ಉಡುಪಿ ಮಠದ ಹೊರಗೆ ನಡೆಯುತ್ತಿದೆ ಇಂತಹ ಗುಪ್ತ ವ್ಯವಹಾರ!
ಉಡುಪಿ ಜಿಲ್ಲೆಯ ಶ್ರೀ ಕೃಷ್ಣ ಮಠ ಕರಾವಳಿ ಜಿಲ್ಲೆಗಳಲ್ಲಿ ಮಾತ್ರವಲ್ಲ, ಇಡೀ ರಾಜ್ಯಕ್ಕೆ, ರಾಷ್ಟ್ರಕ್ಕೆ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿಯೂ ತುಂಬಾ ಪ್ರಸಿದ್ಧವಾಗಿರುವ ತಾಣ. ಪ್ರಪಂಚದ ವಿವಿಧ ಭಾಗಗಳಿಂದ ಇಲ್ಲಿಗೆ ಭಕ್ತರು ಆಗಮಿಸುತ್ತಾರೆ. ಹಿಂದೂ ಆಸ್ತಿಕರು ಕೃಷ್ಣ ಜನ್ಮಾಷ್ಟಮಿ ಸಹಿತ ವರ್ಷದ ವಿವಿಧ ಹಬ್ಬಗಳು, ರಥೋತ್ಸವದ ದಿನಗಳಲ್ಲಿ ಸಾಗರೋಪಾದಿಯಲ್ಲಿ ಇಲ್ಲಿ ಹರಿದು ಬರುತ್ತಾರೆ. ಇಂತಹ ಉಡುಪಿಯ ಶ್ರೀ ಕೃಷ್ಣ ಮಠದ ರಥಬೀದಿಯಲ್ಲಿ ವಿವಿಧ ಮಳಿಗೆಗಳು, ಸಣ್ಣಪುಟ್ಟ ಅಂಗಡಿಗಳು ಇವೆ. ಕೃಷ್ಣಮಠದ ಪರಿಸರ ಎಂದ ಕೂಡಲೇ ಇಲ್ಲಿ ಹಿಂದೂಗಳು ಮಾತ್ರ ವ್ಯಾಪಾರ ಮಾಡುತ್ತಾರೆ ಎನ್ನುವ ನಂಬಿಕೆ ಎಲ್ಲರದ್ದು. ಹಿಂದೂ ದೇವಸ್ಥಾನಗಳ ಆವರಣಗಳಲ್ಲಿ, ಹಿಂದೂಗಳ ಹಬ್ಬ, ಹರಿದಿನಗಳ ಸಂದರ್ಭದಲ್ಲಿ ಅಲ್ಲಿನ ಜಾತ್ರೆಗಳಲ್ಲಿ ಹಿಂದೂಗಳು ಅಂಗಡಿಗಳನ್ನು ಹಾಕುವ ವಿಚಾರಕ್ಕೆ ಈಗಾಗಲೇ ಈ ಬಗ್ಗೆ ಸಾಕಷ್ಟು ಚರ್ಚೆ, ವಾದ, ವಿವಾದಗಳು ನಡೆದು ವಿಷಯ ತಾರಕಕ್ಕೆ ಏರಿ ಹೋಗಿದೆ. ಜಾತ್ರೆಗಳ ಸಂದರ್ಭಗಳಲ್ಲಿ ದೇವಸ್ಥಾನದ ಹೊರಗೆ ಹಿಂದೂಗಳು ಮಾತ್ರ ಅಂಗಡಿಗಳನ್ನು ತೆರೆಯಬೇಕೆಂಬ ವಿಷಯ ಸಾಕಷ್ಟು ಮುನ್ನಲೆಗೆ ಬಂದ ಕಾರಣ ಮುಸ್ಲಿಮರು ಅದಕ್ಕೆ ಪ್ರತಿರೋಧ ಒಡಿದ್ದರೂ ನಂತರ ಆ ವಿಷಯ ಅಲ್ಲಿಗೆ ತಣ್ಣಗಾಗಿತ್ತು.
ಕರಾವಳಿಯಲ್ಲಿ ಪರಿಸ್ಥಿತಿ ಹೀಗಿರುವಾಗ ಉಡುಪಿ ಶ್ರೀಕೃಷ್ಣ ಮಠದ ಕನಕನ ಕಿಂಡಿಯ ಸಮೀಪವೇ ಹಣ್ಣುಗಳನ್ನು ಮಾರುವ ಅಂಗಡಿಯಲ್ಲಿ ನಡೆದ ಘಟನೆಯ ಬಗ್ಗೆ ಭಕ್ತರೊಬ್ಬರ ಅನುಭವ ಈಗ ವೈರಲ್ ಆಗಿದೆ. ಆ ಹಣ್ಣಿನ ಅಂಗಡಿಯಲ್ಲಿ ಹಣ್ಣುಗಳನ್ನು ಖರೀದಿ ಮಾಡಿದ ಗ್ರಾಹಕರೊಬ್ಬರು ಫೋನ್ ಪೇ ಮೂಲಕ ಹಣ ಪಾವತಿಸಲು ನಿರ್ಧರಿಸಿದ್ದರು. ಅದಕ್ಕಾಗಿ ತಮ್ಮ ಮೊಬೈಲ್ ಫೋನ್ ತೆಗೆದು ಅಲ್ಲಿದ್ದ ಕ್ಯೂ ಆರ್ ಕೋಡ್ ಮೇಲೆ ಹಿಡಿಯಬೇಕು ಎನ್ನುವಷ್ಟರಲ್ಲಿ ಆ ಅಂಗಡಿಯವನು ಆ ಕ್ಯೂ ಆರ್ ಕೋಡ್ ನಲ್ಲಿ ಬೇಡಾ, ಇನ್ನೊಂದರಲ್ಲಿ ಮಾಡಿ ಎಂದು ಬೇರೆ ಕ್ಯೂ ಆರ್ ಕೋಡ್ ಅವರ ಎದುರು ಹಿಡಿದಿದ್ದಾನೆ. ಫೋನ್ ಪೇ ಮೂಲಕ ಹಣ ಪಾವತಿಸುವವರಿಗೆ ತಾವು ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡುವಾಗ ಹಣ ಯಾರ ಅಕೌಂಟಿಗೆ ಹೋಗುತ್ತೆ ಎನ್ನುವ ವಿಷಯ ಗೊತ್ತಾಗುತ್ತದೆ. ಹಾಗೆ ಇಲ್ಲಿಯೂ ಈ ಗ್ರಾಹಕರು ಹಣ ಪಾವತಿಸಲು ಸ್ಕ್ಯಾನ್ ಮಾಡುವಾಗ ಜಮೀರ್ ಖಾನ್ ಧಾರವಾಡ ಎನ್ನುವವರ ಹೆಸರನ್ನು ಸೂಚಿಸುತ್ತಿತ್ತು. ಇದರಿಂದ ಆ ಭಕ್ತರು ಆಶ್ಚರ್ಯಚಕಿತರಾಗಿದ್ದಾರೆ. ದೇವರ ಸನ್ನಿಧಿಯಿಂದ ಕೆಲವೇ ಗಜಗಳ ದೂರದಲ್ಲಿ ಹೀಗೆ ಎದುರಿಗೆ ಒಂದು, ಹಿಂದೆ ಒಂದು ಆಟ ನಡೆಯುತ್ತಿದ್ದರೆ, ಇನ್ನು ಬೇರೆಡೆ ಹೇಗಿರಬೇಡಾ. ಇದು ಒಬ್ಬ ಭಕ್ತನ ನಂಬಿಕೆಗೆ ವಿರೋಧವಾಗಿರುವುದಕ್ಕೆ ಯಾವುದೇ ಸಂಶಯವಿಲ್ಲ.
ಮೇಲ್ನೋಟಕ್ಕೆ ಹಿಂದೂ ಅಂಗಡಿ ತರಹ ಬಿಂಬಿಸಿ, ಯಾರೋ ದೂರದ ಭಕ್ತರು ಬಂದಾಗ ಅವರು ಫೋನ್ ಪೇ ಮಾಡಬೇಕು ಎಂದು ಅಂದುಕೊಳ್ಳುವಷ್ಟರಲ್ಲಿ ಬೇರೆ ಕ್ಯೂ ಆರ್ ಕೋಡ್ ಎದುರಿಟ್ಟು ವಂಚನಾ ಕೃತ್ಯ ಮಾಡುವ ಈ ಕಾಣದ ಕೈಗಳ ಮೋಸದ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ಆದಷ್ಟು ಬೇಗ ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುವುದು ಕೃಷ್ಣ ಭಕ್ತರ ಆಶಯ
Leave A Reply