• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ನಂಬಿದ್ರೆ ನಂಬಿ ಸುದ್ದಿ 

ಕ್ಲಾಕ್ ಟವರ್ ಬ್ಯಾಟರಿ ಬದಲಾಯಿಸಲಾಗದವರಿಂದ ಅಭಿವೃದ್ಧಿ ನಿರೀಕ್ಷೆ!!

Hanumantha Kamath Posted On March 11, 2022
0


0
Shares
  • Share On Facebook
  • Tweet It

ನಮ್ಮ ಮಂಗಳೂರಿನ ಸ್ಮಾರ್ಟ್ ಸಿಟಿಯವರು ಮಾಡುತ್ತಿರುವ ಕೆಲಸ ಕಂಡು ನಮ್ಮ ಜನಪ್ರತಿನಿಧಿಗಳು ತಾವೇ ಬೆನ್ನು ತಟ್ಟಿಕೊಳ್ಳುವುದು ತುಂಬಾ ಆಯಿತು. ಕಾಮಗಾರಿಗಳಿಂದ ಯಾರಿಗೆ ಲಾಭ ಆಗುತ್ತಿದೆಯೋ ಅವರು ಮಾತ್ರ ಖುಷಿ ಪಟ್ಟಿದ್ದಾರೆ ಬಿಟ್ಟರೆ ಸಾಮಾನ್ಯ ನಾಗರಿಕರು ಹಿಡಿಶಾಪ ಹಾಕುತ್ತಿದ್ದಾರೆ. ಮೊದಲನೇಯದಾಗಿ ಸ್ಮಾರ್ಟ್ ಸಿಟಿ ಮಂಡಳಿಯವರು ಸರಿಯಾಗಿ ಕೆಲಸ ಮಾಡಲ್ಲ. ಯಾವುದು ಮಾಡುತ್ತಿದ್ದಾರೋ ಅದರಿಂದ ಜನರಿಗೆ ತೊಂದರೆ ತಪ್ಪುತ್ತಿಲ್ಲ. ಸ್ಮಾರ್ಟ್ ಸಿಟಿ ಗುತ್ತಿಗೆದಾರರು ಯಾರು ಕೆಲಸವನ್ನು ತೆಗೆದುಕೊಂಡಿದ್ದಾರೋ ಅವರು ಅದೇ ಕೆಲಸವನ್ನು ಉಪಗುತ್ತಿಗೆ ಕೊಟ್ಟಿರುತ್ತಾರೆ. ಉಪಗುತ್ತಿಗೆದಾರರು ಅದನ್ನು ಪೂರ್ಣವಾಗಿ ನಿರ್ವಹಿಸಲಾರದೇ ಅದನ್ನು ಅಲ್ಲಲ್ಲಿಗೆ ಬಿಟ್ಟಿರುತ್ತಾರೆ. ರಸ್ತೆ ಮಾಡಿದರೋ ಅದನ್ನೊಂದು ಫಿನಿಶಿಂಗ್ ಮಾಡದೇ ಹಾಗೆ ಬಿಟ್ಟು ಹೋಗಿರುತ್ತಾರೆ. ಫುಟ್ ಪಾತ್ ಕತೆ ಕೂಡ ಹಾಗೆ. ನೀಟಾಗಿ ಫಿನಿಶಿಂಗ್ ಇಲ್ಲ. ಕಾಮಗಾರಿಗಳಂತೂ ಆಮೆಗತಿಯ ವೇಗದಲ್ಲಿ ಸಾಗುತ್ತಿವೆ. ಇದರಿಂದ ಏನಾಗುತ್ತದೆ ಎನ್ನುವುದಕ್ಕೆ ಬಂದರು ಪ್ರದೇಶದಲ್ಲಿ ಇರುವ ಪೋರ್ಟ್ ರಸ್ತೆಯ 400 ಮೀಟರ್ ಒಳಚರಂಡಿ ಕೆಲಸವೇ ಸಾಕ್ಷಿ. ಎರಡು ವರ್ಷಗಳಿಂದ ಮುಗಿಯುತ್ತಿಲ್ಲ. ಇದರಿಂದ ಆ ರಸ್ತೆಯಲ್ಲಿ ಇರುವ ಅಂಗಡಿಯವರಿಗೆ ನಿತ್ಯ ಧೂಳಿನ ಅಭಿಷೇಕ. ಗ್ರಾಹಕರು ಬರಲು ಹಿಂದೇಟು ಹಾಕುವುದರಿಂದ ವ್ಯಾಪಾರಕ್ಕೆ ಹೊಡೆತ. ಅದರೊಂದಿಗೆ ಅಂಗಡಿಯ ಒಳಗಿರುವ ವಸ್ತುಗಳಿಗೂ ಧೂಳಿನೊಂದಿಗೆ ಸಂಬಂಧ ಎಷ್ಟು ಗಟ್ಟಿಯಾಗಿದೆ ಎಂದರೆ ಅಂಗಡಿಯ ಒಳಗೆ ಕಾಲಿಡಲು ಗ್ರಾಹಕರಿಗೆ ಬಿಡಿ, ಮಾಲೀಕರಿಗೆ ಮನಸ್ಸು ಆಗುತ್ತಿಲ್ಲ. ಅವರು ಇದಕ್ಕೆ ದೂಷಿಸುತ್ತಿರುವುದು ಜನಪ್ರತಿನಿಧಿಗಳನ್ನು. ಆದರೆ ಇದಕ್ಕೆ ನೇರ ಕಾರಣೀಕರ್ತರಾಗಿರುವ ಅಧಿಕಾರಿಗಳು ಮಾತ್ರ ತಮ್ಮ ಸ್ಮಾರ್ಟ್ ಸಿಟಿ ಕಚೇರಿಯ ಒಳಗೆ ಕುಳಿತು ಚೇರ್ ಬಿಸಿ ಮಾಡುತ್ತಿದ್ದಾರೆ. ಅವರು ಫೀಲ್ಡಿಗೆ ಇಳಿಯದೇ ಇರುವುದರಿಂದ ಅವರಿಗೆ ಜನ ನೇರವಾಗಿ ಬೈಯುವ ಸಾಧ್ಯತೆ ಇಲ್ಲ. ಅವರಿಗೆ ಜೋರು ಮಾಡಿ ರಸ್ತೆಗೆ ಇಳಿಸಬೇಕಾದ ಪೂರ್ಣಕಾಲಿಕ ಐಎಎಸ್ ಅಧಿಕಾರಿ ಎಂಡಿಯಾಗಿ ಸ್ಮಾರ್ಟ್ ಸಿಟಿ ಮಂಡಳಿಗೆ ಸಿಗಲೇ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಹೇಳುವವರು, ಕೇಳುವವರು ಯಾರೂ ಇಲ್ಲದೆ ಕಾಮಗಾರಿಗಳು ಅರ್ಧಂಬರ್ಧ ಆಗಿವೆ. ಇದೇ ಕಾರಣದಿಂದ ಮೊನ್ನೆ ಬೆಳಗಿನ ಜಾವ ಒಂದು ಗಂಟೆ ಬಂದ ಮಳೆ ಹೃದಯಭಾಗ ಕ್ಲಾರ್ಕ್ ಟವರ್ ನ ಅಂಗಡಿಗಳ ಒಳಗೆ ನೀರು ನುಗ್ಗಿಸಿಬಿಟ್ಟಿದೆ. ಫುಟ್ ಪಾತ್ ಮೇಲೆ ಹಾಕಿರುವ ಮರಳು, ಟೈಲ್ಸ್ ಅಲ್ಲಿಯೇ ಬಿಟ್ಟಿರುವುದರಿಂದ ಮತ್ತು ರಸ್ತೆಯ ಮೇಲೆ ಬಿದ್ದ ಮಳೆ ನೀರು ಚರಂಡಿಗೆ ಹರಿದು ಹೋಗಲು ಇವರು ಸೂಕ್ತ ವ್ಯವಸ್ಥೆ ಮಾಡದೇ ಇದ್ದ ವ್ಯಾಪಾರಿಗಳಿಗೆ ತೊಂದರೆಯಾಗಿದೆ. ಇದಕ್ಕೆ ಕಾರಣ ನೀರಿಗೆ ಇವರು ಕನ್ ಫ್ಯೂಸ್ ಮಾಡಿಬಿಟ್ಟ ಕಾರಣ ಇದು ಮುಂದಿನ ಮಳೆಗಾಲಕ್ಕೆ ನಮಗೆ ಎಚ್ಚರಿಕೆಯ ಗಂಟೆ ಕೂಡ ಹೌದು.

ಕಾಂಕ್ರೀಟ್ ರಸ್ತೆ ಮಾಡಿ ಫುಟ್ ಪಾತ್ ನಿರ್ಮಾಣವಾದ ನಂತರ ಮಳೆಯ ನೀರು ಹರಿದುಹೋಗಲು ಗಲ್ಲಿ ಟ್ರಾಪ್ ಎನ್ನುವ ವ್ಯವಸ್ಥೆ ಮಾಡಬೇಕು. ಅದು ಇವರು ಮಾಡಿಯೇ ಇಲ್ಲ. ಇವರು ಎಲ್ಲಿ ಹಣ ಹೊಡೆಯಲಾಗುತ್ತದೆಯೋ ಅದನ್ನೇ ಮಾಡುತ್ತಾರೆ ವಿನ: ಜನೋಪಯೋಗಿ ಯಾವುದೇ ಕೆಲಸ ಮಾಡುತ್ತಿಲ್ಲ. ಇದರ ಪರಿಣಾಮವಾಗಿ ಕ್ಲಾರ್ಕ್ ಟವರ್, ಗೋವಿಂದ ಪೈ ವೃತ್ತ, ತಾಲೂಕು ಕಚೇರಿ, ಬಂದರು ಪ್ರದೇಶದಲ್ಲಿ ಸ್ಮಾರ್ಟ್ ಸಿಟಿ ಕೃಪೆಯಿಂದ ಉಚಿತ ಕೃತಕ ಈಜುಕೊಳ ನಿರ್ಮಾಣವಾಗಿದೆ. ಇವರು ಮಾಡುವುದು ಅಗತ್ಯ ಇಲ್ಲದ ಯೋಜನೆ ಎನ್ನುವುದು ಇವರು ಒಂದು ಕೋಟಿ ರೂಪಾಯಿ ಖರ್ಚು ಮಾಡಿ ಕ್ಲಾರ್ಕ್ ಟವರ್ ಮಾಡಿದಾಗಲೇ ಗೊತ್ತಾಗಿದೆ. ಈಗ ಕೆಲವು ದಿನಗಳಿಂದ ಟವರ್ ನಲ್ಲಿರುವ ಗಂಟೆ ನಡೆಯುತ್ತಿಲ್ಲ. ಅದಕ್ಕೆ ಒಂದು ಬ್ಯಾಟರಿ ಹಾಕಲು ಗತಿ ಇಲ್ಲದವರಿಂದ ನಾವು ಮಂಗಳೂರನ್ನು ಅಭಿವೃದ್ಧಿ ಮಾಡುವ ನಿರೀಕ್ಷೆ ಇಟ್ಟುಕೊಂಡಿದ್ದೇವಲ್ಲ. ಇವರು ಕಾಂಕ್ರೀಟ್ ರಸ್ತೆ ಮಾಡುವುದು ಮತ್ತು ಫುಟ್ ಪಾತ್ ಅನ್ನು ಅಗಲ ಮಾಡಿ ಅದಕ್ಕೆ ಕೆಂಪು ಬಣ್ಣ ಬಳಿಯುವುದೇ ಅಭಿವೃದ್ಧಿ ಎಂದು ತಿಳಿದುಕೊಂಡಿದ್ದಾರೆ. ಮೂಲಭೂತ ಸೌಲಭ್ಯಗಳಾದ ಒಳಚರಂಡಿ, ಕುಡಿಯುವ ನೀರು ಸರಿಯಾಗದೇ ಮಂಗಳೂರು ಹೇಗೆ ಅಭಿವೃದ್ಧಿ ಆಗಲಿದೆ. ಇದರಿಂದಾಗಿ ಹಿಂದಿನ ಬಾರಿ ಕುಂಡ್ಸೆಪು ಯೋಜನೆಗೆ ಬಂದ 305 ಕೋಟಿ ರೂಪಾಯಿಯಿಂದ ಮಂಗಳೂರಿಗೆ ಏನೂ ಉಪಯೋಗವಾಗಿಲ್ಲ. ಲಾಭ ಪಡೆದುಕೊಂಡವರು ಖುಷಿಯಾಗಿದ್ದಾರೆ. ಆಗ ಕಾಂಗ್ರೆಸ್ ಪಾಳಯದಲ್ಲಿದ್ದವರು ಈಗ ಭಾರತೀಯ ಜನತಾ ಪಾರ್ಟಿಯ ಜನಪ್ರತಿನಿಧಿಗಳ ಹಿಂದೆ ನಿಂತಿದ್ದಾರೆ. ಮಂಗಳೂರಿನ ಒಳಚರಂಡಿ ಹಾಗೂ 24*7 ಕುಡಿಯುವ ನೀರು ಯೋಜನೆ ಹಾಗೆ ಪೋಲಾಯಿತು. ಜನ ಕೂಡ ಬದಲಾವಣೆ ಬಯಸಿ ಹೊಸ ಸರಕಾರಕ್ಕೆ ಅವಕಾಶ ಕೊಟ್ಟರು. ಈ ಬಾರಿಯೂ ಹೀಗೆ ಆದರೆ ಜನರಿಗೆ ಪರ್ಯಾಯ ಏನು? ಹಾಗಂತ ಮಂಗಳೂರಿನ ಜನರು ಮನಸ್ಸಿನಲ್ಲಿ ಬೈದುಕೊಂಡು ಸುಮ್ಮನಿರುತ್ತಾರೆ ವಿನ: ಹೊರಗೆ ಧ್ವನಿ ಎತ್ತುವುದಿಲ್ಲ. ಇದರಿಂದ ನಮ್ಮ ಜನಪ್ರತಿನಿಧಿಗಳು ಕೂಡ ಅಧಿಕಾರಿಗಳ ಮರ್ಜಿಗೆ ಕಾಮಗಾರಿ ಬಿಟ್ಟು ಆರಾಮವಾಗಿ ಇರುತ್ತಾರೆ!!

0
Shares
  • Share On Facebook
  • Tweet It




Trending Now
ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
Hanumantha Kamath October 6, 2025
ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
Hanumantha Kamath October 6, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
    • ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
    • "ಒಂದು ಶೋಗಾಗಿ ಕೈಕಾಲು ಹಿಡಿಯುತ್ತಿದ್ದ ಕಾಲದಿಂದ..." ರಿಷಬ್ ಶೆಟ್ಟಿ 2016 ರ ಘಟನೆಯನ್ನು ನೆನಪಿಸಿಕೊಂಡದ್ದು ಯಾಕೆ?
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಕಸಾಯಿಖಾನೆ ಮುಟ್ಟುಗೋಲು ಹಾಕಿದ ಪ್ರಥಮ ಪ್ರಕರಣ ದಾಖಲು - ಎಸ್ಪಿ
    • ಗೆದ್ದರೂ ಟ್ರೋಫಿ ಪಡೆಯದೇ ದಿಟ್ಟ ಉತ್ತರ ನೀಡಿದ ಭಾರತೀಯ ತಂಡಕ್ಕೆ ಭೇಷ್!
    • ಕೇವಲ ₹100 ಲಂಚದ ಪ್ರಕರಣದಲ್ಲಿ 39 ವರ್ಷಗಳ ಬಳಿಕ ನಿರ್ದೋಷಿ ಘೋಷಣೆ!
    • ನಮ್ಮ ಜಿಲ್ಲೆಗೆ ಕಳುಹಿಸಬೇಡಿ, ಬೇಕಾದರೆ ಕಾಡಿಗೆ ಕಳುಹಿಸಿ ಎಂದು ರಾಯಚೂರಿನಲ್ಲಿ ತಿಮರೋಡಿ ವಿರುದ್ಧ ಪ್ರತಿಭಟನೆ!
    • ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ: 6 ತಿಂಗಳಲ್ಲಿ ಕತ್ರೀನಾ ಕೈಪ್ ಸಂತಾನ ಭಾಗ್ಯ!
    • ಪ್ರಧಾನ ಮಂತ್ರಿಯವರ ನಿವಾಸದ ಮುಂಭಾಗದಲ್ಲಿಯೂ ಸಹ ಗುಂಡಿಗಳು ಇವೆ- ಡಿಸಿಎಂ ಡಿಕೆಶಿ.
    • ಹಿಂದೂ ದೇವರ ಹಾಡನ್ನು ಹಾಡಿದ್ದ ಸುಹಾನಾ ತಮ್ಮ ಭಾವಿ ಪತಿಯ ಬಗ್ಗೆ ಹೇಳಿದ್ದಾರೆ! ಆ ಹಿಂದೂ ಯುವಕ ಯಾರು ಗೊತ್ತಾ!

  • Privacy Policy
  • Contact
© Tulunadu Infomedia.

Press enter/return to begin your search