ಕ್ಲೀನ್ ಸ್ವೀಪ್ ಬಳಿಕ ಮತ್ತೆರಡು ದೊಡ್ಡ ಸಿರೀಸ್ ಗಳಿಗೆ ಸಜ್ಜಾಗಬೇಕಿದೆ ಭಾರತ!
ಭಾರತ ಮತ್ತು ನ್ಯೂಜಿಲ್ಯಾಂಡ್ ಟೆಸ್ಟ್ ಸಿರೀಸ್ ಈಗ ತಾನೆ ಮುಗಿದಿದೆ. ಮೂರು ಪಂದ್ಯಗಳ ಸರಣಿಯಲ್ಲಿ ಕ್ಲೀನ್ ಸ್ವೀಪ್ ಮಾಡಿದ ನ್ಯೂಜಿಲ್ಯಾಂಡ್ ಹೆಮ್ಮೆಯಿಂದ ಬೀಗಿದೆ. ಇದೇ ಹೊತ್ತಿನಲ್ಲಿ ಭಾರತ ತಂಡವು ಎರಡು ಮಹತ್ತರ ಸರಣಿಗಳಿಗೆ ಮತ್ತೆ ಸಜ್ಜಾಗುವ ಅನಿವಾರ್ಯತೆ ಇದೆ.
ಯಾವ ಸರಣಿಗಳು!
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಸರಣಿ ಇದೇ ನವೆಂಬರ್ 8 ರಿಂದ ಆರಂಭವಾಗಲಿದೆ. ಮೊದಲು ಭಾರತ ತಂಡ ಟಿ20 ಪಂದ್ಯಗಳನ್ನು ಆಡಿದರೆ ನಂತರ ಟೆಸ್ಟ್ ಸರಣಿಯನ್ನು ಕೂಡ ಆಡಲಿದೆ. ಇದಕ್ಕಾಗಿ ಪ್ರತ್ಯೇಕ ತಂಡಗಳನ್ನು ಘೋಷಿಸಲಾಗಿದೆ. ದಕ್ಷಿಣ ಆಫ್ರಿಕಾದ ಪ್ರವಾಸದ ನಂತರ ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಕೊನೆಯ ಟೆಸ್ಟ್ ಸರಣಿಯನ್ನು ಆಸ್ಟ್ರೇಲಿಯಾ ವಿರುದ್ಧ ಆಡಲಿದೆ. ಈ ಸರಣಿಯು ನವೆಂಬರ್ 22 ರಿಂದ ಆರಂಭವಾಗಲಿದೆ. ಭಾರತ ಟಿ20 ತಂಡ ಹೀಗಿದೆ: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ ( ವಿಕೆಟ್ ಕೀಪರ್), ರಿಂಕು ಸಿಂಗ್, ತಿಲಕ ವರ್ಮಾ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರಮಣ್ ದೀಪ್ ಸಿಂಗ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ಅರ್ಷ್ ದೀಪ್ ಸಿಂಗ್, ವಿಜಯ ಕುಮಾರ್ ವೈಶಾಕ್, ಆವೇಶ್ ಖಾನ್, ಯಶ್ ದಯಾಳ್
ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ ( ನಾಯಕ), ಜಸ್ ಪ್ರೀತ್ ಬುಮ್ರಾ ( ಉಪನಾಯಕ), ಯಶಸ್ವಿ ಜೈಸ್ವಾಲ್, ಅಭಿಮನ್ಯು ಈಶ್ವರನ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ರಿಷಬ್ ಪಂತ್ (ವಿಕೆಟ್ ಕೀಪರ್), ಸರ್ಫ್ ರಾಝ್ ಖಾನ್, ಧ್ರುವ್ ಜುರೆಲ್ ( ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ ಜಡೇಜಾ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಪ್ರಸಿದ್ಧ ಕೃಷ್ಣ, ಹರ್ಷಿತ್ ರಾಣಾ, ನಿತೇಶ್ ಕುಮಾರ್ ರೆಡ್ಡಿ. ವಾಷ್ಟಿಂಗನ್ ಸುಂದರ್.
Leave A Reply