• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ರಕ್ತದಲ್ಲಿ ಅನ್ನವನ್ನು ಅದ್ದಿ ತಿಂದ ಅನುಭವ ನೀಡುವ ಚಿತ್ರ ಕಾಶ್ಮೀರಿ ಫೈಲ್ಸ್!!

Hanumantha Kamath Posted On March 12, 2022
0


0
Shares
  • Share On Facebook
  • Tweet It

ಕಾಶ್ಮೀರಿ ಫೈಲ್ಸ್ ಎನ್ನುವುದು ಸಿನೆಮಾ ಅಲ್ಲ, ಅದು ನೈಜ ಚರಿತ್ರೆಗೆ ಹಿಡಿದ ಕನ್ನಡಿ. ಇಂತದೊಂದು ಸತ್ಯವನ್ನು ಹಸಿಹಸಿಯಾಗಿ ತೋರಿಸಲು ಒಂದು ಗುಂಡಿಗೆ ಸಾಕಾಗುವುದಿಲ್ಲ. ಆ ನಿಟ್ಟಿನಲ್ಲಿ ಸಿನೆಮಾ ನಿರ್ದೇಶಕರಾದ ವಿವೇಕ್ ಅಗ್ನಿಹೋತ್ರಿಗೆ ಸಾವಿರ ನಮನಗಳು. ಕಾಶ್ಮೀರದಲ್ಲಿದ್ದ ಹಿಂದೂ ಪಂಡಿತರನ್ನು ಅಲ್ಲಿಂದ ಓಡಿಸಲಾಯಿತು ಎಂದು ನಾವು ಎಲ್ಲಿಯೋ ಓದಿರುತ್ತೇವೆ, ಯಾರದ್ದೋ ಭಾಷಣದಲ್ಲಿ ಕೇಳಿರುತ್ತೇವೆ. ಅಲ್ಲಿಗೆ ಅದನ್ನು ಮರೆತಿರುತ್ತೇವೆ. ಆದರೆ “ಓಡಿಸಲಾಯಿತು” ಎನ್ನುವ ಒಂದೇ ಶಬ್ದವನ್ನು ಹಿಡಿದು ಎರಡೂವರೆ ಗಂಟೆಯ ಸಿನೆಮಾ ಮಾಡಬಹುದು ಎಂದು ಯೋಚಿಸಿ ನಮ್ಮನ್ನು ನಾವೇ ಅದಕ್ಕೆ ತಯಾರಿಗೊಳಿಸುವುದು ಇದೆಯಲ್ಲ ಅದೇ ಮಹಾಯಜ್ಞ. ಆ ನಿಟ್ಟಿನಲ್ಲಿ ಈ ಸಿನೆಮಾದ ತಯಾರಿಯ ಹಿಂದಿನ ಶ್ರಮವನ್ನು ಕೂಡ ನಾವು ಅರ್ಥ ಮಾಡಿಕೊಳ್ಳಬೇಕು. ಒಂದು ಕಠಿಣ ಸಂಶೋಧನೆ, ಸತ್ಯವನ್ನು ರಾಶಿ ಹಾಕಿ ಕುಳಿತುಕೊಂಡು ಅದನ್ನು ನಿಮ್ಮ ಮುಂದೆ ಹಾಗೆ ಢಾಳಾಗಿ ತೋರಿಸುವುದು ಮತ್ತು ಅದರ ಹಿಂದಿನ ಕ್ರೂರತೆ ಹಾಗೂ ಆ ಕ್ರೂರತೆಗೆ ಕಾರಣರು ಯಾರು ಎನ್ನುವ ಸ್ಪಷ್ಟತೆಯನ್ನು ಅಡ್ಡಗೋಡೆಯ ಮೇಲೆ ದೀಪ ಇಡದಂತೆ ಸ್ಪಷ್ಟವಾಗಿ, ನಿಖರವಾಗಿ ಮನವರಿಕೆ ಮಾಡುವುದು ಇದೆಯಲ್ಲ ಅದು ಅಷ್ಟು ಸುಲಭವಲ್ಲ. ಇಂತಹ ಸಿನೆಮಾ ಮಾಡುವಾಗ ನಿರ್ದೇಶಕ ತುಂಬಾ ರಿಸ್ಕ್ ತೆಗೆದುಕೊಳ್ಳಬೇಕಾಗುತ್ತದೆ. ಒಬ್ಬ ಹೀರೋವನ್ನು ಇಟ್ಟುಕೊಂಡು ನಾಲ್ಕು ಹಾಡು ಮತ್ತು ಎಂಟು ಫೈಟ್ಸ್ ಇಟ್ಟು, ಎರಡು ಪಂಚಿಂಗ್ ಡೈಲಾಗ್ ಬರೆದು ಸಿನೆಮಾ ಮಾಡುವುದು ಒಂದು ಕಡೆ, ಒಂದು ಗ್ರಾಮೀಣ ಕತೆಯನ್ನು ಹಿಡಿದು ಪ್ರಶಸ್ತಿಗಾಗಿ ಸಿನೆಮಾ ಮಾಡುವುದು ಇನ್ನೊಂದು ಕಡೆ. ಮೊದಲ ಶೈಲಿಯ ಸಿನೆಮಾದಿಂದ ನಿಮಗೆ ಒಂದಷ್ಟರ ಮಟ್ಟಿಗೆ ಮನೋರಂಜನೆ, ಎರಡನೇ ಶೈಲಿಯ ಸಿನೆಮಾದಿಂದ ಒಂದು ಕಥೆ ಸಿಗಬಹುದು. ಆದರೆ ಚರಿತ್ರೆಯ ಪುಟಗಳನ್ನು ಬಿಡಿಸಿದಾಗ ತಮ್ಮದೇ ಭೂಮಿಯ ಮೇಲೆ ತಮ್ಮವರ ನಡುವೆ ತಮ್ಮ ಮೈಯ ಬಟ್ಟೆ ಮತ್ತು ರಕ್ತವನ್ನು ಬಸಿಯಲು ಆಯುಧ ಹಿಡಿದವರ ಸತ್ಯವನ್ನು ನಿಮಗೆ ತೋರಿಸುವುದಿದೆಯಲ್ಲ ಅದು ಸಣ್ಣ ವಿಷಯವೇ ಅಲ್ಲ. ಕಾಶ್ಮೀರಿ ಫೈಲ್ಸ್ ನಲ್ಲಿ ನಮ್ಮ ಸಾರಸ್ವತ ಸಂಬಂಧವಿದೆ. ನಮ್ಮದೇ ಮೂಲ ಹಿನ್ನಲೆ ಇದೆ. ನಮ್ಮ ಹೆಮ್ಮೆಯ ಕಾಶ್ಮೀರ ಎನ್ನುವ ಪುಣ್ಯಭೂಮಿಯಲ್ಲಿ ನಡೆದ ರಾಕ್ಷಸರ ಅಟ್ಟಹಾಸವಿದೆ. ನಮ್ಮವರೇ ಅನುಭವಿಸಿದ ಕರಾಳ ರಾತ್ರಿಗಳಿವೆ. ನಮ್ಮವರೇ ಬೆನ್ನಿಗೆ ಚೂರಿ ಹಾಕಿದ ತಿರುವುಗಳಿವೆ. ನಮ್ಮ ಹೆಣ್ಣುಮಕ್ಕಳ ಮೇಲೆ ನಡೆದ ಅತ್ಯಾಚಾರಗಳಿವೆ. ನಮ್ಮ ಪುರುಷರನ್ನು ಕತ್ತರಿಸಿದ ನೋವುಗಳಿವೆ. ನಮ್ಮದೇ ಅಧಿಕಾರಿಗಳ ಅಸಹಾಯಕತೆ ಇದೆ. ನಮ್ಮದೇ ರಾಜಕಾರಣಿಗಳ ದ್ವಿಮುಖ ಚಿತ್ರಣವಿದೆ. ಎಲ್ಲಕ್ಕಿಂತ ಹೆಚ್ಚಾಗಿ ಮರೆತು ಹೋದ ಇತಿಹಾಸದ ಗಾಯವನ್ನು ಒಣಗಲು ಬಿಟ್ಟು ನಮ್ಮ ಮಸ್ತಿಷ್ಕದಿಂದ ಮರೆಸಲು ಸಂಚು ಹೂಡಿದವರ ಷಡ್ಯಂತ್ರ ಇದೆ. ವಿವೇಕ್ ಅಗ್ನಿಹೋತ್ರಿಯವರ ಕಾಶ್ಮೀರಿ ಫೈಲ್ಸ್ ಸಿನೆಮಾ ಯಾಕೆ ಎಲ್ಲರೂ ನೋಡಬೇಕು ಎಂದರೆ ನೀವು ಇಲ್ಲಿ ತನಕ ಅಂದುಕೊಂಡ ಕಾಶ್ಮೀರದ ಕಥೆಗಳು ಏನೂ ಅಲ್ಲ ಎನ್ನುವುದು ನಿಮಗೆ ಗೊತ್ತಾಗಬೇಕು. ಅದನ್ನು ಅನುಭವಿಸಿದ ತಲೆಮಾರು ಅದನ್ನು ನಮ್ಮ ಜೊತೆ ಹೇಳಿಕೊಳ್ಳಲು ನಮ್ಮ ರಾಜಕೀಯ ವ್ಯವಸ್ಥೆ ಅವರನ್ನು ಬಿಟ್ಟಿಲ್ಲ. ನಮ್ಮ ಪಠ್ಯಪುಸ್ತಕದಲ್ಲಿ ಈ ವಿಷಯಗಳು ಎಲ್ಲಿಯೂ ಇಣುಕಿಲ್ಲ. ನಾವು ಯಾರನ್ನು ಚರಿತ್ರೆಯಲ್ಲಿ ಹೀರೋಗಳು ಎಂದು ಓದುತ್ತಿದ್ದೆವೋ ಅದು ಸಂಪೂರ್ಣ ಸುಳ್ಳು ಎಂದು ಈ ಸಿನೆಮಾ ನಿರೂಪಿಸಿದೆ.

ಇದರೊಂದಿಗೆ ಆರ್ಟಿಕಲ್ 370 ಎನ್ನುವುದು ಹೇಗೆ ನಮ್ಮ ಹಿಂದೂ ಪಂಡಿತರ ಪಾಲಿಗೆ ಮರಣಶಾಸನವಾಗಿತ್ತು ಎನ್ನುವುದನ್ನು ಕೂಡ ಈ ಸಿನೆಮಾ ಹೇಳಿದೆ. ಅದನ್ನು ಇಟ್ಟುಕೊಂಡೇ ಹೇಗೆ ಒಂದು ಸಮುದಾಯದವರು ಕಾಶ್ಮೀರವನ್ನು ತಮ್ಮ ಪಿತ್ರಾರ್ಜಿತ ಆಸ್ತಿಯಂತೆ ವರ್ತಿಸಿದರು ಎನ್ನುವುದನ್ನು ಈ ಸಿನೆಮಾ ತೋರಿಸಿದೆ. ಮೂಲ ಕಾಶ್ಮೀರಿಗಳನ್ನು ಹೇಗೆ ತಮ್ಮ ಉಟ್ಟಬಟ್ಟೆಯಲ್ಲಿಯೇ ಪ್ರಾಣಭಯದಿಂದ ನರಳುವಂತೆ ಮಾಡಲಾಯಿತು ಎಂದು ತೋರಿಸಲಾಗಿದೆ. ಆರ್ಟಿಕಲ್ 370 ತೆಗೆದು ಹಾಕುವಂತೆ ಅನುಪಮ್ ಖೇರ್ ಪಾತ್ರ ಅದರಲ್ಲಿ ಮಾಡುವ ಪ್ರಯತ್ನ ಮತ್ತು ವಿಫಲತೆಯನ್ನು ಮನಮುಟ್ಟುವಂತೆ ಚಿತ್ರಿಸಲಾಗಿದೆ. ಇದರಿಂದ ಆ ಕುಟುಂಬ ಹೇಗೆ ಅವಸಾನದತ್ತ ಸಾಗಿತು ಎಂದು ನೋಡುವಾಗಲೇ ಕಣ್ಣಲ್ಲಿ ನಮಗೆ ಗೊತ್ತಿಲ್ಲದೇ ನೀರು ಜಿನುಗುತ್ತದೆ. ಈ ಸಿನೆಮಾವನ್ನು ನೋಡಿದ ಹಿಂದೂ ಪಂಡಿತರ ಕುಟುಂಬದವರು ಕೂಡ ಸಿನೆಮಾ ಯಥಾವತ್ತಾಗಿ ಮೂಡಿಬಂದಿದೆ. ಇಷ್ಟು ನೈಜತೆಯನ್ನು ಹೇಗೆ ನಿರ್ದೇಶಕರು ಕಂಡುಹಿಡಿದರು ಎಂದು ಆಶ್ಚರ್ಯಚಕಿತರಾಗಿದ್ದಾರೆ. ವಿಷಯ ಇಷ್ಟೇ, ಸತ್ಯ ಕಾಶ್ಮೀರದಲ್ಲಿ ಎದ್ದು ಕಾಣುತ್ತಿತ್ತು. ಕೈ ಹಾಕುವ ಇಚ್ಚಾಶಕ್ತಿ ಯಾವ ಸಿನೆಮಾ ನಿರ್ದೇಶಕ, ನಿರ್ಮಾಪಕರಿಗೂ ಇರಲಿಲ್ಲ. ಸಂಶೋಧನೆ ಮಾಡುವ ಆಸಕ್ತಿ ಮೊದಲೇ ಇರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಧೈರ್ಯ ಇರಲಿಲ್ಲ. ಇನ್ನು ಕೊನೆಯದಾಗಿ ಕಾಶ್ಮೀರಿ ಪಂಡಿತರು ಎಷ್ಟೋ ದಶಕಗಳ ತನಕ ಅನುಭವಿಸಿದ್ದನ್ನು ಎರಡೂವರೆ ಗಂಟೆಯೊಳಗೆ ತೋರಿಸಲು ಆಗುವುದಿಲ್ಲ. ಏನಿದ್ದರೂ ಈ ಸಿನೆಮಾ ಆವತ್ತು ನಡೆದ ಕ್ರೂರತೆಯ ಹತ್ತು ಶೇಕಡಾ ಮಾತ್ರ. ನೀವು ಒಮ್ಮೆ ಸಿನೆಮಾ ನೋಡಬೇಕು. ಯಾಕೆಂದರೆ ಕಾಶ್ಮೀರಿ ಪಂಡಿತರನ್ನು ಓಡಿಸಲಾಯಿತು ಎಂದು ಮಾತ್ರ ನೀವು ಇಲ್ಲಿಯ ತನಕ ಓದಿರುತ್ತೀರಿ, ಆದರೆ ಸತ್ಯ ನಿಮ್ಮ ಹೃದಯದಲ್ಲಿಯೂ ಇರಬೇಕಲ್ಲ, ಯಾಕೆಂದರೆ ಮುಂದಿನ ಪೀಳಿಗೆಗೆ ಅದನ್ನು ನೀವು ದಾಟಿಸಬೇಕಲ್ಲ. ಹಾಗಂತ ಈ ಸಿನೆಮಾ ಯಾರ ವಿರುದ್ಧವೂ ಅಲ್ಲ, ನೀವು ಭಾರತೀಯರಾಗಿದ್ದರೆ ಈ ಸಿನೆಮಾ ನೋಡಲೇಬೇಕು!

0
Shares
  • Share On Facebook
  • Tweet It




Trending Now
ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
Hanumantha Kamath September 15, 2025
ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
Hanumantha Kamath September 15, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ
    • ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!
    • ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟಲು ಆಸೆ- ಕೈ ಶಾಸಕ ಬಿ.ಕೆ.ಸಂಗಮೇಶ್ವರ್
    • ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ರಾಜೀನಾಮೆ!
  • Popular Posts

    • 1
      ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • 2
      ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • 3
      ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • 4
      ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • 5
      ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ

  • Privacy Policy
  • Contact
© Tulunadu Infomedia.

Press enter/return to begin your search