ಗುರುಪುರ ವಜ್ರದೇಹಿ ಮಠದಲ್ಲಿ ರಿಷಬ್ ಶೆಟ್ಟಿಗೆ ಸಿಕ್ತು ದೈವದ ಅಭಯ!
Posted On January 6, 2024
ಗುರುಪುರದಲ್ಲಿ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರ ವಜ್ರದೇಹಿ ಮಠದಲ್ಲಿ ನಡೆದ ದೈವ ಕೋಲಕ್ಕೆ ನಟ, ನಿರ್ದೇಶಕ ರಿಷಬ್ ಶೆಟ್ಟಿಯವರು ಭೇಟಿ ನೀಡಿ ಮೈಸಂದಾಯ ದೈವದ ಆರ್ಶೀವಾದ ಪಡೆದರು. ಈ ಸಂದರ್ಭದಲ್ಲಿ ” ಭಯ ಪಡಬೇಡಾ ನಾನಿದ್ದೇನೆ. ಏನೇ ಆದರೂ ಕುಗ್ಗಬೇಡಾ, ಮುನ್ನುಗ್ಗು, ನಿನ್ನ ಬೆನ್ನ ಹಿಂದೆ ನಾನಿದ್ದೇನೆ” ಎಂದು ದೈವ ಸನ್ನೆ ಮಾಡಿ ಆರ್ಶೀವದಿಸಿದೆ. ದೈವಾರಾಧನೆಯ ಕಟ್ಟುಪಾಡು ಅಧ್ಯಯನ ಮಾಡಿಕೊಂಡು ದೈವದ ನೆಲೆಯನ್ನು ಅರಿತುಕೊಂಡು ದೈವದ ನೆಲೆಯನ್ನು ಅರಿತುಕೊಂಡು ಸಮಾಜಕ್ಕೆ ತೋರಿಸಬೇಕು ಎಂದು ಸ್ವ ಇಚ್ಚೆಯಿಂದ ರಿಷಬ್ ಕೋಲಕ್ಕೆ ಆಗಮಿಸಿದ್ದಾರೆ.
ಈಗಾಗಲೇ ರಿಷಬ್ ಶೆಟ್ಟಿಯವರ ನಟನೆ ಮತ್ತು ನಿರ್ದೇಶನದಲ್ಲಿ ಕಾಂತಾರ ಅಧ್ಯಾಯ 1 ಚಿತ್ರದ ಮುಹೂರ್ತ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಆನೆಗುಡ್ಡೆ ದೇವಸ್ಥಾನದಲ್ಲಿ ನೆರವೇರಿದೆ. ಚಿತ್ರೀಕರಣ ಯಶಸ್ವಿಯಾಗಿ ನೆರವೇರಲು ರಿಷಬ್ ಶೆಟ್ಟಿ ದೈವದ ಬಳಿ ಬೇಡಿಕೊಂಡರು. ಈ ಸಂದರ್ಭದಲ್ಲಿ ರಿಷಬ್ ಶೆಟ್ಟಿ ಆತ್ಮೀಯ ಮಿತ್ರ ಜಗದೀಶ್ ಕದ್ರಿ, ಭಕ್ತರು ಉಪಸ್ಥಿತರಿದ್ದರು.
- Advertisement -
Leave A Reply