• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » ಸುದ್ದಿ 

ಶರತ್ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಇದು ಜಿಲ್ಲೆಯ ಮತಾಂಧತೆಯ ಕೊನೆಯ ಹತ್ಯೆಯಾಗಲಿ!

TNN Correspondent Posted On July 8, 2017
0


0
Shares
  • Share On Facebook
  • Tweet It

ಶರತ್ ಶವಯಾತ್ರೆಯ ಸಂದರ್ಭದಲ್ಲಿ ಕಲ್ಲು ತೂರಾಟ ಮಾಡುವ ಅಗತ್ಯ ಇರಲಿಲ್ಲ. ಇದ್ದರಿಂದ ಯಾರೂ ಏನೂ ಸಾಧಿಸಿದಂತೆ ಆಗಲಿಲ್ಲ, ಅದರ ಬದಲಾಗಿ ಒಂದಿಷ್ಟು ವಾಹನಗಳು ಜಖಂಗೊಂಡವು. ಒಬ್ಬನ ತಲೆಗೆ ಕಲ್ಲು ಬಿದ್ದು ತಲೆ ಒಡೆಯಿತು. ಪೊಲೀಸರು ಲಾಠಿಚಾರ್ಜ ಮಾಡಬೇಕಾಯಿತು. ಎಲ್ಲೋ ಕೆಲವೆಡೆ ಚೂರಿ ಇರಿತಗಳಾದವು. ಇದರಿಂದ ಯಾರಿಗೆ ಏನು ಸಿಕ್ಕಿತು ಎನ್ನುವುದೇ ಯಕ್ಷ ಪ್ರಶ್ನೆ.
ಒಬ್ಬ ಇನ್ನೊಬ್ಬನಿಗೆ ಹೊಡೆದರೆ ಹೊಡೆದವನಿಗೆ ಏನು ಸಿಗುತ್ತೆ, ಪೆಟ್ಟು ತಿಂದವನ ಪರವಾಗಿರುವವರು ಹೊಡೆದವನ ಧರ್ಮದ ಯಾರಿಗಾದರೂ ಹೊಡೆದರೆ ಅದರಿಂದ ಮೊದಲು ಹೊಡೆದವನಿಗೆ ಏನು ಸಿಕ್ಕಿತು, ಯಾರೋ ಯಾರಿಗೋ ಹೊಡೆದ ನಂತರ ಇನ್ನು ಯಾರೋ ಯಾರಿಗೋ ಹೊಡೆದು ಪ್ರತೀಕಾರ ತೆಗೆದುಕೊಂಡ್ವಿ ಎಂದು ಬೀಗಿದರೆ ಅದು ಒಂದು ಮನುಷ್ಯತ್ವನಾ? ಒಬ್ಬ ನಾಯಕನ ಲಾಭಕ್ಕಾಗಿ ಯಾರ್ಯಾರೋ, ಎಲ್ಲೆಲ್ಲೋ ಹೊಡೆದಾಡಿಕೊಂಡರೆ ಅದರಿಂದ ನಾಯಕನಾದವ ತನ್ನ ಬೇಳೆ ಬೇಯಿಸಿಕೊಂಡರೆ ಅದರಿಂದ ಹೊಡೆದಾಡಿಕೊಂಡವನಿಗೆ ಏನು ಲಾಭ? ಹಣ ಸಿಗುತ್ತದಾ? ಸ್ಥಾನಮಾನ ಸಿಗುತ್ತದಾ? ಇವನು ನಾಯಕನಾಗುತ್ತಾನಾ? ನಾಯಕನಾದ ನಂತರ ತನ್ನ ಬೆಂಬಲಿಗರಿಗೆ ಇನ್ನೊಂದು ಧರ್ಮದವರನ್ನು ಹೊಡೆಯಲು ಹೇಳುತ್ತಾನಾ? ಇದೊಂದು ವಿಷಚಕ್ರವಾ? ಈ ವಿಷ ಚಕ್ರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ದಶಕಗಳಿಂದ ಸುತ್ತುತ್ತಿದೆಯಾ? ಸುತ್ತಿದ ಕಾರಣ ಯಾರಿಗೆ ಲಾಭವಿದೆ? ಚುನಾವಣೆಗಳು ಹತ್ತಿರ ಬಂದಾಗ ನಾಯಕರು ಜೋರಾಗಿ ಪೆಡಲ್ ತುಳಿದು ಚಕ್ರ ವೇಗವಾಗಿ ಸುತ್ತುವಂತೆ ಮಾಡುತ್ತಾರಾ? ಇದರಿಂದ ಧರ್ಮಗಳ ಧ್ರುವೀಕರಣವಾಗುತ್ತಾ? ಕೊನೆಗೆ ಜನರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲವನ್ನು ಪಕ್ಕಕ್ಕಿಟ್ಟು ಧರ್ಮಗಳ ಆಧಾರದ ಮೇಲೆ ಮತ ಚಲಾಯಿಸುತ್ತಾರಾ? ಅದರಿಂದ ಯಾರಿಗಾದರೂ ಲಾಭವಾಗಿ ಅವರು ಮೆರೆಯುತ್ತಾರಾ? ಮೆರೆದವರು ತಮ್ಮ ಅಧಿಕಾರಾವಧಿ ಮುಗಿಯುವ ಸಮಯ ಬಂದಾಗ ಅದೇ ಹಳೆಯ ಕ್ಯಾಸೆಟ್ ತಿರುಗಿಸಿ ಹಾಕುತ್ತಾರಾ? ಮೂರ್ನಾಕು ಹೆಣಗಳು ಧಮರ್ಾತೀತವಾಗಿ ಧರೆಗೆ ಉರುಳಿ ಅದರಿಂದ ಅವರ ಕುಟುಂಬ ಕಣ್ಣೀರು ಹಾಕಲ್ವಾ? ಎದೆ ಮಟ್ಟಕ್ಕೆ ಬಂದ ಯುವಕ ಕಣ್ಣುಮುಚ್ಚಿಕೊಂಡಾಗ ದೇಶಕ್ಕೆ ನಷ್ಟವಾಗಲ್ವಾ? ಹತ್ಯೆಗಳ ಮೇಲೆ ರಾಜಕೀಯ ಕುರ್ಚಿ ತಿರುಗುತ್ತಾ? ಬಹುಸಂಖ್ಯಾತರು, ಅಲ್ಪಸಂಖ್ಯಾತರು ಎಂದು ಭೇದವಾದಾಗ ಜಾತ್ಯಾತೀತರು ಅಲ್ಪಸಂಖ್ಯಾತರ ಪರವಾಗಿ ನಿಲ್ಲುತ್ತಾರಾ? ಅವರು ಪೊಲೀಸರ ಮೇಲೆ ಒತ್ತಡ ತಂದು ಅಥವಾ ಮೈಂಡ್ ವಾಶ್ ಮಾಡಿ ತಮ್ಮ ತಾಳಕ್ಕೆ ತಕ್ಕಂತೆ ಕುಣಿಸುತ್ತಾರಾ? ಪೊಲೀಸ್ ಅಧಿಕಾರಿಗಳು ಯಾವ ಸ್ಟೇಶನ್ ನಲ್ಲಿ ಇದ್ದರೆ ಆದಾಯ ಹೆಚ್ಚು ಎನ್ನುವ ಕಾರಣಕ್ಕೆ ಜನಪ್ರತಿನಿಧಿಗಳ ಕೈಕಾಲು ಹಿಡಿದು ಅದೇ ಸ್ಟೇಶನ್ ನಲ್ಲಿ ಆದಷ್ಟು ಹೆಚ್ಚು ಕಾಲ ಇರಲು ಮಂಡಿಯೂರುತ್ತಾರಾ?
ಈ ಎಲ್ಲಾ ಪ್ರಶ್ನೆಗಳು ಕೌನ್ ಬನೇಗಾ ಕರೋಡ್ ಪತಿಯಲ್ಲಿ ಕೇಳುವಷ್ಟು ಕಠಿಣವಾಗಿಯೂ ಇಲ್ಲ. ಇದಕ್ಕೆ ಉತ್ತರ ಕೊಟ್ಟರೆ ನಿಮಗೆ ಹಣವೂ ಸಿಗುವುದಿಲ್ಲ. ಆದರೆ ಇದಕ್ಕೆ ನೀವು ಆತ್ಮಸಾಕ್ಷಿಯಿಂದ ಉತ್ತರ ಕಂಡುಕೊಂಡರೆ ಶಾಂತಿ ಮೂಡುತ್ತದೆ. ಇಲ್ಲದಿದ್ದರೆ ದಕ್ಷಿಣ ಕನ್ನಡ ಜಿಲ್ಲೆ ಸೂತಕಕ್ಕೆ ಒಳಗಾದಂತೆ ಇನ್ನು ಆರೆಂಟು ತಿಂಗಳು ತಲೆಬೋಳಿಸಿಕೊಂಡು ಓಡಾಡುವ ಪರಿಸ್ಥಿತಿಗೆ ಬಂದು ಮುಟ್ಟುತ್ತದೆ. ಈ ಎಲ್ಲಾ ಗಲಭೆಗಳಿಗೆ ಮೂಲ ಕಾರಣ ಏನು ಎನ್ನುವುದು ಪೊಲೀಸರಿಗೆ ಗೊತ್ತಿಲ್ಲ ಎಂದಲ್ಲ. ಅವರು ಮೂಲಕ್ಕೆ ಮೊದಲು ಬಿಸಿ ಮುಟ್ಟಿಸಬೇಕು. ಪುಂಡ ಯುವಕರು ಯಾವುದೇ ಪಕ್ಷ, ಧರ್ಮ, ಸಂಘಟನೆಯವರಾಗಲಿ ಅವರನ್ನು ತಂದು ಸೈಲೆಂಟಾಗಿ “ಬುದ್ಧಿ” ಹೇಳಬೇಕು. ಟೀಚರ್ ಪೆಟ್ಟು ಕೊಡುತ್ತಾರೆ ಎಂದು ಸರಿಯಾಗಿ ಹೋಂವರ್ಕ ಮಾಡಿಕೊಂಡು ಹೋಗುವ ಮಕ್ಕಳು ಇರುವ ಊರು ನಮ್ಮದು. ಹಾಗಿರುವಾಗ ಪೊಲೀಸರು ಕೂತುಕೊಳಿಸಿ ಬುದ್ಧಿ ಹೇಳುತ್ತಾರೆ ಎಂದರೆ ಕೇಳದೆ ಇರುತ್ತಾರಾ, ಅದರ ನಂತರ ಈ ಗಾಂಜಾಗಳು ಜಿಲ್ಲೆಯೊಳಗೆ ಕಾಣಿಸದಂತೆ ಪೊಲೀಸರು ನೋಡಬೇಕು. ಗಾಂಜಾ ತೆಗೆದುಕೊಂಡ ಯುವಕನಿಗೆ ಪೊಲೀಸರು ಎಕೆ-47 ನಿಂದ ಬುದ್ಧಿ ಕಲಿಸಬೇಕಾಗುತ್ತದೆ. ಅದು ನಮ್ಮ ಪ್ರಜಾಪ್ರಭುತ್ವದಲ್ಲಿ ಸಾಧ್ಯವಿಲ್ಲ. ಆದ್ದರಿಂದ ಗಾಂಜಾ ತೆಗೆದುಕೊಂಡ ಕೋತಿಗೆ ಏನು ಹೇಳಿದರೂ ಪ್ರಯೋಜನವಿಲ್ಲ. ಆದ್ದರಿಂದ ಗಾಂಜಾ ಒಳಗೆ ಬಾರದಂತೆ ತಡೆಯಬಹುದಾ? ಪೊಲೀಸರು ಪಾಕೆಟ್ ಮನಿಗೆ ದಾರಿ ಹುಡುಕಿಕೊಳ್ಳದೆ ಹೋದರೆ ಅದು ಅಸಾಧ್ಯವೂ ಅಲ್ಲ.
ಇನ್ನೂ ಕೊನೆಯದಾಗಿ ಸಾಮಾಜಿಕ ತಾಣಗಳು. ಅದರಲ್ಲಿ ಬರೆಯುವವ ಎಲ್ಲೋ ನಾಲ್ಕು ಗೋಡೆಯ ನಡುವೆ ಕುಳಿತು ಬರೆಯುತ್ತಾನೆ, ಆದರೆ ಕೈಕಂಬ, ಮೆಲ್ಕಾರ್, ಅಡ್ಯಾರ್ ನಲ್ಲಿ ರಕ್ತ ಬೀಳುತ್ತದೆ. ಆದಷ್ಟು ಸಕರಾತ್ಮಕ ವಿಷಯ ಹರಡಿಸಲು ಬಳಸುವ ಅಸ್ತ್ರವನ್ನು ಇವತ್ತು ಕೋತಿಗಳು ಹೆಂಡ ಕುಡಿದು ಉತ್ತರಕೊರಿಯಾದ ಅಧ್ಯಕ್ಷನ ಹಾಗೆ ವರ್ತಿಸುವುದರಿಂದ ಸಮಸ್ಯೆಯಾಗಿದೆ. ಕೊನೆಯದಾಗಿ ಹೆಣ ಮುಂದಿಟ್ಟು ಪರಸ್ಪರ ಭಾಷಣಗಳನ್ನು ಹೊಡೆಯುವುದರಿಂದ ಯಾವ ರಾಜಕಾರಣಿಗೂ ಓಟ್ ಜಾಸ್ತಿ ಬೀಳಲ್ಲ, ಒಂದು ವೇಳೆ ಹಾಗೆ ಬಿದ್ದರೆ ಅದು ಎಸೆಟ್ ಅಲ್ಲಾ ಲೈಯಾಬಿಲಿಟಿ.

0
Shares
  • Share On Facebook
  • Tweet It




Trending Now
ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
Tulunadu News July 11, 2025
ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
Tulunadu News July 11, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
    • ನಾಯಕರು 75 ಆಗುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ದಾರಿ ಮಾಡಿಕೊಡಲಿ - ಮೋಹನ್ ಭಾಗವತ್!
    • ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕದ್ರಿ ಸಂಚಾರ ಪೊಲೀಸ್ ಕಾನ್‌ಸ್ಟೆಬಲ್ ತಸ್ಲೀಮ್ …!
    • ಬೀದಿನಾಯಿಗಳಿಗೆ ನಿತ್ಯ ಚಿಕನ್, ಮೊಟ್ಟೆ ನೀಡಲು ಬಿಬಿಎಂಪಿ ನಿರ್ಧಾರ!
    • ಜನಸಾಮಾನ್ಯರ ಕೈಗೆಟಕುತ್ತಿಲ್ಲ ತೆಂಗಿನಕಾಯಿ ದರ... ಪುತ್ತೂರಿನಲ್ಲಿ ಹೆಚ್ಚಿದ ಕಳವು!
    • ವಿಎಚ್ ಪಿ ಶರಣ್, ನವೀನ್ ಗೆ ರಿಲೀಫ್: ಅರುಣ್ ಶ್ಯಾಮ್ ವಾದ
    • ಯುಕೆ ಪ್ರಧಾನಿ ಪದದಿಂದ ಇಳಿದ ಬಳಿಕ ಖಾಸಗಿ ಉದ್ಯೋಗಕ್ಕೆ ಮರಳಿದ ರಿಶಿ ಸುನಾಕ್!
    • ಉದಯಪುರ್ ಫೈಲ್ಸ್ ಸಿನೆಮಾಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಕಾರ!
    • ಚರ್ಚಿನಲ್ಲಿ ಪ್ರಾರ್ಥನೆ: ಟಿಟಿಡಿ ಅಧಿಕಾರಿ ಸಸ್ಪೆಂಡ್!
  • Popular Posts

    • 1
      ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • 2
      ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
    • 3
      ನಾಯಕರು 75 ಆಗುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ದಾರಿ ಮಾಡಿಕೊಡಲಿ - ಮೋಹನ್ ಭಾಗವತ್!
    • 4
      ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕದ್ರಿ ಸಂಚಾರ ಪೊಲೀಸ್ ಕಾನ್‌ಸ್ಟೆಬಲ್ ತಸ್ಲೀಮ್ …!
    • 5
      ಬೀದಿನಾಯಿಗಳಿಗೆ ನಿತ್ಯ ಚಿಕನ್, ಮೊಟ್ಟೆ ನೀಡಲು ಬಿಬಿಎಂಪಿ ನಿರ್ಧಾರ!

  • Privacy Policy
  • Contact
© Tulunadu Infomedia.

Press enter/return to begin your search