• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಇದಿನಬ್ಬ ಕುಟುಂಬದ ಆಸ್ತಿಕಲಹವೇ ಐಸಿಸ್ ನಂಟು ಬಹಿರಂಗಪಡಿಸಿದೆ?!

Tulunadu News Posted On August 6, 2021
0


0
Shares
  • Share On Facebook
  • Tweet It

ಬಿ.ಎಂ.ಇದಿನಬ್ಬ ಉಳ್ಳಾಲದ ಮಾಜಿ ಶಾಸಕರು. ಬಹುಶ: ಕಾಂಗ್ರೆಸ್ ಅಥವಾ ಎಡಪಕ್ಷಗಳ ಹಳೆತಲೆಗಳಿಗೆ ಅವರ ಹೆಸರು ಗೊತ್ತಿರಬಹುದು. ಮೂಲತ: ಸಾಹಿತಿಯಾಗಿದ್ದ ಇದಿನಬ್ಬನವರು ಸಜ್ಜನ ರಾಜಕಾರಣಿ. ಅವರು ಈ ರಾಜಕಾರಣದ ಜಂಜಾಟದಲ್ಲಿ ಬೀಳದಿದ್ದರೆ ಅವರಿಂದ ಸಾಕಷ್ಟು ಸಾಹಿತ್ಯ ಕೃಷಿ ಆಗುತ್ತಿತ್ತೆನೋ. ಅವರ ನಂತರ ಅವರ ಕುಟುಂಬದಿಂದ ಯಾರೂ ರಾಜಕಾರಣದತ್ತ ತಲೆ ಹಾಕಲಿಲ್ಲ. ಮಕ್ಕಳು ಉದ್ಯಮಗಳಲ್ಲಿ ತೊಡಗಿಸಿಕೊಂಡರು. ಹಣದ ಹೊಳೆ ಹರಿದುಬಂತು. ಅವರು ಕನಿಷ್ಟ ರಾಜಕಾರಣ ಅಥವಾ ಉದ್ಯಮ ಇದರಲ್ಲಿಯೇ ಮುಳುಗಿದ್ದರೆ ಆ ಕುಟುಂಬದ ಮೇಲೆ ಒಂದು ದಿನ ಬೆಳ್ಳಂಬೆಳ್ಳನೆ ಎನ್ ಐಎ ಅಧಿಕಾರಿಗಳ ತಂಡ ಮುಗಿಬೀಳಬೇಕಾದ ಅವಶ್ಯಕತೆ ಇರಲಿಲ್ಲ. ಆದರೆ ಆ ಕುಟುಂಬದ ಕುಡಿಗಳು ಈ ನೆಲದ ಕಾನೂನಿಗೆ ವಿರುದ್ಧವಾಗಿರುವ ದೇಶದ್ರೋಹಿ ಕೃತ್ಯದಲ್ಲಿ ತಮ್ಮ ಛಾಪನ್ನು ಒತ್ತಿಬಿಟ್ಟಿದ್ದರು. ಅವರು ಅದರಲ್ಲಿಯೇ ತೊಡಗಿಸಿಕೊಂಡಿದ್ದರೆ ಅಲ್ಲಿಯೇ ನಾಶವಾಗಿ ಹೋಗುತ್ತಿದ್ದರು ಅಥವಾ ಇವತ್ತಲ್ಲ ನಾಳೆ ನಮ್ಮ ದೇಶದಲ್ಲಿ ಏನಾದರೂ ವಿಧ್ವಂಸಕ ಕೃತ್ಯ ಮಾಡಲು ಹೋಗಿ ಹತರಾಗುತ್ತಿದ್ದರು.
ಆದರೆ ಅಲ್ಲಿ ಐಸಿಸ್ ನಲ್ಲಿ ಸೇರಿಕೊಂಡಿರುವ ಆ ಕುಟುಂಬದ ಮುಂದಿನ ಪೀಳಿಗೆ ತಮ್ಮ ನೆರಳನ್ನು ಮಂಗಳೂರಿನಲ್ಲಿ ವಾಸಿಸುತ್ತಿರುವ ಇತರ ಸದಸ್ಯರೊಂದಿಗೆ ಹಂಚಿಕೊಂಡಿರುವುದರಿಂದ ಈಗ ಈ ಕುಟುಂಬದ ಹಿರಿಯರು ಮಾನಮರ್ಯಾದೆಗೆ ಕೊಳ್ಳಿ ಇಟ್ಟಂತೆ ಆಗಿದೆ. ಮೊನ್ನೆ ಇದಿನಬ್ಬನವರ ಮಗನ ಮನೆಯ ಮೇಲೆ ರೇಡ್ ಆಗಿರಬಹುದು. ಆದರೆ ಇದು ಮೊದಲ ಬಾರಿ ಆಗಿರುವುದಲ್ಲ. ಇದಕ್ಕೆ ಮೂರು ವರ್ಷಗಳ ಹಿಂದಿನ ಇತಿಹಾಸವಿದೆ. ಆಗಲೂ ಒಂದಿಷ್ಟು ದಾಖಲೆಗಳು ತನಿಖಾಧಿಕಾರಿಗಳಿಗೆ ಸಿಕ್ಕಿದ್ದವು. ಆದರೆ ಇವರನ್ನು ಜೈಲಿಗಟ್ಟುವ ಮಟ್ಟಿಗೆ ಅದರಲ್ಲಿ ಪ್ರಬಲ ಸಾಕ್ಷ್ಯಗಳಿರಲಿಲ್ಲ. ಆದ್ದರಿಂದ ಈ ಕುಟುಂಬ ಸೇಫ್ ಆಗಿತ್ತು. ಆದರೆ ಅನೇಕರಿಗೆ ಗೊತ್ತಿದೆ, ಏನೆಂದರೆ ಒಂದು ಸಲ ರಾಷ್ಟ್ರೀಯ ತನಿಖಾ ದಳದ ಕಣ್ಣಿಗೆ ಒಂದು ದೇಶದ್ರೋಹದ ಕೆಲಸ ಕಂಡರೆ ನಂತರ ಅವರು ಆ ಫೈಲನ್ನು ಸುಮ್ಮನೆ ಕಪಾಟಿನ ಕೆಳಗೆ ಹಾಕಿ ಅದರ ಮೇಲೆ ಹಳೆರದ್ದಿಯನ್ನು ರಾಶಿ ಹಾಕುವುದಿಲ್ಲ. ಸಾಕ್ಷಿ ಇಲ್ಲದೆ ತಪ್ಪಿಸಿಕೊಂಡ ದೇಶದ್ರೋಹಿಯನ್ನು ಬೇಟೆಯಾಡಲು ಎನ್ ಐಎ ತುದಿಗಾಲಲ್ಲಿ ನಿಂತು ಹೊಂಚುಹಾಕುತ್ತಿರುತ್ತದೆ. ಐಎನ್ ಐ ಆ ಆರೋಪಿಯ ಅಷ್ಟೂ ಚಲನವಲನಗಳನ್ನು ಮಸೂರದ ಕಣ್ಣಿನಲ್ಲಿ ನೋಡುತ್ತಾ ಸಮಯ ಸಿಕ್ಕಾಗ ನೆಗೆದು ಗಬ್ಬಕ್ಕನೆ ಹಿಡಿದುಬಿಡುತ್ತದೆ. ಆವತ್ತು ಕೇರಳದಿಂದ ಇದ್ದಕ್ಕಿದಂತೆ 17 ಮಂದಿ ಹೆಣ್ಣುಮಕ್ಕಳು ನಾಪತ್ತೆಯಾಗಿದ್ದರಲ್ಲ, ಅದರಲ್ಲಿ ಇದೇ ಇದಿನಬ್ಬರ ಮರಿಮಗಳ ಅಂದರೆ ಮಗನ ಮೊಮ್ಮೊಗಳು ಕೂಡ ಇದ್ದಾಳೆ ಎಂದು ಎನ್ ಐ ಎಗೆ ಗೊತ್ತಾಗಿತ್ತು. ರೇಡ್ ಮಾಡಿದಾಗ ಆಕೆ ಏನೂ ಕ್ಲೂ ಬಿಟ್ಟು ಹೋಗಿರಲಿಲ್ಲ. ಅದಕ್ಕೆ ಇಡೀ ಕುಟುಂಬ ಆಗ ಬಚಾವ್ ಆಗಿತ್ತು.
ಇನ್ನು ಈ ತನಿಖಾ ಸಂಸ್ಥೆಗೆ ಸಿಕ್ಕಿರುವ ಮತ್ತೊಂದು ಮಾಹಿತಿಯೂ ಆಘಾತ ಉಂಟುಮಾಡುವಂತದ್ದು. ಇದಿನಬ್ಬರ ಮೊಮ್ಮೊಗನ ಹೆಂಡತಿ ಮೂಲತ: ಬಂಟ ಸಮುದಾಯದವಳು. ಅವಳು ಈ ಕುಟುಂಬಕ್ಕೆ ಮದುವೆಯಾದ ನಂತರ ಮುಸ್ಲಿಂ ಆಗಿದ್ದಾಳೆ. ಈಗ ಆಕೆ ಕೂಡ ಐಸಿಸ್ ಜೊತೆ ನಂಟು ಹೊಂದಿದ್ದಾಳೆ ಎನ್ನುವ ಮಾಹಿತಿ ಸಿಕ್ಕಿದೆ. ಅವಳು ತನ್ನ ಮಾವ ಬಾಷಾ ನಡೆಸುತ್ತಿರುವ ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ತರಬೇತಿ ನೀಡುತ್ತಿದ್ದಳು. ಇದು ತುಂಬಾ ಡೇಂಜರ್ ವಿಷಯ. ಏಕೆಂದರೆ ಈಕೆ ಹಾಗೂ ಈಕೆಯ ಗಂಡ ಅಂದರೆ ಬಾಷಾರ ಪುತ್ರ ಅನಾಸ್ ಐಸಿಸ್ ಗೆ ಸಂಬಂಧಪಟ್ಟ ಯೂಟ್ಯೂಬ್ ಚಾನೆಲ್ ಗಳನ್ನು ಸಬ್ ಸ್ಕ್ರೈಬ್ ಮಾಡಿದ್ದರು. ಅಷ್ಟೇ ಅಲ್ಲದೆ ಕಾಶ್ಮೀರದಲ್ಲಿರುವ ಕೆಲವು ಭಯೋತ್ಪಾದಕ ಸಂಘಟನೆಗಳ ಜೊತೆಗೆ ಇವರಿಗೆ ದೂರವಾಣಿ ಸಂಪರ್ಕ ಇತ್ತೆಂಬ ಮಾಹಿತಿಗಳು ಕೂಡ ಲಭ್ಯವಾಗಿದೆ. ಇಷ್ಟಕ್ಕೂ ಈ ಕುಟುಂಬದ ಸದಸ್ಯರ ಇಷ್ಟು ಮಾಹಿತಿ ಹೊರಗೆ ಬರಬೇಕಾದರೆ ಅದರ ಸಣ್ಣ ಸುಳಿವು ಐಎನ್ ಎಗೆ ಮೊದಲು ಸಿಗಬೇಕಲ್ಲ. ಅದು ಹೇಗೆ ಸಿಕ್ಕಿತ್ತು ಎಂದು ನಿಮಗೆ ಅನಿಸಬಹುದು. ಅದಕ್ಕೂ ಈ ಕುಟುಂಬದ ಸದಸ್ಯರೇ ಕಾರಣ. ಬಾಷಾ ಅವರ ಹಿರಿಯ ಪುತ್ರ ಅಮೀರ್ ಅಮೇರಿಕಾದಲ್ಲಿದ್ದು, ಅಲ್ಲಿಂದ ಭಾರತಕ್ಕೆ ಬಂದ ಬಳಿಕ ಇಲ್ಲಿ ಆಶ್ರಮವೊಂದನ್ನು ನಿರ್ಮಿಸಲು ತಂದೆಯ ಬಳಿ ಹಣ ಕೇಳಿದಾಗ ಅವರು ಕೊಡಲು ನಿರಾಕರಿಸಿದ್ದಕ್ಕೆ ಮಗ ತಂದೆಯ ವಿರುದ್ಧವೇ ಆಸ್ತಿಯ ಕೇಸ್ ಕೂಡ ದಾಖಲಿಸಿದ್ದ. ಕುಟುಂಬದ ಒಳಗಿನ ಆಸ್ತಿ ಕಲಹ ಎಲ್ಲಿಗೆ ಬಂದು ಮುಟ್ಟಿತೆಂದರೆ ಇವತ್ತು ಇಡೀ ಕುಟುಂಬ ಅದರಲ್ಲಿಯೂ ಮುಖ್ಯವಾಗಿ ಬಾಷಾ ಕಿರಿಯ ಪುತ್ರ ಹಾಗೂ ಅವರ ಪತ್ನಿಗೆ ಈಗ ಇದು ಕಟಕಟೆಗೆ ತಂದು ನಿಲ್ಲಿಸಲಿದೆ.
ಒಂದು ವೇಳೆ ಇಷ್ಟೆಲ್ಲ ಮಾಹಿತಿ ಇದ್ದ ಬಳಿಕವೂ ಯಾರಾದರೂ ಮೋದಿ ಅಲ್ಪಸಂಖ್ಯಾತರ ಮೇಲಿನ ದ್ವೇಷದಿಂದ ಇದಿನಬ್ಬ ಕುಟುಂಬದವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಹೇಳಿದರೆ ಸುಮ್ಮನೆ ನಕ್ಕುಬಿಡುವುದು ಒಳ್ಳೆಯದು. ಯಾಕೆಂದರೆ ಕೆಲವರು ಹೀಗೆ ಹೇಳುವ ಸಾಧ್ಯತೆ ಕೂಡ ಇದೆ. ಒಂದು ವೇಳೆ ಟಾರ್ಗೇಟ್ ಮಾಡುವುದೇ ಆದರೆ ಮೂರು ವರ್ಷಗಳ ಹಿಂದೆಯೇ ಮಾಡಬಹುದಿತ್ತು. ಇನ್ನು ಇದು ಯಾವುದೋ ಒಂದು ಭಯೋತ್ಪಾದಕ ಸಂಘಟನೆಗೆ ಲಿಂಕ್ ಮಾಡುವ ಪ್ರಯತ್ನ ಅಲ್ಲ. ಇದು ಸ್ಪಷ್ಟವಾಗಿ ಐಸಿಸ್ ಜೊತೆನೆ ಸೇರಿರುವ ಪಕ್ಕಾ ವ್ಯೂಹ. ಅಷ್ಟಕ್ಕೂ ಎನ್ ಐ ಎ ಯಾವುದೇ ಸಂಭಾವಿತ ರಾಷ್ಟ್ರೀಯವಾದಿ ಮುಸಲ್ಮಾನರ ಮನೆ ಹುಡುಕಿಕೊಂಡು ಹೋಗಿಲ್ಲವಲ್ಲ. ಮನೆ ಬಿಟ್ಟು ಹೋದ ಹೆಣ್ಣುಮಗಳೇ ಐಸಿಸ್ ಸೇರಿರುವಾಗ ಇನ್ನು ಏನು ಹೇಳಿಕೆ ಕೊಟ್ಟು ಏನು ಪ್ರಯೋಜನ!
0
Shares
  • Share On Facebook
  • Tweet It




Trending Now
ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ಚರ್ಚೆಗೆ ವಿಜಯಾನಂದ ಕಾಶಪ್ಪನವರ್ ನಾಂದಿ!
Tulunadu News December 10, 2025
ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
Tulunadu News December 9, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ಚರ್ಚೆಗೆ ವಿಜಯಾನಂದ ಕಾಶಪ್ಪನವರ್ ನಾಂದಿ!
    • ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
    • ಕುಡುಕರ ಲಿವರ್ ಚಿಕಿತ್ಸೆಗೆ ಸರಕಾರ ಹಣ ನೀಡಲಿ ಎಂದ ಶಾಸಕರು!
    • ಸ್ಮೃತಿ ಹೊಸ ಇನ್ಸಿಂಗ್ಸ್ ಆರಂಭ!
    • ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
  • Popular Posts

    • 1
      ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ಚರ್ಚೆಗೆ ವಿಜಯಾನಂದ ಕಾಶಪ್ಪನವರ್ ನಾಂದಿ!
    • 2
      ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
    • 3
      ಕುಡುಕರ ಲಿವರ್ ಚಿಕಿತ್ಸೆಗೆ ಸರಕಾರ ಹಣ ನೀಡಲಿ ಎಂದ ಶಾಸಕರು!
    • 4
      ಸ್ಮೃತಿ ಹೊಸ ಇನ್ಸಿಂಗ್ಸ್ ಆರಂಭ!

  • Privacy Policy
  • Contact
© Tulunadu Infomedia.

Press enter/return to begin your search