4 ತಿಂಗಳುಗಳಿಂದ ಸತ್ತ ಮಾಲೀಕನಿಗಾಗಿ ಕಾಯುತ್ತಿರುವ ನಾಯಿ!
ಸಾಕು ನಾಯಿಗಳು ಮನುಷ್ಯರಿಗಿಂತ ಹೆಚ್ಚು ನಂಬಿಕೆಯ ಪ್ರಾಣಿಗಳು ಎನ್ನುವುದು ನಮಗೆ ಗೊತ್ತೆ ಇದೆ. ಈಗ ಅದಕ್ಕೆ ಮತ್ತೊಂದು ಸಾಕ್ಷ್ಯ ಸಿಕ್ಕಿದೆ. ಕಣ್ಣೂರು ಜಿಲ್ಲಾ ಆಸ್ಪತ್ರೆಯ ಹೊರಗೆ ಕಳೆದ ನಾಲ್ಕು ತಿಂಗಳುಗಳಿಂದ ಒಂದು ನಾಯಿ ಆಸ್ಪತ್ರೆಯ ಹೊರಗೆನೆ ಅಡ್ಡಾಡುತ್ತಿದೆ. ಅದಕ್ಕೆ ಮುಖ್ಯ ಕಾರಣ ಅದರ ಮಾಲೀಕ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಾಲೀಕ ಸಾವನ್ನಪ್ಪಿದ್ದಾರೆ. ಅದು ನಾಯಿಗೆ ಗೊತ್ತಿಲ್ಲ. ಅದು ಆಸ್ಪತ್ರೆಯ ಒಳಗೆ ಹೋಗಿದ್ದ ಮಾಲೀಕ ಹೊರಗೆ ಬರುವುದನ್ನೇ ಕಾದು ಕುಳಿತುಕೊಂಡಿದೆ.
ನಾಯಿ ಯಾರಿಗೂ ತೊಂದರೆ ಕೊಡುತ್ತಿಲ್ಲ. ಅದರ ಪಾಡಿಗೆ ಅದು ಆಸ್ಪತ್ರೆಯ ಒಳಗೆ ನೋಡುತ್ತಾ ನಿಂತುಬಿಡುತ್ತದೆ. ಇವತ್ತಲ್ಲ, ನಾಳೆ ತನ್ನ ಮಾಲೀಕ ಬಂದೇ ಬರುತ್ತಾನೆ ಎಂಬ ವಿಶ್ವಾಸ ಅದಕ್ಕೆ ಇರಬಹುದು ಎನ್ನುತ್ತಾರೆ ಆಸ್ಪತ್ರೆಯ ಸಿಬ್ಬಂದಿ ಕುಮಾರ್. ಇಂತಹ ಹಲವು ಘಟನೆಗಳು ನಮ್ಮ ಜಗತ್ತಿನಲ್ಲಿ ಅಲ್ಲಲ್ಲಿ ನಡೆಯುತ್ತಲೇ ಇರುತ್ತವೆ. ಮಾಲೀಕ ಮತ್ತು ನಾಯಿ ನಡುವಿನ ಸ್ನೇಹ ಎಷ್ಟರಮಟ್ಟಿಗೆ ಗಟ್ಟಿಯಾಗಿತ್ತು ಎನ್ನುವುದರ ಮೇಲೆ ಇದು ಅವಲಂಬಿತವಾಗುತ್ತದೆ.
Leave A Reply