇ ತೊಂದರೆಯನ್ನು ಅನುಭವಿಸಿದ್ದಲ್ಲಿ ನೇರವಾಗಿ ಆ ನಾಗರಿಕ ತನ್ನ ವಿಧಾನಸಭಾ ಕ್ಷೇತ್ರದ ಶಾಸಕರ ಆ ವಿಶೇಷ ಡೆಸ್ಕ್ ಗೆ ದೂರು ನೀಡಿ ಯಾವ ಅಧಿಕಾರಿಯಿಂದ ತೊಂದರೆಯಾಗುತ್ತಿದೆ, ಯಾರು ಹಣ ಕೊಡದ ಕಾರಣಕ್ಕೆ ಕೆಲಸ ಆಗುವುದಿಲ್ಲ ಎಂದಿದ್ದಾರೆ, ಯಾರು ಹಣಕ್ಕಾಗಿ ಪೀಡಿಸುತ್ತಿದ್ದಾರೆ ಎಂದು ದೂರು ಕೊಡಬಹುದು. ಆ ಡೆಸ್ಕ್ ನಲ್ಲಿ ಶಾಸಕರಿಂದ ನೇಮಕವಾದ ವ್ಯಕ್ತಿ ಆ ದೂರನ್ನು ಸ್ವೀಕರಿಸಿ ತಕ್ಷಣ ಅದನ್ನು ಪರಿಶೀಲಿಸಿ ಕೆಲಸ ಮಾಡಿಕೊಡಬೇಕು. ಈ ಮೂಲಕ ನಾಗರಿಕರ ಪ್ರೀತಿಯೂ ಸಿಕ್ಕಿದಂತೆ ಆಗುತ್ತದೆ. ಹಂತಹಂತವಾಗಿ ಲಂಚಾವತಾರವೂ ಕಡಿಮೆಯಾಗುತ್ತದೆ. ಇಲ್ಲದಿದ್ದರೆ ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ ಹೀಗೆ ಪ್ರತಿಯೊಂದಕ್ಕೂ ಜನಸಾಮಾನ್ಯರು ಐನೂರೊ, ಒಂದು ಸಾವಿರವೋ ಗ್ರಾಮ ಕರಣಿಕರಿಗೆ ಕೊಡಬೇಕಾಗುತ್ತದೆ. ಕೆಲವು ಶಾಸಕರ ಆಪ್ತ ಸಹಾಯಕರ ಪರಿಚಯವಿದ್ದವರು ಅವರಿಗೆ ಫೋನ್ ಮಾಡಿ ಒಂದು ಕೆಲಸ ಮಾಡಿಕೊಡಿ, ಲಂಚ ಕೇಳುತ್ತಿದ್ದಾರೆ, ಕೆಲಸ ಮಾಡುತ್ತಿಲ್ಲ ಎಂದು ದೂರು ಕೊಟ್ಟ ಬಳಿಕ ಕೆಲಸ ಆಗುವುದೂ ಇದೆ. ಆದರೆ ಇದಕ್ಕೆ ಒಂದು ಅಧಿಕೃತ ದಾರಿಯನ್ನು ಬಿಜೆಪಿಯ ರಾಜ್ಯಾಧ್ಯಕ್ಷರೂ ಆಗಿರುವ ನಳಿನ್ ತೋರಿಸಿದ್ದಾರೆ. ಒಳ್ಳೆಯ ಇಚ್ಚಾಶಕ್ತಿ ಇರುವ, ಶಾಸಕರ ಹೆಸರು ಮೇಲೆ ಬರಬೇಕು ಎಂದು ಬಯಸುವ ಒಬ್ಬ ಯುವಕ, ಯುವತಿ ಸಿಕ್ಕಿದರೆ ಇದು ಪ್ರತಿ ಶಾಸಕನಿಗೂ ಮೈಲೇಜ್ ತೆಗೆದುಕೊಳ್ಳಲು ಉತ್ತಮ ಮಾರ್ಗ.

ಎರಡನೇಯದಾಗಿ ನಳಿನ್ ಅವರು ಹೇಳಿರುವುದು ಮರಳನ್ನು ನಿಮ್ಮ ಮನೆಬಾಗಿಲಿಗೆ ಎರಡು ಸಾವಿರಕ್ಕೆ ತಲುಪಿಸಲಾಗುವುದು. ಬಹುಶ: ಒಂದು ಉತ್ತಮ ಮರಳು ನೀತಿ ಬರದೇ ಇದ್ದರೆ ಈ ಒಂದು ವಿಷಯವೇ ಸಾಕು, ಬಿಜೆಪಿಯನ್ನು ಮುಂದಿನ ಬಾರಿ ಮರಳಿನಡಿ ಮುಚ್ಚಿ ಹಾಕಲು. ಇದು ಎಲ್ಲಿಯವರೆಗೆ ಬಂದು ಮುಟ್ಟಿದೆ ಎಂದರೆ ಮರಳು ಎತ್ತಿಯೇ ಶ್ರೀಮಂತರಾಗಲು ಕೆಲವರು ಹೊರಟಿದ್ದಂತಿದೆ. ಅದಕ್ಕೆ ಯಾರ್ಯಾರಿಗೆ ಹಣ ಕೊಡಬೇಕೋ ಅವರಿಗೆ ಕೊಟ್ಟು ಬಾಯಿ ಮುಚ್ಚಿಸಲು ಕೂಡ ಅನೇಕರಿಗೆ ಗೊತ್ತಿದೆ. ಇದನ್ನು ಆದಷ್ಟು ಬೇಗ ನಿಲ್ಲಿಸದಿದ್ದರೆ ಮುಂದಿನ ಅವಧಿಯಲ್ಲಿ ಮರಳು ತಿಂದೇ ಕೆಲವರು ನೀಳಕಾಯದವರು ದಪ್ಪ ಆಗುತ್ತಾರೆ ಮತ್ತು ಬಿಜೆಪಿಯ ಕಮಲವನ್ನು ಕೆಸರಿನಲ್ಲಿ ಮುಳುಗಿಸಿಬಿಡುತ್ತಾರೆ. ಆದ್ದರಿಂದ ಅಕ್ಟೋಬರ್ ತಿಂಗಳಲ್ಲಿ ಮರಳು ನೀತಿ ತಂದರೆ ಬಿಜೆಪಿ ಮಾನ ಖಂಡಿತ ಉಳಿಯುತ್ತದೆ. ಇದರೊಂದಿಗೆ ಪಬ್, ಕ್ಲಬುಗಳು ಕೂಡ ಬಂದಾಗಬೇಕು. ಕಾನೂನುಬಾಹಿರ ಚಟುವಟಿಕೆ ಎಲ್ಲಿಯೂ ಇರಬಾರದು ಎಂದು ಜಿಲ್ಲಾಧಿಕಾರಿಯವರಿಗೆ ಹೇಳಿರುವುದಾಗಿ ನಳಿನ್ ಹೇಳಿದ್ದಾರೆ. ಇದು ಜಾರಿಗೆ ಬಂದರೆ ಸಂಸದರಿಗೆ ಯಾವಾಗಲೂ ಬಡ, ಮಧ್ಯಮ ವರ್ಗದ ಮನೆಯ ತಾಯಂದಿರು, ಸಹೋದರಿಯರು ಅಭಾರಿಯಾಗಿರುತ್ತಾರೆ.

ಕೊನೆಯದಾಗಿ ನಳಿನ್ ಹೇಳಿದ ಬಹಳ ಮುಖ್ಯ ವಿಷಯ ಪ್ಲಾಸ್ಟಿಕ್ ಬ್ಯಾನ್. ಪ್ಲಾಸ್ಟಿಕ್ ಮುಕ್ತ ಮಂಗಳೂರು ಆಗಿಯೇ ಬಿಡುತ್ತದೆ ಎಂದು ಕೆಲವು ದಿನಗಳ ತನಕ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಸಂದೇಶ ಬಿಟ್ಟರು. ಏನೇನೋ ಪರ್ಯಾಯ ಇದೆ ಎಂದು ಕರೆಕೊಟ್ಟರು. ಆದರೆ ನಂತರ ಅದು ತಣ್ಣಗಾಯಿತು. ಹಾಗೆ ಆಗಬಾರದು. ಮದುವೆ ಮನೆಯಲ್ಲಿ ಪ್ಲಾಸ್ಟಿಕ್ ಕಪ್, ಪ್ಲಾಸ್ಟಿಕ್ ಕವರ್, ಟೇಬಲ್ ಮೇಲೆ ಪ್ಲಾಸ್ಟಿಕ್ ಹರಡಿದ್ದರೆ ಅಂತಹ ಮದುವೆಗೆ ನಾವು ಬರುವುದಿಲ್ಲ ಎಂದು ಶಾಸಕರು ಘೋಷಿಸಿಬಿಡಬೇಕು. ಯಾಕೆಂದರೆ ಅವರನ್ನು ಅತೀ ಹೆಚ್ಚು ಮದುವೆಗಳಿಗೆ ಕರೆಯುವವರು ಇರ್ತಾರೆ. ಅವರೇ ಘೋಷಣೆ ಮಾಡಿದರೆ ಶಾಸಕರು ಪ್ಲಾಸ್ಟಿಕ್ ಬಳಸಿದ್ರೆ ಬರಲ್ವಂತೆ ಎಂದು ಸುದ್ದಿಯಾಗಿ ಇದು ಪರಿಣಾಮ ಬೀರಬಹುದು. ಇನ್ನು ಬಿಸಿ ರೋಡು, ಪುತ್ತೂರು ಕಡೆ ಪ್ಲಾಸ್ಟಿಕ್ ಮಾರುವ ಕಡೆ ರೇಡ್ ಆಗಿ ಒಂದಿಷ್ಟು ಜಾಗೃತಿ ಮೂಡಿತ್ತು. ಆದರೆ ಮಂಗಳೂರಿನಲ್ಲಿ ಅಂತಹ ಸಂಚಲನ ಮೂಡಿಲ್ಲ. ನಿಷೇಧಿತ ಪ್ಲಾಸ್ಟಿಕ್ ಉತ್ಪಾದಿಸುವ ಫ್ಯಾಕ್ಟರಿಗಳ ಮೇಲೆ ರೇಡ್ ಮಾಡಿದರೆ ಆಗ ಉತ್ಪಾದನೆಯೇ ನಿಂತು ಹೋಗುತ್ತದೆ. ತಿಮಿಂಗಲ ಹಿಡಿಯುವುದು ಬಿಟ್ಟು ಬಂಗುಡೆ, ಬೂತಾಯಿಗೆ ಕೈ ಹಾಕಲು ಹೋಗುವುದರಿಂದ ಹೀಗೆ ಪ್ಲಾಸ್ಟಿಕ್ ಬಳಕೆ ಜಾಸ್ತಿಯಾಗಿರುವುದು. ಕೊನೆಯದಾಗಿ ನಳಿನ್ ಕುಮಾರ್ ಕಟೀಲ್ ಅವರ ಹಿತೈಷಿಗಳು, ಆಪ್ತ ಅಭಿಮಾನಿಗಳು, ಬೆಂಬಲಿಗರು ಈ ಮೂರು ಘೋಷಣೆಗಳ ಬಗ್ಗೆ ಮೊದಲು ಗಮನ ನೀಡಿ ಜಾರಿಗೆ ತರಬೇಕು. ರಕ್ತದಾನ, ಅದು ಇದು ಶಿಬಿರ ಮುಖ್ಯ ಹೌದು. ಅದರೊಂದಿಗೆ ದೂರಗಾಮಿ ಪರಿಣಾಮ ಬೀರುವ ಯೋಜನೆಗಳನ್ನು ನಳಿನ್ ಹೇಳಿದ್ದಾರೆ. ಅದರ ಹಿಂದೆ ಬಿದ್ದು ಜಾರಿಗೆ ಬರುವಂತೆ ಮಾಡುವ ಹೊಣೆ ಅವರ ಹಿಂಬಾಲಕರದ್ದು. ಮಾಡಿದ್ರೆ ಪಕ್ಷಕ್ಕೂ ಒಳ್ಳೆಯದು, ನಗರಕ್ಕೂ ಒಳ್ಳೆಯದು!

0
Shares
  • Share On Facebook
  • Tweet It




Trending Now
ಈ ಬಾರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಮಹಿಳೆಗೆ ಪಟ್ಟ?
Tulunadu News July 4, 2025
ರೇಪ್ ಕೇಸಿನಲ್ಲಿ ಕಾಂಪ್ರಮೈಸ್ ಆದರೆ ಸಂತ್ರಸ್ತೆಯ ವಿರುದ್ಧವೇ ದೂರು ದಾಖಲು - ಬಾಂಬೆ ಹೈಕೋರ್ಟ್ ಪೀಠ!
Tulunadu News July 3, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಈ ಬಾರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಮಹಿಳೆಗೆ ಪಟ್ಟ?
    • ರೇಪ್ ಕೇಸಿನಲ್ಲಿ ಕಾಂಪ್ರಮೈಸ್ ಆದರೆ ಸಂತ್ರಸ್ತೆಯ ವಿರುದ್ಧವೇ ದೂರು ದಾಖಲು - ಬಾಂಬೆ ಹೈಕೋರ್ಟ್ ಪೀಠ!
    • ದೆಹಲಿಯಲ್ಲಿ 10 ವರ್ಷ ದಾಟಿದ ಕಾರುಗಳು ಕಡಿಮೆ ದರದಲ್ಲಿ ಸಿಗಲಿವೆ! ಯಾಕ್ ಗೊತ್ತಾ?
    • ಟಾಯ್ಲೆಟಲ್ಲಿ ಮಹಿಳಾ ಉದ್ಯೋಗಿಗಳ ವಿಡಿಯೋ ರೆಕಾರ್ಡ್... ಇನ್ಫೋಸಿಸ್ ಉದ್ಯೋಗಿ ಬಂಧನ!
    • ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ನಾಮಕರಣ ಮಾಡಬೇಕಾ?
    • ಪ್ರತಿ ತಿಂಗಳು ಪತ್ನಿಗೆ 4 ಲಕ್ಷ ಕೊಡಿ - ಕ್ರಿಕೆಟರ್ ಶಮಿಗೆ ಹೈಕೋರ್ಟ್ ಆದೇಶ!
    • ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
    • ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
  • Popular Posts

    • 1
      ಈ ಬಾರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಮಹಿಳೆಗೆ ಪಟ್ಟ?
    • 2
      ರೇಪ್ ಕೇಸಿನಲ್ಲಿ ಕಾಂಪ್ರಮೈಸ್ ಆದರೆ ಸಂತ್ರಸ್ತೆಯ ವಿರುದ್ಧವೇ ದೂರು ದಾಖಲು - ಬಾಂಬೆ ಹೈಕೋರ್ಟ್ ಪೀಠ!
    • 3
      ದೆಹಲಿಯಲ್ಲಿ 10 ವರ್ಷ ದಾಟಿದ ಕಾರುಗಳು ಕಡಿಮೆ ದರದಲ್ಲಿ ಸಿಗಲಿವೆ! ಯಾಕ್ ಗೊತ್ತಾ?
    • 4
      ಟಾಯ್ಲೆಟಲ್ಲಿ ಮಹಿಳಾ ಉದ್ಯೋಗಿಗಳ ವಿಡಿಯೋ ರೆಕಾರ್ಡ್... ಇನ್ಫೋಸಿಸ್ ಉದ್ಯೋಗಿ ಬಂಧನ!
    • 5
      ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ನಾಮಕರಣ ಮಾಡಬೇಕಾ?

  • Privacy Policy
  • Contact
© Tulunadu Infomedia.

Press enter/return to begin your search