“ಫ್ರೆಶ್” ಆಗಿ ಬಂದಾಯ್ತು, ಇನ್ನು ಏನಿದ್ದರೂ “ಫ್ಲಷ್” ಬಟನ್ ಒತ್ತಿ ಸ್ವಚ್ಛ ಮಾಡುವುದೊಂದೇ ಬಾಕಿ!
ಒಬ್ಬ ಮಾತುಗಾರನಿಗೆ ಅಥವಾ ಬರಹಗಾರನಿಗೆ ಕೇಸ್ ಕೋರ್ಟು ಎಲ್ಲಾ ಸಾಮಾನ್ಯವಾದ ವಿಚಾರವಾಗಿರುತ್ತದೆ. ಇದರಲ್ಲಿ ಯಾರಿಗೂ ಭೇದ-ಭಾವ ಅಥವಾ ಮೇಲು ಕೇಳು ಎನ್ನುವುದಿಲ್ಲ. ಈ ವಿಚಾರದಲ್ಲಿ ನಾನು ಕೂಡ ಬೇಕಾದಷ್ಟು ವಿರೋಧವನ್ನು ಕಟ್ಟಿಕೊಂಡಿದ್ದೇನೆ. ಒಂದೆರಡು ಬಾರಿ ಕೂದಲೆಳೆಯ ಅಂತರದಲ್ಲಿ ಕೇಸಿನಿಂದ ಬಚಾವಾಗಿದ್ದೇನೆ. ನೀವು ದೇವಸ್ಥಾನಕ್ಕೆ ಹೋಗುವುದಿಲ್ಲ ಎಂದು ಕೂರಬಹುದು ಅಥವಾ ಬೇರೆಯವರ ಮನೆಗೆ ಅಥವಾ ಬೇರೆ ಸ್ಥಳಕ್ಕೆ ಹೋಗುವುದಿಲ್ಲ ಎಂದು ಕೂಡ ಕೂರಬಹುದು. ಆದರೆ ಸ್ಟೇಷನ್ ಗೆ ಕೋರ್ಟಿಗೆ, ಆಸ್ಪತ್ರೆಗೆ ಹೋಗುವುದಿಲ್ಲ ಎಂದು ಕೂರಲು ಸಾಧ್ಯವೇ ಇಲ್ಲ, ಹೋಗಲೇಬೇಕಾಗುತ್ತದೆ. ಒಮ್ಮೆ ನನಗೆ ಸ್ಟೇಷನ್ನಿಗೆ ಹೋಗಬೇಕಾದಾಗ ನನ್ನ ಮಿತ್ರರೊಬ್ಬರು ಈ ಮಾತನ್ನು ಹೇಳಿದಾಗಲೇ ನಾನು ಸಮಾಧಾನದಿಂದ ಹೋಗಿಬಂದದ್ದು. ಇದೊಂದು ವಿರೋಧಿಗಳಿಗೆ ಭಯ ಹುಟ್ಟಿಸುವ ತಂತ್ರವಷ್ಟೇ.
ಇನ್ನು ಮಲಗಿದರೆ ಏಳುವಾಗ ಭಾರತ ಇರುವುದಿಲ್ಲ ಎಂದು ಚಕ್ರವರ್ತಿಯವರು ಸರಣಿ ಉಪನ್ಯಾಸವನ್ನು ಕೊಡುವುದು ಸಮಾಜವನ್ನು ಎಬ್ಬಿಸುವುದಕ್ಕಾಗಿ. ಭಾರತದ ಆಂತರಿಕ ಶತ್ರುಗಳು ಇಂಬುಳದ ಹಾಗೆ ನಮಗೆ ಗೊತ್ತಾಗದ ರೀತಿಯಲ್ಲಿ ನಮ್ಮ ರಕ್ತ ಕುಡಿಯುತ್ತಿದ್ದಾರೆ ಎನ್ನುವುದನ್ನು ಕಣ್ಣಿಗೆ ಕಟ್ಟುವ ಹಾಗೆ ಚಿತ್ರಿಸಿ ಕೊಡುತ್ತಿದ್ದಾರೆ. ಅದರಲ್ಲೂ ಬಹುತೇಕ ರಾಜ್ಯದ ಬಿಜೆಪಿ ನಾಯಕರಿಗೆ ಇದು ಅನ್ವಯವಾಗುತ್ತಿದೆ. ಕಾಂಗ್ರೆಸ್ಸಿನವರನ್ನು ದೂರವುದಕ್ಕಾಗಿ ಈ ಸರಣಿ ಉಪನ್ಯಾಸವನ್ನು ಇಟ್ಟಿರುವುದು ಅಲ್ಲ. ಆದರೆ ಅವರಿಗೆ ವಿರೋಧ ಇರುವುದು ಈ ಉಪನ್ಯಾಸ ಮಾಲಿಕೆಯಿಂದಲ್ಲ, ಒಂದು ವೇಳೆ ಇದು ಮೋದಿಗೆ ಲಾಭವಾಗುತ್ತಿದೆ ಎನ್ನುವುದಷ್ಟೇ. ಅದಕ್ಕಾಗಿ ಹೊಟ್ಟೆ ಉರಿಯಿಂದ ನಿದ್ದೆ ಬಾರದೆ ಒದ್ದಾಡುತ್ತಿರುವ ಕೆಲವರು ಇವರನ್ನು ಹೇಗಾದರೂ ನಿದ್ದೆ ಬಾರದಂತೆ ಮಾಡಬೇಕು ಎನ್ನುವ ಬಾಲಿಷ ಯೋಚನೆಯಲ್ಲಿದ್ದಾರೆ. ಬೇರೆ ಯಾವ ವಿಚಾರದಿಂದಲೂ ಇವರನ್ನು ಕಟ್ಟಲು ಸಾಧ್ಯವಿಲ್ಲದ ಕಾರಣ ಇಂತಹ ಸಣ್ಣ ವಿಚಾರದಿಂದಲಾದರೂ ಇವರನ್ನು ಸುತ್ತಾಡಿಸೋಣ ಎನ್ನುವ ದುರುದ್ದೇಶದಿಂದ ಕೂಡಿದ್ದಾರೆ ಅಷ್ಟೇ.
ಚಕ್ರವರ್ತಿಯವರು ಎಲ್ಲರಿಗೂ ಗೊತ್ತಿರುವ ಹಾಗೆ ಕಳೆದ 30 ವರ್ಷಗಳಿಂದ ನಿರಂತರ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿ. ಅದರಲ್ಲೂ ತನ್ನ ಲಾಭವನ್ನು ಹಾಗೂ ವೈಯಕ್ತಿಕ ಉದ್ದೇಶವನ್ನು ಇಟ್ಟುಕೊಂಡು ಮಾಡುತ್ತಿಲ್ಲವಾದ್ದರಿಂದ ಇವರು ಈ ವಿಚಾರದಿಂದ ಹಿಂದೆ ಸರಿಯುವುದು ಕೂಡ ಸುಲಭವಿಲ್ಲ ಎಂದು ಶತ್ರುಗಳಿಗೂ ಕೂಡ ಗೊತ್ತಿದೆ. ಏಕೆಂದರೆ ಮನುಷ್ಯ ನಿಸ್ವಾರ್ಥದಿಂದ ಹಾಗೂ ತ್ಯಾಗಭಾವನೆಯಿಂದ ಸಾಗಿದರೆ ಅದರಿಂದ ಆತ ಹಿಂದೆ ಸರಿಯುವ ಪ್ರಶ್ನೆ ಇಲ್ಲ. ಚಕ್ರವರ್ತಿಯವರು ಮೊದಲಿಂದಲೂ ಈ ಭಾವನೆಯವರು ಎನ್ನುವುದು ರಾಜ್ಯಕ್ಕೆ ಗೊತ್ತಿರುವ ಸಂಗತಿ. ಹಾಗಾದರೆ ಅವರನ್ನು ಹಿಂದೆ ಸರಿಸುವ ಯತ್ತಕ್ಕೆ ಕೈ ಹಾಕುವುದಕ್ಕಿಂತಲೂ ಅವರಿಗೆ ಎಲ್ಲಿಯೂ ಸಭೆಯ ಅವಕಾಶ ಸಿಗದೇ ಇರುವ ಹಾಗೆ ಅಥವಾ ಇವರು ಸಭೆಗೆ ಬರದೇ ಇರುವ ಹಾಗೆ ನೋಡಿಕೊಳ್ಳುವುದು ಸುಲಭ ಎನ್ನುವುದಕ್ಕಾಗಿ ಈ ನಾಟಕ.
ಸಭಿಕರನ್ನು ಸೂಜಿ ಗಲ್ಲಿನಂತೆ ಆಕರ್ಷಿಸುವ ವ್ಯಕ್ತಿತ್ವ. ಇವರ ಮಾತನ್ನು ಕೇಳಿದವನಿಗೆ , ಮನಸ್ಸು ಬಿಚ್ಚಿ ಚಪ್ಪಾಳೆ ಹೊಡೆಯುವುದು ಹಾಗೂ ಭಾರತ ಮಾತೆಯ ಘೋಷಣೆಯನ್ನು ಕೂಗುವುದು ಅರಿವಿಲ್ಲದಂತೆ ಬಂದು ಹೋಗುತ್ತದೆ. ಹಿಡಿದ ಕೆಲಸವನ್ನು ಗುರಿ ಮುಟ್ಟಿಸುವ ಛಲಗಾರ. ದೇಶದ ಎಲ್ಲಾ ವಿಚಾರವನ್ನು ರಾಷ್ಟ್ರೀಯ ಚಿಂತನೆಯ ಮೂಲಕವಾಗಿಯೇ ಕಂಡುಕೊಂಡು ಸಮನ್ವತೆಯ ಭಾವನೆಯನ್ನು ಜನರಲ್ಲಿ ಮೂಡಿಸುವಲ್ಲಿ ಇವರಿಗೆ ಸಾಟಿಯಾಗಬಲ್ಲ ವ್ಯಕ್ತಿ ಬೇರೊಬ್ಬನಿಲ್ಲ. ಇವರ ಬಗ್ಗೆ ಹೇಳಿಕೊಂಡು ಹೋದರೆ ಅದೇ ದೊಡ್ಡ ಲೇಖನವಾದೀತು. ಆದರೆ ರಾಜ್ಯದ ಅನೇಕ ಯುವ ಜನತೆ ಇವರ ಹಿಂದೆ ಇದೆ. ಆದರೂ ಎದುರಾಳಿಗಳಿಗೆ ಒಬ್ಬ ನಾಯಕನನ್ನು ಬದಿಗೆ ಸರಿಸುವುದು ದೊಡ್ಡ ವಿಚಾರವೇನಲ್ಲ.ಇತಿಹಾಸದಲ್ಲಿ ಇದು ಬೇಕಾದಷ್ಟು ಸಾಧ್ಯವಾಗಿದೆ. ಆದರೆ ಮೋದಿ ಹಾಗೂ ಯೋಗಿಯ ಸಾಲಿಗೆ ಈ ವಿಚಾರದಲ್ಲಿ ಸೂಲಿಬೆಲೆಯವರು ಕೂಡ ಸೇರಿಕೊಳ್ಳುತ್ತಾರೆ. ಇವರನ್ನು ಬದಿಗೆ ಸರಿಸುವುದಷ್ಟು ಮತ್ತಷ್ಟು ಮುನ್ನಡೆಗೆ ಬರುವ ವ್ಯಕ್ತಿತ್ವದವರು. ಭಾರತ ಮಾತೆ, ಹಾಗೂ ಅಸಂಖ್ಯಾತ ರಾಷ್ಟ್ರೀಯ ಭಾರತೀಯರ ಆಶೀರ್ವಾದಗಳು ಇವರ ರಕ್ಷಣೆಗೆ ನಿಂತಿದೆ.
Leave A Reply