ನೋಟು ನಿಷೇಧ, ಎನ್ಐಎ ಗುನ್ನ, ಕಾಶ್ಮೀರದಲ್ಲಿ ಕಲ್ಲು ತೂರಾಟ ಶೇ.90ರಷ್ಟು ಕಡಿಮೆ!
ಶ್ರೀನಗರ: ದೇಶದಲ್ಲಿ ನರೇಂದ್ರ ಮೋದಿ ಜಾರಿಗೆ ತಂದ ನೋಟು ನಿಷೇಧ ಹಾಗೂ ಉಗ್ರರಿಂದ ಹಣ ಪಡೆದು ಗಲಭೆಗೆ ಪ್ರಚೋದನೆ ನೀಡುವವರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ ಎನ್ಐಎ ದಾಳಿ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರದಲ್ಲಿ ಕಲ್ಲು ತೂರಾಟ ಪ್ರಕರಣ ಕಡಿಮೆಯಾಗಿದೆ ಎಂದು ತಿಳಿದುಬಂದಿದೆ.
“ಹಿಂದಿನ ವರ್ಷಕ್ಕೆ ಹೋಲಿಸಿದರೆ ಜಮ್ಮು-ಕಾಶ್ಮೀರದಲ್ಲಿ ಶೇ.90ರಷ್ಟು ಕಲ್ಲು ತೂರಾಟ ಪ್ರಕರಣಗಳು ಕಡಿಮೆಯಾಗಿವೆ” ಎಂದು ರಾಜ್ಯ ಪೊಲೀಸ್ ಮುಖ್ಯಸ್ಥ ಎಸ್.ಪಿ.ವೇದ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಕಳೆದ ವರ್ಷ ದಿನಕ್ಕೆ 40-50 ಕಲ್ಲು ತೂರಾಟ ಪ್ರಕರಣ ನಡೆಯುತ್ತಿದ್ದವು. ಆದರೆ ಈಗ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಮುಖವಾಗಿದೆ. ಇತ್ತೀಚೆಗಂತೂ ಕೆಲವು ಪ್ರದೇಶಗಳಲ್ಲಿ ವಾರಗಟ್ಟಲೇ ಕಲ್ಲು ತೂರಾಟ ಪ್ರಕರಣ ದಾಖಲಾಗುತ್ತಿಲ್ಲ ಎಂದು ವಿವರಿಸಿದ್ದಾರೆ.
ಹೀಗೆ, ಕಲ್ಲು ತೂರಾಟ ಕಡಿಮೆಯಾಗು ನೋಟುಗಳ ನಿಷೇಧ, ಎನ್ಐಎ ದಾಳಿ ಹಾಗೂ ಸ್ಥಳೀಯರ ಸಹಕಾರವೇ ಕಲ್ಲು ತೂರಾಟಗಾರರ ಉಪಟಳ ಕಡಿಮೆಯಾಗಲು ಕಾರಣ ಎಂದು ವೇದ್ ಸ್ಪಷ್ಟಪಡಿಸಿದ್ದಾರೆ.
ಆದಾಗ್ಯೂ, ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಗೆ ಇತ್ತೀಚೆಗೆ ಕೇಂದ್ರ ಸರಕಾರ ದಿನೇಶ್ವರ್ ಶರ್ಮಾ ಎಂಬ ಸಂಧಾನಕಾರರನ್ನು ನೇಮಿಸಿದೆ. ಉಗ್ರರ ವಿರುದ್ಧವೂ ಕಾರ್ಯಾಚರಣೆ ನಡೆಸಲಾಗುತ್ತಿದೆ. ಒಟ್ಟಿನಲ್ಲಿ ಕೇಂದ್ರದ ನರೇಂದ್ರ ಮೋದಿ ಸರಕಾರ ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಗೆ ಕಟಿಬದ್ಧವಾಗಿ ಕಾರ್ಯನಿರ್ವಹಿಸುತ್ತಿದೆ. ಇದಕ್ಕೆ ಕಲ್ಲು ತೂರಾಟ ಪ್ರಕರಣಗಳ ಇಳಿಮುಖವೇ ನಿದರ್ಶನ.
Leave A Reply