ಬೊಮ್ಮಾಯಿ ಕಣ್ಣು ಮುಚ್ಚಿ ಕೊಟ್ಟ ಮುಸ್ಲಿಂ ಕಾಲೇಜು ಪ್ರಪಂಚ ನೋಡಿತು!!
ಮುಸ್ಲಿಮರಿಗೆ ಪ್ರತ್ಯೇಕ ಕಾಲೇಜುಗಳನ್ನು ಸ್ಥಾಪಿಸುವ ಯಾವ ಪ್ರಸ್ತಾಪವೂ ನಮ್ಮ ಸರಕಾರದ ಮುಂದೆ ಇಲ್ಲ ಎಂದು ಬಸವರು ಹೇಳುತ್ತಿದ್ದಾರೆ. ಅವರ ಹಿಂದೆನೆ ಜೊಲ್ಲೆ ಕೂಡ ಅದೇ ರಾಗವನ್ನು ಹಾಡುತ್ತಿದ್ದಾರೆ. ಇವರ ಬಳಿ ಯಾವ ಪ್ರಸ್ತಾಪವೂ ಇಲ್ಲ ಎನ್ನುವುದು ನಿಜ. ಯಾಕೆಂದರೆ ಪ್ರಸ್ತಾಪ ಸಲ್ಲಿಸಿ ಅದನ್ನು ಓಕೆ ಎಂದು ಆಗಿ ಅಲ್ಪಸಂಖ್ಯಾತರ ಕಲ್ಯಾಣ, ಹಜ್, ವಕ್ಫ್ ಇಲಾಖೆಯ ಉಪ ಕಾರ್ಯದರ್ಶಿ ಸಹಿ ಕೂಡ ಹಾಕಿ ಆಗಿದೆ. ಆದ್ದರಿಂದ ಪ್ರಸ್ತಾಪ ಈಗ ಇಲ್ಲ. ಯಾಕೆಂದರೆ ಇದೇ ವರ್ಷದ ಏಪ್ರಿಲ್ 19 ರಂದು ಸರಕಾರದಿಂದ ಸಹಿ ಹಾಕಿ ಮುಗಿದಿರುವುದರಿಂದ ಇನ್ನು ಪ್ರಸ್ತಾಪದ ಅಗತ್ಯ ಇಲ್ಲ. ಹೊಸ ಕಾಲೇಜುಗಳನ್ನು ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆ ಎಂದು ಕೂಡ ನಾಮಕರಣ ಮಾಡುವ ಕೆಲಸವೂ ನಡೆದಿದೆ. ಇದಕ್ಕೆ ಸಿಬಿಎಸ್ ಇ ಮಾನ್ಯತೆ ಪಡೆಯಲು ಆದೇಶಿಸಲಾಗಿರುತ್ತದೆ. ಇಂತಹ ಕಾಲೇಜುಗಳು ಬೆಂಗಳೂರು ಗ್ರಾಮಾಂತರ, ಚಾಮರಾಜ ನಗರ, ಚಿಕ್ಕಮಗಳೂರು, ದಾವಣಗೆರೆ, ಧಾರವಾಡ, ಗದಗ, ಕೊಡಗು, ಕೋಲಾರ, ಉತ್ತರ ಕನ್ನಡ, ವಿಜಯನಗರದಲ್ಲಿ ನಿರ್ಮಾಣವಾಗಲಿವೆ. ಒಟ್ಟು ಹತ್ತು ಕಡೆ ಇಂತಹ ಕಾಲೇಜುಗಳನ್ನು ನಿರ್ಮಾಣ ಮಾಡಲು ರೂಪುರೇಶೆ ಕೂಡ ಹಾಕಲಾಗಿದೆ. ಈ ಕಾಲೇಜುಗಳನ್ನು ಉನ್ನತೀಕರಿಸಲು ಅಲ್ಲಿ ಬೇಕಾದ ಸೌಲಭ್ಯ, ಕಂಪ್ಯೂಟರ್ಸ್, ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡುವ ಬಗ್ಗೆ ಸೂಚನೆ ನೀಡಲಾಗಿದೆ. ಇದರ ಅರ್ಥ ಎಲ್ಲವೂ ಮುಗಿದಿದೆ. ಇನ್ನೇನಿದ್ದರೂ ಕಾಲೇಜು ಶುರುವಾಗುವುದು ಮಾತ್ರ. ಅದು ಬಿಡಿ. ಅದು ಚುನಾವಣೆಯ ಮೊದಲು ಆಗುವುದಿಲ್ಲ. ಆದರೆ ಭಾರತೀಯ ಜನತಾ ಪಾರ್ಟಿಯ ಸರಕಾರ ಯಾವ ಉದ್ದೇಶಕ್ಕೆ ಬಂದಿತೋ ಆ ಸಿದ್ಧಾಂತಕ್ಕೆ ಅನುಸಾರವಾಗಿ ನಡೆಯಬೇಕು. ಆದರೆ ಅದನ್ನು ಬಿಟ್ಟು ನಮ್ಮೆಲ್ಲರ ಎದುರಿಗೆ ಹಿಜಾಬ್ ಹಾಕಿ ತರಗತಿಯ ಒಳಗೆ ಪಾಠ ಕೇಳಲು ಬಿಡುವುದಿಲ್ಲ ಎಂದು ಹೇಳುವುದು, ಹಿಂದಿನಿಂದ ಮುಸ್ಲಿಂ ವಿದ್ಯಾರ್ಥಿನಿಯರಿಗಾಗಿ ಪ್ರತ್ಯೇಕ ಕಾಲೇಜುಗಳನ್ನು ಸ್ಥಾಪಿಸುವುದು ನಿಜಕ್ಕೂ ವಿಶ್ವಾಸದ್ರೋಹವಲ್ಲದೇ ಮತ್ತೇನು?
ಈಗ ಈ ಕಾಲೇಜುಗಳು ಮುಸ್ಲಿಮರಿಗೆ ಮಾತ್ರ ಅಲ್ಲ, ಅಲ್ಪಸಂಖ್ಯಾತರಿಗೆ ಎಂದು ವಕ್ಫ್ ಇಲಾಖೆ ಮತ್ತು ವಕ್ಫ್ ಬೋರ್ಡಿನವರು ಹೇಳಬಹುದು. ಆದರೆ ಈ ದೇಶದಲ್ಲಿ ಅದರಲ್ಲಿಯೂ ನಮ್ಮ ರಾಜ್ಯದಲ್ಲಿ ಅಲ್ಪಸಂಖ್ಯಾತರಿಗೆ ಯಾವುದಾದರೂ ಯೋಜನೆಯ ಬಗ್ಗೆ ಘೋಷಣೆ ಆಗಿ ಅದನ್ನು ಎಷ್ಟು ಜನ ತೆಗೆದುಕೊಂಡಿದ್ದಾರೆ ಎಂದು ಪರಿಶೀಲಿಸಿದಾಗ ತೆಗೆದುಕೊಂಡವರಲ್ಲಿ 99 ಶೇಕಡಾ ಮುಸ್ಲಿಮರು. ಈ ವಿಷಯ ಎಂದಲ್ಲ, ಸರಕಾರದ ಯಾವುದೇ ಯೋಜನೆಗಳನ್ನು ಅದು ಎಂತದ್ದೇ ಇರಲಿ, ಅದರ ಹೆಚ್ಚು ಫಲಾನುಭವಿಗಳು ಯಾರು ಎಂದು ನೋಡಿದರೆ ಅದು ನಿಸ್ಸಂಶಯವಾಗಿ ಮುಸ್ಲಿಮರೇ ಆಗಿದ್ದಾರೆ. ಇಲ್ಲಿ ಕೂಡ ಹಾಗೆ. ಸರಕಾರದ ಹಣ ಎಂದ ಮೇಲೆ ಅದನ್ನು ಒಂದು ನಿರ್ದಿಷ್ಟ ಸಮುದಾಯದ ಏಳಿಗೆಗೆ ಬಳಸಿದರೆ ಅದು ಜನರ ನಂಬಿಕೆಗೆ ಮಾಡುವ ದ್ರೋಹ ಆಗುತ್ತದೆ. ಅಷ್ಟಕ್ಕೂ ಸರಕಾರಕ್ಕೆ ಮುಸ್ಲಿಮರ ಮೇಲೆ ಅಷ್ಟು ಪ್ರೀತಿ ಇದ್ದರೆ ಅವರದ್ದೇ ಸಮುದಾಯದ ಶ್ರೀಮಂತರಿಗೆ ಅಂತಹ ಕಾಲೇಜುಗಳನ್ನು ಕಟ್ಟಲು ವಿನಂತಿಸಲಿ. ಅದಕ್ಕೆ ಸರಕಾರದ ಹಣವನ್ನು ವ್ಯರ್ಥ ಮಾಡುವುದು ಬೇಡಾ.
ಇನ್ನು ಸರಕಾರ ಒಂದು ವೇಳೆ ವಕ್ಫ್ ಇಲಾಖೆಯಿಂದ ಹೀಗೆ 25 ಕೋಟಿ ರೂಪಾಯಿಗಳನ್ನು ಅಲ್ಪಸಂಖ್ಯಾತ ವಿದ್ಯಾರ್ಥಿನಿಯರಿಗಾಗಿ ಕಾಲೇಜು ಕಟ್ಟುವುದಾದರೆ ಭವಿಷ್ಯದಲ್ಲಿ ರಾಜ್ಯ ಸರಕಾರ ಬ್ರಾಹ್ಮಣ ಪರಿಷತ್ ಗೆ ಅನುದಾನ ನೀಡಿ ಬ್ರಾಹ್ಮಣರಿಗಾಗಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಬೇಕು. ಹಿಂದೂ ಯುವತಿಯರಿಗಾಗಿ ಪ್ರತ್ಯೇಕ ಕಾಲೇಜುಗಳನ್ನು ಕಟ್ಟಬೇಕು. ಅಲ್ಲಿ ವೇದ, ಪಾರಾಯಣ, ಸಂಸ್ಕೃತ, ಉಪನಿಷತ್ತುಗಳನ್ನು ಕಲಿಸುವಂತಾಗಲಿ. ಇನ್ನು ಹಿಂದೂಗಳಿಗಾಗಿ ಮಾತ್ರ ಕೌಶಲ್ಯ ಕೇಂದ್ರಗಳನ್ನು ಕಟ್ಟಲಿ. ಅದಕ್ಕೆ ಹಿಂದೂ ಶ್ರೇಷ್ಟರ ಹೆಸರುಗಳನ್ನು ಇಡಲಿ. ಯಾಕೆಂದರೆ ಯಾವ ಸಮುದಾಯದ ವಿದ್ಯಾರ್ಥಿನಿಯರು ಈ ರಾಜ್ಯದ ಆಡಳಿತ ನಡೆಸುವ ಸರಕಾರದ ಮಾತನ್ನು ಕೇಳುವುದಿಲ್ಲವೋ ಅವರಿಗಾಗಿ ನಮ್ಮ ತೆರಿಗೆಯ ಹಣವನ್ನು ನೀಡುವುದಾದರೂ ಹೇಗೆ? ಅದಕ್ಕೆ ಅವರು ಅರ್ಹರೇ ಎಂದು ಕೂಡ ನೋಡಬೇಕಾಗುತ್ತದೆ. ಯಾವ ಮುಸ್ಲಿಂ ವಿದ್ಯಾರ್ಥಿನಿ ಸರಕಾರದ ನಿಯಮವನ್ನು ಒಪ್ಪಿ ಹಿಜಾಬ್ ತೆಗೆದು ಕ್ಲಾಸಿನೊಳಗೆ ಪಾಠ ಕೇಳುತ್ತಾಳೋ ಅವಳಿಗೆ ಇಲ್ಲಿ ಬೇಕಾದಷ್ಟು ವ್ಯವಸ್ಥೆ ಇದೆ. ಆದರೆ ನಾವು ನಮ್ಮದೇ ದಾರಿ ಹಿಡಿಯುತ್ತೇವೆ ಎಂದು ಹಟ ಮಾಡಿ ಯಾರದ್ದೋ ಕುಮ್ಮಕ್ಕಿನಿಂದ ಸುಪ್ರೀಂಕೋರ್ಟ್ ತನಕ ಹೋಗಿ ನಮ್ಮ ಸಮಯ, ಶ್ರಮ ಮತ್ತು ಹಣವನ್ನು ಪೋಲು ಮಾಡಿದ ವಿದ್ಯಾರ್ಥಿನಿಯರಿಗಾಗಿ ಈ ದೇಶದ ಜನ ಯಾಕೆ ಹಣ ಕೊಡಬೇಕು. ನಮಗೆ ಬೇರೆ ಕೆಲಸವಿಲ್ಲವೇ? ಈ ದೇಶವನ್ನು ತುಂಡು ಮಾಡಲು ಹೊರಟಿರುವವರಿಗೆ ಇದೊಂದು ರೀತಿಯಲ್ಲಿ ರೆಡ್ ಕಾರ್ಪೆಟ್ ಹಾಸಿದಂತೆ ಆಗಿಲ್ಲವೇ? ಒಟ್ಟಿನಲ್ಲಿ ಕಣ್ಣು ಮುಚ್ಚಿ ಹಾಲು ಕುಡಿದರೆ ಯಾರಿಗೂ ಗೊತ್ತಾಗಲ್ಲ ಎಂದು ಅಂದುಕೊಂಡಿರುವುದು ಬೆಕ್ಕು, ಬೊಮ್ಮಾಯಿ ಅಲ್ಲ ಎಂದು ಜನರಿಗೆ ಗೊತ್ತಾಯಿತು!!
Leave A Reply