ಅಷ್ಟಕ್ಕೂ ಪ್ರಧಾನಿ ನರೇಂದ್ರ ಮೋದಿ ಅವರೇಕೆ ಗಂಗಾ ಶುದ್ಧೀಕರಣ ಯೋಜನೆಗೆ ಕೈ ಹಾಕಿದ್ದು ಗೊತ್ತಾ?
Posted On November 23, 2017
ದೆಹಲಿ: ನರೇಂದ್ರ ಮೋದಿ ಅವರು ಪ್ರಧಾನಿಯಾಗುತ್ತಲೇ, ಗಂಗಾ ಶುದ್ಧೀಕರಣ ಯೋಜನೆ ರೂಪಿಸಿದರು. ಆಗ ಜನ ಇದೆಲ್ಲ ಆಗದ ಮಾತು ಎಂದು ಕೊಂಕು ನುಡಿದರು. ವಿರೋಧ ಪಕ್ಷಗಳೂ ವ್ಯಂಗ್ಯ ಮಾಡಿದವು. ಆದಾಗ್ಯೂ ಮೋದಿ ಯೋಜನೆ ಜಾರಿಗೆ ಅಸ್ತು ಎಂದಿದ್ದು 2020ರ ವೇಳೆಗೆ ಗಂಗಾನದಿ ಶುದ್ಧೀಕರಣಕ್ಕೆ 20 ಸಾವಿರ ಕೋಟಿ ರೂಪಾಯಿ ಅನುದಾನ ಘೋಷಿಸಿದ್ದಾರೆ. ಗಂಗಾನದಿ ತಟದಲ್ಲಿ ಕಸ ಸುರಿಯಬಾರದು ಎಂದು ರಾಷ್ಟ್ರೀಯ ಹಸಿರು ನಾಯಾಧೀಕರಣ ಆದೇಶ ನೀಡಿದೆ.
ಹಾಗಾದರೆ ಪ್ರಧಾನಿ ಮೋದಿ ಅವರೇಕೆ ಗಂಗಾ ಶುದ್ಧೀಕರಣ ಯೋಜನೆ ಜಾರಿಗೊಳಿಸಿದರೆ? ಗಂಗಾ ನದಿಗೇಕೆ ಪ್ರಾಮುಖ್ಯ? ಈ ನದಿ ಜನರಿಗೆ ಹೇಗೆ ಜೀವನದಿ? ಯಾವ ರಾಜ್ಯಗಳಿಗೆ ಈ ನದಿ ಉಪಯೋಗ? ತಿಳಿದುಕೊಳ್ಳಿ.
-
ಗಂಗಾ ಹಿಂದೂಗಳ ಪವಿತ್ರ ನದಿ. ಇದರ ಬಹುತೇಕ ತೀರದಲ್ಲಿ ಹಿಂದೂಗಳೇ ವಾಸಿಸಿರುವುದರಿಂದ ಪೂಜ್ಯನೀಯವಾಗಿ ಕಾಣುತ್ತಾರೆ. ಹರಿದ್ವಾರ ಮತ್ತು ಅಲಹಾಬಾದ್ ನಲ್ಲಿ ಕುಂಭಮೇಳ ಆಚರಿಸುವುದು ಇದೇ ನದಿ ತೀರದಲ್ಲಿ. ಗಂಗಾ ಸ್ನಾನ, ತುಂಗಾ ಪಾನ ಎಂಬುದು ನದಿಯ ಪ್ರಾಮುಖ್ಯಕ್ಕೆ ಹಿಡಿದ ಕನ್ನಡಿ.
-
ಗಂಗಾನದಿ ದೇಶದಲ್ಲಿ 10 ಲಕ್ಷ ಚದುರ ಕಿಲೋ ಮೀಟರ್ ವ್ಯಾಪ್ತಿ ಹರಡಿದೆ.
-
ಈ ನದಿ ಉತ್ತರ ಭಾರತದ 11 ರಾಜ್ಯಗಳಿಗೆ ಜೀವನದಿಯಾಗಿದೆ.
-
ಗಂಗಾ ನದಿಯಿಂದ 2.5 ಲಕ್ಷ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತದೆ. ಕೃಷಿ, ನೀರಾವರಿ, ಪ್ರವಾಸೋದ್ಯಮಕ್ಕೂ ನದಿ ಕಲ್ಪವೃಕ್ಷ.
-
11 ರಾಜ್ಯಗಳಲ್ಲಿ ಈ ನದಿ 2,525 ಕಿಲೋಮೀಟರ್ ಹರಿಯುತ್ತದೆ.
-
ಉತ್ತರಾಖಂಡ, ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಜಾರ್ಖಂಡ್, ಬಿಹಾರ ರಾಜ್ಯಗಳು ಗಂಗಾ ನದಿಯ ಬಹುಪಾಲು ಫಲಾನುಭವಿಗಳು.
-
ಗಂಗೋತ್ರಿ ಗಂಗಾ ನದಿ ಉಗಮಸ್ಥಾನ. ಬೇ ಆಫ್ ಬೆಂಗಾಲ್ ತಲುಪುವ ತಾಣ.
-
ಮೀನುಗಾರಿಕೆಗೂ ಗಂಗಾನದಿ ಹೇಳಿಮಾಡಿಸಿದ್ದು, ಸುಮಾರು 350 ವಂಶಾವಳಿಯ ಮೀನುಗಳು ಈ ನದಿಯಲ್ಲಿ ವಾಸಿಸುತ್ತವೆ. ಹಲವು ಜಲಚರಗಳ ವಾಸಸ್ಥಾನವೂ ಈ ನದಿಯಾಗಿದೆ.
- Advertisement -
Trending Now
ಕೆಆರ್ ಎಸ್ ರಸ್ತೆಗೆ ಸಿದ್ಧರಾಮಯ್ಯ ಹೆಸರು ಇಡಲು ಚಿಂತನೆ, ಪರ -ವಿರೋಧ!
December 25, 2024
ರಾಜ್ಯದಲ್ಲಿ ಪ್ರಪ್ರಥಮ ಮೂಳೆ ದಾನ!
December 25, 2024
Leave A Reply