ಒತ್ತಾಯದ ಮತಾಂತರ: ಕೇರಳ ಹೈಕೋರ್ಟ್ ಗೆ ದೂರು ಸಲ್ಲಿಸಿದ 25 ವರ್ಷದ ಯುವತಿ
ತಿರುವನಂತಪುರಂ: ಮಹಮ್ಮದ ರಿಯಾಜ್ ಎಂಬ ಮತಾಂಧನ್ನೊಬ್ಬ ನನಗೆ ಮೋಸದಿಂದ ಮದುವೆಯಾಗಿದ್ದು, ಒತ್ತಾಯ ಪಡಿಸಿ ಮತಾಂತರ ಮಾಡಿಸಿದ್ದಾನೆ. ಅಲ್ಲದೇ ಲೈಗಿಂಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾನೆ ಎಂದು 25 ವರ್ಷದ ಯುವತಿಯೊಬ್ಬಳು ಕೇರಳ ಹೈಕೋರ್ಟ್ ಗೆ ದೂರು ನೀಡಿದ್ದಾಳೆ.
ತನ್ನ ಮದುವೆಯನ್ನು ನಿಷ್ಕ್ರಿಯಗೊಳಿಸಬೇಕು. ಅಲ್ಲದೇ ಮತಾಂಧರಿಂದ ಆಗುತ್ತಿರುವ ಮೋಸದ ಮತಾಂತರ ಮತ್ತು ಲೈಗಿಂಕವಾಗಿ ದುರ್ಬಳಕೆ ಮಾಡುತ್ತಿರುವ ರಾಷ್ಟ್ರ ವಿರೋಧಿಗಳ ಕುರಿತು ರಾಷ್ಟ್ರೀಯ ತನಿಖಾ ದಳದಿಂದ ಸೂಕ್ತ ತನಿಖೆ ನಡೆಸಬೇಕು ಎಂದು ಹೈ ಕೋರ್ಟ್ ಗೆ ಮನವಿ ಮಾಡಿದ್ದಾಳೆ.
ಬೆಂಗಳೂರಿನಲ್ಲಿ ಬೇಟಿಯಾದ ಮಹಮ್ಮದ ರಿಯಾಜ್ ಎಂಬಾತನ ಜತೆ ಸಂಬಂಧ ಬೆಳೆಸಿದ್ದೆ. ಆದರೆ ರಿಯಾಜ್ ವಿಡಿಯೋ ರೆಕಾರ್ಡ್ ಮಾಡಿ ನನ್ನನ್ನು ಬ್ಲ್ಯಾಕ್ ಮೇಲ್ ಮಾಡಿ, ಮುಸ್ಲಿಂ ಧರ್ಮಕ್ಕೆ ಮತಾಂತರವಾಗು ಹಾಗೂ ಮದುವೆಯಾಗು ಎಂದು ಒತ್ತಾಯಿಸಿದ. ಮದುವೆಯಾದ ನಂತರ ಸೌದಿ ಅರೇಬಿಯಾಕ್ಕೆ ಕರೆದುಕೊಂಡು ಹೋಗಿ ಲೈಗಿಂಕ ಗುಲಾಮಳಾಗಿ ಬಳಸಿಕೊಳ್ಳಲಾಯಿತು. ನಂತರ ನನ್ನನ್ನು ಸಿರಿಯಾಕೆ ಕರೆದುಕೊಂಡು ಹೋಗಲು ಪ್ರಯತ್ನಿಸಲಾಯಿತು ಎಂದು ತಿಳಿಸಿದ್ದಾಳೆ.
ಮಹಮ್ಮದ ರಿಯಾಜ್ ಪಿಎಫ್ ಐ ಸಂಘಟನೆಯ ಕಾರ್ಯಕರ್ತ ಎಂಬುದನ್ನು ತಿಳಿಸಿದ್ದಾಳೆ. ನಂತರ ಪೋಷಕರನ್ನು ಸಂಪರ್ಕಿಸಿ, ನನ್ನನ್ನು ರಕ್ಷಿಸಿಕೊಳ್ಳಲು ಹರಸಾಹಸ ಪಟ್ಟಿದ್ದೇನೆ ಎಂದು ತಿಳಿಸಿದ್ದಾಳೆ.
ಯುವತಿ ಕೇರಳದವಳಾಗಿದ್ದು, ಮೂಲ ಗುಜರಾತ್ ನವಳು ಎಂದು ತಿಳಿದು ಬಂದಿದೆ. ಕೇರಳದಲ್ಲಿ ನಡೆಯುತ್ತಿರುವ ಮತಾಂತರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳ ಕುರಿತು ರಾಷ್ಟ್ರೀಯ ತನಿಖಾ ದಳ ಇತ್ತೀಚೆಗೆ ವರದಿ ನೀಡಿತ್ತು. ಅದರಲ್ಲಿ ವಿಶೇಷವಾಗಿ ಮುಸ್ಲಿಂ ಸಂಘಟನೆ ಪಿಎಫ್ಐ ಕೂಡ ಭಾಗಿಯಾಗಿದೆ ಎಂದು ರಾಷ್ಟ್ರೀಯ ಸುದ್ದಿವಾಹಿನಿಯೊಂದು ನಡೆಸಿದ ಗುಪ್ತ ಕಾರ್ಯಾಚರಣೆಯಲ್ಲಿ ಬಯಲಾಗಿತ್ತು.
Leave A Reply