• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಪೇಜಾವರ ಶ್ರೀಗಳಿಗೆ ಬುದ್ಧಿ ಹೇಳುವಷ್ಟು ದೊಡ್ಡವರಾ ನೀವು?

ಸಂತೋಷ್ ಕುಮಾರ್ ಮುದ್ರಾಡಿ Posted On July 6, 2024
0


0
Shares
  • Share On Facebook
  • Tweet It

ಧಾರ್ಮಿಕ ವ್ಯಕ್ತಿಗೆ ರಾಜಕೀಯದ ಬಗ್ಗೆ ಮಾತನಾಡುವ ಅಧಿಕಾರವಿಲ್ಲ ಎಂದಾಗಿದ್ದರೆ ರಾಜಕೀಯ ವ್ಯಕ್ತಿಗೆ ಧಾರ್ಮಿಕದ ಬಗ್ಗೆ ಮಾತನಾಡುವ ಅಧಿಕಾರ ನೀಡಿದ್ದು ಯಾರು?

ಯಾವುದು ದೇಶಕ್ಕೆ ಹಿತವೋ ಹಾಗೆಯೇ ಯಾವುದು ಸನಾತನ ಧರ್ಮಕ್ಕೆ ಪೂರಕವಾಗಿದೆಯೋ ಅಂತಹ ಎಲ್ಲಾ ವಿಚಾರಕ್ಕೂ ಜಾತಿ ಹಾಗೂ ಮತ ಪಂಥವನ್ನು ಮೀರಿ ಮೊದಲು ಪ್ರತಿಕ್ರಿಯಿಸುವುದು ಉಡುಪಿಯ ಮಾಧ್ವ ಪರಂಪರೆಯ ಸನ್ಯಾಸಿ  ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಾತ್ರ. ರಾಜಕೀಯ ಪರವಾದ ಅಥವಾ ಸಾಮಾಜಿಕವಾದ ಇವರ ಯಾವುದೇ ಹೇಳಿಕೆಗಳು ಒಂದು ಜಾತಿಗೆ ಸೀಮಿತವಾಗಿದ್ದದ್ದು ಇಲ್ಲವೇ ಇಲ್ಲ. ಏಕೆಂದರೆ ಸನಾತನ ಧರ್ಮಕ್ಕೆ ಸಂಬಂಧಿಸಿದ ಯಾವುದೇ ವಿಚಾರವಾಗಲಿ ಅದರ ಬಗ್ಗೆ ಸ್ಪಷ್ಟವಾದ ಉತ್ತರವನ್ನು ಹಾಗೂ ಧೈರ್ಯದ ನಡೆಯನ್ನು ತೋರಿಸಿಕೊಡಬೇಕಾದದ್ದು ಸನ್ಯಾಸಿಗಳ ಕರ್ತವ್ಯ. ಉಡುಪಿಯ ಈ ಪರಂಪರೆ ಹೊರತು ರಾಜ್ಯದ ಇನ್ಯಾವುದೇ ಪಾರಂಪರಿಕವಾದ ಸನ್ಯಾಸಿ ಪೀಠ ಇದನ್ನು ಸಾಧಿಸಿದ್ದು ತೋರಿಸಿಕೊಡಲಿ.

ಮೈಗೆ ಇರುವೆ ಚುಚ್ಚಿದಂತೆ ಅರುಚುತ್ತಿರುವ ಯಾವುದೇ ಒಬ್ಬ ಕಾರ್ಯಕರ್ತ ನೈತಿಕತೆಯಿದ್ದರೆ ಪೇಜಾವರ ಶ್ರೀಗಳಾಗಲಿ ಅಥವಾ ಉಡುಪಿಯ ಯಾವುದೇ ಪೀಠಾಧಿಪತಿಯಾಗಲಿ ಧರ್ಮಕ್ಕೆ ಸಂಬಂಧಿಸದ ಹಾಗೂ ತಮ್ಮ ಜಾತಿಗೆ ಸಂಬಂಧಿಸಿದ ಯಾವುದೇ ಒಂದು ಹೇಳಿಕೆ ಕೊಟ್ಟ ಬಗ್ಗೆ ಒಮ್ಮೆ ತೋರಿಸಿಕೊಡಬೇಕು. ಉಡುಪಿಯಲ್ಲಿ ಹುಟ್ಟಿ ಹೆಮ್ಮೆಪಡುವುದು ಬಿಟ್ಟು ನಂಜಿ ಕಾರುತ್ತಿದ್ದಾವೆ. ಖುಷಿಪಡುವುದಕ್ಕೂ ಯೋಗ ಬೇಕು.

ಸನಾತನ ಧರ್ಮವನ್ನು ವಿರೋಧಿಸಿ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಮಾತನಾಡಿದ್ದು ಈಗಾಗಲೇ ಎಲ್ಲರಿಗೂ ಗೊತ್ತಿದೆ. ಅವರ ಮಾತಿಗೆ ಚಪ್ಪಾಳೆ ತಟ್ಟುತ್ತಾ ಬೆಂಬಲಿಸಿದ ಅವರ ಬೆಂಬಲಿಗರು ಕೂಡ, ಅವರವರ ತಾಯಿಯನ್ನು ಸಂಶಯದ ದೃಷ್ಟಿಯಲ್ಲಿ ಕಾಣುವಂತೆ ತಮ್ಮನ್ನು ಈ ದೇಶದ ಮುಂದೆ ತೆರೆದಿಟ್ಟಿದ್ದಾರೆ. ಈ ದೇಶದ ಬಗ್ಗೆ ಅಭಿಮಾನ ಇದ್ದವ, ಅದರಲ್ಲೂ ತಮ್ಮ ಹುಟ್ಟಿದ ಧರ್ಮದ ಬಗ್ಗೆ ಅಭಿಮಾನ ಇದ್ದವನಂತೂ, ರಾಮಮಂದಿರದ ಉದ್ಘಾಟನೆಯನ್ನು ವಿರೋಧಿಸಿದ ಹಾಗೂ ತನ್ನ ಅಧಿಕಾರದ ಅವಧಿಯಲ್ಲಿ ಲೆಕ್ಕವಿಲ್ಲದಷ್ಟು ಹಗರಣ ಮಾಡಿ ಬೇಲಿನಲ್ಲಿ ಹೊರಗೆ ತಿರುಗುತ್ತಿರುವ ಅವರನ್ನು ಬೆಂಬಲಿಸಲು ಸಾಧ್ಯವೇ ಇಲ್ಲ.

ಸನಾತನ ಧರ್ಮದಲ್ಲಿ ಸನ್ಯಾಸಿಗೆ ಅಗ್ರಸ್ಥಾನ. ಸನ್ಯಾಸಿಯಾದವ ಯಾವುದೇ ಜಾತಿಯಾಗಲಿ ಅದು ವಿಷಯವೇ ಅಲ್ಲ. ಎಲ್ಲಾ ಕಡೆಯೂ ಆತನಿಗೆ ಅಗ್ರಮಾನ್ಯತೆಯನ್ನು ಆತನ ಸನ್ಯಾಸ ತಂದುಕೊಡುತ್ತದೆ. ಇದಕ್ಕೆ ಮುಖ್ಯ ಕಾರಣ ತಾನು ಸನ್ಯಾಸದಲ್ಲಿ ನಿಂತು ಸನಾತನ ಧರ್ಮವನ್ನು ರಕ್ಷಿಸುವಲ್ಲಿ ಕಟಿಬದ್ಧನಾಗಿದ್ದಾನೆ ಎನ್ನುವುದೇ ಆಗಿದೆ. ಇದರ ಹೊರತಾಗಿ ಅದೆಷ್ಟು ಬಾರಿ ಸನ್ಯಾಸಿಗಳು ತಮ್ಮ ಯೋಗ್ಯತೆಯನ್ನು ಮರೆತು ಜಾತೀಯತೆಯನ್ನು ತೋರಿಸಿಕೊಟ್ಟಿದ್ದಾರೆ. ಇದೇ ರಾಜ್ಯದ ನೂರಾರು ಸನ್ಯಾಸಿಗಳು ತಮಗಿರುವ ಸ್ಥಾನಮಾನವನ್ನು ಮರೆತು ಜಾತಿಯ ಹಿಂದೆ ಬಿದ್ದು ರಾಜಕೀಯದ ನಡುವೆ ಮೂಗು ತೂರಿಸಿ ನಮ್ಮ ಜಾತಿಯವನಿಗೆ ಮುಖ್ಯಮಂತ್ರಿ ಸ್ಥಾನವನ್ನು ಅಥವಾ ಇನ್ನಿತರ ಯಾವುದೇ ದೊಡ್ಡ ಹುದ್ದೆಯನ್ನು ಕೊಡಬೇಕು ಎಂದು ಪಟ್ಟು ಹಿಡಿದು ಕೂತಾಗ ಈ ನಪುಂಸಕರು ಸುಮ್ಮನಿದ್ದರು.

ಈಗ ಹಿಂದುತ್ವದ ಪರವಾಗಿ ಮಾತನಾಡಿರುವ ಪೇಜಾವರ ಶ್ರೀಗಳ ಬಗ್ಗೆ ಬಾಯಿಗೆ ಬಂದ ಹಾಗೆ ಬೊಗಳುತ್ತಿದ್ದಾವೆ. ನಾಚಿಕೆಯಾಗಬೇಕಿತ್ತು ಇವುಗಳಿಗೆ. ನಾನಾಗ ಹೇಳಿದ ಹಾಗೆ ಪೇಜಾವರ ಶ್ರೀಗಳು ಬ್ರಾಹ್ಮಣರ ಪರವಾಗಿಯೋ, ಅಥವಾ ಯಾವುದೋ ಒಂದು ಜಾತಿಯ ಪರವಾಗಿಯೋ ಅದೂ ಅಲ್ಲದಿದ್ದರೆ ಈ ದೇಶಕ್ಕೆ ಮಾರಕವಾದ ಒಂದೇ ಒಂದು ಹೇಳಿಕೆ ಕೊಟ್ಟದ್ದನ್ನು ತೋರಿಸಿಕೊಡಲಿ ನೋಡೋಣ. ಕರಾವಳಿಗರು ಬುದ್ದಿವಂತರು. ವಿರೋಧಿಸುವಲ್ಲಿಯುೂ ಸ್ವಲ್ಪ ಬುದ್ಧಿವಂತಿಕೆಯನ್ನು ತೋರಿಸಿ. ಕೇವಲ ವಿರೋಧಿಸಬೇಕು ಎನ್ನುವುದಷ್ಟೇ ನಿಲುವು ಇರಬಾರದು.

ಧಾರ್ಮಿಕ ವ್ಯಕ್ತಿಗಳು ರಾಜಕೀಯದ ಬಗ್ಗೆ ಮಾತಾಡಬಾರದು ಎನ್ನುವುದೇನು ಸಂವಿಧಾನದಲ್ಲಿ ಇಲ್ಲ. ಆದರೂ ಒಂದೊಮ್ಮೆ ಇದನ್ನು ಒಪ್ಪಿಕೊಳ್ಳುತ್ತೀರಿ ಎಂದಾಗಿದ್ದರೆ ರಾಜಕೀಯ ವ್ಯಕ್ತಿಗಳು ಕೂಡ ಧಾರ್ಮಿಕ ವಿಚಾರದ ಬಗ್ಗೆ ಮಾತನಾಡುವ ಹಾಗಿಲ್ಲ ಎನ್ನುವುದನ್ನು ಕೂಡ ನೀವು ಒಪ್ಪಿಕೊಳ್ಳಬೇಕಾಗುತ್ತದೆ. ಆದ್ದರಿಂದ ಪೇಜಾವರ ಶ್ರೀಗಳನ್ನು ವಿಚಾರಿಸುವುದಕ್ಕಿಂತ ಮೊದಲು ನಿಮ್ಮ ಯುವರಾಜನನ್ನು ವಿಚಾರಿಸಿಕೊಳ್ಳಿ. ರಾಜಕೀಯದ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲದೆ, ಧಾರ್ಮಿಕ ವಿಚಾರಕ್ಕೆ ಬಾಯಿ ಹಾಕಿದ್ದಾನೆ. ಅತ್ತ ಅಲ್ಲೂ ಇಲ್ಲ ,ಇತ್ತ ಇಲ್ಲೂ ಇಲ್ಲ ,ಎನ್ನುವ ರೀತಿಯಲ್ಲಿ ತ್ರಿಶಂಕುವಿನಂತೆ ಒದ್ದಾಡುತ್ತಿದ್ದಾನೆ.  ರಾಜಕೀಯಕ್ಕೆ ಧರ್ಮವಿಲ್ಲ ಎಂದು ಬೊಗಳೇ ಬಿಡುವ ನೀವು ಧಾರ್ಮಿಕ ವಿಚಾರದಲ್ಲಿ ರಾಜಕೀಯ ಮಾಡುವುದನ್ನು ಮೌನವಾಗಿ ಒಪ್ಪಿಕೊಳ್ಳುತ್ತೀರಿ. ಸತತ ಮೂರನೇ ಬಾರಿ ಸೋತ ಹತಾಶ ಭಾವನೆ ಅವರಿಗೆ ಮಾತ್ರವಲ್ಲ ನಿಮ್ಮೊಳಗೂ ಕಾಣುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ.

ಹಿಂದುತ್ವದ ಎಲ್ಲಾ ವಿಚಾರಕ್ಕೂ ಸನ್ಯಾಸಿಗಳು ಮಾತನಾಡಲೇಬೇಕು. ರಾಜ್ಯದಲ್ಲಿ ನೂರಾರು ಮಠಪರಂಪರೆಗಳಿವೆ. ಸಾವಿರಾರು ಸನ್ಯಾಸಿಗಳಿದ್ದಾರೆ. ಆದರೂ ಕೂಡ ಸನಾತನ ಧರ್ಮದ ಬಗ್ಗೆ ಲೋಕಸಭೆಯಲ್ಲಿ ಬಾಯಿಗೆ ಬಂದ ಹಾಗೆ ಮಾತನಾಡಿದ ಯುವರಾಜನನ್ನು ಯಾವ ಸನ್ಯಾಸಿ ಕೂಡ ಕರೆದು ಬುದ್ಧಿ ಹೇಳಲಿಲ್ಲ. ಆದರೆ ಪೇಜಾವರ ಶ್ರೀಗಳು ಧೈರ್ಯವಾಗಿ ಆ ಬಗ್ಗೆ ತಮ್ಮ ನಿಲುವನ್ನು ಕೊಟ್ಟಿದ್ದಾರೆ. ಉಡುಪಿಯ ಸನ್ಯಾಸ ಪರಂಪರೆಯ ಬಗ್ಗೆ ಹೆಮ್ಮೆಪಡುವುದನ್ನು ಬಿಟ್ಟು ಹಿಂದುಗಳಾಗಿಯೇ ತಾವುಗಳು ನಂಜಿ ಕಾರುತ್ತಿದ್ದೀರಿ ಎಂದರೆ ನಿಮ್ಮ ದಯನೀಯ ಪರಿಸ್ಥಿತಿಯನ್ನು ಕಂಡು ಮರುಕ ಹುಟ್ಟುತ್ತದೆ.

ರಾಹುಲ್ ಗಾಂಧಿಯನ್ನು ಬೆಂಬಲಿಸಲು ಹೋಗಿ ನಿಮ್ಮ ಮೇಲಿರುವ ನಿಮ್ಮ ಮನೆಯವರ ನಂಬಿಕೆಯನ್ನು ಕೂಡ ಕಳೆದುಕೊಳ್ಳಬೇಡಿ. ರಾಜಕೀಯ ಶಾಶ್ವತವಲ್ಲ ಆದರೆ ನಾವು ಹುಟ್ಟಿದ ಧರ್ಮ ಅದು ನಮ್ಮ ತಾಯಿಯಂತೆ ಶಾಶ್ವತ. ತಾಯಿಯನ್ನು ಬಿಡದೆ ಬದುಕುವುದು ನಮ್ಮ ಕರ್ತವ್ಯ. ಬಿಟ್ಟು ಬದುಕುತ್ತೇವೆ ಎಂದರೆ ತಾಯಿಗೆ ಏನು ನಷ್ಟವಿಲ್ಲ. ನಿಮ್ಮ ನಡೆ ನಿಮ್ಮ ತಾಯಿಯ ಕಡೆ ಇರಲಿ.!

 

 

0
Shares
  • Share On Facebook
  • Tweet It




Trending Now
ಚುನಾವಣೆ ಜಂಟಿ ಎದುರಿಸಿದ ಠಾಕ್ರೆ ಸಹೋದರರಿಗೆ ಶೂನ್ಯ ಸಂಪಾದನೆಯಿಂದ ತೀವ್ರ ಮುಖಭಂಗ!
ಸಂತೋಷ್ ಕುಮಾರ್ ಮುದ್ರಾಡಿ August 20, 2025
ಧರ್ಮಸ್ಥಳದ ವಿರುದ್ಧದ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂದು ಗೊತ್ತು, ಸಾಕ್ಷ್ಯವಿಲ್ಲ ಎಂದ ಹೆಗ್ಗಡೆ!
ಸಂತೋಷ್ ಕುಮಾರ್ ಮುದ್ರಾಡಿ August 20, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಚುನಾವಣೆ ಜಂಟಿ ಎದುರಿಸಿದ ಠಾಕ್ರೆ ಸಹೋದರರಿಗೆ ಶೂನ್ಯ ಸಂಪಾದನೆಯಿಂದ ತೀವ್ರ ಮುಖಭಂಗ!
    • ಧರ್ಮಸ್ಥಳದ ವಿರುದ್ಧದ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂದು ಗೊತ್ತು, ಸಾಕ್ಷ್ಯವಿಲ್ಲ ಎಂದ ಹೆಗ್ಗಡೆ!
    • ಇನ್ನು ವಿಮಾನದಂತೆಯೆ ರೈಲಿನಲ್ಲಿಯೂ ಲಗೇಜ್ ತೂಕದ ಪರಿಶೀಲನೆ! ಪ್ರಯಾಣಿಕರು ತಿಳಿದುಕೊಳ್ಳಬೇಕಾದ ವಿಷಯಗಳು...
    • ಧರ್ಮಸ್ಥಳದ ಷಡ್ಯಂತ್ರದ ಹಿಂದೆ ಸಸಿಕಾಂತ್ ಸೆಂಥಿಲ್ ಕೈವಾಡ ಎಂದ ಜನಾರ್ಧನ ರೆಡ್ಡಿ!
    • ಕೆಂಪುಕಲ್ಲು ಓವರ್ ಲೋಡ್ ಸಾಗಾಟ! ಕೇಸ್ ದಾಖಲು
    • ಮುಂದಿನ ಚುನಾವಣೆಯಲ್ಲಿಯೂ ನನ್ನ ಕೈ ಹಿಡಿಯಿರಿ: ವರುಣಾದಲ್ಲಿ ಸಿಎಂ ಮನವಿ!
    • ಮಂಗಳೂರು: ಈಜುತ್ತಿರುವಾಗಲೇ ಹೃದಯಾಘಾತ: ಮೃತಪಟ್ಟ ಕೋಚ್!
    • ಅಗಸ್ಟ್ 16 ರಂದು ಧರ್ಮಸ್ಥಳ ಚಲೋ ಅಭಿಯಾನ - ಶಾಸಕ ವಿಶ್ವನಾಥ!
    • ಧರ್ಮಸ್ಥಳ ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆಯಾದರೆ ಸಹಿಸುವುದಿಲ್ಲ:- ಶಾಸಕ ಕಾಮತ್
    • ಎದೆಹಾಲು ದಾನದಲ್ಲಿ ದಾಖಲೆ ಬರೆದ ತಮಿಳುನಾಡಿನ ಮಹಿಳೆ!
  • Popular Posts

    • 1
      ಚುನಾವಣೆ ಜಂಟಿ ಎದುರಿಸಿದ ಠಾಕ್ರೆ ಸಹೋದರರಿಗೆ ಶೂನ್ಯ ಸಂಪಾದನೆಯಿಂದ ತೀವ್ರ ಮುಖಭಂಗ!
    • 2
      ಧರ್ಮಸ್ಥಳದ ವಿರುದ್ಧದ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂದು ಗೊತ್ತು, ಸಾಕ್ಷ್ಯವಿಲ್ಲ ಎಂದ ಹೆಗ್ಗಡೆ!
    • 3
      ಇನ್ನು ವಿಮಾನದಂತೆಯೆ ರೈಲಿನಲ್ಲಿಯೂ ಲಗೇಜ್ ತೂಕದ ಪರಿಶೀಲನೆ! ಪ್ರಯಾಣಿಕರು ತಿಳಿದುಕೊಳ್ಳಬೇಕಾದ ವಿಷಯಗಳು...
    • 4
      ಧರ್ಮಸ್ಥಳದ ಷಡ್ಯಂತ್ರದ ಹಿಂದೆ ಸಸಿಕಾಂತ್ ಸೆಂಥಿಲ್ ಕೈವಾಡ ಎಂದ ಜನಾರ್ಧನ ರೆಡ್ಡಿ!

  • Privacy Policy
  • Contact
© Tulunadu Infomedia.

Press enter/return to begin your search