• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ವೇದವ್ಯಾಸ ಕಾಮತ್ ಮುಂದಿನ ಬಾರಿ ಗೆಲ್ಲಬೇಕಿದೆ!!

Hanumantha Kamath Posted On April 18, 2023
0


0
Shares
  • Share On Facebook
  • Tweet It

ಮಂಗಳೂರು ನಗರ ದಕ್ಷಿಣದಲ್ಲಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿ ವೇದವ್ಯಾಸ ಕಾಮತ್ ನಾಮಪತ್ರ ಸಲ್ಲಿಸಿದ್ದಾರೆ. ಸೋಮವಾರ ಬೆಳಿಗ್ಗೆಯ ಬಿರುಬೇಸಿಗೆಯಲ್ಲಿಯೂ ಸಾವಿರಾರು ನಾಗರಿಕರು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಆಗಮಿಸಿ ಪಾದಯಾತ್ರೆಯಲ್ಲಿ ಭಾಗವಹಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಟಿಕೆಟ್ ಗ್ಯಾರಂಟಿ ಇದ್ದ ಶಾಸಕರ ಪೈಕಿ ವೇದವ್ಯಾಸ ಕಾಮತ್ ಪ್ರಮುಖ ಹೆಸರು. ಯಾವುದೇ ಕ್ವಾಂಟ್ರವಸಿಯಲ್ಲಿ ಇಲ್ಲದೇ ಐದು ವರ್ಷಗಳನ್ನು ಯಶಸ್ವಿಯಾಗಿ ಕಳೆದಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆಯಿಂದ ಮತ್ತು ಕೇಂದ್ರ, ರಾಜ್ಯ ಸರಕಾರಗಳಿಂದ ಸಾವಿರಾರು ಕೋಟಿ ರೂಪಾಯಿ ಅನುದಾನ ಬಂದಿರುವುದರಿಂದ ಸಹಜವಾಗಿ ಅಭಿವೃದ್ಧಿಗೆ ಮಂಗಳೂರು ನಗರ ದಕ್ಷಿಣ ಸಜ್ಜಾಗಿದೆ. ಕೊರೊನಾ ಕಾರಣ ಮತ್ತು ನಿರ್ಮಾಣ ಕಾಮಗಾರಿಯನ್ನು ಮಾಡುವವರು ವಲಸೆ ಹೋಗಿ ಮತ್ತೆ ಹಿಂದಿರುಗದೇ ಇದ್ದ ಕಾರಣದಿಂದ ಒಂದಿಷ್ಟು ಕಾಮಗಾರಿಗಳು ಮುಂದಿನ ಅವಧಿಗೆ ಮುಂದೂಡಲ್ಪಟ್ಟಿದೆ. ಅದು ಬಿಟ್ಟರೆ ಹೆಚ್ಚಿನ ಕಾಮಗಾರಿಗಳು ಅಂತಿಮ ರೂಪ ಪಡೆದುಕೊಂಡಿವೆ. ನಗರದ ಮತದಾರರು ಸಾಮಾನ್ಯವಾಗಿ ಜನಪ್ರತಿನಿಧಿಗಳ ವಿಷಯದಲ್ಲಿ ಅಷ್ಟು ಸುಲಭವಾಗಿ ಒಲವನ್ನು ಬೆಳೆಸಿಕೊಂಡಿರುವುದಿಲ್ಲ. ಆ ವಿಷಯದಲ್ಲಿ ಗ್ರಾಮೀಣ ಮತದಾರರು ಯಾವತ್ತೂ ಪ್ರೀತಿ ತೋರುವುದರಲ್ಲಿ ಒಂದು ಹೆಜ್ಜೆ ಮುಂದು. ಪಕ್ಕಾ ನಗರ ಪ್ರದೇಶವನ್ನು ಮಾತ್ರ ಹೊಂದಿರುವ ಮಂಗಳೂರು ನಗರ ದಕ್ಷಿಣದಲ್ಲಿ ನೀವು ಎಷ್ಟೇ ಕೆಲಸಕಾರ್ಯ ಮಾಡಿ ಮತದಾರ ಕೊನೆಗೆ ಇಷ್ಟೇನಾ ಎನ್ನುತ್ತಾನೆ. ಅದೇ ಗ್ರಾಮೀಣ ಪ್ರದೇಶಗಳಲ್ಲಿ ಒಂದು ಚಿಕ್ಕ ಕಾಲುವೆ ಆದರೂ ಜನ ಬಹಳ ವರ್ಷಗಳ ತನಕ ಹೃದಯದಲ್ಲಿ ಇಟ್ಟುಕೊಂಡಿರುತ್ತಾರೆ. ಅಲ್ಲಿ ಒಂದು ರಸ್ತೆ ಕಾಂಕ್ರೀಟಿಕರಣವಾದರೆ ಆ ರಸ್ತೆಗಳ ಎಲ್ಲರೂ ಅದನ್ನು ಮಾಡಿಸಿದ ಶಾಸಕರಿಗೆ ಕನಿಷ್ಟ ಐದಾರು ಸಲ ಮತ ಹಾಕಲು ತಯಾರು. ಆದರೆ ನಗರದ ಮತದಾರ ರಸ್ತೆಯನ್ನು ಕಾಂಕ್ರೀಟ್ ಮಾತ್ರವಲ್ಲ, ಬಂಗಾರದಿಂದ ಮಾಡಿಸಿದರೂ ಹೆಚ್ಚೆಂದರೆ ಆರು ತಿಂಗಳಿಗೆ ಮರೆತುಬಿಡುತ್ತಾನೆ. ಇಂತಹ ಸಂದಿಗ್ಣ ಪರಿಸ್ಥಿತಿಯಲ್ಲಿಯೂ ನಗರದ ಶಾಸಕರಾಗಿ ವೇದವ್ಯಾಸ ಕಾಮತ್ ಪ್ರಥಮ ಅವಧಿ ಬಹಳ ಮುಖ್ಯವಾಗಿದೆ.

ಅಷ್ಟು ಪ್ರೀತಿಯನ್ನು ಅವರು ಪಡೆದುಕೊಳ್ಳಲು ಕಾರಣಗಳೇನು? ಮೊದಲನೇಯದಾಗಿ ತೀಕ್ಣ ನೆನಪಿನ ಶಕ್ತಿ. ಎಷ್ಟೋ ವರ್ಷಗಳ ಹಿಂದಿನ ಪರಿಚಯವಾದರೂ ಯಾವತ್ತೋ ಸಿಕ್ಕಿದರೆ ಅವರನ್ನು ಹೆಸರಿನಿಂದ ಗುರುತಿಸಿ, ಪ್ರೀತಿಯಿಂದ ಮಾತನಾಡಿಸುವ ಒಂದು ಗುಣ ಇಂದಿನ ದಿನಗಳಲ್ಲಿ ಅಪರೂಪ. ಮಂಗಳೂರಿನ ಎಷ್ಟೋ ನಾಗರಿಕರ ಹೆಸರು, ವಿಳಾಸ, ಕುಟುಂಬದವರ ಪರಿಚಯ ವೇದವ್ಯಾಸ ಕಾಮತ್ ಅವರಿಗೆ ಕರತಲಾಮಲಕ. ಆ ವಿಷಯದಲ್ಲಿ ಅವರನ್ನು ಮೀರಿಸುವವರನ್ನು ನಾನು ಇಂದಿನ ದಿನಗಳಲ್ಲಿ ಕಂಡಿಲ್ಲ. ಇನ್ನು ಎರಡನೇಯದಾಗಿ ಮಂಗಳೂರು ನಗರ ದಕ್ಷಿಣದ ಅಷ್ಟೂ 38 ವಾರ್ಡುಗಳು ಅವರ ಅಂಗೈ ಮೇಲಿನ ಗೆರೆಗಳಂತೆ. ಯಾವ ವಾರ್ಡಿನಲ್ಲಿ ಯಾರ ಮನೆಯ ಎದುರು ರಸ್ತೆ ರಿಪೇರಿಯಾಗಿದೆ, ಎಲ್ಲಿ ಸಮಸ್ಯೆ ಇತ್ತು, ಎಲ್ಲಿ ಪರಿಹಾರವಾಗಿದೆ ಎನ್ನುವುದು ಅವರಿಗೆ ಒಮ್ಮೆ ಮನಸ್ಸಿಗೆ ಮುಟ್ಟಿದರೆ ಮತ್ತೆ ಅವರು ಅದನ್ನು ಮರೆಯುವುದಿಲ್ಲ. ದಕ್ಷಿಣದ ಲೈಟ್ ಕಂಬದಿಂದ ಹಿಡಿದು ಉನ್ನತ ಅಧಿಕಾರಿಗಳ ತನಕ ಅವರು ಕಳೆದ ಐದು ವರ್ಷಗಳಲ್ಲಿ ತಲುಪದ ಜಾಗವಿಲ್ಲ, ಮಾತನಾಡಿಸದ ಅಧಿಕಾರಿಗಳಿಲ್ಲ. ಅವರ ಇನ್ನೊಂದು ವೈಶಿಷ್ಟ್ಯ ಎಂದರೆ ಮಧ್ಯರಾತ್ರಿಯ ತನಕ ಜನರ ಮಧ್ಯದಲ್ಲಿಯೇ ಇದ್ದರೂ ಮರುದಿನ ಬೆಳಿಗ್ಗೆ 7 ಗಂಟೆಗೆ ಏನಾದರೂ ಕಾರ್ಯಕ್ರಮ ಇದ್ದರೆ ಅಷ್ಟೇ ಫ್ರೆಶ್ ಆಗಿ ತೊಡಗುತ್ತಾರೆ. ಇಡೀ ದಿನ ಜನರೊಂದಿಗೆ ಇದ್ದರೂ, ವಿವಿಧ ಸಭೆ, ಸಮಾರಂಭದಲ್ಲಿ ತೊಡಗಿದರೂ ಸುಸ್ತು ಎನ್ನುವುದು ಅವರ ಬಳಿ ಸುಳಿಯುವುದಿಲ್ಲ. ಊಟ, ತಿಂಡಿಯ ಪರಿವೇ ಇಲ್ಲದೇ ಕೆಲಸ ಮಾಡಿ ಆರೋಗ್ಯದಲ್ಲಿ ಏರುಪೇರಾದ ದಿನಗಳು ಕೂಡ ಇವೆ. ಅವರ ಬಳಿ ಒಮ್ಮೆ ಬಂದರೆ ಆ ಸ್ನೇಹ ಯಾವತ್ತೂ ಶಾಶ್ವತವಾಗಿಯೇ ಇರುತ್ತದೆ ಎನ್ನುವುದು ಎಲ್ಲರ ಅನುಭವಿಸಿದ ಸತ್ಯ. ಯಾರಾದರೂ ಕಾಮತ್ ಬಗ್ಗೆ ಎಲ್ಲಿಯಾದರೂ ಟೀಕಿಸುತ್ತಿದ್ದಾರೆ ಎಂದರೆ ಎಲ್ಲಿಯಾದರೂ ಸಂವಹನದ ಕೊರತೆ ಮತ್ತು ಯಾರಾದರೂ ಮಧ್ಯದಲ್ಲಿ ಹುಳಿ ಹಿಂಡಿರಬಹುದು ಎನ್ನುವುದು ಅಪ್ಪಟ ಸತ್ಯ. ಅದು ಬಿಟ್ಟರೆ ಸಾಮಾನ್ಯವಾಗಿ ಅವರನ್ನು ದ್ವೇಷಿಸಲು ಯಾರಿಗೂ ಮನಸ್ಸು ಬರುವುದಿಲ್ಲ.

ಯಾರಿಗೂ ಡಬ್ಬಲ್ ಗೇಮ್ ಮಾಡಲು ಮನಸ್ಸು ಬರದ, ರಾಜಕೀಯದಲ್ಲಿ ಇದ್ದರೂ ಕುತಂತ್ರ ಮಾಡಲು ತಯಾರಿಲ್ಲದ ವೇದವ್ಯಾಸ ಕಾಮತ್ ಮುಂದಿನ ಬಾರಿಯೂ ಶಾಸಕರಾಗಿ ಮುಂದುವರೆಯಲಿರುವುದು ಮೊನ್ನೆ ಸೇರಿದ ಜನಸಾಗರವೇ ಸಾಕ್ಷಿ.
ಅವರು ಮಾಡಿರುವ ಅಭಿವೃದ್ಧಿಯನ್ನು ಪಟ್ಟಿ ಮಾಡಬಹುದಾಗಿದ್ದರೆ ನಗರದ ನಟ್ಟನಡುವೆ ಕಂಡುಬರುವ ರಾಜಾಜಿ ಪಾರ್ಕ್. ಅದರ ಲುಕ್ ಸಂಪೂರ್ಣ ಭಿನ್ನವಾಗಿದೆ. ಅದಕ್ಕೆ ತಾಗಿಕೊಂಡಿರುವ ಅಂಡರ್ ಪಾಸ್ ನಗರದ ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡಲು ಯೋಗ್ಯವಾಗಿದೆ. ಹೀಗೆ ಹಲವು ಯೋಜನೆಗಳು ಅವರ ಮೊದಲ ಅವಧಿಯಲ್ಲಿ ಆಗಿದೆ. ಟೀಕಿಸುವವರು ಆತ್ಮಸಾಕ್ಷಿಯನ್ನು ಮರೆತು ಏನಾದರೂ ಹೇಳಬೇಕೆ ವಿನ: ಅಭಿವೃದ್ಧಿ ಮಾತ್ರ ಕಣ್ಣಿಗೆ ಕಾಣುತ್ತಿರುವುದು ಸುಳ್ಳಲ್ಲ!

0
Shares
  • Share On Facebook
  • Tweet It




Trending Now
ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
Hanumantha Kamath June 30, 2025
ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
Hanumantha Kamath June 30, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?
    • ಸಂವಿಧಾನದಿಂದ "ಜಾತ್ಯಾತೀತತೆ" ಮತ್ತು "ಸಮಾಜವಾದ" ಶಬ್ದಗಳನ್ನು ತೆಗೆಯುವ ಬಗ್ಗೆ ಚರ್ಚೆ ನಡೆಯಲಿ - ಆರ್ ಎಸ್ ಎಸ್
    • PFI ಟಾರ್ಗೆಟ್- 950 ಜನರ ಹಿಟ್ ಲಿಸ್ಟ್ ರೆಡಿ! NIA ಕೋರ್ಟ್ ನಲ್ಲಿ ವಕೀಲರಿಂದ ಮಾಹಿತಿ...
    • ಎಮರ್ಜೆನ್ಸಿ ದಿನಗಳಲ್ಲಿ ಮೋದಿಯವರ ಅನುಭವ ಕಥನ "ದಿ ಎಮರ್ಜೆನ್ಸಿ ಡೈರಿಸ್"!
    • ಬಾಹ್ಯಕಾಶಕ್ಕೆ ಜಿಗಿಯುವ ಮೊದಲು ಪತ್ನಿಗೆ ಭಾವನಾತ್ಮಕ ಸಂದೇಶ: "ನೀನಿಲ್ಲದೆ..... " ಶುಭಾಂಶು ಹೇಳಿದ್ದೇನು?
    • ಪಹಲ್ಗಾಮ್ ಉಗ್ರರಿಗೆ ಆಹಾರ, ಆಶ್ರಯ: ಸ್ಥಳೀಯರಿಬ್ಬರ ಬಂಧನ!
    • ಬೊಮ್ಮಾಯಿ 40% ಲಂಚದ ಆರೋಪ ಬಂದಾಗ ಸುಮ್ಮನೆ ಕುಳಿತು ತಪ್ಪು ಮಾಡಿದ್ರು - ಮೋಹನದಾಸ್ ಪೈ
    • ನಿಜವಾಯ್ತು ದೈವದ ನುಡಿ: 36 ವರ್ಷಗಳ ಬಳಿಕ ತಾಯಿಯ ಮಡಿಲು ಸೇರಿದ ಹಿರಿಮಗ
  • Popular Posts

    • 1
      ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • 2
      ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • 3
      ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?
    • 4
      ಸಂವಿಧಾನದಿಂದ "ಜಾತ್ಯಾತೀತತೆ" ಮತ್ತು "ಸಮಾಜವಾದ" ಶಬ್ದಗಳನ್ನು ತೆಗೆಯುವ ಬಗ್ಗೆ ಚರ್ಚೆ ನಡೆಯಲಿ - ಆರ್ ಎಸ್ ಎಸ್
    • 5
      PFI ಟಾರ್ಗೆಟ್- 950 ಜನರ ಹಿಟ್ ಲಿಸ್ಟ್ ರೆಡಿ! NIA ಕೋರ್ಟ್ ನಲ್ಲಿ ವಕೀಲರಿಂದ ಮಾಹಿತಿ...

  • Privacy Policy
  • Contact
© Tulunadu Infomedia.

Press enter/return to begin your search