ಪಂಜಾಬಿನಲ್ಲಿ ಆರೆಸ್ಸೆಸ್ ಮುಖಂಡನ ಕೊಲೆ ಪ್ರಕರಣ ಐಎನ್ಐ ತನಿಖೆ ಆರಂಭ
ಲುಧಿಯಾನಾ: ಪಂಜಾಬಿನ ಲುಧಿಯಾನದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡ ರವಿಂದರ್ ಗೋಸಾಯಿ ಕೊಲೆ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಲಾಗಿದೆ. ಎನ್ಐಎ ತನಿಖೆ ಆರಂಭಿಸಿದೆ. ಅಕ್ಟೋಬರ್ 17 ರಂದು ರವಿಂದರ್ ಗೋಸಾಯಿ ಅವರನ್ನು ಮೋಟಾರ್ ಸೈಕಲ್ ಮೇಲೆ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಲುಧಿಯಾನಾದ ಕೈಲಾಶ ನಗರದಲ್ಲಿ ಹತ್ಯೆಗೈದಿದ್ದರು.
ನವೆಂಬರ್ 22ರಂದು ಬಂಧಿಸಲಾಗಿದ್ದ ಆರೋಪಿಗಳಾದ ರಮಣದೀಪ್ ಸಿಂಗ್ ಮತ್ತು ಹರ್ದೀಪ್ ಶಿರಾರನ್ನು ಬಂಧಿಸಲಾಗಿತ್ತು. ಆರೋಪಿಗಳನ್ನು ವಶಕ್ಕೆ ಪಡೆದಿರುವ ಎನ್ಐಎ ತನಿಖೆ ನಡೆಸುತ್ತಿದೆ.
ಬಂಧಿತ ಆರೋಪಿಗಳು ಈ ಕೊಲೆಯ ಜತೆಗೆ ಪಂಜಾಬ್ ನಲ್ಲಿ 2016ರಲ್ಲಿ ನಡೆದ ಕೊಲೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಎನ್ಐಎ ತಿಳಿಸಿದೆ. ಅಲ್ಲದೇ ಗುಂಪು ಹಿಂದೂ ಮುಖಂಡರು ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡರನ್ನು ಗುರಿಯಾಗಿಸಿಟ್ಟುಕೊಂಡು ದುಷ್ಕೃತ್ಯ ನಡೆಸುತ್ತಿದೆ ಎಂಬ ಮಾಹಿತಿ ಹೊರ ಬಿದ್ದಿತ್ತು.
ಪಂಜಾಬ್ ನಲ್ಲಿ ಗಲಭೆ ಸೃಷ್ಟಿಸಲು ಪಾಕಿಸ್ತಾನ ಷಡ್ಯಂತ್ರ ಹೂಡಿದೆ. ಅದಕ್ಕಾಗಿ ಪಂಜಾಬ್ ಪ್ರತ್ಯೇಕ ರಾಷ್ಟ್ರದ ಹೋರಾಟಗಾರರಿಗೆ, ರೌಡಿಗಳಿಗೆ ಕುಮ್ಮಕ್ಕು ನೀಡಿ ಗಲಭೆ ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಇದಕ್ಕೆ ವಿದೇಶಗಳ ಸಹಾಯವನ್ನು ಪಾಕಿಸ್ತಾನ ಸರ್ಕಾರ ಪಡೆಯುತ್ತಿದೆ ಎಂಬ ಮಾಹಿತಿ ತನಿಖೆಯಿಂದ ಹೊರಬಂದಿತ್ತು.
Leave A Reply