ನಾನು ಹಿಂದೂ ಎಂದು ಆಕೆಯನ್ನು ಮದುವೆಯಾತ ಆತ ಇಸ್ಲಾಂಗೆ ಮತಾಂತರಗೊಳಿಸಿದ!
ಲಖನೌ: ದೇಶದಲ್ಲಿ ದಿನೇದಿನೆ ಲವ್ ಜಿಹಾದ್ ಪ್ರಕರಣಗಳು ಜಾಸ್ತಿಯಾಗುತ್ತಿರುವ ಆರೋಪ ಕೇಳಿಬರುತ್ತಿರುವ ಬೆನ್ನಲ್ಲೇ, ಉತ್ತರ ಪ್ರದೇಶದಲ್ಲೊಂದು ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದೆ.
ಉತ್ತರ ಪ್ರದೇಶದ ಗಾಝಿಯಾಬಾದ್ ನಲ್ಲಿ ಮೂರು ವರ್ಷಗಳ ಹಿಂದೆ ವ್ಯಕ್ತಿಯೊಬ್ಬ ತಾನು ಹಿಂದೂ ಎಂದು, ತನ್ನ ಹೆಸರು ಬಿಟ್ಟು ಎಂದೂ ನಂಬಿಸಿ ಯುವತಿಯನ್ನು ಪ್ರೀತಿಯ ಬಲೆಗೆ ಬೀಳಿಸಿದ್ದಾನೆ.
ಆಕೆಯೂ ಈತ ಹಿಂದೂ ಹಾಗೂ ಒಳ್ಳೆಯವನು ಎಂದು ಪ್ರೀತಿಸಿದ್ದು, ದೇವಸ್ಥಾನವೊಂದರಲ್ಲಿ ಮದುವೆಯೂ ಆಗಿದ್ದಾಳೆ. ಮದುವೆಯಾದ ಕೆಲ ದಿನಗಳ ಬಳಿಕ ಆಕೆಗೆ ಮನವರಿಕೆಯಾಗಿದ್ದೇ, ಈತ ಮುಸ್ಲಿಂ ಸಮುದಾಯದವನೆಂದು.
ಆಗಿದ್ದಾಗಿದೆ, ಮುಸ್ಲಿಮನಾದರೇನು, ಈತನ ಜತೆಗೇ ಬದುಕಿದರಾಯಿತು ಎಂದು ಸಂಸಾರ ಸಾಗಿಸಿದರೂ ಸುಮ್ಮನಿರದ ಮುಸ್ಲಿಂ ಯುವಕ, ಮತ್ತೊಬ್ಬ ಹುಡುಗಿಯನ್ನು ವಿವಾಹವಾಗಲು ಮತ್ತೆ ತನ್ನ ಹೆಸರನ್ನು ಬದಲಾಯಿಸಿಕೊಂಡಿದ್ದಾನೆ.
ಇದರಿಂದ ಕುಪಿತಗೊಂಡ ಹಿಂದೂ ಮಹಿಳೆ ತನ್ನ ತವರು ಮನೆಗೆ ತೆರಳಿದ್ದಾರೆ. ಅಲ್ಲದೆ ಈಗ ಮತ್ತೊಂದು ಮದುವೆಯಾಗಲು ಸಹ ಅಡ್ಡಗಾಲು ಹಾಕಿರುವ ಮುಸ್ಲಿಂ ವ್ಯಕ್ತಿ, ಮದುವೆಯಾದರೆ ಕೊಲ್ಲುವುದಾಗಿ ಜೀವಬೆದರಿಕೆ ಹಾಕಿದ್ದಾನೆ. ಯುವತಿ ಈಗ ಪೊಲೀಸರ ಮೊರೆ ಹೋಗಿದ್ದು, ದೂರು ದಾಖಲಿಸಿದ್ದಾಳೆ.
ಒಟ್ಟಿನಲ್ಲಿ, ಹಿಂದೂ ಯುವತಿಯರು ಪ್ರೀತಿ ಎಂದು ಹೋದರೆ, ಮುಸ್ಲಿಂ ಯುವಕರು ಲವ್ ಜಿಹಾದ್ ಎಂದು ಹಿಂದೂಗಳ ಬಾಳನ್ನೇ ಹಾಳು ಮಾಡುತ್ತಿದ್ದು, ಹಿಂದೂ ಯುವತಿಯರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ.
Leave A Reply