ಕಾಶ್ಮೀರ್ ಫೈಲ್ಸ್ ಗೆಲುವಿನೊಂದಿಗೆ ಸತ್ಯ ಹೊರತರುವ ಸಿನೆಮಾಗಳ ಜಾತ್ರೆ ಶುರು!!
ಕಪಿಲ್ ಶರ್ಮಾ ಕಾಶ್ಮೀರ್ ಫೈಲ್ಸ್ ಸಿನೆಮಾವನ್ನು ತಮ್ಮ ಶೋನಲ್ಲಿ ಪ್ರಚಾರ ಮಾಡಲು ನಿರಾಕರಿಸಿದರು ಎನ್ನುವ ವಿಷಯದಿಂದ ಕಾಶ್ಮೀರ್ ಫೈಲ್ಸ್ ಸಿನೆಮಾಕ್ಕೆ ಹೊಸ ವೇಗ ಸಿಕ್ಕಿದ್ದು ನಿಜ. ಯಾವುದೇ ಸ್ಟಾರ್ ಇಲ್ಲದ ಕಾರಣ ಈ ಸಿನೆಮಾಕ್ಕೆ ಸ್ಲಾಟ್ ಕೊಡಲು ಸಾಧ್ಯವಿಲ್ಲ ಎಂದು ಕಪಿಲ್ ಶರ್ಮಾ ಹೇಳಿದರು ಎನ್ನುವ ಮಾತು ಹೊರ ಬಂತು. ಅದಕ್ಕಾಗಿ ಕಪಿಲ್ ಶರ್ಮಾ ಅವರನ್ನು ಅನೇಕರು ದೂಷಿಸಲು ಶುರು ಮಾಡಿದ್ದರು. ಒನ್ ಸೈಡೆಡ್ ಸ್ಟೋರಿ ನಂಬಬೇಡಿ ಎಂದು ಕಪಿಲ್ ಹೇಳಿದ್ದಾರೆ ಕೂಡ. ಆದರೆ ಸ್ಟಾರ್ ಗಳೇ ಇಲ್ಲದ ಎಷ್ಟೋ ಸಂಚಿಕೆಗಳನ್ನು ಕಪಿಲ್ ಶರ್ಮಾ ಮಾಡಿದ್ದಾರೆ. ಇಲ್ಲಿ ನಿರಾಕರಣೆಯ ಹಿಂದೆ ಕಪಿಲ್ ಶರ್ಮಾ ಅವರದ್ದೇ ನಿರ್ಧಾರ ಎಂದು ಹೇಳಲು ಸಾಧ್ಯವಿಲ್ಲ. ಯಾಕೆಂದರೆ ದಿ ಕಪಿಲ್ ಶರ್ಮಾ ಶೋದ ನಿರ್ಮಾಪಕ ಸಲ್ಮಾನ್ ಖಾನ್. ಇನ್ನು ಬೇರೆ ವಿಷಯ ಹೇಳಬೇಕಾಗಿಲ್ಲ ಬಿಡಿ. ಹಾಗಂತ ಸಲ್ಮಾನ್ ಖಾನ್ ತಮ್ಮದೇ ಸ್ವಂತ ನಿರ್ಧಾರದಿಂದ ಕಾಶ್ಮೀರ್ ಫೈಲ್ಸ್ ಪ್ರಚಾರಕ್ಕೆ ಕಪಿಲ್ ಶರ್ಮಾ ಮೂಲಕ ನಿರಾಕರಿಸಿದರು ಎಂದು ಮೇಲ್ನೋಟಕ್ಕೆ ಅನಿಸಿದರೂ ಬಾಲಿವುಡ್ ನಲ್ಲಿ ಇರುವ ಮಾಫಿಯಾ ಇದರ ಹಿಂದೆ ಕೆಲಸ ಮಾಡಿರುವುದು ಸ್ಪಷ್ಟ. ಹಿಂದೂಗಳ ಪರ ಇರುವ ರಾಷ್ಟ್ರೀಯವಾದದ ಕಥೆ ಹೊಂದಿದ ಇಂತಹ ಸಿನೆಮಾ ಬಂದಾಗ ಇದನ್ನು ಹೇಗೆಲ್ಲ ತಡೆಹಿಡಿಯಬಹುದು ಎನ್ನುವುದರ ಕುರಿತೇ ಮುಂಬೈಯಲ್ಲಿ ಅಂಡರ್ ಗ್ರೌಂಡ್ ಆಗಿ ಕೆಲಸ ಮಾಡುವ ತಂಡ ಇದೆ.
ಪ್ರಥಮವಾಗಿ ಸೆನ್ಸಾರ್ ಬೋರ್ಡಿನಲ್ಲಿಯೇ ಸಿನೆಮಾಕ್ಕೆ ಕಿರಿಕಿರಿ ಆಗುವಂತೆ ನೋಡಿಕೊಳ್ಳಲಾಗುತ್ತದೆ. ಅಂತಹ ವಿಷ್ನ ಸಂತೋಷಿಗಳ ತಂಡದವರು ನಂತರ ಸಿನೆಮಾ ವಿರುದ್ಧ ಕೇಸ್ ಹಾಕುತ್ತಾರೆ. ಅದರ ನಂತರವೂ ಸಿನೆಮಾ ಹೊರಗೆ ಬಂದರೆ ಅದಕ್ಕೆ ಥಿಯೇಟರ್ ಗಳು ಸಿಗದ ರೀತಿಯಲ್ಲಿ ಮಾಡುವುದು. ಒಂದು ವೇಳೆ ಸಿಕ್ಕರೂ ಅತ್ಯಂತ ಕಡಿಮೆ ಥಿಯೇಟರ್ ಗಳು ಸಿಗುವ ಹಾಗೆ ಮಾಡುವುದು, ಸಿಕ್ಕ ಥಿಯೇಟರ್ ಗಳಲ್ಲಿಯೂ ಆನ್ ಲೈನ್ ಬುಕ್ಕಿಂಗ್ ಮಾಡಲು ಹೋಗುವಾಗ ಅದು ಟಿಕೆಟ್ ಇಲ್ಲ ಎಂದು ತೋರಿಸುವಂತೆ ಮಾಡುವುದು, ಈ ಮೂಲಕ ಎಲ್ಲಾ ಕಡೆ ನಕರಾತ್ಮಕ ವಾತಾವರಣ ಮೂಡುವಂತೆ ಮಾಡುವುದು, ಹೊರಗೆ ಹೌಸ್ ಫುಲ್ ಬೋರ್ಡ್ ಒಳಗೆ ಥಿಯೇಟರ್ ಗೆ ಹೋದರೆ ಜನವೇ ಇರುವುದಿಲ್ಲ. ಈ ಮೂಲಕ ಸಿನೆಮಾ ಫ್ಲಾಪ್ ಆಗುವಂತೆ ಮಾಡುವುದು. ಇನ್ನು ಆ ಸಿನೆಮಾದ ಪೈರೆಸಿ ಹೊರಬರುವಂತೆ ಮಾಡುವುದು, ಯಾವುದೇ ಮುಖ್ಯ ವಾಹಿನಿಯ ಮಾಧ್ಯಮಗಳಲ್ಲಿ ಸಿನೆಮಾ ಚರ್ಚೆಯಾಗದಂತೆ ನೋಡಿಕೊಳ್ಳುವುದು, ಎಲ್ಲಿಯ ತನಕ ಅಂದರೆ ಸಿನೆಮಾದ ಪೋಸ್ಟರ್ ಕೂಡ ಥಿಯೇಟರ್ ಹೊರಗೆ ಇರದಂತೆ ನೋಡಿಕೊಂಡ ಉದಾಹರಣೆಗಳು ಇವೆ. ಎಲ್ಲಿಯೂ ಸಿನೆಮಾದ ಬಗ್ಗೆ ಚರ್ಚೆಯಾಗದಂತೆ ನೋಡುವ ಪ್ರಯತ್ನ ಮಾಡಿ ಕೊನೆಗೆ ನಿರ್ದೇಶಕ, ನಿರ್ಮಾಪಕ ತಲೆಯ ಮೇಲೆ ಕೈಹೊತ್ತು ಕುಳಿತುಕೊಳ್ಳುವುದು, ಇದೇ ಇಲ್ಲಿಯ ತನಕ ಆಗುತ್ತಿತ್ತು. ಇದೆಲ್ಲವನ್ನು ಎದುರಿಸಲಾಗದೇ ಕ್ರಿಯಾಶೀಲ ನಿರ್ದೇಶಕರು ನೆಲಕಚ್ಚುತ್ತಿದ್ದರು. ನಿರ್ಮಾಪಕರು ಹಣ ಹಾಕಲು ಮುಂದೆ ಬರುತ್ತಿರಲಿಲ್ಲ. ಇದರಿಂದ ಚರಿತ್ರೆಯ ವಾಸ್ತವಾಂಶ ಹೊರಗೆ ಬರದೇ ಎಲ್ಲವೂ ಹಾಗೆ ದಮನಿಸಲಾಗುತ್ತಿತ್ತು. ಬಾಲಿವುಡ್ ಮಾಫಿಯಾ ಅಷ್ಟು ಸ್ಟ್ರಾಂಗ್ ಆಗಿ ಇರುವುದರಿಂದಲೇ ಇಲ್ಲಿಯವರೆಗೆ ಅವರಿಗೆ ಬೇಕಾದ ಕಥೆಗಳೇ ಸಿನೆಮಾ ಆಗುತ್ತಿತ್ತು. ಅದಕ್ಕಾಗಿ ದಾವೂದ್ ಕೂಡ ಹಣ ಹಾಕುತ್ತಿದ್ದ. ಭೂಗತ ಲೋಕದ ಬೇರೆ ಬೇರೆ ವ್ಯಕ್ತಿಗಳು ಕೂಡ ಹಣ ಹಾಕುತ್ತಿದ್ದರು. ಇದರಿಂದಾಗಿ ಅವರಿಗೆ ಬೇಕಾದ ಹಾಗೆ ಸಿನೆಮಾ ಬರುತ್ತಿದ್ದವು. ಅವೇ ಜನರನ್ನೇ ಪ್ರಭಾವಿತಗೊಳಿಸುತ್ತಿದ್ದವು.
ಸಿನೆಮಾ ಯಾವತ್ತೂ ಪ್ರಭಾವಿ ಮಾಧ್ಯಮ. ಅದರಲ್ಲಿ ನೋಡಿದ ದೃಶ್ಯಗಳು ಕಥೆ, ಕಾದಂಬರಿಗಿಂತಲೂ ಒಂದು ಮುಷ್ಟಿ ಹೆಚ್ಚೆ ನಮ್ಮ ಮನಸ್ಸಿನಲ್ಲಿ ಸ್ಥಾಪಿಸಿಬಿಡುತ್ತವೆ. ಇದು ಪ್ರಧಾನಿ ನರೇಂದ್ರ ಮೋದಿಯವರಿಗೂ ಗೊತ್ತಿತ್ತು. ಅವರು ಪ್ರಧಾನಿಯಾದ ನಂತರ ಸಿನೆಮಾರಂಗದ ಪ್ರಮುಖರನ್ನು ಕರೆಸಿ ಎರಡೆರಡು ಬಾರಿ ಸಮಾಲೋಚನೆ ಮಾಡಿದ್ದಾರೆ. ಅವರಿಗೆ ಟೀಪಾರ್ಟಿ, ಡಿನ್ನರ್ ಎಲ್ಲಾ ಕೊಟ್ಟಿದ್ದಾರೆ. ಅದರಲ್ಲಿ ಅಮೀರ್ ಖಾನ್ ನಿಂದ ಕಪಿಲ್ ಶರ್ಮಾ ತನಕ ಎಲ್ಲರೂ ಇದ್ದರು. ಅದರ ಉದ್ದೇಶ ಇಷ್ಟೇ, ದೇಶದ ಮಣ್ಣಿನ ಇತಿಹಾಸವನ್ನು ಜನರಿಗೆ ತಲುಪಿಸುವಂತಹ ಸಿನೆಮಾ ಮಾಡಬೇಕು ಎಂದು ಅವರ ಮನಸ್ಸಿನಲ್ಲಿ ನಾಟುವ ಕೆಲಸ ಮೋದಿ ಮಾಡಿದ್ದಾರೆ. ಇಲ್ಲಿಯ ತನಕ ಇತಿಹಾಸದ ಮೇಲೆ ಸಿನೆಮಾಗಳು ಬಂದಿಲ್ಲ ಎಂದಲ್ಲ. ಆದರೆ ಸಿನೆಮಾಗಳಲ್ಲಿ ಬ್ಯಾಲೆನ್ಸ್ ಮಾಡುವಂತಹ ಚಿತ್ರಕಥೆಯನ್ನು ಅನಿವಾರ್ಯವಾಗಿ ತುರುಕಿಸಲಾಗುತ್ತದೆ. ಎಲ್ಲರೂ ಒಳ್ಳೆಯವರು ಅಥವಾ ಎಲ್ಲರೂ ಕೆಟ್ಟವರು ಎಂದು ಬಿಂಬಿಸುವ ಕೆಲಸ ನಡೆಯುತ್ತಿತ್ತು. ಆದರೆ ವಾಸ್ತವಿಕತೆ ಹಾಗಿರುವುದಿಲ್ಲ. ಒಂದು ವೇಳೆ ವಿವೇಕ್ ಅಗ್ನಿಹೋತ್ರಿ ಕೂಡ ಕಾಶ್ಮೀರ್ ಫೈಲ್ಸ್ ಮಾಡುವಾಗ ಯಾರದ್ದೂ ತಪ್ಪಿಲ್ಲ ಎನ್ನುವ ಅರ್ಥ ಬರುವಂತೆ ಸಿನೆಮಾ ಮಾಡಿದ್ದರೆ ಜನ ಈ ಪರಿ ನುಗ್ಗಿ ಸಿನೆಮಾ ನೋಡುವ ಕ್ರೇಜ್ ಆಗುತ್ತಿರಲಿಲ್ಲ. ಆದರೆ ಅಗ್ನಿಹೋತ್ರಿ ನಮ್ಮ ಈಗಿನ ಪೀಳಿಗೆಗೆ ಸಂಶೋಧಕರು ಹೇಳದೆ ಮುಚ್ಚಿಟ್ಟ ಕಥೆಯನ್ನು ಹೇಳಿದ್ದಾರೆ. ಆ ಧೈರ್ಯ ಅವರಿಗೆ ಬಂದ ನಂತರ ಸಿನೆಮಾ ಮಾಡಿದ್ದಾರೆ. ಮೂಲಭೂತ ಸ್ಥಾಪಿತ ಹಿತಾಸಕ್ತಿಗಳ ಷಡ್ಯಂತ್ರದ ನಂತರವೂ ಗೆದ್ದಿದ್ದಾರೆ. ಇದು ಭಾರತದ ಸಿನೆಮಾ ಪ್ರೇಮಿಗಳ ವಿಜಯವೂ ಹೌದು!
Leave A Reply