• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಒಂದು ನಾಗನ ಕಲ್ಲು ಮತ್ತು ಮುಂದೆ ಆಗಲಿರುವ ಅಷ್ಟೂ ಘಟನೆಗಳು!!

Hanumantha Kamath Posted On November 16, 2021
0


0
Shares
  • Share On Facebook
  • Tweet It

ಅನಗತ್ಯವಾಗಿ ಯಾರಾದರೂ ಎಲ್ಲಿಯಾದರೂ ಪ್ರತಿಷ್ಟಾಪಿಸಲಾಗಿರುವ ನಾಗನ ಕಲ್ಲುಗಳನ್ನು ಹೊರ ತೆಗೆದು ಬಿಸಾಡುತ್ತಾರಾ? ನಾಗಬನಕ್ಕೆ ಹಾನಿಯುಂಟು ಮಾಡುತ್ತಾರಾ? ಹಾಗೆ ಮಾಡುತ್ತಿದ್ದರೆ ಒಂದೋ ಅವರು ಹಿಂದೂ ದ್ವೇಷಿ ಮತಾಂಧರಾಗಿರಬೇಕು ಅಥವಾ ಕೋಮು ಗಲಭೆ ಸೃಷ್ಟಿಸಲು ಮಾಡುತ್ತಿರುವ ಪ್ರಯತ್ನ ಇರಬೇಕು. ಇದು ಬಿಟ್ಟರೆ ಕೊನೆಗೆ ಪೊಲೀಸರು ಪತ್ತೆ ಹಚ್ಚಿರುವ ಆರೋಪಿಗಳು ಮಾನಸಿಕ ಅಸ್ವಸ್ಥರಾಗಿರುತ್ತಾರೆ ಎನ್ನುವುದು ಬೇಸರದ ಸಂಗತಿ. ಮಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಇಂತಹ ಒಟ್ಟು ಮೂರು ಪ್ರಕರಣಗಳು ನಡೆದಿವೆ. ಮೂರು ಕೂಡ ನಾಗಬನ ಮತ್ತು ಅದಕ್ಕೆ ಸಂಬಂಧಪಟ್ಟ ಸ್ಥಳಗಳಿಗೆ ಹಾನಿಯುಂಟು ಮಾಡಿರುವುದು. ಹೀಗೆ ಮುಂದುವರೆದ್ರೆ ಇದು ಮಂಗಳೂರಿನಲ್ಲಿ ಅಶಾಂತಿಗೆ ಕಾರಣವಾಗಲಿದೆ. ಇನ್ನು ಇದನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂದು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದವರು ಸೋಮವಾರ ಕೋಡಿಕಲ್ ಬಂದ್ ಗೆ ಕರೆ ನೀಡಿದ್ದಾರೆ. ಇದೇ ದಿನ ಕೋಡಿಕಲ್ ಸಮೀಪವಿರುವ ಕೊಟ್ಟಾರ ಚೌಕಿಯಲ್ಲಿ ಉಡುಪಿಯಿಂದ ಮಂಗಳೂರಿಗೆ ಬರುತ್ತಿದ್ದ ಬಸ್ಸಿನ ಮೇಲೆ ದುಷ್ಕರ್ಮಿಗಳು ಕಲ್ಲು ಬಿಸಾಡಿದ್ದಾರೆ. ಇಲ್ಲಿ ಕಲ್ಲು ಏಕೆ ಬಿಸಾಡಲಾಯಿತು ಎನ್ನುವುದು ತನಿಖೆಯಾದಾಗ ಅವರು ಅಲ್ಪಸಂಖ್ಯಾತರಾದರೆ ಮತ್ತೆ ಮಂಗಳೂರಿನಲ್ಲಿ ಶಾಂತಿ ಕದಡುತ್ತದೆ. ಕಲ್ಲು ಬಿಸಾಡಿದ್ದಕ್ಕೆ ಪ್ರತಿಯಾಗಿ ಬಹುಸಂಖ್ಯಾತ ಹಿಂದೂಗಳಿಂದ ಪ್ರತಿಭಟನೆ ನಡೆಯಬಹುದು. ಅಲ್ಲಿ ಉಗ್ರ ಭಾಷಣಗಳು ಹೊರಬೀಳಬಹುದು. ಅದರಿಂದ ಮತ್ತೆ ಉದ್ವಿಗ್ನ ವಾತಾವರಣ ಸೃಷ್ಟಿಯಾಗಬಹುದು.

ಹಿಂದೂ ಸಮಾಜೋತ್ಸವ ಮಾಡುವ ಅನಿವಾರ್ಯತೆ ಬರಬಹುದು. ಅದನ್ನು ಮುಗಿಸಿ ಹಿಂದೂ ಯುವಕರ ವಾಹನಗಳು ಹಿಂತಿರುಗುವಾಗ ಮಸೀದಿಯ ಒಳಗಿನಿಂದ ಕಲ್ಲು ಹೊರಗೆ ಬೀಳಬಹುದು. ಎಲ್ಲಿಯಾದರೂ ಕತ್ತಲಲ್ಲಿ ಡ್ಯೂಟಿ ಮುಗಿಸಿ ಬರುತ್ತಿದ್ದ ಅಮಾಯಕರ ಮೇಲೆ ದಾಳಿಯಾಗಬಹುದು. ಅದೃಷ್ಟ ಗಟ್ಟಿ ಇದ್ದವರು ಬದುಕಬಹುದು. ಇಲ್ಲದವರು ಹತ್ಯೆಗೊಳಗಾಗಬಹುದು. ಇದರಿಂದ ಕೋಮು ಗಲಭೆ ಸ್ಫೋಟವಾಗಬಹುದು. ಮಂಗಳೂರು ಬಂದ್ ಗೆ ಯಾವುದಾದರೂ ಸಂಘಟನೆಯವರು ಕರೆ ನೀಡಬಹುದು. ಬಂದ್ ಸಮಯದಲ್ಲಿ ಅಹಿತಕರ ಘಟನೆಗಳು ನಡೆಯಬಹುದು. ಇದರಿಂದ ಬಂದ್ ನೊಂದಿಗೆ ಕರ್ಫ್ಯೂ ಕೂಡ ಹೇರುವಂತಹ ಘಟನೆ ಆಗಬಹುದು. ಕರ್ಫ್ಯೂ ಕೂಡ ದುರುಳರು ಬಗ್ಗದಿದ್ದಾಗ ಶೂಟ್ ಎಟ್ ಸೈಟ್ ಎಂದು ಕೂಡ ಆಗಬಹುದು. ಮಂಗಳೂರಿನ ಹೆಸರನ್ನು ಕುಲಗೆಡಿಸಲು ಬಕಪಕ್ಷಿಗಳಂತೆ ಕಾದುಕುಳಿತಿರುವ ರಾಷ್ಟ್ರೀಯ ವಾಹಿನಿಗಳಲ್ಲಿ ಈ ವಿಷಯಗಳಿಗೆ ಒಂದಕ್ಕೆ ನಾಲ್ಕು ಬಣ್ಣ ಬಳಿದು ಸುದ್ದಿಯಾಗಬಹುದು. ರಾಷ್ಟ್ರೀಯ, ಅಂತರಾಷ್ಟ್ರೀಯ ವಾಹಿನಿಯ ಪತ್ರಕರ್ತರನ್ನು ಹೊತ್ತುಕೊಂಡ ವಾಹನಗಳು ಮಂಗಳೂರಿನಲ್ಲಿ ಬೀಡುಬಿಡಬಹುದು. ರಾಜ್ಯ, ರಾಷ್ಟ್ರದ ವಿವಿಧ ಪಕ್ಷಗಳ ನಾಯಕರು ಮಂಗಳೂರಿಗೆ ಧಾವಿಸಿ ಯಥಾಪ್ರಕಾರದ ಫಿಕ್ಸೆಡ್ ಡೈಲಾಗ್ ಗಳನ್ನು ಹೇಳಬಹುದು. ಪ್ರತಿ ದಿನ ವಿವಿಧ ಮುಖಂಡರ ಮೂರ್ನಾಕು ಸುದ್ದಿಗೋಷ್ಟಿಗಳು ನಡೆಯಬಹುದು. ಅದರ ಕಟ್ಟಿಂಗ್ ಗಳು, ವಿಡಿಯೋ ಕ್ಲಿಪ್ಪಿಂಗ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಬಹುದು. ಅದನ್ನು ನೋಡಿ ದೂರದ ಊರುಗಳಿಂದ ಮಕ್ಕಳನ್ನು ಇಲ್ಲಿ ಕಳಿಸಿರುವ ಹೆತ್ತವರು ಗೊಂದಲಕ್ಕೆ ಬೀಳಬಹುದು. ಮಂಗಳೂರಿನಲ್ಲಿ ತಮ್ಮ ಮಗ, ಮಗಳು ಕಲಿಯುತ್ತಿದ್ದಾಳೆ ಎನ್ನುವ ಆತಂಕ ಅವರ ಪೋಷಕರಲ್ಲಿ ಹೆಚ್ಚಾಗಬಹುದು. ಉದ್ಯೋಗ ನಿಮಿತ್ತ ಮಂಗಳೂರಿಗೆ ಬಂದಿರುವವರಿಗೆ, ವ್ಯವಹಾರದ ಕಾರಣದಿಂದ ಇಲ್ಲಿ ಇರುವವರು ತಲೆ ಮೇಲೆ ಕೈ ಹೊತ್ತು ಕೂರಬಹುದು. ಅವರ ಸಂಬಂಧಿಕರು ನಿತ್ಯ ಟೆನ್ಷನ್ ನಲ್ಲಿ ಕಳೆಯಬಹುದು. ಇನ್ನು ಮಂಗಳೂರಿನಲ್ಲಿ ಏನಾದರೂ ಹೂಡಿಕೆ ಮಾಡಿ ಇಲ್ಲಿನ ಜನರಿಗೆ ಉದ್ಯೋಗಾವಕಾಶ ಸಿಗುವಂತಹ ಚಾನ್ಸ್ ಇರುವುದು ಕೂಡ ಉದ್ಯಮಿಗಳ ಹಿಂಜರಿಕೆಯಿಂದ ತಪ್ಪಿ ಹೋಗಬಹುದು. ಇದರಿಂದ ಈ ವರ್ಷದ ಅಂತ್ಯದಲ್ಲಿ ನಡೆಯಲಿರುವ ಅನೇಕ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳಿಗೆ ಪೆಟ್ಟು ಬೀಳಬಹುದು. ಅನೇಕರ ಜೀವನದ ಆದಾಯ ಇದರಿಂದ ನಷ್ಟವಾಗಬಹುದು. ಒಟ್ಟಿನಲ್ಲಿ ಸಿರಿವಂತರು ರೆಸ್ಟ್ ಸಿಕ್ಕಿತು ಎಂದೋ, ಮನೆಯಿಂದಲೇ ಕೆಲಸ ಮಾಡೋಣ ಎಂದೋ ಅಂದುಕೊಂಡು ನಿಶ್ಚಿಂತೆಯಿಂದ ಇದ್ದರೆ ಹೊರಗೆ ಹೋಗಿಯೇ ಕೆಲಸ ಮಾಡಬೇಕಾದ ಅನಿವಾರ್ಯತೆ ಇದ್ದ ಮಧ್ಯಮ ವರ್ಗದವರ ಜೀವನ ಹಾದಿ ತಪ್ಪಬಹುದು. ಅಂತವರಿಗೆ ಸಹಾಯ ಎಂದು ಆಹಾರದ ಕಿಟ್ ಕೊಡುವ ಮೂಲಕ ಕೆಲವರಿಗೆ ಫೋಟೋ, ವಿಡಿಯೋಗೆ ಮುಖ ತೋರಿಸುವ ಅವಕಾಶ ಬರಬಹುದು. ಮಂಗಳೂರು ಮತ್ತೆ ಕೋಮು ಸೂಕ್ಷ್ಮ ಪ್ರದೇಶ ಎನ್ನುವ ಹಣೆಪಟ್ಟಿ ಗಟ್ಟಿಯಾಗಿ ಅಂಟಬಹುದು.

ಇದೆಲ್ಲವೂ ಆಗಬಾರದು ಎಂದಾದರೆ ಏನು ಮಾಡಬೇಕು. ಜಿಲ್ಲಾಡಳಿತ ಒಂದು ನಿಮಿಷಯವೂ ತಡ ಮಾಡದೇ ಪೊಲೀಸ್ ಇಲಾಖೆಯನ್ನು ಸ್ವತಂತ್ರವಾಗಿ ಬಿಟ್ಟು ತಪ್ಪಿತಸ್ಥರನ್ನು ಬಂಧಿಸಬೇಕು. ಮೂಲೆ ಮೂಲೆಯಲ್ಲಿ ಅಡಗಿ ಕುಳಿತುಕೊಂಡಿರುವ ಸ್ಲೀಪರ್ ಸೆಲ್ ಗಳನ್ನು ಹಿಡಿದು ಚಚ್ಚಿಬಿಡಬೇಕು. ಇನ್ನು ಇದು ಕೂಡ ಮಾನಸಿಕ ಅಸ್ವಸ್ಥನ ಕೆಲಸ ಎಂದು ತಿಪ್ಪೆ ಸಾರಿಸುವ ಕೆಲಸ ಮಾಡಬಾರದು. ಒಂದು ವೇಳೆ ಕೋಡಿಕಲ್ ನಾಗಬನದ ಅಪಚಾರ ಮಾಡಿದ್ದು ಮಾನಸಿಕ ಅಸ್ವಸ್ಥನೇ ಆಗಿದ್ದರೂ ಅದರ ಹಿಂದೆ ಯಾರಿದ್ದಾರೆ ಎನ್ನುವುದು ಕೂಡ ಪತ್ತೆಯಾಗಬೇಕು. ಯಾಕೆಂದರೆ ಹುಚ್ಚರನ್ನು ಬಳಸಿ ಯಾರಾದರೂ ಈ ಕೆಲಸ ಮಾಡಿದ್ದೇ ಆದರೆ ಅವರು ಹುಚ್ಚರಾಗಿರುವುದಿಲ್ಲ. ಏನಾಗುತ್ತೆ ನೋಡುವ ಎಂದು ಚೆಂದ ನೋಡುವ ಕೆಲಸ ಅಂತವರು ಮಾಡಿರುತ್ತಾರೆ. ಅಂತವರು ಕೂಡ ಕಂಬಿಗಳ ಹಿಂದೆ ಇದ್ದರೆ ಬೀಳಬೇಕು. ಒಟ್ಟಿನಲ್ಲಿ ಪ್ರಕರಣಗಳು ದಡ ಸೇರಬೇಕು. ಇನ್ನು ಆ ನಾಗಬಿಂಬಗಳನ್ನು ಯಥಾ ಪ್ರಕಾರ ಪುನರ್ ಪ್ರತಿಷ್ಟಾಪಿಸುವ ಕೆಲಸ ಕೂಡ ಆಗಬೇಕು. ಅದಕ್ಕೆ ಸಂಬಂಧಿಸಿದ ಧಾರ್ಮಿಕ ಕಾರ್ಯಕ್ರಮಗಳು ನಡೆಯಬೇಕು. ನೀವು ಎಷ್ಟು ಬಾರಿ ಕಿತ್ತೊಗೆಯುತ್ತೇವೆಯೋ ಅಷ್ಟು ಬಾರಿ ನಾವು ಪುನಪ್ರತಿಷ್ಟಾಪಿಸುತ್ತೇವೆ ಎನ್ನುವ ಸಂದೇಶ ಹಿಂದೂ ಸಮಾಜದಿಂದ ಹೋಗಬೇಕು!

0
Shares
  • Share On Facebook
  • Tweet It




Trending Now
ರೇಪ್ ಕೇಸಿನಲ್ಲಿ ಕಾಂಪ್ರಮೈಸ್ ಆದರೆ ಸಂತ್ರಸ್ತೆಯ ವಿರುದ್ಧವೇ ದೂರು ದಾಖಲು - ಬಾಂಬೆ ಹೈಕೋರ್ಟ್ ಪೀಠ!
Hanumantha Kamath July 3, 2025
ದೆಹಲಿಯಲ್ಲಿ 10 ವರ್ಷ ದಾಟಿದ ಕಾರುಗಳು ಕಡಿಮೆ ದರದಲ್ಲಿ ಸಿಗಲಿವೆ! ಯಾಕ್ ಗೊತ್ತಾ?
Hanumantha Kamath July 3, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ರೇಪ್ ಕೇಸಿನಲ್ಲಿ ಕಾಂಪ್ರಮೈಸ್ ಆದರೆ ಸಂತ್ರಸ್ತೆಯ ವಿರುದ್ಧವೇ ದೂರು ದಾಖಲು - ಬಾಂಬೆ ಹೈಕೋರ್ಟ್ ಪೀಠ!
    • ದೆಹಲಿಯಲ್ಲಿ 10 ವರ್ಷ ದಾಟಿದ ಕಾರುಗಳು ಕಡಿಮೆ ದರದಲ್ಲಿ ಸಿಗಲಿವೆ! ಯಾಕ್ ಗೊತ್ತಾ?
    • ಟಾಯ್ಲೆಟಲ್ಲಿ ಮಹಿಳಾ ಉದ್ಯೋಗಿಗಳ ವಿಡಿಯೋ ರೆಕಾರ್ಡ್... ಇನ್ಫೋಸಿಸ್ ಉದ್ಯೋಗಿ ಬಂಧನ!
    • ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ನಾಮಕರಣ ಮಾಡಬೇಕಾ?
    • ಪ್ರತಿ ತಿಂಗಳು ಪತ್ನಿಗೆ 4 ಲಕ್ಷ ಕೊಡಿ - ಕ್ರಿಕೆಟರ್ ಶಮಿಗೆ ಹೈಕೋರ್ಟ್ ಆದೇಶ!
    • ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
    • ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?
  • Popular Posts

    • 1
      ರೇಪ್ ಕೇಸಿನಲ್ಲಿ ಕಾಂಪ್ರಮೈಸ್ ಆದರೆ ಸಂತ್ರಸ್ತೆಯ ವಿರುದ್ಧವೇ ದೂರು ದಾಖಲು - ಬಾಂಬೆ ಹೈಕೋರ್ಟ್ ಪೀಠ!
    • 2
      ದೆಹಲಿಯಲ್ಲಿ 10 ವರ್ಷ ದಾಟಿದ ಕಾರುಗಳು ಕಡಿಮೆ ದರದಲ್ಲಿ ಸಿಗಲಿವೆ! ಯಾಕ್ ಗೊತ್ತಾ?
    • 3
      ಟಾಯ್ಲೆಟಲ್ಲಿ ಮಹಿಳಾ ಉದ್ಯೋಗಿಗಳ ವಿಡಿಯೋ ರೆಕಾರ್ಡ್... ಇನ್ಫೋಸಿಸ್ ಉದ್ಯೋಗಿ ಬಂಧನ!
    • 4
      ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ನಾಮಕರಣ ಮಾಡಬೇಕಾ?
    • 5
      ಪ್ರತಿ ತಿಂಗಳು ಪತ್ನಿಗೆ 4 ಲಕ್ಷ ಕೊಡಿ - ಕ್ರಿಕೆಟರ್ ಶಮಿಗೆ ಹೈಕೋರ್ಟ್ ಆದೇಶ!

  • Privacy Policy
  • Contact
© Tulunadu Infomedia.

Press enter/return to begin your search