2 ದಿನದಲ್ಲಿ ಇಷ್ಟೆಲ್ಲ ಆದರೂ ಒಬ್ಬರನ್ನಾದರೂ ಬಂಧಿಸಲು ಆದೇಶಿಸಿದಿರಾ ಸಿಎಂ?
ಭಾನುವಾರ ಹುಣಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಅವರನ್ನು ಬಂಧಿಸಿದ ಪ್ರಕರಣವನ್ನೇ ನೋಡಿ. ಹುಣಸೂರಿನಲ್ಲಿ ಹನುಮ ಜಯಂತಿ ಹಿನ್ನೆಲೆ ಅಪಾರ ಹನುಮ ಭಕ್ತರು ಮೆರವಣಿಗೆ ನಡೆಸುತ್ತಿದ್ದರು. ಆಗ ಇದ್ದಕ್ಕಿದ್ದ ಹಾಗೆ ಭಕ್ತರು ಹಾದಿ ಬದಲಾಯಿಸಿದ್ದಾರೆ ಎಂದು ಪ್ರತಾಪ್ ಸಿಂಹ ಸೇರಿ ಹಲವು ಜನರನ್ನು ಬಂಧಿಸಲಾಯಿತು.
ಇದರಿಂದ ಕೆರಳಿದ ಪ್ರತಾಪ್ ಸಿಂಹ ಪೊಲೀಸರಿಗೆ ಪ್ರಿವೆಂಟ್ ಆರ್ಡರ್ (ನಿರ್ಬಂಧ ಆದೇಶ) ತೋರಿಸಲು ಹೇಳಿದರು. ಆಗ ಪೊಲೀಸರು ತೋರಿಸದ ಕಾರಣ ಕಾರು ಚಲಾಯಿಸಿಕೊಂಡು ತೆರಳಿದ್ದು, ಬ್ಯಾರಿಕೇಡ್ ತಳ್ಳಿ ಹೋಗಿದ್ದಾರೆ.
ಹೀಗೆ ಪ್ರಕರಣ ಉದ್ವಿಗ್ನವಾಗುತ್ತಲೇ, ಎಚ್ಚೆತ್ತ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೈಸೂರು ಎಸ್.ಪಿ. ರವಿ ಡಿ.ಚನ್ನಣ್ಣನವರ್ ಅವರಿಗೆ ಕರೆ ಮಾಡಿ, ಕಾನೂನು ಸುವ್ಯವಸ್ಥೆ ಕಾಪಾಡಿ ಎಂದು ಪರೋಕ್ಷವಾಗಿ ಪ್ರತಾಪ್ ಸಿಂಹರನ್ನು ಬಂಧಿಸಿ ಎಂದು ಸೂಚಿಸಿದ್ದಾರೆ. ಕೊನೆಗೆ ಪೊಲೀಸರು ಪ್ರತಾಪ್ ಸಿಂಹರನ್ನು ಬಂಧಿಸಿ ರಾತ್ರಿವರೆಗೆ ಜೈಲಿನಲ್ಲಿಟ್ಟು ಬಿಡುಗಡೆ ಮಾಡಿದ್ದಾರೆ.
ಖಂಡಿತವಾಗಿಯೂ ಮುಖ್ಯಮಂತ್ರಿಯಾದವರು ಕಾನೂನು ಸುವ್ಯವಸ್ಥೆ ಕಾಪಾಡಿ ಎಂದು ಹೇಳುವ ಎಲ್ಲ ಅಧಿಕಾರ ಹಾಗೂ ಹಕ್ಕು ಹೊಂದಿದ್ದಾರೆ. ಆದರೆ ಅದು ಬರೀ ಹಿಂದೂಗಳ ವಿಷಯದಲ್ಲಿ, ಬಿಜೆಪಿ ಸಂಸದರಲ್ಲಿ ಮಾತ್ರವೇ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ?
ಅಷ್ಟಕ್ಕೂ ಎರಡು ದಿನದಲ್ಲಿ ರಾಜ್ಯದಲ್ಲಿ ಏನೇನು ಆಗಿದೆ ಗೊತ್ತಾ? ಶನಿವಾರ ಬೆಳಗಾವಿಯಲ್ಲಿ ಆಯೋಜಿಸಿದ್ದ ಈದ್ ಮಿಲಾದ್ ಹಬ್ಬದ ಮೆರವಣಿಗೆಯಲ್ಲಿ ಪಾಕಿಸ್ತಾನಿ ಸೈನ್ಯದ ಹಾಡು ಬಳಸಲಾಗಿದೆ. ಚಿಕ್ಕಮಗಳೂರಿನಲ್ಲಿ ನಡೆದ ದತ್ತ ಮಾಲಾಧಾರಿಗಳ ಮೇಲೆ ಮತಾಂಧರು ಕಲ್ಲು ತೂರಾಟ ನಡೆಸಿದ್ದಾರೆ.
ಹುಬ್ಬಳ್ಳಿಯ ಗಣೇಶ ಪೇಟೆಗೆ ನನಗೆ ಪಾಕಿಸ್ತಾನದ ಹಾಗೆ ಕಾಣಿಸುತ್ತಿದೆ. ಪಾಕಿಸ್ತಾನಕ್ಕೆ ಹೋಗುವ ಅವಶ್ಯಕತೆಯೇ ಇಲ್ಲ. ನಾವು ಒಗ್ಗಟ್ಟಿನಿಂದ ಸೆಟೆದು ನಿಂತರೆ ಯಾರೂ ನಮ್ಮ ತಂಟೆಗೆ ಬರುವುದಿಲ್ಲ. ಇಲ್ಲೇ ಪಾಕಿಸ್ತಾನ ನಿರ್ಮಾಣವಾಗಿದೆ ಎಂದು ಗಣೇಶಪೇಟೆ ಮಸೀದಿಯ ಮುಸ್ಲಿಂ ಮೌಲ್ವಿ ಅಬ್ದುಲ್ ಹಮೀದ್ ಖೈರಾತಿ ಹೇಳಿಕೆ ನೀಡಿದ್ದಾರೆ.
ಇಷ್ಟಾದರೂ ಮುಖ್ಯಮಂತ್ರಿಯವರು ಕಾನೂನು ಸುವ್ಯವಸ್ಥೆ ಕಾಪಾಡಿ ಎಂದು ಯಾವ ಎಸ್.ಪಿ.ಗಾದರೂ ಸೂಚನೆ ನೀಡಿದ್ದಾರೆಯೇ? ಒಬ್ಬರನ್ನಾದರೂ ಬಂಧಿಸಿ ಎಂದಿದ್ದಾರೆಯೇ? ಬಿಜೆಪಿ ಸಂಸದರು, ಹನುಮನ ಭಕ್ತರಿಗೆ ಮಾತ್ರವೇ ಮುಖ್ಯಮಂತ್ರಿಯವರ ಕಾನೂನು ಸುವ್ಯವಸ್ಥೆ ಅಂತಃಕರಣ ಕೆರಳುತ್ತದೆಯೇ? ಹನುಮ ಜಯಂತಿಯ ಮೆರವಣಿಗೆ ಅಂಕುಶ ಹಾಕಿಸಿದ ಸಿದ್ದರಾಮಯ್ಯನವರಿಂದ ಇದನ್ನು ಬಿಟ್ಟರೆ ಇನ್ನೇನನ್ನು ನಿರೀಕ್ಷಿಸಲು ಸಾಧ್ಯ.
ಅದಾಗಲೇ ಮುಖ್ಯಮಂತ್ರಿಯವರು ಮೌಢ್ಯ ನಿಷೇಧದ ಹೆಸರಲ್ಲಿ, ಹಿಂದೂಗಳ ಆಚರಣೆಗೆ ಕತ್ತರಿ ಹಾಕಿದ್ದಾರೆ. ಗಣೇಶ ಚತುರ್ಥಿಗೆ ಗಣೇಶ ಮೂರ್ತಿ ಮೆರವಣಿಗೆಗೆ ನಿರ್ಬಂಧ ಹೇರಿ ಹಿಂದೂ ವಿರೋಧಿ ಎಂಬುದನ್ನು ಸಾಬೀತುಪಡಿಸಿದ್ದಾರೆ. ಈಗ ಹನುಮ ಜಯಂತಿ ಹಾಗೂ ಬಿಜೆಪಿ ಸಂಸದರ ವಿರುದ್ಧವೂ ಪ್ರತಾಪ ತೋರಿಸಿದ್ದಾರೆ.
ಹೇಳಿ, ದತ್ತ ಮಾಲೆ ಮೆರವಣಿಗೆ ಮಾಡುವವರ ಮೇಲೆ ಕಲ್ಲೆಸೆದವರ ಬಂಧನಕ್ಕೆ ಆದೇಶಿಸದ ಸಿಎಂ, ಪ್ರತಾಪ್ ಸಿಂಹರ ವಿಚಾರದಲ್ಲಿ ರವಿ ಡಿ. ಚನ್ನಣ್ಣನವರಿಗೆ ಕರೆ ಮಾಡುತ್ತಾರೆಂದರೆ, ಇದೆಂಥ ಇಬ್ಬಂದಿತನ ಇರಬೇಕು?
Leave A Reply