• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಚಡ್ಡಿಯ ಮಹತ್ವ ಅರಿತವರಿಗೆ ಗೊತ್ತು!!

Hanumantha Kamath Posted On June 7, 2022


  • Share On Facebook
  • Tweet It

ಚಡ್ಡಿಯನ್ನು ಸುಡ್ತೀವಿ ಅಭಿಯಾನವನ್ನು ಕಾಂಗ್ರೆಸ್ ಮತ್ತು ಅದರ ಅಂಗ ಸಂಘಟನೆಗಳು ಬಹಳ ಖುಷಿಯಿಂದ ಮಾಡುತ್ತೀವೆ. ಚುನಾವಣಾ ವರ್ಷದಲ್ಲಿ ವಿಪಕ್ಷಗಳು ಯಾವ ಸಣ್ಣ ವಿವಾದವನ್ನು ಕೂಡ ಕೈಯಿಂದ ಬಿಡಲು ಹೋಗಲ್ಲ. ಇದರ ಮೈಲೇಜ್ ತೆಗೆದುಕೊಳ್ಳಲು ಕಾಂಗ್ರೆಸ್ ಹೋಗುತ್ತಿದ್ದಂತೆ ಅದರ ವಿರುದ್ಧ ಸಹಜವಾಗಿ ಭಾರತೀಯ ಜನತಾ ಪಾರ್ಟಿಯ ಮುಖಂಡರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ನಮ್ಮದು ಈಗ ಚೆಡ್ಡಿ ಅಲ್ಲ, ಪ್ಯಾಂಟ್. ನಾವು ಸಮವಸ್ತ್ರ ಬದಲಾಯಿಸಿ ಸುಮಾರು ಕಾಲವಾಯಿತು ಎನ್ನುತ್ತಿದ್ದಾರೆ. ಅದರೊಂದಿಗೆ ಒಬ್ಬ ಬಿಜೆಪಿ ವಕ್ತಾರರು “ಕಾಂಗ್ರೆಸ್ಸಿನ ಯುವ ಅಧ್ಯಕ್ಷನಿಗೆ ಸರಿಯಾಗಿ ಕನ್ನಡ ಉಚ್ಚಾರಣೆ ಬರಲ್ಲ, ಅವರೇನು ಚಡ್ಡಿ ಸುಡೋದು, ಬೇಕಾದರೆ ವಿಧಾನಸಭೆಯಲ್ಲಿ, ವಿಧಾನಪರಿಷತ್ ನಲ್ಲಿ ಮಾತನಾಡಲಿ” ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ಸಿಗೆ ಚಡ್ಡಿ ಸುಡುವುದರಿಂದ ರಾಜಕೀಯವಾಗಿ ಮೈಲೇಜ್ ಸಿಗುತ್ತಾ, ಇಲ್ವಾ ಗೊತ್ತಿಲ್ಲ. ಪ್ರಪಂಚದ ಅತೀ ದೊಡ್ಡ ಸಂಘಟನೆಯಾಗಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಒಂದು ಕಾಲದ ಹೆಗ್ಗುರುತು ಎಂದರೆ ಅದು ಸಮವಸ್ತ್ರದ ಭಾಗವಾಗಿದ್ದ ಚಡ್ಡಿ. ಅದನ್ನು ಸಾಂಕೇತಿಕವಾಗಿ ಸುಡುವ ಮೂಲಕ ಕಾಂಗ್ರೆಸ್ ಆ ಮನಸ್ಸಿನವರು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯಲ್ಲಿ ಇರುವುದಕ್ಕೆ ತೀವ್ರ ಪ್ರತಿರೋಧವನ್ನು ಒಡ್ಡಿದೆ. ಜನರಿಗೆ ಸಂದೇಶ ಹೋಗಿದೆ. ಇನ್ನು ಒಬ್ಬನಿಗೆ ಕನ್ನಡ ಸರಿಯಾಗಿ ಬರುತ್ತೋ, ಇಲ್ವೋ ಅವನ ಭಾವನೆಗಳು ಅರ್ಥವಾದರೆ ಅಷ್ಟೇ ಸಾಕು. ಸಂಘ ಪರಿವಾರದ ಗರಡಿಯಲ್ಲಿ ಪಳಗಿದವರಿಗೆ ವಾಕ್ ಚಾತುರ್ಯ ಸಹಜವಾಗಿ ಮೂಡಿಬರುತ್ತದೆ.

ಕಾಂಗ್ರೆಸ್ ಮುಖಂಡರಿಗೆ ಈ ವಿಷಯದಲ್ಲಿ ಒಂದಿಷ್ಟು ತರಬೇತಿಯ ಅಗತ್ಯ ಇದೆ. ಹಾಗಂತ ರಾಜಕೀಯವನ್ನು ಹತ್ತಿರದಿಂದ ಬಲ್ಲವರಿಗೆ ಈ ಚಡ್ಡಿ ಸುಡುವುದು, ಪ್ರತಿಭಟನೆ, ವಿರೋಧ ಎಲ್ಲವೂ ಗೊತ್ತಾಗುತ್ತದೆ. ಆದರೆ ಈ ವಿಷಯ ತಿಳಿಯದವರಿಗೆ, ಮಹಿಳೆಯರಿಗೆ ಮತ್ತು ಯಾವುದರಲ್ಲಿಯೂ ಇಲ್ಲದ ಮತದಾರರಿಗೆ ಕಾಂಗ್ರೆಸ್ಸಿನ ಚಡ್ಡಿ ಸುಡುತ್ತೇವೆ ಎನ್ನುವ ಹೇಳಿಕೆಗಳು ಅರ್ಥವಾಗುವುದಿಲ್ಲ. ಏನೋ ಅಸಹ್ಯ ಮಾತನಾಡುತ್ತಿದ್ದಾರೆ ಎಂದೇ ಅಂದುಕೊಂಡಿದ್ದಾರೆ. ಒಂದು ಪ್ರತಿಭಟನೆ ಹೇಗಿರಬೇಕಾದರೆ ಅದರಿಂದ ಹೋಗುವ ಸಂದೇಶದಲ್ಲಿ ಯಾವುದೇ ಅಸಹ್ಯ, ಆಶ್ಲೀಲತೆ ಇರಬಾರದು. ಯಾಕೆಂದರೆ ಎನ್ ಎಸ್ ಯುಐ ನಲ್ಲಿಯೂ ಯುವತಿಯರು ಇದ್ದಾರೆ. ಕಾಂಗ್ರೆಸ್ಸಿನಲ್ಲಿಯೂ ಮಹಿಳೆಯರು ಇದ್ದಾರೆ. ಇನ್ನು ಸಂಘದವರು ಮಾತ್ರ ಚೆಡ್ಡಿ ಹಾಕುವುದಲ್ಲ. ಎಲ್ಲರೂ ಹಾಕುತ್ತಾರೆ. ಇದನ್ನೆಲ್ಲ ನೋಡಿ ಕಾಂಗ್ರೆಸ್ಸಿಗರು ಪ್ರತಿಭಟನಾ ಸ್ವರೂಪವನ್ನು ರೂಪಿಸಬೇಕು. ಅಷ್ಟಕ್ಕೂ ಸಂಘದ ಚಡ್ಡಿಯನ್ನು ವ್ಯಂಗ್ಯವಾಗಿ ನೋಡುವ ಅಗತ್ಯ ಇಲ್ಲ. ಯಾಕೆಂದರೆ ಪ್ಯಾಂಟ್ ವ್ಯಾಪಕವಾಗಿ ಪ್ರಚಾರದಲ್ಲಿ ಇಲ್ಲದ ಕಾಲದಲ್ಲಿ ಹುಟ್ಟಿದ್ದ ಸಂಘದಲ್ಲಿ ಚಡ್ಡಿಯ ಸಮವಸ್ತ್ರ ಅನಿವಾರ್ಯವಾಗಿತ್ತು. ಶಾಖೆಗಳಲ್ಲಿ ವ್ಯಾಯಾಮ ಮಾಡಲು, ಕಸರತ್ತು ಮಾಡಲು, ಕಬಡ್ಡಿ ಆಡಲು ಹೀಗೆ ಚಡ್ಡಿ ಧರಿಸಿದ್ದರೆ ಅನುಕೂಲವಾಗುತ್ತಿತ್ತು. ಹಾಗಂತ ಅದನ್ನು ಆವತ್ತು ವ್ಯಂಗ್ಯವಾಗಿ ಯಾರೂ ನೋಡುತ್ತಿರಲಿಲ್ಲ. ಈಗ ಕಾಲ ಬದಲಾಗಿದೆ. ಸಮಾಜ ಕೂಡ ಅನುಕೂಲಸ್ಥವಾಗಿದೆ. ಸಂಘ ಕೂಡ ಕಾಲಕ್ಕೆ ತಕ್ಕಂತೆ ಚಡ್ಡಿಯಿಂದ ಪ್ಯಾಂಟಿಗೆ ಬದಲಾಗಿದೆ. ಆದರೆ ರಾಜಕೀಯ ವಂಶಗಳಿಂದ ಬಂದ ಅನೇಕ ಕಾಂಗ್ರೆಸ್ಸಿಗರ ಮಕ್ಕಳಿಗೆ ಚಡ್ಡಿ ಎನ್ನುವುದು ವ್ಯಂಗ್ಯವಾಗಿಯೇ ಕಾಣುತ್ತದೆ. ಅದಕ್ಕಾಗಿ ಚಡ್ಡಿ ಸುಡುತ್ತೇವೆ ಅನ್ನುತ್ತಿದ್ದಾರೆ.

ಅಷ್ಟಕ್ಕೂ ಕಾಂಗ್ರೆಸ್ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿರುದ್ಧ ಪ್ರತಿಭಟನೆ ಮಾಡುವ ವಿಷಯವೇ ಇಲ್ಲಿ ಹಾಸ್ಯಾಸ್ಪದ. ಯಾಕೆಂದರೆ ಕಾಂಗ್ರೆಸ್ಸಿಗೆ ಪಠ್ಯಪುಸ್ತಕದ ವಿಷಯದಲ್ಲಿ ಏನೆಲ್ಲಾ ಆಕ್ಷೇಪ ಇದೆಯೋ ಅದನ್ನೆಲ್ಲಾ ಸಂಘ ಹೇಳಿ ಮಾಡಿಸಿದ್ದು ಎಂದು ಅಂದುಕೊಳ್ಳುವುದೇ ರಾಜಕೀಯ ದಿವಾಳಿತನಕ್ಕೆ ಸಾಕ್ಷಿ. ಇನ್ನೊಂದು ವಿಷಯ ಏನೆಂದರೆ ಸಂಘ ಯಾವತ್ತಿಗೂ ಅವರನ್ನು ವಿರೋಧಿಸಿ, ಇವರನ್ನು ವಿರೋಧಿಸಿ ಎಂದು ಹೇಳುವುದಿಲ್ಲ. ಅದರಲ್ಲಿಯೂ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಎಲ್ಲೆಲ್ಲಿ ಮಸೀದಿ ಇದೆಯೋ ಅಲ್ಲೆಲ್ಲಾ ಶಿವಲಿಂಗವನ್ನು ಹುಡುಕುವ ಪ್ರಯತ್ನ ಬೇಡಾ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ನಾವು ಅಯೋಧ್ಯೆಯ ನಂತರ ಅಂತಹ ವಿವಾದಗಳಲ್ಲಿ ಕೈ ಹಾಕುವುದಿಲ್ಲ ಎಂದು ಕೂಡ ಹೇಳಿದ್ದಾರೆ.

ಹಾಗಿರುವಾಗ ಸುಮ್ಮನೆ ಸಂಘವನ್ನು ಇದರಲ್ಲಿ ಎಳೆಯುವುದರಿಂದ ಸಾಧಿಸುವುದು ಒಂದೇ. ಅದೇನೆಂದರೆ ದೆಹಲಿಯ ಜನಪಥ್ 10 ರಲ್ಲಿ ಕುಳಿತುಕೊಂಡಿರುವ ಗಾಂಧಿ ಕುಟುಂಬಕ್ಕೆ ಹತ್ತಿರವಾಗುವುದು. ಕಾಂಗ್ರೆಸ್ಸಿನ ದೆಹಲಿಯ ದೊರೆಗಳಿಗೆ ಗೊತ್ತಿರುವುದು ಆರ್ ಎಸ್ ಎಸ್ ಮಾತ್ರ. ಅದರಿಂದಲೇ ನಮಗೆ ಸೋಲಾಗುತ್ತಿದೆ ಎನ್ನುವ ಅಂದಾಜು ಅವರದ್ದು. ಹಾಗಂತ ಸಂಘ ಯಾವತ್ತೂ ಯಾರಿಗೆ ಮತ ಹಾಕಬೇಕು ಎಂದು ಹೇಳುವುದಿಲ್ಲ. ಹೇಳಿದ ಒಂದೇ ಒಂದು ಉದಾಹರಣೆ ಇಲ್ಲ. ಇನ್ನು ನಿತ್ಯ ಬೆಳಿಗ್ಗೆ ಎದ್ದ ಕೂಡಲೇ ಬಿಜೆಪಿ ನಾಯಕರು ಸಂಘದವರಿಗೆ ಫೋನ್ ಮಾಡಿ ಇವತ್ತು ಏನು ಮಾಡಬೇಕು ಎಂದು ಕೇಳುವುದಿಲ್ಲ. ಆದರೆ ಸೋಮವಾರ ಬೆಂಗಳೂರಿನ ಕೇಶವಶಿಲ್ಪಾದಲ್ಲಿ ಶಿಕ್ಷಣ ಸಚಿವರು, ಸಚಿವರು, ಸಂಸದರು, ಕೆಲವು ಶಾಸಕರೊಂದಿಗೆ ರೋಹಿತ್ ಚಕ್ರತೀರ್ಥ ಅವರನ್ನು ಮುಂದಿಟ್ಟುಕೊಂಡು ಸಂಘದ ಮುಖಂಡರ ಜೊತೆ ಸಭೆ ನಡೆಸಲಾಗಿದೆ. ಈ ಒಟ್ಟು ವಿವಾದದ ಬಗ್ಗೆ ಶಿಕ್ಷಣ ಸಚಿವರು ಸಂಘದ ಪ್ರಮುಖರಿಗೆ ವರದಿ ನೀಡಿದ್ದಾರೆ. ಇದು ಈಗ ಕಾಂಗ್ರೆಸ್ಸಿಗೆ ಮಾತನಾಡಲು ಇನ್ನೊಂದು ಅವಕಾಶ ನೀಡಿದಂತಾಗಿದೆ. ಸಂಘದ ಕಚೇರಿಯಲ್ಲಿ ಸಭೆ ಮಾಡುವ ಅಗತ್ಯ ಏನಿದೆ ಎಂದು ಕಾಂಗ್ರೆಸ್ಸಿಗರು ಕೇಳಬಹುದು. ಒಟ್ಟಿನಲ್ಲಿ ಮೊಗಲರನ್ನು ಕಿತ್ತು ನಮ್ಮ ದೊರೆಗಳನ್ನು ಸೇರಿಸುವ ಪ್ರಕ್ರಿಯೆ ಸೈಲೆಂಟಾಗಿ ಆಗಬಾರದು ಎನ್ನುವ ಆಶಯ ಬಹುತೇಕ ಈಡೇರಿದೆ!!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search