ಕರೆ ಮಾಡಿ ಮೋದಿ ಸಮಾಧಾನ, ಜಾಟ್ ಪ್ರತಿಭಟನೆ!
ಇಂತಹ ಅವಮಾನಗಳನ್ನು ಕಳೆದ 20 ವರ್ಷಗಳಿಂದ ತಾವು ಅನುಭವಿಸಿರುವುದಾಗಿ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಬಳಿ ಫೋನಿನಲ್ಲಿ ಮಾತನಾಡಿದ್ದು, ಈ ಘಟನೆಯ ಬಗ್ಗೆ ಬೇಸರ ವ್ಯಕ್ತಪಡಿಸಿರುವುದಾಗಿ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ತಮ್ಮ “ಏಕ್ಸ್” ನಲ್ಲಿ ಬರೆದುಕೊಂಡಿದ್ದಾರೆ. ಮೋದಿಯವರ ಜೀವನದಲ್ಲಿ ಅವರು ಕಳೆದ 20 ವರ್ಷಗಳಲ್ಲಿ ವಿಪಕ್ಷಗಳಿಂದ ಇಂತಹ ಹಲವಾರು ಅವಮಾನಕಾರಕ ಘಟನೆಗಳನ್ನು ಅನುಭವಿಸಿದ್ದು, ಆದರೆ ಸಂಸತ್ತಿನ ಅಂಗಳದಲ್ಲಿ ಉಪರಾಷ್ಟ್ರಪತಿಯವರ ಕುರಿತು ಇಂತಹ ಘಟನೆ ನಡೆದಿರುವುದು ನಿಜಕ್ಕೂ ದುರಾದೃಷ್ಟ ಎಂದು ಹೇಳಿದರು.
ಇನ್ನು ಜಗದೀಪ್ ಧನಕರ್ ಅವರ ಪರವಾಗಿ ಜಾಟ್ ಸಮುದಾಯ ಪ್ರತಿಭಟನೆಗೆ ಇಳಿದಿದೆ. ಒಬ್ಬ ರೈತನ ಮಗನಾಗಿರುವ ಜಗದೀಪ್ ಧನಕರ್ ಅವರು ದೇಶದ ಉನ್ನತ ಹುದ್ದೆಯಲ್ಲಿ ಇದ್ದಾರೆ. ಅವರ ಅಂಗಸೌಷ್ಟವದ ಬಗ್ಗೆ ಸಂಸದರು ಮಿಮಿಕ್ರಿ ಮಾಡಿರುವುದು ಹಾಗೂ ಅದನ್ನು ಇನ್ನೊಬ್ಬರು ಸಂಸದರು ವಿಡಿಯೋದಲ್ಲಿ ಚಿತ್ರೀಕರಿಸಿರುವುದು ನಿಜಕ್ಕೂ ಖಂಡನೀಯ. ನಾವು ಜಾಟ್ ಸಮುದಾಯದವರು ರಾಜ್ಯಸಭಾ ಸ್ಪೀಕರ್, ಉಪರಾಷ್ಟ್ರಪತಿಯವರ ಬಗ್ಗೆ ಆದ ಅವಮಾನವನ್ನು ಸಹಿಸುವುದಿಲ್ಲ. ನಮ್ಮ ಮೇಲೆ ಹಿಂದೆ ಆದ ದೌರ್ಜನ್ಯವನ್ನು ನಾವು ಏಳು ಜನ್ಮಕ್ಕೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಈ ಕುರಿತು ಜಾಟ್ ಸಮುದಾಯದ ಬೃಹತ್ ಸಭೆಯನ್ನು ಕರೆಯಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
Leave A Reply