ಛಾವಾ ಸಂಸತ್ತಿನಲ್ಲಿ ಗುರುವಾರ ಪ್ರದರ್ಶನ: ಮೋದಿ ವೀಕ್ಷಣೆ!

ಛಾವಾ ಸಿನೆಮಾ ಈಗಾಗಲೇ ರಾಷ್ಟ್ರವ್ಯಾಪಿ ಪ್ರದರ್ಶನಗೊಂಡು ಯಶಸ್ವಿಯಾಗಿದೆ. ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಕೋಮು ಗಲಭೆಗೆ ಛಾವಾ ಸಿನೆಮಾ ಕೂಡ ಕಾರಣ ಎಂದು ಒಂದು ವರ್ಗ ಬಿಂಬಿಸಿತ್ತು.
ಛತ್ರಪತಿ ಶಿವಾಜಿ ಮಹಾರಾಜರ ಮಗ ಛತ್ರಪತಿ ಸಾಂಬಾಜಿ ಮಹಾರಾಜ್ ಅವರ ಶೌರ್ಯ, ಕಿಚ್ಚು, ಪರಾಕ್ರಮದ ಕಥೆ ಹೊಂದಿರುವ ಈ ಹಿಂದಿ ಸಿನೆಮಾದಲ್ಲಿ ನಾಯಕನಟರಾಗಿ ವಿಕ್ಕಿ ಕೌಶಲ್ ನಟಿಸಿದ್ದಾರೆ. ಈ ಸಿನೆಮಾದ ಬಗ್ಗೆ ಅದೇನೆ ವಾದ, ವಿವಾದಗಳು ಇದ್ದರೂ ದೇಶವನ್ನು ಪ್ರೀತಿಸುವವರಲ್ಲಿ ಈ ಸಿನೆಮಾ ಹುಟ್ಟಿಸಿದ ಕ್ರೇಜ್ ಬೇರೆಯದ್ದೇ ಆಗಿದೆ. ಈ ಸಿನೆಮಾವನ್ನು ಮೆಚ್ಚಿದವರ, ಟೀಕಿಸುವವರ ವಿಷಯಗಳೇನೆ ಇರಲಿ ಗುರುವಾರ ಈ ಸಿನೆಮಾ ಈಗ ದೆಹಲಿಯ ನೂತನ ಸಂಸತ್ ಭವನದಲ್ಲಿ ಸಂಸದರಿಗಾಗಿ ಪ್ರದರ್ಶನಗೊಳ್ಳಲಿದೆ.
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವರು, ಸಂಸದರು ಮಾರ್ಚ್ 27 ರಂದು ವಿಶೇಷ ಪ್ರದರ್ಶನದಲ್ಲಿ ಸಿನೆಮಾ ವೀಕ್ಷಿಸಲಿದ್ದಾರೆ. ನಿರ್ಮಾಪಕ ದಿನೇಶ್ ವಿಜನ್, ನಿರ್ದೇಶಕ ಲಕ್ಷ್ಮಣ್ ಉಟ್ಟೆಕರ್, ನಾಯಕ ನಟ ವಿಕ್ಕಿ ಕೌಶಲ್ ಹಾಗೂ ಚಿತ್ರತಂಡ ಉಪಸ್ಥಿತರಿರುವರು.
Leave A Reply