ಸದಾ ಚೈತನ್ಯಶೀಲ ಪ್ರಧಾನಿಗೆ ಹೀಯಾಳಿಸುವ ಅಲ್ಪಮತಿ ಜಿಗ್ನೇಶ್ ನಿಗೆ ಏನೆನ್ನಬೇಕು..?
ದಿನದ 19 ಗಂಟೆ ದೇಶಕ್ಕೆ ಸೇವೆ ಸಲ್ಲಿಸುತ್ತಿರುವ, ಇಡೀ ವಿಶ್ವಕ್ಕೆ ಭಾರತದ ತಾಕತ್ತನ್ನು ತೋರಿಸಿರುವ, ದೇಶದ ಆರ್ಥಿಕತೆಗೆ ಹೊಸ ದಿಕ್ಕು ತೋರಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಜಿಗ್ನೇಶ್ ಮೇವಾನಿ ಎಂಬ ಅಲ್ಪಮತಿ ಹಿಯಾಳಿಸುತ್ತಾನೆ ಎಂದರೆ ಆತನ ಕೊಳಕು ಮನಸ್ಥಿತಿ ಎಂಥಾದಿರಬೇಕು?
‘ಪ್ರಧಾನಿಗೆ ವಯಸ್ಸಾಗಿದೆ, ಅವರು ಹಿಮಾಲಯದ ಯಾತ್ರೆ ಮಾಡಬೇಕು. ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಅವರ ತಲೆಯಲ್ಲಿ ಏನು ಇಲ್ಲ.’ ಇದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಜಿಗ್ನೇಶ್ ಮೇವಾನಿ ಎಂಬ ಅಧಿಕಾರಕ್ಕೆ ದಲಿತರ ಹೋರಾಟ ಬಳಸಿಕೊಂಡವನ ಮಾತು.
‘ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಲಿ ಕೊಡೆ ಹಿಡಿದನಂತೆ’ ಎಂಬ ಗಾದೆ ಮಾತಂತೆ ತನ್ನ ಶಾಸಕ ಸ್ಥಾನದ ಘನತೆ ಮತ್ತು ದೇಶದ ಪ್ರಧಾನಿಯ ಸ್ಥಾನದ ಘನತೆ ಅವರ ಕಾರ್ಯಶೈಲಿಯ ಅರಿವು ಇಲ್ಲದೇ ಹೀಯಾಳಿಸುವ ಜಿಗ್ನೇಶನಿಗೆ ಅದ್ಯಾವ ಮಟ್ಟಿಗೆ ಅಧಿಕಾರದ ಮಧ ಏರಿರಬೇಕು ಎಂಬುದಕ್ಕೆ ಸಾಕ್ಷಿ ಈ ಮಾತುಗಳು.
ಗುಜರಾತ್, ಹಿಮಾಚಲ ಪ್ರದೇಶದ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ಬಿಜೆಪಿ ವಿಜಯೋತ್ಸವದ ಗುಂಗಿನಲ್ಲಿರುವಾಗಲೇ ಪ್ರಧಾನಿ ನರೇಂದ್ರ ಮೋದಿ ಓಖಿ ಚಂಡಮಾರುತದಿಂದ ಸಂಕಷ್ಟದಲ್ಲಿರುವವರ ನೋವಿಗೆ ಸ್ಪಂದಿಸಲು ರಾತ್ರಿಯೇ ಪ್ರಯಾಣ ಬೆಳೆಸಿದರು. ಆದರೇ ಜಿಗ್ನೇಶ್ ನಿಗೆ ಸಾಥ್ ನೀಡಿದ ಅಲ್ಲ ಜಿಗ್ನೇಶ್ ಸಾಥ್ ನೀಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಿನೆಮಾ ನೋಡಲು ಹೋಗಿದ್ದರು.
ದೇಶವಾಸಿಗಳ ನೋವಿಗೆ ಕ್ಷಣಮಾತ್ರದಲ್ಲಿ ಮಿಡಿಯುವ, ಸ್ಪಂದಿಸುವ ಪ್ರಧಾನಿ ನರೇಂದ್ರ ಮೋದಿಗೆ ಅವರನ್ನು ವಯಸ್ಸಾಗಿದೆ ಎಂದು ಹೀಯಾಳಿಸುವ ಜಿಗ್ನೇಶ್ ತನ್ನ ಸಾಮರ್ಥ್ಯವೇನು ಎಂಬುದನ್ನು ಅರಿತು ಮಾತಾಡುವುದು ಒಳಿತು.
ಸತತ 22 ವರ್ಷಗಳ ನಂತರವೂ ಗುಜರಾತ್ ನಲ್ಲಿ ಬಿಜೆಪಿಗೆ ಜನರು ಅಧಿಕಾರಕ್ಕೆ ತರುತ್ತಾರೆ ಎಂದರೆ ಅದಕ್ಕೆ ನರೇಂದ್ರ ಮೋದಿ ಗುಜರಾತ್ ನಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳೇ ಸಾಕ್ಷಿ. ಜಿಗ್ನೇಶ್ ಬೆಂಬಲಿಸಿದ ಕಾಂಗ್ರೆಸ್ ಪಕ್ಷದವರು ದೇಶಕ್ಕೆ ನೀಡಿದ ಕೊಡುಗೆ ಏನು ಎಂಬುದಕ್ಕೆ ಇಷ್ಟು ವರ್ಷವಾದರೂ ದೇಶದಲ್ಲಿ ಸಮಾನತೆ ಸಾಧಿಸಲು ಆಗದೇ ಒಂದೇ ಕುಟುಂಬಕ್ಕೆ ಜೋತು ಬಿದ್ದು ಒದ್ದಾಡುತ್ತಿರುವುದೇ ಸಾಕ್ಷಿ.
ಜಿಗ್ನೇಶ ಮೇವಾನಿ ದೇಶದ ಕೋಟ್ಯಂತರ ದಲಿತ ಸಮುದಾಯ ಒಂದು ಸಣ್ಣ ಎಚ್ಚರಿಕೆ ಕಣ್ಣನ್ನು ಬಹು ನಿರೀಕ್ಷೆಯೊಂದಿಗೆ ಇಟ್ಟುಕೊಂಡಿದೆ. ತಾನು ದಲಿತ ನಾಯಕ ಎಂದು ಅಧಿಕಾರಕ್ಕೆ ಬಂದು, ವೋಟು ಪಡೆದು ಮೂಲ ಸಮಸ್ಯೆ ಮರೆತು ದೇಶದ ಕೋಟ್ಯಂತರ ಜನರು ಅಧಿಕಾರಕ್ಕೆ ತಂದಿರುವ ಮೋದಿ ಅವರನ್ನು ನಿಂದಿಸುವುದು ಸರ್ವತಾ ಸಲ್ಲ.
ಮೇವಾನಿ ತನ್ನ ಸೃಜನಶೀಲ ಕಾರ್ಯಚಟುವಟಿಗಳ ಮೂಲಕ ಹೆಸರು ಮಾಡಬೇಕೇ ಹೊರತು, ಪ್ರಧಾನಿ ನರೇಂದ್ರ ಮೋದಿ ಸೇರಿ ಹಿರಿಯರ ವಿರುದ್ಧ ಅಗೌರವದ ಮಾತುಗಳನ್ನಾಡಿ ಖ್ಯಾತಿ ಪಡೆಯುವ ಉದ್ದೇಶವಿದ್ದರೇ ಅದಕ್ಕಿಂತ ದೊಡ್ಡ ಮೂರ್ಖತನ ಮತ್ತೊಂದಿಲ್ಲ.
Leave A Reply