ಪಾಕ್ ಕ್ರಿಕೆಟಿಗರ ಸ್ವಾಗತಕ್ಕೆ ಭಾರತೀಯ ಹೆಣ್ಣುಮಕ್ಕಳಿಂದ ನೃತ್ಯ ಖಂಡನೀಯ
ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾಗವಹಿಸಲು ವಿವಿಧ ದೇಶಗಳ ಕ್ರಿಕೆಟಿಗರು ಭಾರತಕ್ಕೆ ಆಗಮಿಸಿದ್ದಾರೆ. ಪಾಕಿಸ್ತಾನ ಕೂಡ ಭಾರತದಲ್ಲಿ ನಡೆಯುತ್ತಿರುವ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಭಾರತಕ್ಕೆ ಬಂದಿದೆ. ಅವರು ವಿವಿಧ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯಾಟದಲ್ಲಿ ಆಡಲು ಆಯಾ ರಾಜ್ಯಕ್ಕೆ ಆಗಮಿಸಿದಾಗ ಅವರನ್ನು ಹೋಟೇಲಿನಲ್ಲಿ ಸ್ವಾಗತಿಸಲಾಗುತ್ತದೆ. ಆಗ ಅವರ ಸ್ವಾಗತಕ್ಕೆ ಭಾರತೀಯ ಹೆಣ್ಣುಮಕ್ಕಳು ನೃತ್ಯ ಮಾಡುವುದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕಾರ್ಯದರ್ಶಿಯಾಗಿರುವ ಜೈ ಶಾ ಅವರು ಹೀಗೆಕೆ ಮಾಡಿದರು ಎಂದು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ. ಪಕ್ಕಾ ರಾಷ್ಟ್ರೀಯವಾದಿಯಾಗಿರುವ ಅಮಿತ್ ಶಾ ಪುತ್ರರೂ ಆಗಿರುವ ಜೈ ಶಾ ಆದಷ್ಟು ಬೇಗ ಈ ಸಂಪ್ರದಾಯ ನಿಲ್ಲಿಸಬೇಕು ಎಂದು ಹೇಳಲಾಗುತ್ತಿದೆ.
ಇನ್ನು ಪ್ಯಾಲೇಸ್ತೇನಿಯಲ್ಲಿರುವ ಹಮಾಸ್ ಉಗ್ರರು ಇಸ್ರೇಲ್ ಗಡಿಯೊಳಗೆ ನುಗ್ಗಿ ಅನೇಕ ಶಿಶುಗಳ ಶಿರಚ್ಚೇದ ಮಾಡಿದ ವಿಷಯ ಕೇಳಿದ ಅಮೇರಿಕಾ ಅಧ್ಯಕ್ಷ ಜೋ ಬೈಡನ್ ಗದ್ಗತಿತರಾದರು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಂದಿರುವ ಮಾಹಿತಿ ಸತ್ಯಕ್ಕೆ ದೂರ ಎಂದು ವೈಟ್ ಹೌಸ್ ಪತ್ರಿಕಾ ವರದಿ ಹೇಳಿದೆ. ಹಸುಳೆಗಳನ್ನು ಅಮಾನುಷವಾಗಿ ರಕ್ಕಸರ ರೀತಿ ಕೊಂದಿರುವ ಹಮಾಸ್ ಉಗ್ರರ ಕೃತ್ಯವನ್ನು ಖಂಡಿಸಿರುವ ಬೈಡನ್ ಆ ಫೋಟೋಗಳನ್ನು ಇನ್ನು ನೋಡಿಲ್ಲ. ಆದರೆ ಅಮೇರಿಕಾ ಇನ್ನಷ್ಟು ಫೈಟರ್ ಜೆಟ್ ಗಳನ್ನು ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಕಳುಹಿಸಿಕೊಡುತ್ತಿರುವುದಾಗಿ ಮಾಹಿತಿ ನೀಡಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಇಸ್ರೇಲ್ ಪ್ರಧಾನಿ ನೇತಾನ್ಯಾಹು ಅವರು ಹೆಚ್ಚುವರಿಯಾಗಿ 5,30,000 ಯೋಧರು ಗಾಜಾಪಟ್ಟಿಯನ್ನು ಆಕ್ರಮಿಸಿಕೊಳ್ಳಲಿದ್ದಾರೆ. ನಾವು ಹಮಾಸ್ ಉಗ್ರರನ್ನು ಜಗತ್ತು ಐಸಿಸ್ ಭಯೋತ್ಪಾದಕರನ್ನು ನಾಶ ಮಾಡಿದ ರೀತಿಯಲ್ಲಿಯೇ ಮುಗಿಸುವುದಾಗಿ ಹೇಳಿದ್ದಾರೆ. ಈಗಾಗಲೇ ಹಮಾಸ್ ನೌಕಾ ಹಿರಿಯ ಕಮಾಂಡರ್ ನನ್ನು ಇಸ್ರೇಲ್ ಮಿಲಿಟರಿ ಪಡೆಗಳು ಹತ್ಯೆ ಮಾಡಿರುವ ಮಾಹಿತಿ ದೊರಕಿದೆ.
Leave A Reply