ಚೀನಾದ ಒಬಿಒಆರ್ ಯೋಜನೆಗೆ ಸೆಡ್ಡು ಹೊಡೆಯಲು ಭಾರತ ರೂಪಿಸಿದ ಯೋಜನೆ ಯಾವುದು ಗೊತ್ತಾ?
ದೆಹಲಿ: ಚೀನಾದ ಒಂದು ಪ್ರದೇಶ ಒಂದು ಯೋಜನೆ (ಒಬಿಒಆರ್)ಗೆ ವಿರೋಧ ವ್ಯಕ್ತಪಡಿಸಿ ದಕ್ಕಿಸಿಕೊಂಡಿದ್ದಲ್ಲದೇ, ಚೀನಾಗೇ ಸೆಡ್ಡೊಡೆಯಲು ಯೋಜನೆಯೊಂದು ರೂಪಿಸಿದೆ.
ಹೌದು, ಅಂತಾರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್ (ಐಎನ್ಎಸ್ ಟಿಸಿ) ಯೋಜನೆ ರೂಪಿಸಿದ್ದು, ಭಾರತ-ರಷ್ಯಾ ನಡುವೆ ದೀರ್ಘ ಸಂಪರ್ಕ ಸಾಧನೆಗೆ ಇದು ಸಹಕಾರಿಯಾಗಲಿದೆ. ಸುಮಾರು 7,200 ಕಿ.ಮೀ.ವರೆಗೆ ಸಂಪರ್ಕ ಕಲ್ಪಿಸುವ ಯೋಜನೆ ಇದಾಗಿದ್ದು, ಸುಮಾರು 17 ವರ್ಷದ ಸುದೀರ್ಘ ಯೋಜನೆ ಚೀನಾಗೆ ಸೆಡ್ಡು ಹೊಡೆಯುವುದರಲ್ಲಿ ಎರಡು ಮಾತಿಲ್ಲ.
ಮೊದಲ ಹಂತವಾಗಿ 2018ರ ಜನವರಿಯಲ್ಲಿ ಯೋಜನೆ ದ್ಯೋತಕವಾಗಿ 14ರಂದು ಮೊದಲ ಸರಕು ರಫ್ತಾಗಲಿದೆ. ಮುಂಬೈ ಮೂಲಕ ಕೇಂದ್ರೀಯ ಏಷ್ಯಾದ ಹಲವು ರಾಷ್ಟ್ರಗಳ ಮೂಲಕ ರಸ್ತೆ ಹಾದು ಹೋಗಲಿದೆ. ಅದರಲ್ಲೂ ಯೋಜನೆಯಿಂದ ಪಾಕಿಸ್ತಾನ ಹೊರತಾಗಿದೆ ಎಂಬುದು ಪ್ರಮುಖ ಅಂಶವಾಗಿದೆ.
ಭಾರತ, ಇರಾನ್, ಅಜರ್ ಬೈಜಾನ್ ಮೂಲಕ ಯೋಜನೆ ರಷ್ಯಾ ತಲುಪಲಿದ್ದು, ಮುಂಬೈಯಿಂದ ಹಡಗು, ರೈಲು ಮತ್ತು ರಸ್ತೆ ಸಾರಿಗೆ ಮೂಲಕ ಸಂಪರ್ಕ ಸಾಧಿಸಲಾಗುತ್ತದೆ.
ಈ ಯೋಜನೆ ಭಾರತದ 2015-20ರವರೆಗಿನ ಭಾರತದ ವಿದೇಶ ವ್ಯವಹಾರ ನೀತಿಗೆ ಈ ಯೋಜನೆ ಸಹಕಾರಿಯಾಗಲಿದ್ದು, ಭಾರತದ ವಿದೇಶ ವ್ಯವಹಾರ, ಸಹಕಾರ, ಸೌಹಾರ್ದ ವೃದ್ಧಿಗೆ ಈ ಯೋಜನೆ ಸಹಕಾರಿ ಎಂದೇ ವಿಶ್ಲೇಷಿಸಲಾಗಿದೆ.
ಒಟ್ಟಿನಲ್ಲಿ ಪಾಕಿಸ್ತಾನ ಸೇರಿ ಹಲವು ರಾಷ್ಟ್ರಗಳೊಂದಿಗೆ ಸಂಬಂಧ ಬೆಸೆದು ಮಾರುಕಟ್ಟೆ ವಿಸ್ತರಣೆಗೆ ಮುಂದಾಗಿದ್ದ ಚೀನಾಗೆ ಈ ಯೋಜನೆ ತಿರುಗೇಟಾಗಿದೆ.
Leave A Reply