ಭಾರತದ ತಾಳ್ಮೆ ಪರೀಕ್ಷಿಸಿದರೆ ತಕ್ಕ ಶಾಸ್ತಿ: ಪಾಕಿಸ್ತಾನಕ್ಕೆ ಭಾರತ ಎಚ್ಚರಿಕೆ
Posted On October 31, 2017
0

ದೆಹಲಿ: ಪಾಕಿಸ್ತಾನ ಗಡಿ ಪ್ರದೇಶದಲ್ಲಿ ಪದೇಪದೆ ಉಪಟಳ ಮಾಡುವ ಮೂಲಕ ಭಾರತದ ತಾಳ್ಮೆ ಪರೀಕ್ಷಿಸಿದರೆ ತಕ್ಕ ಶಾಸ್ತಿ ಮಾಡಲಾಗುವುದು ಎಂದು ಪಾಕಿಸ್ತಾನಕ್ಕೆ ಭಾರತೀಯ ಸೇನಾ ಕಾರ್ಯಚರಣೆ ಪ್ರಧಾನ ನಿರ್ದೇಶಕ ಲೆ.ಜ.ಎ.ಕೆ.ಭಟ್ ಎಚ್ಚರಿಸಿದ್ದಾರೆ.
ನಾವು ಶಾಂತಿ ಕಾಪಾಡಲು ಬದ್ಧರಾಗಿದ್ದೇವೆ. ಸಂಯಮವೂ ನಮಗಿದೆ. ಆದರೆ ಪ್ರಚೋದನೆ ಮಾಡಿದರೆ ಮಾತ್ರ ನಾವು ಸುಮ್ಮನಿರಲಾರವು ಹಾಗೂ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸದೆ ಇರಲಾರೆವು ಎಂದಿದ್ದಾರೆ.
ಪಾಕಿಸ್ತಾನ ಭಾರತದ ಗಡಿಯಲ್ಲಿ ತನ್ನ ನಾಗರಿಕರನ್ನು ನಿಯೋಜಿಸಿ ಮಾಹಿತಿ ಕಲೆಹಾಕಲು ದುರುಳತನ ಮಾಡುತ್ತಿದೆ ಎಂಬ ವಿಷಯ ಗೊತ್ತು. ಆದರೆ ನಾವು ಅದನ್ನು ಮುಂದುವರಿಯಲು ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.
ಗಡಿಯಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸುತ್ತಲೇ ಇದೆ, ಅದಕ್ಕೆ ನಮ್ಮ ಯೋಧರೂ ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ಮುಂದೆಯೂ ಇದೇ ಪ್ರತಿದಾಳಿಯ ಉತ್ತರ ನೀಡಲಾಗುವುದು. ಅದರಲ್ಲಿ ಯಾವುದೇ ರಾಜಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Trending Now
ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
September 17, 2025
ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
September 17, 2025