ಟೀಮ್ ಭಾರತದ ಬೌಲಿಂಗ್ ಕೋಚ್ ಭಾರತೀಯ ಅಲ್ಲ!
ಟೀಮ್ ಭಾರತಕ್ಕೆ ಪ್ರಧಾನ ಕೋಚ್ ಆಗಿ ಗೌತಮ್ ಗಂಭೀರ್ ಆಯ್ಕೆಯಾದ ನಂತರ ಬೌಲಿಂಗ್ ಕೋಚ್ ಆಗಿ ಯಾರು ನೇಮಕ ಆಗುತ್ತಾರೆ ಎಂಬ ಪ್ರಶ್ನೆ ಉದ್ಭವಿಸಿತ್ತು. ಯಾಕೆಂದರೆ ಗಂಭೀರ್ ಎಷ್ಟೇಂದರೂ ಬ್ಯಾಟಿಂಗ್ ಸ್ಪೆಶಲಿಸ್ಟ್. ಆರಂಭಿಕ ದಾಂಡಿಗನಾಗಿ ಭಾರತ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುತ್ತಿದ್ದರು.
ಹಾಗಿರುವಾಗ ಅವರು ಪ್ರಧಾನ ಕೋಚ್ ಆದ ನಂತರ ಅವರಷ್ಟೇ ಸಾಮರ್ತ್ಯದ ಬೌಲಿಂಗ್ ಕೋಚ್ ಒಬ್ಬರ ಅವಶ್ಯಕತೆ ಭಾರತಕ್ಕೆ ಇತ್ತು. ಭಾರತ ಕ್ರಿಕೆಟ್ ತಂಡದ ಯಾರಾದರೂ ಮಾಜಿ ಬೌಲರ್ ಆಯ್ಕೆಯಾಗಬಹುದು ಎಂಬ ನಿರೀಕ್ಷೆ ಇತ್ತು. ಅದಕ್ಕಾಗಿ ಸರಿಯಾಗಿ ಕೆಲವರ ಹೆಸರುಗಳು ಕೂಡ ಗಾಸಿಪ್ ಗಳಾಗಿ ಸುದ್ದಿಯಲ್ಲಿದ್ದವು. ಅಳೆದೂ ತೂಗಿ ಕೊನೆಗೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ವಿದೇಶಿ ಆಟಗಾರರನನ್ನು ಇದಕ್ಕೆ ಆಯ್ಕೆ ಮಾಡಿದೆ. ಅವರ ಹೆಸರು ಮೋರ್ನೆ ಮೊರ್ಕೆಲ್.
ಮೋರ್ನೆ ಮೊರ್ಕೆಲ್ ಸೌತ್ ಆಫ್ರಿಕಾದ ಸ್ಟಾರ್ ಬೌಲರ್. ಅವರು 86 ಟೆಸ್ಟ್ ಪಂದ್ಯಗಳನ್ನು ಆಡಿದ್ದು 309 ವಿಕೆಟ್ ಉರುಳಿಸಿದ್ದಾರೆ. ಅದರೊಂದಿಗೆ 117 ಏಕದಿನ ಪಂದ್ಯಗಳನ್ನು ಆಡಿದ್ದು, 188 ವಿಕೆಟ್ ಕಬಳಿಸಿದ್ದಾರೆ. ಸೆಪ್ಟೆಂಬರ್ 1 ನೇ ತಾರೀಕಿನಿಂದ ಟೀಮ್ ಭಾರತದ ಬೌಲಿಂಗ್ ಕೋಚ್ ಆಗಿ ಕೆಲಸ ಶುರು ಮಾಡಲಿರೋ ಮೊರ್ಕೆಲ್ ಈ ಹಿಂದೆ ಪಾಕಿಸ್ತಾನದ ಬೌಲಿಂಗ್ ಕೋಚ್ ಕೂಡ ಆಗಿ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. ಇವರು ಬಾಂಗ್ಲಾ ದೇಶದ ವಿರುದ್ಧ ಭಾರತದ ಟೆಸ್ಟ್ ಸರಣಿಯ ವೇಳೆಗೆ ತಂಡವನ್ನು ಸೇರಿಕೊಳ್ಳುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಈ ಬಗ್ಗೆ ಬಿಸಿಸಿಐ ಅಧಿಕೃತ ಘೋಷಣೆ ಮಾಡುವುದು ಮಾತ್ರ ಬಾಕಿ.
Leave A Reply